ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ (Traffic rule violations) ಪ್ರಕರಣಗಳ ದಂಡ ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾಲ್ಕನೇ ದಿನವೂ ಸ್ವಯಂಪ್ರೇರಿತರಾಗಿ ದಂಡ ಪಾವತಿ (Traffic Fines) ಮುಂದುವರಿದಿದೆ. ನಾಲ್ಕನೇ ದಿನವಾದ ಸೋಮವಾರ ಆರಂಭದ ಮಾಹಿತಿ ಪ್ರಕಾರ ಇದುವರೆಗೆ ೮,೬೮,೪೦೫ ಕೇಸ್‌ಗಳನ್ನು ವಿಲೇವಾರಿ ಮಾಡಿದ್ದು, 25,42,52,೦೦೦ಕ್ಕೂ ಹೆಚ್ಚು ರೂಪಾಯಿ ಸಂಗ್ರಹಿಸಲಾಗಿದೆ.
ಈ ಮೂಲಕ ದಂಡ ಸಂಗ್ರಹ ಮೊತ್ತ 25 ಕೋಟಿ 42 ಲಕ್ಷ 52 ಸಾವಿರ ರೂಪಾಯಿಗೂ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಆದರೆ, ಸದ್ಯ ಏಂಟೂವರೆ ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದೆ. ಆದರೆ, ಇನ್ನೂ ಇನ್ನು 1 ಕೋಟಿ 80 ಲಕ್ಷ ಪ್ರಕರಣಗಳು ಬಾಕಿ ಇವೆ ಎಂದು ಸಂಚಾರಿ ಪೊಲೀಸ್ ವಿಭಾಗ ಮಾಹಿತಿ ನೀಡಿದೆ.
ಇನ್ನೂ ಎರಡ್ಮೂರು ದಿನ ಕಾಲಾವಧಿ ವಿಸ್ತರಣೆಗೆ ಚಿಂತನೆ
ಇನ್ನು ದಂಡ ಪಾವತಿ ಬಗ್ಗೆ ತಕಾರರುಗಳು, ಸಮಸ್ಯೆಗಳು ಇದ್ದರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್‌ನಲ್ಲಿ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಎರಡು ದಿನ ನೋಡಿಕೊಂಡು ದಂಡ ಪಾವತಿಸಲು ಅವಧಿ ವಿಸ್ತರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು. ಬಳಿಕ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ತಿಳಿಸಿದ್ದಾರೆ.
ಫೇಕ್ ನಂಬರ್ ಪ್ಲೇಟ್ ಶಾಕ್
ದಂಡ ಪಾವತಿ ಮಾಡುವ ವೇಳೆ ನಕಲಿ ನಂಬರ್ ಪ್ಲೇಟ್‌ಗಳ ಬಗ್ಗೆಯೂ ದೂರುಗಳು ಬರುತ್ತಿದ್ದು, ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸಹಕಾರಿಯಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಂಇಷನರ್ ಡಾ. ಸಲೀಂ ಹೇಳಿಕೆ ನೀಡಿದ್ದಾರೆ.
ದಂಡದ ಮೊತ್ತ ಹೆಚ್ಚಿರುವುದನ್ನು ಕಂಡ ನಾಗರಿಕರು ಸರಿಯಾಗಿ ಪರಶೀಲಿಸಿದ ವೇಳೆ ಅದು ಫೇಕ್ ನಂಬರ್ ಪ್ಲೇಟ್‌ಗಳೆಂದು ತಿಳಿದು ಬಂದಿದೆ. ಹೀಗಾಗಿ ವಾಹನ ಸವಾರರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್‌ನತ್ತ ದೌಡಾಯಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು, ಈ ಸಂಬಂಧ ವಾಹನ ಸವಾರರು ದೂರು ದಾಖಲಿಸುತ್ತಿದ್ದಾರೆ. ಸದ್ಯ ಅಂತಹ ದೂರಿನ ಆಧಾರದ ಮೇಲೆ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನಾಲ್ಕು ದಿನದಲ್ಲಿ ಭಾರಿ ದಂಡ ಮೊತ್ತ ಸಂಗ್ರಹ
ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣ ವಿಲೇವಾರಿ ಸಂಬಂಧ ರಾಜ್ಯ ಸರ್ಕಾರಿ ಫೆ. 3ರಂದು ಶೇಕಡಾ ೫೦ರಷ್ಟು ರಿಯಾಯಿತಿ ಘೋಷಿಸಿತು. ಈ ವಿನಾಯಿತಿಯನ್ನು ಘೋಷಣೆ ಮಾಡುತ್ತಿದ್ದಂತೆ ಮೊದಲ ದಿನವೇ ನಾಗರಿಕರು ವಿವಿಧ ಮಾದರಿಯಲ್ಲಿ ದಂಡ ಕಟ್ಟುವ ಮೂಲಕ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಇನ್ನು ಎರಡನೇ ದಿನ 6,80,72,500 ರೂಪಾಯಿ ದಂಡದ ಮೊತ್ತವು ಸಂಗ್ರಹವಾಗಿದ್ದರೆ, ೩ನೇ ದಿನ 6,31,77,750 ರೂ. ಸಂಗ್ರಹಗೊಂಡಿತ್ತು. ಸೋಮವಾರ ೮,೬೮,೪೦೫ ಕೇಸ್‌ಗಳನ್ನು ವಿಲೇವಾರಿ ಮಾಡಿದ್ದು, 25,42,52,೦೦೦ಕ್ಕೂ ಹೆಚ್ಚು ರೂಪಾಯಿ ಸಂಗ್ರಹಿಸಲಾಗಿದೆ.