Traffic Fines: 25 ಕೋಟಿ ರೂಪಾಯಿ ದಾಟಿದ ಟ್ರಾಫಿಕ್‌ ದಂಡ; ಫೇಕ್‌ ನಂಬರ್‌ ಪ್ಲೇಟ್‌ ಫೈನ್‌ಗೆ ಹೆದರಿದ ಜನ Vistara News

ಕರ್ನಾಟಕ

Traffic Fines: 25 ಕೋಟಿ ರೂಪಾಯಿ ದಾಟಿದ ಟ್ರಾಫಿಕ್‌ ದಂಡ; ಫೇಕ್‌ ನಂಬರ್‌ ಪ್ಲೇಟ್‌ ಫೈನ್‌ಗೆ ಹೆದರಿದ ಜನ

ಟ್ರಾಫಿಕ್‌ ನಿಯಮ ಉಲ್ಲಂಘಿಸಿ ಸಾವಿರಾರು ರೂಪಾಯಿ ದಂಡದ ಮೊತ್ತ ದಾಟಿದ್ದರಿಂದ ಹೆದರಿ ಸುಮ್ಮನಿದ್ದ ನಾಗರಿಕರಿಗೆ ರಾಜ್ಯ ಸರ್ಕಾರ ಶೇ.50 ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದರಿಂದ ಸ್ವಯಂಪ್ರೇರಿತರಾಗಿ ದಂಡ ಕಟ್ಟುತ್ತಿದ್ದಾರೆ. ಇದರ ಭಾಗವಾಗಿ ನಾಲ್ಕನೇ ದಿನವಾದ ಸೋಮವಾರದ ಆರಂಭದ ಲೆಕ್ಕಾಚಾರದ ಪ್ರಕಾರ ಸುಮಾರು 25 ಕೋಟಿ ರೂಪಾಯಿಗೂ ಹೆಚ್ಚು ದಂಡದ ಮೊತ್ತ (Traffic Fines) ಸಂಗ್ರಹವಾಗಿದೆ.

VISTARANEWS.COM


on

traffic rules
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ (Traffic rule violations) ಪ್ರಕರಣಗಳ ದಂಡ ಪಾವತಿಗೆ ಶೇಕಡಾ 50ರಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾಲ್ಕನೇ ದಿನವೂ ಸ್ವಯಂಪ್ರೇರಿತರಾಗಿ ದಂಡ ಪಾವತಿ (Traffic Fines) ಮುಂದುವರಿದಿದೆ. ನಾಲ್ಕನೇ ದಿನವಾದ ಸೋಮವಾರ ಆರಂಭದ ಮಾಹಿತಿ ಪ್ರಕಾರ ಇದುವರೆಗೆ ೮,೬೮,೪೦೫ ಕೇಸ್‌ಗಳನ್ನು ವಿಲೇವಾರಿ ಮಾಡಿದ್ದು, 25,42,52,೦೦೦ಕ್ಕೂ ಹೆಚ್ಚು ರೂಪಾಯಿ ಸಂಗ್ರಹಿಸಲಾಗಿದೆ.

ಈ ಮೂಲಕ ದಂಡ ಸಂಗ್ರಹ ಮೊತ್ತ 25 ಕೋಟಿ 42 ಲಕ್ಷ 52 ಸಾವಿರ ರೂಪಾಯಿಗೂ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗಿದೆ. ಆದರೆ, ಸದ್ಯ ಏಂಟೂವರೆ ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದೆ. ಆದರೆ, ಇನ್ನೂ ಇನ್ನು 1 ಕೋಟಿ 80 ಲಕ್ಷ ಪ್ರಕರಣಗಳು ಬಾಕಿ ಇವೆ ಎಂದು ಸಂಚಾರಿ ಪೊಲೀಸ್‌ ವಿಭಾಗ ಮಾಹಿತಿ ನೀಡಿದೆ.

ಇನ್ನೂ ಎರಡ್ಮೂರು ದಿನ ಕಾಲಾವಧಿ ವಿಸ್ತರಣೆಗೆ ಚಿಂತನೆ

ಇನ್ನು ದಂಡ ಪಾವತಿ ಬಗ್ಗೆ ತಕಾರರುಗಳು, ಸಮಸ್ಯೆಗಳು ಇದ್ದರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್‌ನಲ್ಲಿ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಎರಡು ದಿನ ನೋಡಿಕೊಂಡು ದಂಡ ಪಾವತಿಸಲು ಅವಧಿ ವಿಸ್ತರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು. ಬಳಿಕ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ತಿಳಿಸಿದ್ದಾರೆ.

ಫೇಕ್ ನಂಬರ್ ಪ್ಲೇಟ್ ಶಾಕ್

ದಂಡ ಪಾವತಿ ಮಾಡುವ ವೇಳೆ ನಕಲಿ ನಂಬರ್ ಪ್ಲೇಟ್‌ಗಳ ಬಗ್ಗೆಯೂ ದೂರುಗಳು ಬರುತ್ತಿದ್ದು, ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲು ಸಹಕಾರಿಯಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಂಇಷನರ್ ಡಾ. ಸಲೀಂ ಹೇಳಿಕೆ ನೀಡಿದ್ದಾರೆ.

ದಂಡದ ಮೊತ್ತ ಹೆಚ್ಚಿರುವುದನ್ನು ಕಂಡ ನಾಗರಿಕರು ಸರಿಯಾಗಿ ಪರಶೀಲಿಸಿದ ವೇಳೆ ಅದು ಫೇಕ್ ನಂಬರ್ ಪ್ಲೇಟ್‌ಗಳೆಂದು ತಿಳಿದು ಬಂದಿದೆ. ಹೀಗಾಗಿ ವಾಹನ ಸವಾರರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್‌ನತ್ತ ದೌಡಾಯಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು, ಈ ಸಂಬಂಧ ವಾಹನ ಸವಾರರು ದೂರು ದಾಖಲಿಸುತ್ತಿದ್ದಾರೆ. ಸದ್ಯ ಅಂತಹ ದೂರಿನ‌ ಆಧಾರದ ಮೇಲೆ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನಾಲ್ಕು ದಿನದಲ್ಲಿ ಭಾರಿ ದಂಡ ಮೊತ್ತ ಸಂಗ್ರಹ

ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣ ವಿಲೇವಾರಿ ಸಂಬಂಧ ರಾಜ್ಯ ಸರ್ಕಾರಿ ಫೆ. 3ರಂದು ಶೇಕಡಾ ೫೦ರಷ್ಟು ರಿಯಾಯಿತಿ ಘೋಷಿಸಿತು. ಈ ವಿನಾಯಿತಿಯನ್ನು ಘೋಷಣೆ ಮಾಡುತ್ತಿದ್ದಂತೆ ಮೊದಲ ದಿನವೇ ನಾಗರಿಕರು ವಿವಿಧ ಮಾದರಿಯಲ್ಲಿ ದಂಡ ಕಟ್ಟುವ ಮೂಲಕ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಇನ್ನು ಎರಡನೇ ದಿನ 6,80,72,500 ರೂಪಾಯಿ ದಂಡದ ಮೊತ್ತವು ಸಂಗ್ರಹವಾಗಿದ್ದರೆ, ೩ನೇ ದಿನ 6,31,77,750 ರೂ. ಸಂಗ್ರಹಗೊಂಡಿತ್ತು. ಸೋಮವಾರ ೮,೬೮,೪೦೫ ಕೇಸ್‌ಗಳನ್ನು ವಿಲೇವಾರಿ ಮಾಡಿದ್ದು, 25,42,52,೦೦೦ಕ್ಕೂ ಹೆಚ್ಚು ರೂಪಾಯಿ ಸಂಗ್ರಹಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

HD Kumaraswamy: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು.

VISTARANEWS.COM


on

HD Kumaraswamy
Koo

ಮಂಗಳೂರು: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಶನಿವಾರ ರಾತ್ರಿ ಭಾಗವಹಿಸಿ, ಹೊನಲು ಬೆಳಕಿನಲ್ಲಿ ಮಕ್ಕಳ ಸಾಹಸ ಪ್ರದರ್ಶನವನ್ನು ವೀಕ್ಷಿಸಿದರು. ಬಿಜೆಪಿಯ ಪ್ರಮುಖ ನಾಯಕರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಕ್ಕಳಿಂದ ಸಾಹಸ ಕ್ರೀಡೆಗಳ ಜತೆ ದೇಶ ಪ್ರೇಮದ ಸಂದೇಶ ಸಾರಿದ್ದು ಗಮನ ಸೆಳೆಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀ ರಾಮ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಕ್ರೀಡೋತ್ಸವದಲ್ಲಿ ರಾಷ್ಟ್ರ ಭಕ್ತಿಯ ಜತೆಗೆ ರಾಮ ಭಕ್ತಿಯ ಅನಾವರಣವಾಯಿತು. ನಂತರ ಒಂದೇ ಮಾತರಂ ಘೋಷಣೆಗಳು ಮೊಳಗಿದವು. ಈ ವೇಳೆ ಮೋದಿ ಗೆಟಪ್‌ನಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿ, ಚಂದ್ರಯಾನ 3 ಉಡಾವಣೆ ಮರುಸೃಷ್ಟಿ ಗಮನ ಸೆಳೆಯಿತು. ನಂತರ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್‌ಗೆ ಪುಷ್ಪ ನಮನ ಸಲ್ಲಿಸಲಾಯಿತು.

ಮಕ್ಕಳ ಸಾಹಸ ಹಾಗೂ ನೃತ್ಯ ವೀಕ್ಷಿಸಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಕ್ರೀಡೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಪ್ರಭಾಕರ ಭಟ್ ಅವರ ಗುಣಗಾನ ಮಾಡಿದರು. ಪ್ರಭಾಕರ್ ಭಟ್ ಅವರ ಬಗ್ಗೆ ನನಗೆ ಈ ಹಿಂದೆ ಹೆಚ್ಚಿನ ಮಾಹಿತಿ ಇರಲಿಲ್ಲ. ಇಂದು ಇಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ಉತ್ತಮ ಶಿಕ್ಷಣ ನೀಡುವಲ್ಲಿ ಭಟ್ ಅವರ ಕೊಡುಗೆ ಸ್ಮರಿಸಬೇಕು. ಇಂತಹ ಕಾರ್ಯಕ್ರಮ ಮಾಡಲು ಸುಲಭವಲ್ಲ. ಅದೇ ರೀತಿ ಈ ಶಾಲೆ ಕಟ್ಟಿರುವುದು ಸಾಮಾನ್ಯ ವಿಚಾರವಲ್ಲ. ಜ್ಞಾನ ವಿಕಾಸದ ಜತೆ ಎಲ್ಲಾ ರೀತಿಯ ವಿಕಾಸ ಇಲ್ಲಿ ಆಗುತ್ತಿದೆ. ಪ್ರಭಾಕರ್ ಭಟ್ ಇಂದು ನನ್ನ ಕಣ್ಣು ತೆರೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ | JDS Karnataka: ಪಕ್ಷ ವಿರೋಧಿ ಚಟುವಟಿಕೆ; ಸಿ.ಎಂ.ಇಬ್ರಾಹಿಂ, ಕೇರಳದ ಸಿ.ಕೆ. ನಾನು ಉಚ್ಚಾಟನೆ

ನಮ್ಮ ಶಾಲಾ ದಿನಗಳಲ್ಲಿ ಮಾಡುತ್ತಿದ್ದ ರಾಮ ಭಜನೆ ಮತ್ತೆ ನೆನಪಿಸಿದ್ದಾರೆ. ಸರ್ಕಾರಕ್ಕೆ ಕಣ್ಣು ತೆರೆಸುವ ರೀತಿಯಲ್ಲಿ ಅವರು ಶಾಲೆ ನಡೆಸುತ್ತಿದ್ದಾರೆ. ನಾನು ಈ ಹಿಂದೆ ಅವರ ಬಗ್ಗೆ ಮಾಡಿದ್ದ ಟೀಕೆ ಬೇರೆ, ಈಗಿನ ಹೊಗಳಿಕೆ ಬೇರೆ. ಇಲ್ಲಿಗೆ ಬಂದ ಮೇಲೆ ನನಗೆ ನಿಜ ವಿಚಾರ ಗೊತ್ತಾಗಿದೆ. ಅಂದು ದಾರಿ ತಪ್ಪಿದ್ದೆ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪುತ್ತೇನೆ. ಕೆಲವರು ನನ್ನ ದಾರಿ ತಪ್ಪಿಸಿದ್ದ ಕಾರಣ ಕೆಲ ಹೇಳಿಕೆ ನೀಡಿದ್ದೆ ಎಂದು ತಿಳಿಸಿದರು.

Continue Reading

ಕರ್ನಾಟಕ

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Car Accident: ಚಿಕ್ಕಬಳ್ಳಾಪುರ ಬಳಿಯ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದಾಗ ಕಾರು ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ.

VISTARANEWS.COM


on

Car accident
Koo

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಗುಂಡಿಗೆ ಬಿದ್ದು ನಾಲ್ವರು ದುರ್ಮರಣ ಹೊಂದಿದ ಘಟನೆ (Car Accident) ನಗರದ ಬೈಪಾಸ್ ಬಳಿಯ ಅಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಂಡರ್ ಪಾಸ್‌ನಲ್ಲಿ ವೇಗವಾಗಿ ಬಂದು ಗುಂಡಿಯೊಳಗೆ ಬಿದ್ದಿದ್ದರಿಂದ ಕಾರಿನೊಳಗಿದ್ದ ನಾಲ್ವರು ಜಲಸಮಾಧಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಕಾರನ್ನು ಗುಂಡಿಯಿಂದ ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ. ಮೃತರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾರು ಹರಿದು ಅಯ್ಯಪ್ಪ ಮಾಲಾಧಾರಿ ಸಾವು, ಇಬ್ಬರಿಗೆ ಗಂಭೀರ ಗಾಯ

ಚಿಕ್ಕಬಳಾಪುರ: ಕಾರು ಹರಿದ ಪರಿಣಾಮ ಅಯ್ಯಪ್ಪಸ್ವಾಮಿ ಮಾಲಾಧಾರಿಯೊಬ್ಬರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ.

ಹಿಂದೂಪುರ ಮೂಲದ ಪ್ರಹ್ಲಾದ (36) ಮೃತರು. ಗಾಯಗೊಂಡ ಮಣಿಕಂಠ ಹಾಗು ವೆಂಕಟೇಶ್ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಹಿಂದೂಪುರದಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತಿದ್ದ ವೇಳೆ ಕಾರು ಹರಿದಿದ್ದರಿಂದ ದುರಂತ ಸಂಭವಿಸಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Bus Accident: ಬಸ್‌ ಪಲ್ಟಿಯಾಗಿ ನಾಲ್ವರ ಸಾವು; ಮದುವೆಗೆ ಹೊರಟಿದ್ದವರು ಮಸಣ ಸೇರಿದರು

ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ಸವಾರರ ಸಾವು

Bike accident

ಆನೇಕಲ್: ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಶನಿವಾರ ನಡೆದಿದೆ. ರಸ್ತೆ ಹಂಪ್ ಗೊತ್ತಾಗದೇ ಸಾಗಿದ್ದರಿಂದ ಬೈಕ್ ಸ್ಕಿಡ್ ಆಗಿ ಅಪಘಾತ (Bike Accident) ಸಂಭವಿಸಿದೆ.

ಒಡಿಶಾ ಮೂಲದ ಕಾರ್ಮಿಕರಾದ ಫೋಕೀರ್ ಚರಣ್ ಪ್ರಧಾನ್ (29), ಬೀರ್ ಸಿಂಗ್ ನಾಯಕ್(24) ಮೃತರು. ಕೆಲಸ ಮುಗಿಸಿಕೊಂಡು ಜಿಗಣಿಯಿಂದ ಇಂಡ್ಲವಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾದಪಟ್ಟಣ ಬಳಿ ರಸ್ತೆ ಹಂಪ್ ಗೊತ್ತಾಗದೆ ಸವಾರ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಂಭಾಗದಲ್ಲಿ ನಿಂತಿದ್ದ ಬಸ್‌ಗೆ ಬೈಕ್‌ ಡಿಕ್ಕಿಯಾಗಿದೆ. ಇದರಿಂದ ಸವಾರರು ಹಾರಿ ಬಿದ್ದಾಗ ಬಸ್‌ಗೆ ತಲೆ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Someshwara Beach: ದ್ವಿತೀಯ ಪಿಯುಸಿ ಇಬ್ಬರು ವಿದ್ಯಾರ್ಥಿಗಳು ಸೋಮೇಶ್ವರದಲ್ಲಿ ಸಮುದ್ರಪಾಲು

L&t ಕಂಪನಿಯಲ್ಲಿ ಹೆಲ್ಪರ್‌ ಆಗಿ ಫೋಕೀರ್ ಚರಣ್ ಪ್ರಧಾನ್, ಶಕ್ತಿ ಪ್ರೊಸೆಸಿಂಗ್ ಕಂಪನಿಯಲ್ಲಿ ಸಹಾಯಕನಾಗಿ ಬೀರ್ ಸಿಂಗ್ ನಾಯಕ್ ಕೆಲಸಮಾಡುತ್ತಿದ್ದ. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Farmers Protest: ಕುಲವಳ್ಳಿ ರೈತರ ಒಕ್ಕಲೆಬ್ಬಿಸುವಿಕೆ ವಿರೋಧಿಸಿ 9 ಗ್ರಾಮಗಳ ರೈತರು ಕಿತ್ತೂರಿನಲ್ಲಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು.

VISTARANEWS.COM


on

Farmers Protest
Koo

ಬೆಳಗಾವಿ: ಸ್ವಾಮೀಜಿಗಳ ನೇತೃತ್ವದಲ್ಲಿ ಸಂಧಾನ ಯಶಸ್ವಿಯಾಗಿದ್ದು, ಕಿತ್ತೂರಿನಲ್ಲಿ ಪ್ರತಿಭಟನೆ ಹಿಂಪಡೆಯಲು 9 ಗ್ರಾಮಗಳ ರೈತರು ತಾತ್ಕಾಲಿಕ ಒಪ್ಪಿಗೆ ನೀಡಿದ್ದಾರೆ. ಇದೇ ವೇಳೆ ಬಂಧಿಸಿರುವ 12 ರೈತರಿಗೆ ಜಾಮೀನು ನೀಡಿ ಸೋಮವಾರ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದು, ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ (Farmers Protest) ನಡೆಸುವಾಗಿ ಎಚ್ಚರಿಕೆ ನೀಡಿದ್ದಾರೆ.

ಕುಲವಳ್ಳಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ವಿರೋಧಿಸಿ 9 ಗ್ರಾಮಗಳ ರೈತರು ಕಿತ್ತೂರಿನಲ್ಲಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರು. ಸಚಿವರನ್ನು ಭೇಟಿ ಮಾಡಿಸುವುದಾಗಿ ಕಿತ್ತೂರು ಕಲ್ಮಠ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಅವರು ಭರವಸೆ ನೀಡಿದ್ದರಿಂದ ರೈತರು ಹೋರಾಟ ಕೈಬಿಟ್ಟಿದ್ದಾರೆ.

ಎರಡು‌ ಕಡೆಯಿಂದ ದಾಖಲೆ ಬರಬೇಕು, ಇದು ಸಾವಿರಾರು ಎಕರೆ ಜಮೀನಿನ ಸಮಸ್ಯೆ. ದಾಖಲೆ ತರುವುದು ನನ್ನ ಕೆಲಸವಲ್ಲ, ಬಂಧನವಾದವರಿಗೆ ಸಮಸ್ಯೆ ಆಗಬಾರದು ಎಂದು ತಾತ್ಕಾಲಿಕ ಧರಣಿ ವಾಪಸ್ ಪಡೆಯಲು ಹೇಳಿದ್ದೇನೆ. ಸೋಮವಾರ ಒಂದು ದಿನ ಸಮಯ ಕೇಳಿದ್ದೇನೆ. ನಂತರ ಸಚಿವರನ್ನು ಭೇಟಿ ಮಾಡುತ್ತೇವೆ. ದಾಖಲೆ ಕೊಡುವುದು, ವಕೀಲರನ್ನು ನೇಮಿಸುವುದು ನನ್ನ ಕೆಲಸ ಅಲ್ಲಾ. ಕೆಲವು ದಾಖಲೆ ಅಧಿಕಾರಿಗಳ ಬಳಿ ಇವೆ, ಕೆಲ ದಾಖಲೆ ರೈತರ ಬಳಿ ಇವೆ. ಇವುಗಳನ್ನು ಪರಿಶೀಲಿಸಿ ಇತ್ಯರ್ಥ ಮಾಡಬೇಕಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ | Farmers Protest: ರೈತರ ಒಕ್ಕಲೆಬ್ಬಿಸುವಿಕೆಗೆ ಆಕ್ರೋಶ; ಕಿತ್ತೂರಲ್ಲಿ ಹೆದ್ದಾರಿ ತಡೆದು 9 ಗ್ರಾಮಸ್ಥರ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮಸ್ಥರು ಸೇರಿ 9 ಹಳ್ಳಿಗಳಿಂದ ಜಾನುವಾರು, ಟ್ರ್ಯಾಕ್ಟರ್ ಸಮೇತ ಸಾವಿರಾರು ಜನರು, ಕಿತ್ತೂರು ಚೆನ್ನಮ್ಮ‌ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. 9 ಹಳ್ಳಿಗಳ ರೈತರ ಸಾಗುವಳಿ ಜಮೀನನ್ನು ಕಂದಾಯ ಅಧಿಕಾರಿಗಳು ಇನಾಮದಾರ್ ಹೆಸರಿಗೆ ಖಾತೆ ‌ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ 70 ವರ್ಷದಿಂದ ಉಳುಮೆ ಮಾಡಿರುವ ರೈತರು, ತಮ್ಮ ಜಮೀನು ಬಿಟ್ಟು ಕೊಡುವಂತೆ ಒತ್ತಾಯಿಸಿದ್ದಾರೆ.

ಚೆನ್ನಮ್ಮ ವೃತ್ತದ ಬಳಿ ಶುಕ್ರವಾರ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡಿದರು. ಈ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಳಗಾವಿಯ ಅಡಿಷನಲ್ ಎಸ್ಪಿ ಎಂ. ವೇಣುಗೋಪಾಲ್ ಆಗಮಿಸಿ ಬಿಗಿ ಬಂದೋಬಸ್ತ್‌ಗೆ ಕ್ರಮ ಕೈಗೊಂಡಿದ್ದರು. ಆದರೆ, ಶನಿವಾರ ಸಂಜೆ ಸ್ವಾಮೀಜಿಗಳು ಸಂಧಾನ ನಡೆಸಿದ್ದರಿಂದ ರೈತರು ಪ್ರತಿಭಟನೆ ವಾಪಸ್‌ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

BBMP Works: ಬಿಬಿಎಂಪಿ ಕಾಮಗಾರಿಗಳ ಎಸ್ಐಟಿ ತನಿಖೆ; ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

BBMP Works: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕಾಮಗಾರಿಗಳಲ್ಲಿನ ಅಕ್ರಮ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು.

VISTARANEWS.COM


on

High Court
Koo

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳ ಎಸ್ಐಟಿ ತನಿಖೆಗೆ ನೀಡಿದ ಕಾಂಗ್ರೆಸ್ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಿಜೆಪಿ‌ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ (BBMP Works) ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರಿಂದ ಬಾಕಿ ಬಿಲ್‌ ಹಣ ಬಿಡುಗಡೆಗೂ ಮುನ್ನ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ತಡೆಯಾಜ್ಞೆ ನೀಡಲಾಗಿದೆ.

ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠದಿಂದ ಎಸ್ಐಟಿ ತನಿಖೆಗೆ ತಡೆ ನೀಡಿ ಆದೇಶ ನೀಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2019 ರಿಂದ 2023 ಏಪ್ರಿಲ್‌ವರೆಗೆ ನಡೆದಿದ್ದ ಕಾಮಗಾರಿಗಳಲ್ಲಿ ಅಕ್ರಮ ಆರೋಪ ಕೇಳಿಬಂದಿತ್ತು. 15ನೇ ಹಣಕಾಸು ಆಯೋಗದ ಅನುದಾನ, ನಗರೋತ್ಥಾನ ಅನುದಾನ ಮತ್ತು ಬಿಬಿಎಂಪಿ ಅನುದಾನಗಳ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಎಸ್ಐಟಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ನಿರ್ದಿಷ್ಟ ಗುತ್ತಿಗೆದಾರರನ್ನು ಬಿಟ್ಟು ನಕಲಿ ಗುತ್ತಿಗೆದಾರರಿಗೆ ಹಣ ಪಾವತಿ ಆರೋಪ, ನಕಲಿ ಬಿಲ್ ಸೃಷ್ಟಿ, ಕಾಮಗಾರಿ ನಡೆಸದೆಯೇ ಬಿಲ್‌ ಪಾವತಿ, ಗುಣಮಟ್ಟ ಕಾಪಾಡದಿರುವುದು ಸೇರಿ ಹಲವು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಕ್ರಮಗಳ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು.

ಇದನ್ನೂ ಓದಿ | Education News: ಸರ್ಕಾರಿ ಶಾಲೆಗಳ ಬಲವರ್ಧನೆಗೆ 10 ಸೂತ್ರ; ಶಿಕ್ಷಣ ಸಚಿವರಿಗೆ ತಜ್ಞರಿಂದ ಪತ್ರ

MRPಗಿಂತ ಹೆಚ್ಚು ಹಣ ಪಡೆದ ಫ್ಲಿಪ್‌ಕಾರ್ಟ್‌; ಬೆಂಗಳೂರು ಮಹಿಳೆಗೆ ಸಿಕ್ಕಿತು 20,000 ರೂ. ಪರಿಹಾರ!

flipkart shoping

ಬೆಂಗಳೂರು:‌ ಎಂಆರ್‌ಪಿ ರೇಟ್‌ಗಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆದಿದ್ದ ಫ್ಲಿಪ್‌ಕಾರ್ಟ್‌ಗೆ ಗ್ರಾಹಕರ ನ್ಯಾಯಾಲಯವು 20,000 ರೂ ದಂಡವನ್ನು ವಸೂಲಿ ಮಾಡಿದೆ.

ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ನಿವಾಸಿ ಸೌಮ್ಯಾ.ಪಿ 2019ರ ಅಕ್ಟೋಬರ್‌ನಲ್ಲಿ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್‌ ಸೇಲ್‌ನಲ್ಲಿ ಶಾಂಪುವೊಂದನ್ನು ಆರ್ಡರ್‌ ಮಾಡಿ, ಫೋನ್‌ ಪೇ ಮೂಲಕ 191ರೂ. ಹಣವನ್ನು ಪಾವತಿಸಿದ್ದರು. ಮನೆಗೆ ಬಂದ ಪಾರ್ಸೆಲ್‌ ತೆರೆದು ನೋಡಿದಾಗ ಶಾಕ್‌ ಕಾದಿತ್ತು. ಯಾಕೆಂದರೆ ಶಾಂಪು ಬಾಟೆಲ್‌ ಮೇಲೆ ಎಂಆರ್‌ಪಿ ದರ 95 ಇತ್ತು. ಫ್ಲಿಪ್‌ಕಾರ್ಟ್ ಮೂಲಕ ಗುಜರಾತ್‌ನ ಸೂರತ್‌ನ ಎಚ್ಚಿಕೆ ಎಂಟರ್ಪ್ರೈಸಸ್‌ ಸಂಸ್ಥೆ ಮಾರಿತ್ತು.

ಕೂಡಲೇ ಸೌಮ್ಯ ಫ್ಲಿಪ್‌ಕಾರ್ಟ್‌ ಕಸ್ಟಮರ್‌ ಕೇರ್‌ಗೆ ದೂರು ನೀಡಿದರು.ಆಗ ಆರ್ಡರ್‌ ಮರಳಿಸಿ ರೀಫಂಡ್‌ ಮಾಡುವುದಾಗಿ ಹೇಳಿತ್ತು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮವಹಿಸಲಾಗುತ್ತೆ ಎಂಬ ಭರವಸೆ ನೀಡಿತ್ತು. ಆದರೆ ಮಾರಾಟ ಮಾಡಿದ ಸಂಸ್ಥೆಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದನ್ನು ಸೌಮ್ಯ ಗಮನಿಸಿದ್ದರು.

ಇದನ್ನೂ ಓದಿ | Money Guide: ಪಾರ್ಟ್‌ ಟೈಮ್‌ ಜಾಬ್‌ ಹುಡುಕುತ್ತಿದ್ದೀರಾ? ಇಲ್ಲಿದೆ ವಿಫುಲ ಅವಕಾಶ

ಬಳಿಕ ಸೌಮ್ಯ ಶಾಂತಿನಗರದ ನಾಲ್ಕನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ಫ್ಲಿಟ್‌ಕಾರ್ಟ್‌ ಹಾಗೂ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಿದ್ದ ಗುಜರಾತ್‌ನ ಸೂರತ್‌ನ ಎಚ್ಚಿಕೆ ಎಂಟರ್ಪ್ರೈಸಸ್‌ ಸಂಸ್ಥೆ ವಿರುದ್ಧ ದೂರು ನೀಡಿದರು. ದೂರು ಪರಿಶೀಲಿಸಿದ ಕೋರ್ಟ್‌ ಈ ಸಂಬಂಧ ಗ್ರಾಹಕರ ಪರವಾಗಿ ತೀರ್ಪು ನೀಡಿದೆ. ಮಾತ್ರವಲ್ಲ ಹೆಚ್ಚುವರಿ ಶುಲ್ಕ ಪಡೆದ ಕಾರಣಕ್ಕೆ 20,000 ದಂಡವನ್ನು ವಿಧಿಸಿದೆ.

Continue Reading
Advertisement
HD Kumaraswamy
ಕರ್ನಾಟಕ5 hours ago

HD Kumaraswamy: ಕಲ್ಲಡ್ಕ ಪ್ರಭಾಕರ ಭಟ್ ಗುಣಗಾನ ಮಾಡಿದ ಎಚ್‌ಡಿಕೆ; ಶ್ರೀರಾಮ ಶಾಲೆ ಕ್ರೀಡೋತ್ಸವದಲ್ಲಿ ಭಾಗಿ

Car accident
ಕರ್ನಾಟಕ6 hours ago

Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ

Houses without infrastructure are not completed PMAY houses
ದೇಶ6 hours ago

ಮೂಲಸೌಕರ್ಯ ಒದಗಿಸದ ಮನೆಗಳು ಪೂರ್ಣಗೊಂಡ ಪಿಎಂಎವೈ ಮನೆಗಳಲ್ಲ!

UP Yoddhas vs Telugu Titans
ಕ್ರೀಡೆ6 hours ago

Pro Kabaddi: ಯೋಧಾಸ್​ ಆರ್ಭಟಕ್ಕೆ ಮುಳುಗಿದ ತೆಲುಗು ಟೈಟಾನ್ಸ್‌

Central government bars onion export to curb inflation
ದೇಶ7 hours ago

ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Nat Sciver-Brunt celebrates dismissing Harmanpreet Kaur
ಕ್ರಿಕೆಟ್7 hours ago

INDW vs ENGW: ಹೀನಾಯವಾಗಿ ಸೋತು ಸರಣಿ ಕಳೆದುಕೊಂಡ ಭಾರತ ಮಹಿಳಾ ತಂಡ

Farmers Protest
ಕರ್ನಾಟಕ7 hours ago

Farmers Protest: ಸ್ವಾಮೀಜಿಗಳ ಸಂಧಾನ ಯಶಸ್ವಿ; ಕಿತ್ತೂರಲ್ಲಿ ಪ್ರತಿಭಟನೆ ಹಿಂಪಡೆದ 9 ಹಳ್ಳಿ ರೈತರು

Muslim woman beaten up for voting bjp
ದೇಶ7 hours ago

ಬಿಜೆಪಿಗೆ ಮತ ಹಾಕಿದ್ದಕ್ಕೆ ಮುಸ್ಲಿಂ ಮಹಿಳೆಗೆ ಮನೆಯವರಿಂದಲೇ ಹಲ್ಲೆ!

bengaluru bulls vs haryana steelers
ಕ್ರೀಡೆ7 hours ago

Pro Kabaddi: ಸತತ 4ನೇ ಸೋಲು ಕಂಡ ಬೆಂಗಳೂರು ಬುಲ್ಸ್​

High Court
ಕರ್ನಾಟಕ8 hours ago

BBMP Works: ಬಿಬಿಎಂಪಿ ಕಾಮಗಾರಿಗಳ ಎಸ್ಐಟಿ ತನಿಖೆ; ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

read your daily horoscope predictions for december 9 2023
ಪ್ರಮುಖ ಸುದ್ದಿ1 day ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema1 day ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema1 day ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema1 day ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ2 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ2 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 days ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ3 days ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

ಟ್ರೆಂಡಿಂಗ್‌