Janaspandana | ಬೆಂಗಳೂರಿನಲ್ಲಿ ಕೆಲ ಮಾರ್ಗಗಳ ವಾಹನ ಸಂಚಾರ ಬದಲು, ಪರ್ಯಾಯ ವ್ಯವಸ್ಥೆ - Vistara News

ಕರ್ನಾಟಕ

Janaspandana | ಬೆಂಗಳೂರಿನಲ್ಲಿ ಕೆಲ ಮಾರ್ಗಗಳ ವಾಹನ ಸಂಚಾರ ಬದಲು, ಪರ್ಯಾಯ ವ್ಯವಸ್ಥೆ

ದೊಡ್ಡಬಳ್ಳಾಪುರದಲ್ಲಿ ಸೆ.1೦ರಂದು ʼಜನಸ್ಪಂದನʼ ಸಾಧನಾ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳ ಸಂಚಾರವನ್ನು ತಾತ್ಕಾಲಿಕವಾಗಿ ಬದಲಿಸಲಾಗಿದೆ.

VISTARANEWS.COM


on

Janaspandana
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸರ್ಕಾರದಿಂದ ದೊಡ್ಡಬಳ್ಳಾಪುರದಲ್ಲಿ ಸೆ.1೦ರಂದು ʼಜನಸ್ಪಂದನʼ ಸಾಧನಾ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಾಹನ ದಟ್ಟನೆ ನಿಯಂತ್ರಿಸುವ ಸಲುವಾಗಿ ಸಂಚಾರ ಪೊಲೀಸರು, ನಗರದಲ್ಲಿ ತಾತ್ಕಾಲಿಕವಾಗಿ ಕೆಲ ಮಾರ್ಗಗಳ ವಾಹನ ಸಂಚಾರ ಬದಲಿಸಿ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ.

ತುಮಕೂರು ಕಡೆ ಹೋಗುವ ಭಾರಿ ವಾಹನಗಳಿಗೆ ಮಾರ್ಗ ಬದಲಾವಣೆ
ಎನ್ಎಚ್-44 ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಮಾರ್ಗದಿಂದ ಬರುವ ವಾಹನಗಳು, ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ (NH-44) ಬದಲಾಗಿ ದೇವನಹಳ್ಳಿ ರಾಣಿ ಕ್ರಾಸ್ ಮೂಲಕ ಸಂಚಾರಕ್ಕೆ ಅವಕಾಶ.

ದೊಡ್ಡಬಳ್ಳಾಪುರ ಕಾರ್ಯಕ್ರಮಕ್ಕೆ ಹೋಗುವ ವಾಹನಗಳಿಗೆ ಮಾರ್ಗ:

ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಕಡೆಯಿಂದ ಹೋಗುವ ವಾಹನಗಳು
ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ, ಬೆಂಗಳೂರು ನಗರ, ವಿಶ್ವನಾಥಪುರ, ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ

ಕೊಲಾರ, ಕೆ.ಜಿ.ಎಫ್,ಹೊಸಕೋಟೆ ಕಡೆಯಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ವಾಹನಗಳು
ವಿಜಯಪುರ, ವಿಜಯಪುರ ಕ್ರಾಸ್, ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ ಬೆಂಗಳೂರು ನಗರ, ವಿಶ್ವನಾಥಪುರ,
ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ.

ಬೆಂಗಳೂರು ನಗರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ವಾಹನಗಳಿಗೆ(ಬಸ್ ಮತ್ತು ಕ್ಯಾಬ್‌ಗಳಿಗೆ)
ಹೆಬ್ಬಾಳ ಫ್ಲೈ ಓವರ್, ಕೆಂಪಾಪುರ ಕ್ರಾಸ್ ಫ್ಲೈ ಓವರ್, ಕಾಫಿ ಡೇ, ಹುಣಸೇಮಾರನಹಳ್ಳಿ ಕ್ರಾಸ್, ಕೋಟೆ ಕ್ರಾಸ್, ಸಾದಹಳ್ಳಿ ಗೇಟ್, ವಯಾ ದೊಡ್ಡಬಳ್ಳಾಪುರ ಕ್ರಾಸ್‌ನಿಂದ ಬೆಂಗಳುರು ಗ್ರಾಮಾಂತರ ಜಿಲ್ಲಾ ಸರಹದ್ದು, ವಿಶ್ವನಾಥಪುರ, ಚಪ್ಪರಕಲ್ಲು, ನಾಗರನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರಕ್ಕೆ ಹೋಗಲು ಅವಕಾಶ.

ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ದ್ವಿಚಕ್ರ ವಾಹನಗಳಿಗೆ ಮಾರ್ಗ
ಹೆಬ್ಬಾಳ ಫ್ಲೈ ಓವರ್, ಸಂಜೀವನಗರ ಕ್ರಾಸ್ ಎಡ ತಿರುವು ಸರ್ವೀಸ್ ರಸ್ತೆ, ಕೊಡಿಗೇಹಳ್ಳಿ ಕ್ರಾಸ್, ಬ್ಯಾಟರಾಯನಪುರ ಕ್ರಾಸ್, ಜಕ್ಕೂರ್ ಕ್ರಾಸ್-ಎಡ ತಿರುವು ಫ್ಲೈ ಓವರ್, ಯಲಹಂಕ ಪೊಲೀಸ್ ಠಾಣೆ, ದೊಡ್ಡಬಳ್ಳಾಪುರ ರಸ್ತೆ, ಪುಟ್ಟೇನಹಳ್ಳಿ, ನಾಗೇನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರಹದ್ದು, ಸಿಂಗನಾಯಕನಹಳ್ಳಿ, ರಾಜನಕುಂಟೆ, ಮಾರಸಂದ್ರ, ಮೂಲಕ ದೊಡ್ಡಬಳ್ಳಾಪುರಕ್ಕೆ ಸಂಚಾರ ಮಾಡಲು ಅವಕಾಶ.

ಇದನ್ನೂ ಓದಿ | Janaspandana‌ | ಜನಸ್ಪಂದನಕ್ಕೆ 3 ಲಕ್ಷ ಜನ ಬರ್ತಾರೆ ಎಂದ ಸಚಿವ ಡಾ.ಕೆ. ಸುಧಾಕರ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Prajwal Revanna Case: ರೇಪಿಸ್ಟ್‌ಗೆ ಬೆಂಬಲ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜತೆ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಿದ್ದಾರೆ. ಇದು ಬಿಜೆಪಿಯವರ ಅಜೆಂಡಾವಾಗಿದೆ. ಇದು ಬಿಜೆಪಿಯವರ ನಡೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅತ್ಯಾಚಾರಿಯೊಬ್ಬನ ಪರ ಮತಯಾಚನೆ ನಡೆಸಲು ಬಂದಿದ್ದಾರೆ. ಮೋದಿಯವರ ಗ್ಯಾರಂಟಿ ಏನು? ಅತ್ಯಾಚಾರಿಗೆ ಸಪೋರ್ಟ್ ಮಾಡಿರೋದು. 400 ಅತ್ಯಾಚಾರ ಮಾಡಿರುವ ರೇಪಿಸ್ಟ್‌ನನ್ನು ಮೋದಿ ಬೆಂಬಲಿಸಿದ್ದಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Prajwal Revanna Case PM Modi defends MP accused of rape says Rahul Gandhi
Koo

ಶಿವಮೊಗ್ಗ: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ. ದೇಶದ ಮಹಾನ್‌ ರೇಪಿಸ್ಟ್‌ ಒಬ್ಬನನ್ನು ಮೋದಿ ರಕ್ಷಣೆ ಮಾಡಿದ್ದಾರೆ. ಇದು ಮಹಾ ಅಪರಾಧ ಎಂದು ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಪರ ಪ್ರಚಾರ ಭಾಷಣ ಮಾಡಿದ ರಾಹುಲ್‌ ಗಾಂಧಿ, ರೇಪಿಸ್ಟ್‌ಗೆ ಬೆಂಬಲ ಕೊಟ್ಟಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿ. ಪ್ರಜ್ವಲ್ ರೇವಣ್ಣ ಜತೆ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಿದ್ದಾರೆ. ಇದು ಬಿಜೆಪಿಯವರ ಅಜೆಂಡಾವಾಗಿದೆ. ಇದು ಬಿಜೆಪಿಯವರ ನಡೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಅತ್ಯಾಚಾರಿಯೊಬ್ಬನ ಪರ ಮತಯಾಚನೆ ನಡೆಸಲು ಬಂದಿದ್ದಾರೆ. ಮೋದಿಯವರ ಗ್ಯಾರಂಟಿ ಏನು? ಅತ್ಯಾಚಾರಿಗೆ ಸಪೋರ್ಟ್ ಮಾಡಿರೋದು. 400 ಅತ್ಯಾಚಾರ ಮಾಡಿರುವ ರೇಪಿಸ್ಟ್‌ನನ್ನು ಮೋದಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಪ್ರಜ್ವಲ್ ರೇವಣ್ಣ 400 ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಾರೆ. ಇದು ಕೇವಲ ಸೆಕ್ಸ್ ಕ್ಯಾಂಡಲ್ ಅಲ್ಲ, ಅತ್ಯಾಚಾರವಾಗಿದೆ. ಇದನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿಂತಿದ್ದಾರೆ. ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಅಂತ ಬಿಜೆಪಿ ನಾಯಕರಿಗೆ ಗೊತ್ತಿತ್ತು. ಆದರೆ, ಹಾಸನದಲ್ಲಿ ಟಿಕೆಟ್ ಕೊಟ್ಟರು. ಬಿಜೆಪಿಯವರಿಗೆ ಹಾಗೂ‌ ಮಹಿಳೆಯರಿಗೆ ಇದು ತಿಳಿಯಬೇಕು. ಮೋದಿ ಅವರು ಹಾಸನ ಹಾಗೂ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರು ದೇಶಕ್ಕೆ ತಲೆಬಾಗಿ ಕ್ಷಮೆ ಕೇಳಬೇಕು. ಇಡೀ ಪ್ರಪಂಚದಲ್ಲಿ ಇಂತಹ ಘಟನೆ ನೋಡಿಲ್ಲ, ನೋಡುವುದೂ ಇಲ್ಲ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು. ‌

ಕಾಂಗ್ರೆಸ್‌ನಿಂದ ಸೂಕ್ತ ತನಿಖೆ

ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆಸಿ ಸೂಕ್ತ ತನಿಖೆಯನ್ನು ನಮ್ಮ ಕಾಂಗ್ರೆಸ್‌ ಸರ್ಕಾರ ನಡೆಸುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು.

ಮೋದಿಗೆ ಭಯ ಶುರುವಾಗಿದೆ

ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಟ್ಟಿದ್ದೇವೆ. ಪ್ರತಿ ಮನೆ ಯಜಮಾನಿಗೆ ಮಾಸಿಕವಾಗಿ ತಲಾ 2000 ರೂಪಾಯಿಯಂತೆ ಒಂದು ವರ್ಷಕ್ಕೆ 24 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಇನ್ನು ಕಾಂಗ್ರೆಸ್‌ನಿಂದ ಈಗ ಗ್ಯಾರಂಟಿಯ ಭಾಗವಾಗಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದೇವೆ. ಇಡೀ ದೇಶದಲ್ಲಿ ಅಧಿಕಾರ ಬಂದರೆ ಮೊದಲು ಮಹಾಲಕ್ಷ್ಮಿ ಯೋಜನೆಯನ್ನು ತರುತ್ತೇವೆ. ಮೋದಿಯವರು ಜನರನ್ನು ಬಡವರನ್ನಾಗಿ ಮಾಡಿದ್ದಾರೆ. ಪ್ರತಿಯೊಂದು ಕುಟುಂಬದಿಂದ ಮಹಿಳೆಯರ ಹೆಸರನ್ನು ಸಂಗ್ರಹ ಮಾಡುತ್ತಾ ಇದ್ದಾರೆ. 1 ಲಕ್ಷ ರೂಪಾಯಿಯನ್ನು ಖಾತೆಗೆ ಹಾಕಲಾಗುವುದು. ಇದರಿಂದ ಮೋದಿಗೆ ಭಯ ಶುರುವಾಗಿದೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದರೆ ಉದ್ಯೋಗ ಭರ್ತಿ, ಸಾಲ ಮನ್ನಾ

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇವೆ. ಕೇಂದ್ರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುತ್ತೇವೆ. ಆಶಾ ಕಾರ್ಯಕರ್ತರಿಗೆ ನಾವು ಸಹಾಯ ಮಾಡುತ್ತೇವೆ. ನರೇಂದ್ರ ಮೋದಿ ಅವರು ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ನಾವು ರೈತರ ಸಾಲ ಮನ್ನಾ ಮಾಡುತ್ತೇವೆ. ನಾವು ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುತ್ತೇವೆ ಎಂದು ರಾಹುಲ್‌ ಗಾಂಧಿ ಆಶ್ವಾಸನೆ ನೀಡಿದರು.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ವಿಡಿಯೊ

ಬಿಜೆಪಿ, ಆರ್‌ಎಸ್ಎಸ್‌ನವರಿಂದ ಸಂವಿಧಾನ ಬದಲಾವಣೆಗೆ ಮುಂದು

ವಿದ್ಯಾ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ನಾವು ಸಂವಿಧಾನದಲ್ಲಿ ರಕ್ಷಣೆ ಮಾಡಬೇಕಿದೆ. ಬಿಜೆಪಿಯವರು, ಆರ್‌ಎಸ್ಎಸ್‌ನವರು ಸಂವಿಧಾನ ಬದಲಾಯಿಸಲು ಮುಂದಾಗಿದ್ದಾರೆ. ಸಂವಿಧಾನದಿಂದ ದಲಿತರು ಆದಿವಾಸಿಗಳಿಗೆ ರಕ್ಷಣೆ ಸಿಗುತ್ತಿದೆ. ಇದನ್ನು ತಿರುಚಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದಲ್ಲಿರುವ ಸಂಪತ್ತನ್ನು 22 ಮಂದಿಯ ಪ್ಯಾಕೆಟ್‌ಗೆ ಹಾಕಿದ್ದಾರೆ. ಅದಾನಿ, ಅಂಬಾನಿ ಕೈಯಲ್ಲಿ ದೇಶದ ಸಂಪತ್ತು ಇದೆ. ಕರ್ನಾಟಕಕ್ಕೆ ಮೋಸ ಮಾಡಿರುವ ಮೋದಿ 22 ಜನರಿಗೆ ಹಣ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾವು ಸಮಾನತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಒಬಿಸಿ ದಲಿತರು, ಆದಿವಾಸಿಗಳ ಬಗ್ಗೆ ಮಾತನಾಡಿದರೆ ನಾವು ನಕ್ಸಲರು ಅಂತಿದ್ದಾರೆ. ಆದರೆ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಮುಂದಾಗಿದೆ. ನಾವು ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.

Continue Reading

ಕ್ರೈಂ

Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Crime News : ಪ್ರತ್ಯೇಕ ಕಡೆಗಳಲ್ಲಿ ಅಪರಾಧ ಕೃತ್ಯಗಳು ವರದಿ ಆಗಿವೆ. ಯಾದಗಿರಿಯಲ್ಲಿ ದುಷ್ಟನೊಬ್ಬ ಬಾಲಕಿಯನ್ನು ಅಪಹರಿಸಲು ಯತ್ನಿಸಿದರೆ, ಬೆಂಗಳೂರು ಹಾಗೂ ಗದಗನಲ್ಲಿ ಹಿಟ್‌ ಆ್ಯಂಡ್‌ ರನ್‌ ಕೇಸ್‌ ದಾಖಲಾಗಿದೆ.

VISTARANEWS.COM


on

By

Crime News
Koo

ಯಾದಗಿರಿ: ಹಾಡಹಗಲೆ ದುಷ್ಕರ್ಮಿಯೊಬ್ಬ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು (kidnap case) ಯತ್ನಿಸಿದ್ದಾರೆ. ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ (Crime News) ನಡೆದಿದೆ. 6 ವರ್ಷದ ಸಂಜನಾ ಎಂಬಾಕೆ ಎಂದಿನಂತೆ ಸ್ನೇಹಿತೆ ಮನೆಯಿಂದ ಟ್ಯೂಶನ್‌ಗೆ ತೆರಳುತ್ತಿದ್ದಳು.

ಈ ವೇಳೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಯೊರ್ವ ಬಾಲಕಿಯ ಕಣ್ಣಿಗೆ ಸ್ಪ್ರೇ ಮಾಡಿದ್ದಾನೆ. ಬಳಿಕ ಅಪಹರಿಸಲು ಯತ್ನಿಸಿದಾಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾಳೆ. ಸದ್ಯ ಪೋಷಕರ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಪೊಲೀಸ್‌ ಪೇದೆಗೆ ಗುದ್ದಿ ಟಿಪ್ಪರ್‌ ಚಾಲಕ ಪರಾರಿ

ಟಿಪ್ಪರ್ ಮತ್ತು ಪೊಲೀಸ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಪೊಲೀಸ್ ಪೇದೆ ಕಾಲು ಮುರಿದು ಹೋಗಿದೆ. ಗದಗದ ಬೆಟಗೇರಿ ರೈಲ್ವೇ ಅಂಡರ್ ಬ್ರಿಜ್ ಬಳಿ ಅಪಘಾತ ನಡೆದಿದೆ. ವೀರಯ್ಯ ಹಿರೇಮಠ (54) ಗಂಭಿರ ಗಾಯಗೊಂಡವರು. ಪೇದೆ ವೀರಯ್ಯ ಬೆಟಗೇರಿಯಿಂದ ಗದಗ ಕಡೆ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಬೈಕ್‌ ನುಜ್ಜುಗುಜ್ಜಾಗಿದೆ.

ಇತ್ತ ಅಪಘಾತ ಮಾಡಿದ ಚಾಲಕ ಟಿಪ್ಪರ್ ನಿಲ್ಲಿಸದೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ಗದಗ ನಗರದ ಪಂಚಾಕ್ಷರಿ ನಗರದ ಬಳಿ ಟಿಪ್ಪರ್ ಲಾರಿ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾನೆ. ಗದಗ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಪೇದೆ ಎಡಗಾಲಿಗೆ ಗಂಭೀರ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಧಾರವಾಡದ ಎಸ್‌ಡಿಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

ಬೆಂಗಳೂರಲ್ಲಿ ಮಹಿಳೆಗೆ ಆಟೋ ಡಿಕ್ಕಿ

ಬೆಂಗಳೂರಲ್ಲಿ ಆಟೋ ಚಾಲಕನಿಂದ ಹಿಟ್‌ ಆ್ಯಂಡ್‌ ರನ್‌ ಮಾಡಿ ಪರಾರಿ ಆಗಿದ್ದಾನೆ. ಏಪ್ರಿಲ್ 29ರ ರಾತ್ರಿ 9.58ಕ್ಕೆ ಬೆಂಗಳೂರಿನ ಗಿರಿನಗರದ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ. ಲಕ್ಷ್ಮೀ (55) ಎಂಬಾಕೆ ಕಸ ಹಾಕಲು ಬಂದಿದ್ದರು. ಈ ವೇಳೆ ಅತಿ ವೇಗದಿಂದ ಬಂದ ಆಟೋ ಚಾಲಕ, ಮಹಿಳೆಗೆ ಗುದ್ದಿ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ.

ಘಟನೆಯಲ್ಲಿ ಲಕ್ಷ್ಮಿ ತಲೆ, ಕಾಲಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಬನಶಂಕರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಟೋ ಚಾಲಕನ ಪತ್ತೆ ಮಾಡಲು ಸಿಸಿಟಿವಿ ಮೊರೆ ಹೋಗಿದ್ದಾರೆ.

ಸಮುದ್ರದಲ್ಲಿ ಮುಳುಗುತ್ತಿದ್ದ ಮಹಿಳೆಯ ರಕ್ಷಣೆ

ನೀರಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗೆ ಸಿಕ್ಕಿ ನೀರಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ವನ್ನಳ್ಳಿಯ ಹೆಡ್‌ಬಂದರ್ ಬೀಚ್‌ನಲ್ಲಿ ಘಟನೆ ನಡೆದಿದೆ. ಶೋಭಾ (31) ರಕ್ಷಣೆಗೊಳಗಾದವರು. ಗದಗ ಜಿಲ್ಲೆಯ ರೋಣ ಮೂಲದ ಶೋಭಾ ಬೀಚ್‌ಗೆ ಬಂದಿದ್ದರು. ಈ ವೇಳೆ ಅಲೆಗೆ ಸಿಲುಕಿದ್ದರು. ಇದನ್ನೂ ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ಉದಯ ಹರಿಕಂತ್ರ ಹಾಗೂ ಬೀಚ್ ಸೂಪರ್‌ವೈಸರ್ ರವಿ ನಾಯ್ಕ, ಬೋಟಿಂಗ್ ಸಿಬ್ಬಂದಿ ಪ್ರಭಾಕರ್, ಗಣೇಶ್ ನೆರವಿನಿಂದ ಬದುಕುಳಿದಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Prajwal Revanna Case: “ನಿನ್ನ ಮಗ ಮಾಡಿದ ಕೃತ್ಯಕ್ಕೆ ನಾವು ತಲೆ ತಗ್ಗಿಸಬೇಕು. ಇಡೀ ಪ್ರಪಂಚಕ್ಕೆ ಗೊತ್ತಾಗುವ ಕೆಲಸ ಮಾಡಿ ಹೋದ. ದೇಶದಲ್ಲಿ ತಲೆ ಎತ್ತಿಕೊಳ್ಳದಂತೆ ಮಾಡಿ ಹೋದ” ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೂ ಸಹ ಇದೇ ವೇಳೆ ತಮ್ಮ ಅಸಮಾಧಾನ ಹೊರಹಾಕಿದ್ದು, ನನ್ನ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ ಎಂದು ಹರಿಹಾಯ್ದಿದ್ದಾರೆ.

VISTARANEWS.COM


on

Prajwal Revanna Case HD DeveGowda and HD Kumaraswamy slams HD Revanna
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಚ್‌.ಡಿ. ರೇವಣ್ಣ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಮಗನಿಂದ ತಲೆ ತಗ್ಗಿಸಬೇಕಾಗಿ ಬಂತು. ನಿನ್ನ ಮಗನಿಂದ ಇಂತಹ ಕಪ್ಪು ಚುಕ್ಕೆ ಬಂತು ಎಂದು ಹರಿಹಾಯ್ದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಎಚ್‌.ಡಿ. ದೇವೇಗೌಡ ನಿವಾಸದಲ್ಲಿ ಸಭೆ ನಡೆದಿದ್ದು, ಪ್ರಜ್ವಲ್ ಪ್ರಕರಣದಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಕಾನೂನು ಹೋರಾಟದ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ದೇವೇಗೌಡರ ಸಮ್ಮುಖದಲ್ಲಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಟ್ಟಾಗಿ ರೇವಣ್ಣ ಮೇಲೆ ಕಿಡಿಕಾರಿದ್ದಾರೆ ಎನ್ನಲಾಗಿದೆ.

“ನಿನ್ನ ಮಗ ಮಾಡಿದ ಕೃತ್ಯಕ್ಕೆ ನಾವು ತಲೆ ತಗ್ಗಿಸಬೇಕು. ಇಡೀ ಪ್ರಪಂಚಕ್ಕೆ ಗೊತ್ತಾಗುವ ಕೆಲಸ ಮಾಡಿ ಹೋದ. ದೇಶದಲ್ಲಿ ತಲೆ ಎತ್ತಿಕೊಳ್ಳದಂತೆ ಮಾಡಿ ಹೋದ” ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೂ ಸಹ ಇದೇ ವೇಳೆ ತಮ್ಮ ಅಸಮಾಧಾನ ಹೊರಹಾಕಿದ್ದು, ನನ್ನ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಇಂತಹ ಕಪ್ಪು ಚುಕ್ಕೆ ನಮ್ಮ ವಿರುದ್ಧ ಬಂದಿರಲಿಲ್ಲ. ನಿನ್ನ ಮಗನಿಂದ ಇಂತಹ ಕಪ್ಪು ಚುಕ್ಕೆ ಬಂತು. ಮಗನನ್ನು ಬೆಳೆಸುವ ವಿಚಾರದಲ್ಲಿ ನೀನು ಎಡವಿದ್ದೀಯಾ ಎಂದು ಗರಂ ಆಗಿದ್ದಾರೆ ಎನ್ನಲಾಗಿದೆ.

ರಾಜಕೀಯ ಮತ್ತು ಕಾನೂನಾತ್ಮಕ ಹೋರಾಟದ ಚರ್ಚೆ

ಬಳಿಕ ಈ ಪ್ರಕರಣದಲ್ಲಿ ರಾಜಕೀಯ ವಿರೋಧಿಗಳಿಗೂ ಖಡಕ್ ಎಚ್ಚರಿಕೆ ಕೊಡಬೇಕು. ಅಲ್ಲದೆ, ನಮ್ಮ ತಂಟೆಗೆ ಬಂದ ಡಿ.ಕೆ. ಬ್ರದರ್ಸ್‌ಗೆ ತಿರುಗೇಟು ಕೊಡಬೇಕು. ಕೇವಲ ರಾಜಕೀಯವಾಗಿ ಅಷ್ಟೇ ಅಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಆ ವಿಡಿಯೊಗಳನ್ನು ಬಿಡುಗಡೆ ಮಾಡಿದವರು ಯಾರು? ಇದರ ಹಿಂದೆ ಇರುವ ಶಕ್ತಿಗಳ ವಿರುದ್ಧ ಕಾನೂನು ಹೋರಾಟ ಮಾಡಲು ತಂತ್ರಗಾರಿಕೆ ರೂಪಿಸಲಾಗಿದೆ ಎನ್ನಲಾಗಿದೆ.

ಪ್ರಜ್ವಲ್‌ ಅರೆಸ್ಟ್‌ ಆದಲ್ಲಿ ಎಸ್‌ಐಟಿ ಕೇಳುವ ಪ್ರಶ್ನೆಗಳಿವು! ರೇವಣ್ಣಗೂ ತಟ್ಟುವ ಬಿಸಿ

ಪ್ರಜ್ವಲ್‌ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾದಲ್ಲಿ ಇಲ್ಲವೇ ಅವರನ್ನು ಬಂಧಿಸಿ ಕರೆತಂದಲ್ಲಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈಗಾಗಲೇ ಹಲವು ಪ್ರಶ್ನೆಗಳನ್ನು ಎಸ್‌ಐಟಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ. ಪ್ರಕರಣ ಸಂಬಂಧ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಕೇಳಿ ಪ್ರಜ್ವಲ್‌ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್‌ ಅವರ ವಯಸ್ಸಿನಿಂದ ಹಿಡಿದು ಹಲವು ಪ್ರಶ್ನೆಗಳನ್ನು ಕೇಳಲಿದ್ದಾರೆ. ಆರೋಪಗಳ ಬಗ್ಗೆ ಏನು ಹೇಳುತ್ತೀರಿ? ನೀವೇ ರೆಕಾರ್ಡ್‌ ಮಾಡಿಕೊಂಡಿದ್ದೀರಿ ಎಂಬ ಆರೋಪ ಇದೆ. ರೆಕಾರ್ಡ್‌ಗೆ ಯಾವ ಸಾಧನವನ್ನು ಬಳಸಿಕೊಂಡಿದ್ದೀರಿ. ಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್.ಡಿ. ರೇವಣ್ಣ ಅವರಿಗೂ ಹಲವು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ರೆಡಿಯಾಗಿದೆ. ನಿಮ್ಮ ಪುತ್ರನ ಮೇಲೆ ಆರೋಪಿವಿರುವುದು ಗಮನಕ್ಕೆ ಬಂದಿತ್ತಾ? ನಿಮ್ಮ ಗಮನಕ್ಕೆ ಬಂದಿದ್ರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ? ಒಂದು ವೇಳೆ ಚರ್ಚೆ ಮಾಡಿದರೆ ನಿಮ್ಮ ಪುತ್ರ ಏನು ಹೇಳಿದ್ದರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಜ್ವಲ್ ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು

1- ಪ್ರಜ್ವಲ್ ಅವರೇ ನಿಮಗೆ ವಯಸ್ಸು ಎಷ್ಟು?
2- ನೀವು ಏನು ಓದಿದ್ದೀರಿ? ಎಲ್ಲಿ ಓದಿದ್ದು?
3- ಎಲೆಕ್ಷನ್ ಮುಗಿದ ತಕ್ಷಣ ತಾವು ಎಲ್ಲಿಗೆ ಹೋದಿರಿ?
4- ನೀವು ಹೆಚ್ಚಾಗಿ ವಾಸವಿರೋದು ಹಾಸನವಾ? ದೆಹಲಿಯಾ? ಅಥವಾ ಬೆಂಗಳೂರಲ್ಲೋ?
5- ನಿಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಏನಂತೀರಿ?
6- ಅಸಲಿಗೆ ಅವು ನಿಮ್ಮ ವಿಡಿಯೊಗಳಾ?
7- ವಿಡಿಯೋದಲ್ಲಿರುವ ಧ್ವನಿ ನಿಮ್ಮದಲ್ಲವೇ?
8- ನಿಮ್ಮಿಂದಲೇ ರೆಕಾರ್ಡ್‌ ಎನ್ನಲಾಗುತ್ತಿದೆ, ಹೌದೇ?
9- ರೆಕಾರ್ಡ್ ಮಾಡಲು ಬಳಸಿದ ಸಾಧನ ಯಾವುದು?
10- ನೀವೇ ರೆಕಾರ್ಡ್ ಮಾಡಿದ್ದಂತೆ. ಯಾಕೆ ಮಾಡಿದಿರಿ?
11 – ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಿರಾ?
12- ನಿಮ್ಮ ಮೋಜಿಗೆ ವಿಡಿಯೊಗಳನ್ನು ಮಾಡಿಕೊಳ್ಳುತ್ತಿದ್ದಿರಾ?
13- ರೆಕಾರ್ಡ್ ಮಾಡುವುದು ತಪ್ಪು ಎಂದು ನಿಮಗೆ ಗೊತ್ತಿಲ್ವೆ?
14- ದೃಶ್ಯಗಳಲ್ಲಿ ಇರುವ ಮಹಿಳೆಯರು ನಿಮಗೆ ಪರಿಚಯವೇ?
15- ಆ ಮಹಿಳೆಯರನ್ನು ನೀವು ಎಲ್ಲಿ ಭೇಟಿ ಮಾಡಿದಿರಿ?
16- ದೈಹಿಕ ಸಂಪರ್ಕ ಬೆಳೆಸಲು ಏನಾದರೂ ಆಮಿಷ ಒಡ್ಡಿದ್ರಾ?
17 – ಅದು ಅತ್ಯಾಚಾರಕ್ಕೆ ಸಮ ಎಂದು ಗೊತ್ತಿದೆಯೇ?
18- ಪ್ರಮೋಷನ್, ಕೆಲಸದ ನೆಪದಲ್ಲಿ ದೈಹಿಕ ಸಂಪರ್ಕ ಮಾಡಿದಿರಾ?
19- ನಿಮಗೇನಾದರೂ ಮಾನಸಿಕ ಸಮಸ್ಯೆ ಇದೆಯಾ?
20- ನೀವು ದೌರ್ಜನ್ಯ ನಡೆಸುತ್ತಿರುವಂತಿದೆ, ಏನಂತೀರಿ?
21- ನೋಟಿಸ್ ಕೊಟ್ಟರೂ 7 ದಿನ ಟೈಮ್ ಯಾಕೆ ಕೇಳಿದಿರಿ?
22- ನೀವು ದೃಶ್ಯ ಶೂಟ್ ಮಾಡಲು ಬಳಸಿದ ಸಾಧನ ಎಲ್ಲಿದೆ?
23- ಬೇರೆ ಯಾರ ಬಳಿಯಾದರೂ ವಿಡಿಯೊ ಶೇರ್ ಮಾಡಿದಿರಾ?
24- ಖಾಸಗಿ ದೃಶ್ಯಗಳು ಹೇಗೆ ಹೊರಗೆ ಬಂದವು ಹೇಳಬಹುದಾ?
25- ನಿಮಗೆ ಕಾರ್ತಿಕ್ ಎಂಬ ವ್ಯಕ್ತಿ ಗೊತ್ತಾ?
26 – ನಿಮಗೂ ಕಾರ್ತಿಕ್‌ಗೂ ಸ್ನೇಹವಿತ್ತಾ?
27 – ನಿಮ್ಮ ವಿರುದ್ಧ ಸುದ್ದಿ ಪ್ರಸಾರವಾಗದಂತೆ ತಡೆ ತಂದಿದ್ದಿರಿ ಯಾಕೆ?
28 – ನಿಮ್ಮ ಮೇಲಿನ ಪಿತೂರಿ ಅಂತಾದರೆ ನೀವ್ಯಾಕೆ ದೂರು ನೀಡಲಿಲ್ಲ?
29 – ನಿಮ್ಮ ವಿರುದ್ಧ ಆರೋಪ ಬಂದ ಕೂಡಲೇ ಯಾಕೆ ದೇಶ ಬಿಟ್ಟು ಹೋದಿರಿ?
30 – ಮನೆಯಲ್ಲಿ ಯಾರ ಬಳಿಯಾದರೂ ಈ ವಿಷಯಗಳನ್ನು ಹೇಳಿಕೊಳ್ಳುತ್ತಿದ್ದಿರಾ?
31 – ಕೆಲಸದಾಕೆಯ ಆರೋಪದ ಬಗ್ಗೆ ಏನಂತೀರಿ?
32 – ಪ್ರಜ್ವಲ್ ನೀವು ತನಿಖೆಗೆ ಸಹಕರಿಸಬೇಕು
33 – ತನಿಖೆ ಪೂರ್ಣವಾಗುವವರೆಗೂ ದೇಶ ಬಿಟ್ಟು ಹೋಗಬೇಡಿ

ಎಂಬಿತ್ಯಾದಿ ಪ್ರಶ್ನೆಗಳನ್ನು ಎಸ್‌ಐಟಿ ಕೇಳಲಿದೆ. ಒಂದು ವೇಳೆ ಇವುಗಳಿಗೆ ಆರೋಪಿ ಪ್ರಜ್ವಲ್‌ ಸ್ಪಂದಿಸದೆ ಸಮರ್ಪಕ ಉತ್ತರ ನೀಡಿದ್ದರೆ ಮುಂದಿನ ಕ್ರಮದ ಬಗ್ಗೆ ಎಸ್‌ಐಟಿ ಚಿಂತನೆ ನಡೆಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case: SIT ಮುಂದೆ ಹಾಜರಾಗಲು ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ? ತನಿಖೆಗೆ ಆತುರ ಏಕೆ?

ಎಚ್‌‌‌‌.ಡಿ.ರೇವಣ್ಣಗೆ SIT ಕೇಳುವ ಸಂಭಾವ್ಯ ಪ್ರಶ್ನೆಗಳು!

1) ನಿಮ್ಮ ಹೆಸರೇನು..? ಏನು ಕೆಲಸ ಮಾಡಿಕೊಂಡಿದ್ದೀರಿ..?
2) ಯಾವ ವಿಳಾಸದಲ್ಲಿ ವಾಸವಾಗಿದ್ದೀರಾ? ಎಷ್ಟು ವರ್ಷ..?
3) ನಿಮ್ಮ ಮೇಲೆ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ಮಾಹಿತಿ ಇದೆಯಾ?
4) ದೂರು ನೀಡಿರುವ ಮಹಿಳೆ ಪರಿಚಯಸ್ಥರಾ? ಸಂಬಂಧಿನಾ?
5) ಎಷ್ಟು ವರ್ಷಗಳಿಂದ ನಿಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ..?
6) ದೂರಿನಲ್ಲಿ ಉಲ್ಲೇಖಿಸಿದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದೀರಾ?
7) ನಿಮ್ಮ ಪುತ್ರನ ಮೇಲೂ ಆರೋಪಿವಿದೆ ಗಮನಕ್ಕೆ ಬಂದಿತ್ತಾ..?
8) ನಿಮ್ಮ ಗಮನಕ್ಕೆ ಬಂದಿದ್ದರೆ ಅದರ ಬಗ್ಗೆ ಪ್ರಜ್ವಲ್‌‌ ಜತೆ ಚರ್ಚಿಸಿದ್ದಿರಾ?
9) ಒಂದು ವೇಳೆ ಚರ್ಚೆ ಮಾಡಿದ್ದರೆ ನಿಮ್ಮ ಪುತ್ರ ಏನು ಹೇಳಿದ್ದರು?
10) ನಿಮ್ಮ ಪುತ್ರನ ಕಾರು ಚಾಲಕ ಕಾರ್ತಿಕ್ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ?
11) ನಿಮ್ಮ ಡ್ರೈವರ್ ಕಾರ್ತಿಕ್ ಜತೆ ಏನಾದರೂ ಗಲಾಟೆ ಆಗಿತ್ತಾ?
12) ವಿಡಿಯೊ ನಾನೇ ಕೊಟ್ಟಿದ್ದು ಎಂದು ಕಾರ್ತಿಕ್ ಹೇಳಿಕೆ ನೀಡಿದ್ದಾರಲ್ವಾ, ಇದು ಸತ್ಯನಾ?
13) ಪೆನ್‌ಡ್ರೈವ್‌ನಲ್ಲಿರೋ ವಿಡಿಯೊ ಪ್ರಜ್ವಲ್ ರೇವಣ್ಣನವರೆದ್ದೇನಾ..?
14) ಇಲ್ಲ ಅಂದಾದರೆ ಕೋರ್ಟ್‌ನಲ್ಲಿ ಸ್ಟೇ ತಂದಿದ್ದು ಯಾಕೆ?
15) ಮನೆ ಕೆಲಸದವಳು ಮಾಡುವ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

Continue Reading

ಕಲಬುರಗಿ

Ambedkar Statue: ಅಂಬೇಡ್ಕರ್‌ ಪ್ರತಿಮೆ ಅಪಮಾನ ಪ್ರಕರಣ ಸಿಐಡಿಗೆ ಹಸ್ತಾಂತರ! ಡಾ. ಜಿ. ಪರಮೇಶ್ವರ್‌

ಅಂಬೇಡ್ಕರ್‌ ಪ್ರತಿಮೆಗೆ (Ambedkar Statue) ಚಪ್ಪಲಿ ಹಾರ ಹಾಕಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಂಬೇಡ್ಕರ್‌ ಪ್ರತಿಮೆಗೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ಸಿಕ್ಕಿದ್ದಕ್ಕೆ ಸಿಟ್ಟಾದ ವಿರೋಧ ಬಣವು ರಾತ್ರೋರಾತ್ರಿ ದಾಳಿ ಮಾಡಿ ಹಲ್ಲೆ ನಡೆಸಿತ್ತು. ಇದೀಗ ಈ ಪ್ರಕರಣವನ್ನು ಸಿಐಡಿಗೆ (CID) ಹಸ್ತಾಂತರಿಸಲು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

VISTARANEWS.COM


on

By

Ambedkar statue
Koo

ಕಲಬುರಗಿ : ಕಳೆದ ಜನವರಿಯಲ್ಲಿ ಕಲಬುರಗಿ ನಗರದ (Kalaburagi News) ಕೊಟನೂರ (ಡಿ) ಬಡಾವಣೆಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಪ್ರತಿಮೆಗೆ (Ambedkar statue) ಅಪಮಾನ ಮಾಡಲಾಗಿತ್ತು. ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಸಂಗಮೇಶ್‌ ಎಂಬಾತನಿಗೆ ಏ.30ರ ಮಂಗಳವಾರ ಕೋರ್ಟ್‌ನಿಂದ ಜಾಮೀನು ಮಂಜೂರು ಆಗಿತ್ತು. ಜಾಮೀನಿನ‌ ಮೇಲೆ ಹೊರ ಬಂದಿದ್ದ ಸಂಗಮೇಶ್‌ ಮನೆ ಮೇಲೆ ಮಂಗಳವಾರ ರಾತ್ರಿ 12 ಗಂಟೆಗೆ ಸುಮಾರು 50 ರಿಂದ 60 ಜನರ ತಂಡವೊಂದು ದಿಢೀರ್‌ ದಾಳಿ ಮಾಡಿತ್ತು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ತಿಂಗಳ‌ ಹಿಂದೆ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದ ಆರೋಪಿ ಬಿಡುಗಡೆಯಾಗಿ ಬಂದಿದ್ದ. ಆದರೆ ಕೆಲವರು ಆತನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಲಾಗುತ್ತಿದೆ. ಹಲ್ಲೆಗೊಳಗಾದ ಸಂಗಮೇಶ್ ಮೇಲೆ ಹಲ್ಲೆ ಮಾಡಿದ್ದು ತಪ್ಪು, ಈ ಪ್ರಕರಣ ಸಿಐಡಿಗೆ ವಹಿಸುತ್ತೆವೆ ಎಂದರು.

ಮುಂದುವರಿದ ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಟನೆ

ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಮನೆ ಮೇಲೆ ದಾಳಿ ಮಾಡಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವು ಪ್ರತಿಭಟನೆಗಳು ಮುಂದುವರಿದಿದೆ. ಲಿಂಗಾಯಿತ ಸಮುದಾಯದವರು ಕಲಬುರಗಿಯ ವಿವಿಧಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಲಬುರಗಿ ನಗರದ ಆಳಂದ ಚೆಕ್‌ಪೋಸ್ಟ್‌ನಲ್ಲಿ ಟೈಯರ್‌ಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: Ambedkar Statue: ತಲೆ ತಿರುಗಿ ಬಿದ್ದ ಕಲಬುರಗಿ ಸಂಸದ ಉಮೇಶ್ ಜಾಧವ್

ಜಾಮೀನು ಪಡೆದು ಹೊರಬಂದ ಆರೋಪಿ ಮನೆಗೆ ಕಲ್ಲು ತೂರಾಟ

ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಸಂಗಮೇಶ್‌ ಎಂಬಾತನಿಗೆ ಮಂಗಳವಾರ ಕೋರ್ಟ್‌ನಿಂದ ಜಾಮೀನು ಮಂಜೂರು ಆಗಿತ್ತು. ಜಾಮೀನಿನ‌ ಮೇಲೆ ಹೊರ ಬಂದಿದ್ದ ಸಂಗಮೇಶ್‌ ಮನೆ ಮೇಲೆ ಮಂಗಳವಾರ ರಾತ್ರಿ 12 ಗಂಟೆಗೆ ಸುಮಾರು 50 ರಿಂದ 60 ಜನರ ತಂಡವೊಂದು ದಿಢೀರ್‌ ದಾಳಿ ಮಾಡಿತ್ತು.

ಆರೋಪಿ ಕುಟುಂಬಸ್ಥರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದರು. ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಜಖಂಗೊಳಿಸಿದ್ದರು. ಆರೋಪಿ ಸಂಗಮೇಶ್‌ ಮನೆಯಲ್ಲದೇ ಬಡಾವಣೆಯಲ್ಲಿರುವ ಇತರೆ ಮನೆಗಳ ಮೇಲೂ ದಾಳಿ ಮಾಡಿದ್ದರು. ಹಲವು ಬೈಕ್‌ಗಳ ಜಖಂಗೊಳಿಸಿ, ಕಾರುಗಳ ಗಾಜು ಪುಡಿ ಪುಡಿ ಮಾಡಿದ್ದರು. ಇನ್ನೂ ಕಿಡಿಗೇಡಿಗಳ ದಾಳಿಗೆ ವೀರಶೈವ-ಲಿಂಗಾಯತ ಜನರು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಕಲಬುರಗಿ ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದ್ದರು. ಸದ್ಯ ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Suspicious Death : ಗೃಹಿಣಿಯ ಕುತ್ತಿಗೆಯಲ್ಲಿತ್ತು ರಕ್ತ ಹೆಪ್ಪುಗಟ್ಟಿರುವ ಕಲೆ; ಈ ಸಾವು ಕೊಲೆಯೋ, ಆತ್ಮಹತ್ಯೆಯೋ

ಏನಿದು ಪ್ರಕರಣ

ಕಳೆದ ಜನವರಿ 22ರ ರಾತ್ರಿ ಕಲಬುರಗಿಯ ಕೋಟನೂರ ಬಡಾವಣೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ (Ambedkar Statue) ಯಾರೋ ದುಷ್ಕರ್ಮಿಗಳು ಅಪಮಾನ (Desecration of Ambedkar statue) ಮಾಡಿದ್ದರಿಂದ ಈ ಭಾಗದಲ್ಲಿ ಆಕ್ರೋಶ ಭುಗಿಲೆದಿತ್ತು. ಅಂಬೇಡ್ಕರ್‌ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದರಿಂದ ಆಕ್ರೋಶಗೊಂಡಿದ್ದ ದಲಿತ ಸಮುದಾಯದವರು ರಸ್ತೆ ತಡೆ (Road block in kalaburagi) ನಡೆಸಿ ಪ್ರತಿಭಟನೆ ನಡೆಸಿದ್ದರು. ಕಲಬುರಗಿಯ ಒಂದು ಪೆಟ್ರೋಲ್‌ ಪಂಪ್‌ಗೆ ಹಾನಿ ಮಾಡಲಾಗಿತ್ತು.

Ambedkar Statue
ಘಟನೆಯಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದ ದಲಿತ ಸಮುದಾಯ

ಕೋಟನೂರ ಬಡಾವಣೆಯಲ್ಲಿರುವ ಪ್ರತಿಮೆಗೆ ಚಪ್ಪಲಿ ಹಾರ ಹಾಕಿರುವುದು ಮರುದಿನ ಬೆಳಗ್ಗೆ ಗಮನಕ್ಕೆ ಬಂದಿತ್ತು. ಇದನ್ನು ನೋಡಿ ಆಕ್ರೋಶಿತರಾದ ಜನರು ಪ್ರತಿಭಟನೆಗೆ ಇಳಿದರು. ರಸ್ತೆ ತಡೆಯ ವಿಷಯ ತಿಳಿಯುತ್ತಲೇ ಪೊಲೀಸರು ಆಗಮಿಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ಕನ್ನಿಕಾ ಸಿಕ್ರಿವಾಲ್‌ ಅವರು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಒಂದು ಹಂತಕ್ಕೆ ಸಫಲರಾದರೂ ಅದು ಬೇರೆ ಬೇರೆ ಭಾಗಗಳಿಗೆ ಹರಡಿತು.

Ambedkar statue in kalaburagi
ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದ ದಲಿತ ಸಮುದಾಯ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prajwal Revanna Case PM Modi defends MP accused of rape says Rahul Gandhi
Lok Sabha Election 20242 mins ago

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Rinku Singh
ಕ್ರೀಡೆ11 mins ago

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Crime News
ಕ್ರೈಂ11 mins ago

Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Samsung
ತಂತ್ರಜ್ಞಾನ30 mins ago

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

students self harming
ಕ್ರೈಂ1 hour ago

Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

Prajwal Revanna Case HD DeveGowda and HD Kumaraswamy slams HD Revanna
ಕ್ರೈಂ2 hours ago

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Pawan Kalyan Hari Hara Veera Mallu Part 1 teaser Out
ಟಾಲಿವುಡ್2 hours ago

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

supreme court
ದೇಶ2 hours ago

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Viral News
ವೈರಲ್ ನ್ಯೂಸ್2 hours ago

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Uber Cup 2024 Quarterfinal
ಕ್ರೀಡೆ2 hours ago

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌