Site icon Vistara News

Viral News: ಕುಟುಂಬದೊಂದಿಗೆ ಯುರೋಪ್‌ ಪ್ರವಾಸ ಮಾಡ್ತಿದ್ದೇನೆ; ನಾವೆಲ್ಲ ಸತ್ತರೆ ಆಸ್ತಿ ಸಮಾಜಕ್ಕೆಂದು ವಿಲ್‌!

TG Narasihmamurthy and his family Europe tour

ರಾಮನಗರ: ಆಸ್ತಿ, ಹಣ ಎಂದು ಯೋಚನೆ ಮಾಡುವವರೇ ಹೆಚ್ಚು. ಎಷ್ಟಿದ್ದರೂ ಬೇಕು ಎಂಬಂತೆ ಇರುವ ಈ ಕಾಲದಲ್ಲಿ ವ್ಯಕ್ತಿಯೊಬ್ಬರು ಮಾಡಿಟ್ಟ ವಿಲ್‌ ‌(property will) ವಿಶೇಷತೆಯನ್ನು ಪಡೆದುಕೊಂಡಿದೆ. ಅಲ್ಲದೆ, ಅಚ್ಚರಿಯನ್ನೂ ಮೂಡಿಸಿದೆ. ಯಾರೇ ಆಗಲಿ ಅವರು ಎಲ್ಲಿಗೇ ಹೊರಡಲಿ, ಮರಳಿ ಮನೆ ಸೇರುತ್ತೇವೆ ಎಂಬ ಆಲೋಚನೆಯಲ್ಲಿಯೇ ಹೊರಟಿರುತ್ತಾರೆ. ಆದರೆ, ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಕುಟುಂಬದವರೊಂದಿಗೆ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ವಿದೇಶಕ್ಕೆ ಹೋಗುವ ಮುಂಚೆ ಮಾಡಿರುವ ವಿಲ್‌ ಈಗ ಭಾರಿ ಸುದ್ದಿಯಲ್ಲಿದ್ದು, ಸಖತ್‌ ವೈರಲ್‌ (Viral News) ಆಗಿದೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸದಸ್ಯ, ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಕರಗದಬೀದಿ ನಿವಾಸಿ. ನರಸಿಂಹಮೂರ್ತಿ ಎಂಬುವವರು ತಮ್ಮ ಕುಟುಂದದೊಂದಿಗೆ ಸದ್ಯ ಯುರೋಪ್‌ ಪ್ರವಾಸದಲ್ಲಿದ್ದಾರೆ. ಅವರು ಹೀಗೆ ಹೋಗುವ ಮುಂಚೆ ಇದ್ದಕ್ಕಿದ್ದಂತೆ ಒಂದು ಆಲೋಚನೆ ಎದುರಾಗಿದೆ. ಒಂದು ವೇಳೆ ನಾವೆಲ್ಲರೂ ಅಲ್ಲಿಗೆ ಹೋಗಿದ್ದಾಗ ಯಾವುದಾದರೂ ಅವಘಡಗಳು ಸಂಭವಿಸಿದರೆ? ಅಪಘಾತಗಳಾಗಿ ಎಲ್ಲರೂ ತೀರಿ ಹೋಗಿಬಿಟ್ಟರೆ? ಆಗ ನಾವು ಇಲ್ಲಿ ಮಾಡಿಟ್ಟಿರುವ ಆಸ್ತಿಯ ಕಥೆಯೇನು? ಕಷ್ಟಪಟ್ಟು ದುಡಿದಿದ್ದು ಯಾರದ್ದೋ ಪಾಲಾದರೆ? ಎಂಬ ಅಂಶ ಕಾಡಿದೆ. ಇದಕ್ಕಾಗಿ ಅವರು ವಿಲ್‌ ಮಾಡಿಡುವ ಪ್ಲ್ಯಾನ್‌ ಮಾಡಿದರು.

ವಿಲ್‌ ಬರೆದಿರುವ ಜಿಲ್ಲಾ ಪಂಚಾಯಿಸಿ ಸದಸ್ಯ ನರಸಿಂಹ ಮೂರ್ತಿ

ಇದನ್ನೂ ಓದಿ: Weather Report: ಮುಂದಿನ 3 ದಿನ ಬಿರುಗಾಳಿ ಸಹಿತ ಭಾರಿ ಮಳೆ; ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ

ವಿಲ್‌ ಬರೆದಿರುವ ಜಿಲ್ಲಾ ಪಂಚಾಯಿಸಿ ಸದಸ್ಯ ನರಸಿಂಹ ಮೂರ್ತಿ

ಏನಿದೆ ವಿಲ್‌ನಲ್ಲಿ?

ಪ್ರವಾಸದ ವೇಳೆ ಅವಘಡದಲ್ಲಿ ನಾವೆಲ್ಲರೂ ಮೃತಪಟ್ಟರೆ ಸಮಾಜ ಸೇವೆಗಾಗಿ ನನ್ನ ಆಸ್ತಿಯನ್ನು ಬಳಕೆ ಮಾಡಬೇಕು. ಇತ್ತೀಚಿನ ಕೆಲ ಘಟನೆಗಳು, ಅಪಘಾತಗಳಿಂದ ಮನಸ್ಸು ಬದಲಾವಣೆಗೊಂಡಿದೆ. ಯುರೋಪ್ ಪ್ರವಾಸಕ್ಕೆ ಹೋಗುತ್ತಿದ್ದು, ಅಪಘಾತವಾಗಿಯೋ, ಅವಘಡಗಳು ಸಂಭವಿಸಿಯೋ ನಮ್ಮ ಕುಟುಂಬ ಎಲ್ಲರೂ ಮೃತಪಟ್ಟರೆ ಸಮಾಜಸೇವೆಗೆ ನಮ್ಮ ಆಸ್ತಿಯನ್ನು ಬಳಕೆ ಮಾಡಬೇಕು.

ಕೊರೊನಾ ಸಮಯದಲ್ಲಿ ಕಣ್ಣಮುಂದೆ ಕೆಲವು ಘಟನೆಗಳನ್ನು ನೋಡಿದ್ದೇನೆ. ಕಷ್ಟಪಟ್ಟು ಸಂಪಾದನೆ ಮಾಡಿದ ಆಸ್ತಿಯು ಪರರಿಗೆ, ಪಾಪಿಗಳಿಗೆ ಸೇರಬಾರದು. ಹೀಗಾಗಿ ನಾನು ಈ ವಿಲ್‌ ಮಾಡುತ್ತಿದ್ದೇನೆ. ಕೃಷಿ ಭೂಮಿಯನ್ನೆಲ್ಲ ಅರಣ್ಯ ಮಾಡಲು, ಕಮರ್ಷಿಯಲ್ ಲಾಭಗಳೆಲ್ಲ ಸರ್ಕಾರಿ ಶಾಲೆ ಹಾಗೂ ವೃದ್ಧಾಶ್ರಮಕ್ಕೆ ಬಳಸಬೇಕು. ನಮ್ಮ ಬ್ಯಾಂಕ್‌ ಬ್ಯಾಲೆನ್ಸ್‌, ಚಿನ್ನಾಭರಣಗಳು ಹೀಗೆ ಎಲ್ಲವೂ ಸರಿಯಾದ ರೀತಿಯಲ್ಲಿ ಅರ್ಹರಿಗೆ ಬಳಕೆಯಾಗಬೇಕು.

ಶೇಕಡಾವಾರು ಆಸ್ತಿ ಹಂಚಿಕೆ

ಅಲ್ಲದೆ, ನಮ್ಮ ಆಸ್ತಿಯನ್ನು ಶೇಕಡಾವಾರು ರೀತಿಯಲ್ಲಿ ಬಳಕೆ ಮಾಡಬೇಕು. ನನಗೆ ಸರ್ಕಾರಿ ಶಾಲೆಗಳೆಂದರೆ ಇಷ್ಟ. ಹೀಗಾಗಿ ನಮ್ಮಿಬ್ಬರ ಆಸ್ತಿಯಲ್ಲಿ ಶೇ. 40ರಷ್ಟನ್ನು ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ, ಅವರ ಸಮವಸ್ತ್ರ, ಶೂ, ಕಂಪ್ಯೂಟರ್‌ (ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ) ಗಳಿಗೆ ಹಾಗೂ ಶಾಲೆ ಅಭಿವೃದ್ಧಿಗೆ ಬಳಕೆ ಮಾಡಬೇಕು. ಇನ್ನು ಶೇ. 20ರಷ್ಟು ಹಣವನ್ನು ನಮ್ಮ ಹೆಸರಿನಲ್ಲಿರುವ ಜಮೀನಿನಲ್ಲಿ ಅರಣ್ಯ ಬಳಸಲು ಹಾಗೂ ಶೇ. 20ರಷ್ಟು ಹಣವನ್ನು ದೇಶಕ್ಕಾಗಿ ಪ್ರಾಣ ನೀಡಿದ ಸೈನಿಕರ ಕುಟುಂಬಕ್ಕೆ ಬಳಕೆ ಮಾಡಬೇಕು. ಶೇ. 10ರಷ್ಟು ಹಣವನ್ನು ನನ್ನ ಪ್ರೀತಿಯ ಗ್ರಾಮ ದೇವತೆ ಮಾರಮ್ಮ ತಾಯಿ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗೆ ಬಳಸಬೇಕು. ಹಾಗೆಯೇ ಕೊನೆಯ ಶೇ. 10ರಷ್ಟು ಹಣವನ್ನು ವೃದ್ಧಾಶ್ರಮಗಳಿಗೆ ಬಳಕೆ ಮಾಡಬೇಕು ಎಂದು ವಿಲ್‌ನಲ್ಲಿ ಬರೆದಿಡಲಾಗಿದೆ.

ಇದನ್ನೂ ಓದಿ: NIA Raid: ವಿಟ್ಲದ ಫರ್ನಿಚರ್ ಅಂಗಡಿ ಮಾಲೀಕನ ಮನೆ ತೀವ್ರ ತಪಾಸಣೆ; ಕೆರೆಮೂಲೆಯಲ್ಲೂ ಶೋಧಿಸಿದ ಎನ್‌ಐಎ

ಕಳೆದ ಶುಕ್ರವಾರ ಅಂದರೆ 26-05-2023 ರಿಂದ ಯುರೋಪ್‌ ಪ್ರವಾಸದಲ್ಲಿದ್ದಾರೆ. ತಮ್ಮ ಪತ್ನಿ ಲೀಲಾವತಿ ಆರ್‌, ಮಕ್ಕಳಾದ ಟಿ.ಎನ್.‌ ಕಿಶನ್‌, ಪವನ್‌ ಕುಮಾರ್‌ ಜತೆಗೆ ಟಿ.ಜಿ. ನರಸಿಂಹಮೂರ್ತಿ ಅವರು ಪ್ರವಾಸ ಹೋಗಿದ್ದಾರೆ. ಈ ವಿಲ್‌ ಬಗ್ಗೆ ಯುರೋಪ್‌ನಿಂದಲೇ ವಿಡಿಯೊ ಮಾಡಿ ನರಸಿಂಹಮೂರ್ತಿ ತಿಳಿಸಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

Exit mobile version