Site icon Vistara News

School Children: POCSO ಆರೋಪಿ ಶಿಕ್ಷಕನ ಕಿತಾಪತಿ; 18 ವಿದ್ಯಾರ್ಥಿಗಳು ಶಾಲೆಗೆ ಗೈರು

Teacher Gous peer

ತುಮಕೂರು : ಪೋಕ್ಸೋ ಪ್ರಕರಣದಲ್ಲಿ (POCSO Case) ಸಿಕ್ಕಿಬಿದ್ದ ಶಿಕ್ಷಕನೊಬ್ಬನ ಮಾತು ಕೇಳಿ ಮಕ್ಕಳನ್ನು (School Children) ಶಾಲೆಗೆ ಕಳುಹಿಸದೆ ಪೋಷಕರು ಎಡವಟ್ಟು ಮಾಡಿಕೊಂಡಿರುವ ಘಟನೆ ತುಮಕೂರು ತಾಲೂಕು (Tumkur News) ಕೋರಾ ಹೋಬಳಿಯ ಗೇರಹಳ್ಳಿಯಲ್ಲಿ ನಡೆದಿದೆ. ಇಲ್ಲಿ ಶಿಕ್ಷಕರಿಬ್ಬರ ನಡುವೆ ಮುಸುಕಿನ ಗುದ್ದಾಟ (Fight between teachers) ಮತ್ತು ಪೋಷಕರ ಮೊಂಡುತನದ ಫಲವಾಗಿ 18 ವಿದ್ಯಾರ್ಥಿಗಳ ಜೀವನದಲ್ಲಿ ಕತ್ತಲು (18 students out of School) ಆವರಿಸಿದೆ.

ಪೋಕ್ಸೋ ಆರೋಪಿಯ ಮಾತು ಕೇಳಿದ ಪೋಷಕರು ಮಕ್ಕಳ ಭವಿಷ್ಯದ ಜೊತೆ ಪೋಷಕರ ಚೆಲ್ಲಾಟವಾಡುತ್ತಿದ್ದು, 18 ವಿದ್ಯಾರ್ಥಿಗಳು ಸತತ ಒಂದೂವರೆ ತಿಂಗಳಿನಿಂದ ಶಾಲೆಗೆ ಗೈರುಹಾಜರಾಗುತ್ತಿದ್ದಾರೆ. ಸ್ವತಃ ಬಿಇಒ ಬಂದು ಮನವೊಲಿಸಿದರೂ ಈ ಮಕ್ಕಳನ್ನು ಶಾಲೆಗೆ ಹೋಗಲು ಹೆತ್ತವರು ಬಿಡುತ್ತಿಲ್ಲ.

ಇಲ್ಲಿ ಆಗಿರುವುದೇನು? ಏನಿದು ಪೋಕ್ಸೋ ಪ್ರಕರಣ?

ಗೇರಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡೂವರೆ ತಿಂಗಳ ಹಿಂದೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ‌ ಕಿರುಕುಳದ ಆರೋಪ ಕೇಳಿಬಂದಿತ್ತು. ಕನ್ನಡ ಶಿಕ್ಷಕ ಗೌಸ್ ಪೀರ್ ಎಂಬಾತನೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕವಾಗಿ ಕಿರುಕುಳ ನೀಡಿದವರು.

ಗೌಸ್ ಪೀರ್ ಕಾಟದಿಂದ ಹಲವು ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಶಾಲೆಗೆ ವರ್ಗಾವಣೆಯಾಗಿದ್ದರು. ಬಳಿಕ ಪೋಷಕರಿಂದ ಡಿಡಿಪಿಐಗೆ ದೂರು ಕೂಡ ದಾಖಲಾಗಿತ್ತು. ಬಳಿಕ ಇಲಾಖೆ ವತಿಯಿಂದ ತನಿಖೆ ನಡೆಸಿದಾಗ ಶಿಕ್ಷಕನ ಕೃತ್ಯ ಬಯಲಾಗಿತ್ತು.

ಈತ ಶಾಲೆಗೆ ರಜೆಯಿದ್ದ ದಿನ ತನ್ನ ಖಾಸಗಿ ಕಾರಿನಲ್ಲಿ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದ ವಿಷಯವೂ ಬಯಲಾಗಿತ್ತು. ಬಳಿಕ ವಿದ್ಯಾರ್ಥಿನಿಯರ ಹೇಳಿಕೆ ಪಡೆದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಶಿಕ್ಷಕ ಗೌಸ್ ಪೀರ್ ವಿರುದ್ಧ ಪೋಕ್ಸೋ ಪ್ರಕರಣದಡಿ ಕೇಸ್ ದಾಖಲಾಗಿತ್ತು.

ಆದರೆ, ಗೌಸ್ ಪೀರ್ ತನ್ನ ಪ್ರಭಾವವನ್ನು ಬಳಸಿ ಪೋಷಕರೇ ಉಲ್ಟಾ ಹೊಡೆಯುವಂತೆ ಮಾಡಿದ್ದ. ಕೊನೆಗೆ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ. ಜೈಲಿನಿಂದ ಹೊರಗೆ ಬಂದ ಬಳಿಕ ತನ್ನ ಆಟ ಶುರು ಮಾಡಿದ ಗೌಸ್ ಪೀರ್ ಸ್ಥಳೀಯ ಮುಖಂಡನ ಜೊತೆ ಸೇರಿ ಪೋಷಕರ ಮೇಲೆ ಪ್ರಭಾವ ಬೀರಲು ಶುರು ಮಾಡಿದ.

ಇದಕ್ಕೆಲ್ಲ ನಾನು ಕಾರಣ ಅಲ್ಲ, ಮುಖ್ಯಶಿಕ್ಷಕಿ ನೂರ್ ಜಹಾನ್‌ ಅವರೇ ಪ್ರಧಾನ ಆರೋಪಿ ಎಂದು ಕತೆ ಹೆಣೆದ. ಆತನ ಮಾತಿನಿಂದ ಪ್ರಭಾವಿತರಾಗಿರುವ ಪೋಷಕರು ನೂರ್‌ ಜಹಾನ್‌ ಇರುವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪೋಷಕರ ಹಠದಿಂದ ಸತತ ಒಂದೂವರೆ ತಿಂಗಳಿನಿಂದ 18 ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ. ಪೋಷಕರ ಹಠ ಎಷ್ಟಿದೆ ಎಂದರೆ, ವಿದ್ಯಾರ್ಥಿಗಳು ಪರೀಕ್ಷೆಗೂ ಹಾಜರಾಗಿಲ್ಲ.

ವಿದ್ಯಾರ್ಥಿಗಳು ಏಳು ದಿನಕ್ಕಿಂತ ಹೆಚ್ಚು ಶಾಲೆಗೆ ಶಾಲೆಗೆ ಬರಲಿಲ್ಲ ಎಂದಾದರೆ ಶಿಕ್ಷಕರೇ ಮಕ್ಕಳ ಮನೆಗೆ ಭೇಟಿ ನೀಡಬೇಕು, ಮಕ್ಕಳನ್ನು ಕೌನ್ಸೆಲಿಂಗ್‌ ನಡೆಸಿ ಶಾಲೆಗೆ ಕರೆತರಬೇಕೆಂಬ ಇಲಾಖೆ ನಿಯಮವಿದೆ. ಆದರೆ, ಆದ್ರೆ ನಿಯಮವನ್ನು ಪಾಲಿಸಲಾಗಿಲ್ಲ.

ಇದನ್ನೂ ಓದಿ: Pocso case: ʼʼಎರಡು ನಿಮಿಷದ ಸುಖಕ್ಕಾಗಿ…ʼʼ: ಹುಡುಗಿಯರಿಗೆ ಕೋಲ್ಕೊತಾ ಹೈಕೋರ್ಟ್‌ ಕಿವಿಮಾತು!

ಈ ನಡುವೆ, ಬಿಇಓ ಶಾಲೆಯ ಬಳಿ ಹೋಗಿ ಪೋಷಕರ ಬಳಿ ಮಾತುಕತೆ ನಡೆಸಿದರೂ ಯಾವುದೇ ಉಪಯೋಗವಾಗಿಲ್ಲ. ಶಿಕ್ಷಕರ ನಡುವಿನ ಹಗ್ಗ ಜಗ್ಗಾಟ, ಪೋಷಕರ ಹಠದಿಂದಾಗಿ ಮಕ್ಕಳಿಗೆ ಸಮಸ್ಯೆಯಾಗಿದೆ.

Exit mobile version