Pocso case: ʼʼಎರಡು ನಿಮಿಷದ ಸುಖಕ್ಕಾಗಿ…ʼʼ: ಹುಡುಗಿಯರಿಗೆ ಕೋಲ್ಕೊತಾ ಹೈಕೋರ್ಟ್‌ ಕಿವಿಮಾತು! - Vistara News

ಕೋರ್ಟ್

Pocso case: ʼʼಎರಡು ನಿಮಿಷದ ಸುಖಕ್ಕಾಗಿ…ʼʼ: ಹುಡುಗಿಯರಿಗೆ ಕೋಲ್ಕೊತಾ ಹೈಕೋರ್ಟ್‌ ಕಿವಿಮಾತು!

ಯುವಕರು ಯುವತಿಯರ ಘನತೆಯನ್ನು ಗೌರವಿಸಬೇಕು; ಅವಳ ಸ್ವಾಭಿಮಾನ, ಘನತೆ, ಖಾಸಗಿತನ ಮತ್ತು ಅವಳ ದೇಹದ ಸ್ವಾಯತ್ತತೆಯ ಹಕ್ಕನ್ನು ಗೌರವಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.

VISTARANEWS.COM


on

couple
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತಾ: ʼಕೇವಲ ಎರಡು ನಿಮಿಷದ ಲೈಂಗಿಕ ಸುಖಕ್ಕಾಗಿ ಕಾತರಿಸಿ ಸಮಾಜದ ಕಣ್ಣಿನಲ್ಲಿ ಸಣ್ಣವರೆನಿಸಿಕೊಳ್ಳಬೇಡಿʼ ಎಂದು ಕೋಲ್ಕೊತಾ ಹೈಕೋರ್ಟ್‌ (Calcutta High Court) ಹದಿಹರೆಯದ ಹುಡುಗಿಯರಿಗೆ ಕಿವಿಮಾತು ಹೇಳಿದೆ.

ಅಪ್ರಾಪ್ತ ವಯಸ್ಕಳೊಬ್ಬಳ ಅತ್ಯಾಚಾರ ಪ್ರಕರಣವೊಂದರಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಹೈಕೋರ್ಟ್‌ ಈ ಬಗ್ಗೆ ಅಭಿಪ್ರಾಯ ನೀಡಿದೆ. ಹದಿಹರೆಯದ ಹುಡುಗ ಮತ್ತು ಹುಡುಗಿಯಿಬ್ಬರ ಲೈಂಗಿಕ ಸಂಬಂಧದ ಪ್ರಕರಣದಲ್ಲಿ, ಇನ್ನೂ 18 ವರ್ಷ ದಾಟದ ಹುಡುಗಿಯ ಜತೆ ದೈಹಿಕ ಸಂಪರ್ಕ ಸಾಧಿಸಿದ ಯುವಕನಿಗೆ 20 ವರ್ಷದ ಜೈಲು ಶಿಕ್ಷೆಯನ್ನು ಸೆಷನ್ಸ್‌ ಕೋರ್ಟ್‌ ವಿಧಿಸಿತ್ತು.

ತಾನು ಸ್ವಇಚ್ಛೆಯಿಂದ ಯುವಕನ ಜತೆಗೆ ದೈಹಿಕ ಸಂಪರ್ಕ ಹೊಂದಿದ್ದುದಾಗಿ ಯುವತಿ ಹೇಳಿದ್ದಳು. ಆದರೆ, 18 ವರ್ಷ ದಾಟದ ಹುಡುಗಿ ಸಮ್ಮತಿಪೂರ್ವಕವಾಗಿಯೇ ದೈಹಿಕ ಮಿಲನಕ್ಕೆ ತೊಡಗಿದರೂ ಅದು ಕಾನೂನಿನ ದೃಷ್ಟಿಯಲ್ಲಿ ಅತ್ಯಾಚಾರ ಎನಿಸಿಕೊಳ್ಳುತ್ತದೆ. ಪುರುಷ ಪೋಕ್ಸೋ (Pocso case) ಕಾಯಿದೆಯಡಿಯಲ್ಲಿ ಜೈಲು ಸೇರುತ್ತಾನೆ.

ಯುವಕ ಈ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಸದ್ಯ ಈ ಶಿಕ್ಷೆಯನ್ನು ಹೈಕೋರ್ಟ್‌ ತಡೆಹಿಡಿದಿದೆ. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಚಿತ್ತರಂಜನ್‌ ದಾಸ್‌ ಹಾಗೂ ಪಾರ್ಥಸಾರಥಿ ಸೇನ್‌ ಹದಿಹರೆಯದ ಯುವಜನತೆಗೆ ಕೆಲವು ʼಮಾರ್ಗದರ್ಶನದ ನುಡಿʼಗಳನ್ನು ಆಡಿದರು.

ಹದಿಹರೆಯದವರಲ್ಲಿ ಇಂದು ಸೆಕ್ಸ್‌ ಸಾಮಾನ್ಯವಾಗುತ್ತಿದೆ. ಆದರೆ ಇದು ಆಯಾ ವ್ಯಕ್ತಿಯ ಇಚ್ಛೆಯನ್ನು ಅವಲಂಬಿಸಿದೆ. ಕೇವಲ ಎರಡು ನಿಮಿಷದ ದೈಹಿಕ ಸುಖಕ್ಕಾಗಿ ಸಮಾಜದ ಕಣ್ಣಿನಲ್ಲಿ ಸಣ್ಣವರೆನಿಸಿಕೊಳ್ಳಬೇಡಿ. ನಿಮ್ಮ ಲೈಂಗಿಕ ಕಾತರವನ್ನು ನಿಯಂತ್ರಿಸಿಕೊಳ್ಳಿ ಎಂದು ನ್ಯಾಯಮೂರ್ತಿಗಳು ಹಿತವಚನ ಹೇಳಿದರು.

ತಮ್ಮ ದೇಹದ ಘನತೆ, ಸ್ವಾಭಿಮಾನದ ಮೌಲ್ಯ, ಐಕ್ಯತೆಗಳನ್ನು ಉಳಿಸಿಕೊಳ್ಳುವುದು ಯುವತಿಯರ ಕರ್ತವ್ಯ. ಹಾಗೆಯೇ ಯುವಕರು ಯುವತಿಯರ ಘನತೆಯನ್ನು ಗೌರವಿಸಬೇಕು; ಮಹಿಳೆಯರನ್ನು ಗೌರವಪೂರ್ವಕವಾಗಿ ಕಾಣುವಂತೆ ತಮ್ಮ ಮನಸ್ಸನ್ನು ಪಳಗಿಸಬೇಕು. ಅವಳ ಸ್ವಾಭಿಮಾನ, ಘನತೆ, ಖಾಸಗಿತನ ಮತ್ತು ಅವಳ ದೇಹದ ಸ್ವಾಯತ್ತತೆಯ ಹಕ್ಕನ್ನು ಗೌರವಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Pocso Case : ಮಗಳ ಮೇಲೆಯೇ ಅತ್ಯಾಚಾರ ಮಾಡಿದ್ದ ಪಾಪಿ ತಂದೆಗೆ 20 ವರ್ಷ ಜೈಲು ಶಿಕ್ಷೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sanatana Dharma : ಸನಾತನ ಧರ್ಮದ ಅವಹೇಳನ ಮಾಡಿದ ಉದಯನಿಧಿ​ಗೆ ಕೋರ್ಟ್ ತಪರಾಕಿ

Sanatana Dharma: ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 15ಕ್ಕೆ ಮುಂದೂಡಿದೆ.

VISTARANEWS.COM


on

udayanidhi stalin
Koo

ನವದೆಹಲಿ: “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” (Sanatana Dharma) ಎಂಬ ತಮಿಳುನಾಡು ಸಚಿವ (Tamilnadu Minister) ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ವಿವಾದಾತ್ಮಕ ಹೇಳಿಕೆಗೆ ಸುಪ್ರೀಂ ಕೋರ್ಟ್ (Supreme Court) ಆಕ್ಷೇಪ ವ್ಯಕ್ತಪಡಿಸಿದೆ. ಡಿಎಂಕೆ ನಾಯಕನನ್ನು ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ಸಚಿವರಾಗಿ ಅವರು ತಮ್ಮ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಹಾಗೂ ಹೇಳಿಕೆಗಳ ಪರಿಣಾಮಗಳ ಬಗ್ಗೆಯೂ ಅವರು ತಿಳಿದಿರಬೇಕು ಎಂದು ಅಭಿಪ್ರಾಯಪಟ್ಟಿದೆ.

ನೀವು ಜನಸಾಮಾನ್ಯರೇನೂ ಅಲ್ಲ. ನೀವು ರಾಜ್ಯವೊಂದರಲ್ಲಿ ಮಂತ್ರಿಯಾಗಿದ್ದೀರಿ. ಹೀಗಾಗಿ ಹೇಳಿಕೆಗಳನ್ನು ನೀಡುವಾಗ ಅದರ ಪರಿಣಾಮಗಳನ್ನು ತಿಳಿದುಕೊಳ್ಳಬೇಕು” ಎಂದು ಸ್ಟಾಲಿನ್ ಅವರ ವಕೀಲರಿಗೆ ಸುಪ್ರೀಂ ಕೋರ್ಟ್ ಹೇಳಿದೆ, ಅವರು ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಹಲವಾರು ರಾಜ್ಯಗಳಲ್ಲಿ ಅವರ ವಿರುದ್ಧ ದಾಖಲಾದ ಅನೇಕ ಎಫ್ಐಆರ್​​ಗಳನ್ನು ಒಟ್ಟುಗೂಡಿಸುವಂತೆ ಕೋರಿ ಉದಯನಿಧಿ ಸ್ಟಾಲಿನ್​ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ವಿಚಾರಣೆ ವೇಳೆ ಕೋರ್ಟ್​ ಸ್ಟಾಲಿನ್​ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದೆ.

ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 15ಕ್ಕೆ ಮುಂದೂಡಿದೆ.

ಸ್ವಾಗತಂ; ಸುಪ್ರೀಂ ಕೋರ್ಟ್ ​ಯಾವ ತೀರ್ಪಿಗೆ ಮೋದಿ ಹೀಗೆ ಹೇಳಿದ್ದು?

ನವದೆಹಲಿ: ವಿಧಾನಸಭೆ ಅಥವಾ ಸಂಸತ್​ನಲ್ಲಿ ಭಾಷಣ ಮಾಡಲು ಅಥವಾ ಮತ ಚಲಾಯಿಸಲು ಲಂಚ ಪಡೆದ ಸಂಸದರು (Vote for bribe) ಮತ್ತು ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ನೀಡಿದ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು 1998 ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನೀಡಿದ ತೀರ್ಪನ್ನು ಸರ್ವಾನುಮತದಿಂದ ರದ್ದುಗೊಳಿಸಿತು. ಹಳೆ ತೀರ್ಪಿನಲ್ಲಿ ಸಂಸದರು ಮತ್ತು ಶಾಸಕರಿಗೆ ಶಾಸಕಾಂಗದಲ್ಲಿ ಭಾಷಣ ಮಾಡಲು ಅಥವಾ ಮತ ಚಲಾಯಿಸಲು ಲಂಚ ತೆಗೆದುಕೊಂಡಿದ್ದಕ್ಕಾಗಿ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿತ್ತು.

ಇದನ್ನೂ ಓದಿ: ಇದನ್ನೂ ಓದಿ : ಕೊನೆಗೂ ಇ.ಡಿ ವಿಚಾರಣೆಗೆ ಒಪ್ಪಿದ ದೆಹಲಿ ಸಿಎಂ ಕೇಜ್ರಿವಾಲ್; ಕಂಡೀಷನ್ಸ್‌ ಅಪ್ಲೈ!

“ಸ್ವಾಗತಂ. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಉತ್ತಮ ತೀರ್ಪು ನೀಡಿದೆ. ಇದು ಶುದ್ಧ ರಾಜಕೀಯಕ್ಕೆ ಖಾತರಿ ನೀಡುತ್ತದೆ. ವ್ಯವಸ್ಥೆ ಕುರಿತ ಜನರ ನಂಬಿಕೆಯನ್ನು ದೃಢಪಡಿಸುತ್ತದೆ ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಲಂಚ ಪಡೆಯುವುದನ್ನು ಸಂಸದೀಯ ಅಧಿಕಾರದಿಂದ ರಕ್ಷಿಸಲಾಗುವುದಿಲ್ಲ ಮತ್ತು 1998 ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕೊನೆಗೂ ಇ.ಡಿ ವಿಚಾರಣೆಗೆ ಒಪ್ಪಿದ ದೆಹಲಿ ಸಿಎಂ ಕೇಜ್ರಿವಾಲ್; ಕಂಡೀಷನ್ಸ್‌ ಅಪ್ಲೈ!

ಸಂವಿಧಾನದ 105 ಮತ್ತು 194ನೇ ವಿಧಿಯು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಸಂಸದರು ಮತ್ತು ಶಾಸಕರ ಅಧಿಕಾರಗಳು ಮತ್ತು ಸವಲತ್ತುಗಳಿಗೆ ಸಂಬಂಧಿಸಿದ್ದಾಗಿದೆ.

Continue Reading

ಪ್ರಮುಖ ಸುದ್ದಿ

Vote for bribe : ಸ್ವಾಗತಂ; ಸುಪ್ರೀಂ ಕೋರ್ಟ್ ​ತೀರ್ಪಿಗೆ ಮೋದಿ ಹೀಗೆ ಹೇಳಿದ್ದು ಯಾಕೆ?

Vote for bribe : ಲಂಚ ಪಡೆದ ಸಂಸದರು (Vote for bribe) ಮತ್ತು ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

VISTARANEWS.COM


on

Narendra modi
Koo

ನವದೆಹಲಿ: ವಿಧಾನಸಭೆ ಅಥವಾ ಸಂಸತ್​ನಲ್ಲಿ ಭಾಷಣ ಮಾಡಲು ಅಥವಾ ಮತ ಚಲಾಯಿಸಲು ಲಂಚ ಪಡೆದ ಸಂಸದರು (Vote for bribe) ಮತ್ತು ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ನೀಡಿದ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು 1998 ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನೀಡಿದ ತೀರ್ಪನ್ನು ಸರ್ವಾನುಮತದಿಂದ ರದ್ದುಗೊಳಿಸಿತು. ಹಳೆ ತೀರ್ಪಿನಲ್ಲಿ ಸಂಸದರು ಮತ್ತು ಶಾಸಕರಿಗೆ ಶಾಸಕಾಂಗದಲ್ಲಿ ಭಾಷಣ ಮಾಡಲು ಅಥವಾ ಮತ ಚಲಾಯಿಸಲು ಲಂಚ ತೆಗೆದುಕೊಂಡಿದ್ದಕ್ಕಾಗಿ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿತ್ತು.

“ಸ್ವಾಗತಂ. ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಉತ್ತಮ ತೀರ್ಪು ನೀಡಿದೆ. ಇದು ಶುದ್ಧ ರಾಜಕೀಯಕ್ಕೆ ಖಾತರಿ ನೀಡುತ್ತದೆ. ವ್ಯವಸ್ಥೆ ಕುರಿತ ಜನರ ನಂಬಿಕೆಯನ್ನು ದೃಢಪಡಿಸುತ್ತದೆ ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಲಂಚ ಪಡೆಯುವುದನ್ನು ಸಂಸದೀಯ ಅಧಿಕಾರದಿಂದ ರಕ್ಷಿಸಲಾಗುವುದಿಲ್ಲ ಮತ್ತು 1998 ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಕೊನೆಗೂ ಇ.ಡಿ ವಿಚಾರಣೆಗೆ ಒಪ್ಪಿದ ದೆಹಲಿ ಸಿಎಂ ಕೇಜ್ರಿವಾಲ್; ಕಂಡೀಷನ್ಸ್‌ ಅಪ್ಲೈ!

ಸಂವಿಧಾನದ 105 ಮತ್ತು 194ನೇ ವಿಧಿಯು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಸಂಸದರು ಮತ್ತು ಶಾಸಕರ ಅಧಿಕಾರಗಳು ಮತ್ತು ಸವಲತ್ತುಗಳಿಗೆ ಸಂಬಂಧಿಸಿದ್ದಾಗಿದೆ.

ಕೋರ್ಟ್​ ಕೊಟ್ಟ ತೀರ್ಪೇನು?

ನವ ದೆಹಲಿ: ಪಿ.ವಿ.ನರಸಿಂಹ ರಾವ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ 1998ರಲ್ಲಿ ಸುಪ್ರೀಂ ಕೋರ್ಟ್ (Supreme Court) ನೀಡಿದ್ದ ತೀರ್ಪನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್​​​ನ ಏಳು ನ್ಯಾಯಾಧೀಶರ ಪೀಠವು, ಸಂಸದರು ಮತ್ತು ಶಾಸಕರು ಸಂಸತ್ತು ಅಥವಾ ವಿಧಾನಸಭೆಯಲ್ಲಿ ತಮ್ಮ ಮತಗಳು ಮತ್ತು ಭಾಷಣಕ್ಕಾಗಿ ಲಂಚ ಪಡೆದರೆ (Vote for bribe) ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನೀಡಿದ ತೀರ್ಪನ್ನು ಸರ್ವಾನುಮತದಿಂದ ರದ್ದುಗೊಳಿಸಿತು. ಇದರಲ್ಲಿ ಸಂಸದರು ಮತ್ತು ಶಾಸಕರಿಗೆ ಶಾಸಕಾಂಗದಲ್ಲಿ ಭಾಷಣ ಮಾಡಲು ಅಥವಾ ಮತ ಚಲಾಯಿಸಲು ಲಂಚ ತೆಗೆದುಕೊಂಡಿದ್ದಕ್ಕಾಗಿ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿತ್ತು.

ತೀರ್ಪು ಪ್ರಕಟಿಸಿದ ಸಿಜೆಐ ಚಂದ್ರಚೂಡ್, ಲಂಚ ಪಡೆಯುವುದನ್ನು ಸಂಸದೀಯ ಹುದ್ದೆಯ ಮೂಲಕ ರಕ್ಷಿಸಲಾಗುವುದಿಲ್ಲ ಮತ್ತು 1998ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ಮತ ಅಥವಾ ಭಾಷಣಕ್ಕೆ ಸಂಬಂಧಿಸಿದಂತೆ ಲಂಚದ ಆರೋಪದ ಮೇಲೆ ಸಂಸದರು, ಶಾಸಕರು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಏಳು ನ್ಯಾಯಾಧೀಶರ ನ್ಯಾಯಪೀಠ ತೀರ್ಪು ನೀಡಿತು. ಜನಪ್ರತಿನಿಧಿಗಳ ಭ್ರಷ್ಟಾಚಾರ ಅಥವಾ ಲಂಚವು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯನ್ನು ಹಾಳುಮಾಡುತ್ತದೆ. ಲಂಚ ಸ್ವೀಕರಿಸುವುದು ಅಪರಾಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Continue Reading

ಪ್ರಮುಖ ಸುದ್ದಿ

Vote for bribe : ಲಂಚ ಪಡೆಯುವ ಶಾಸಕರು, ಸಂಸದರಿಗೆ ಕಾನೂನು ವಿನಾಯಿತಿ ಇಲ್ಲ ಎಂದ ಸುಪ್ರೀಂ ಕೋರ್ಟ್​​

Vote for bribe : ಇನ್ನು ಮುಂದೆ ಸಂಸದರು ಅಥವಾ ಶಾಸಕರು ತಮ್ಮ ಮತಕ್ಕಾಗಿ ಹಣ ಪಡೆದರೆ ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ.

VISTARANEWS.COM


on

Supreme Curt
Koo

ನವ ದೆಹಲಿ: ಪಿ.ವಿ.ನರಸಿಂಹ ರಾವ್ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ 1998ರಲ್ಲಿ ಸುಪ್ರೀಂ ಕೋರ್ಟ್ (Supreme Court) ನೀಡಿದ್ದ ತೀರ್ಪನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್​​​ನ ಏಳು ನ್ಯಾಯಾಧೀಶರ ಪೀಠವು, ಸಂಸದರು ಮತ್ತು ಶಾಸಕರು ಸಂಸತ್ತು ಅಥವಾ ವಿಧಾನಸಭೆಯಲ್ಲಿ ತಮ್ಮ ಮತಗಳು ಮತ್ತು ಭಾಷಣಕ್ಕಾಗಿ ಲಂಚ ಪಡೆದರೆ (Vote for bribe) ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಂವಿಧಾನ ಪೀಠವು 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಪೀಠವು ನೀಡಿದ ತೀರ್ಪನ್ನು ಸರ್ವಾನುಮತದಿಂದ ರದ್ದುಗೊಳಿಸಿತು. ಇದರಲ್ಲಿ ಸಂಸದರು ಮತ್ತು ಶಾಸಕರಿಗೆ ಶಾಸಕಾಂಗದಲ್ಲಿ ಭಾಷಣ ಮಾಡಲು ಅಥವಾ ಮತ ಚಲಾಯಿಸಲು ಲಂಚ ತೆಗೆದುಕೊಂಡಿದ್ದಕ್ಕಾಗಿ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿತ್ತು.

ತೀರ್ಪು ಪ್ರಕಟಿಸಿದ ಸಿಜೆಐ ಚಂದ್ರಚೂಡ್, ಲಂಚ ಪಡೆಯುವುದನ್ನು ಸಂಸದೀಯ ಹುದ್ದೆಯ ಮೂಲಕ ರಕ್ಷಿಸಲಾಗುವುದಿಲ್ಲ ಮತ್ತು 1998ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಕೊನೆಗೂ ಇ.ಡಿ ವಿಚಾರಣೆಗೆ ಒಪ್ಪಿದ ದೆಹಲಿ ಸಿಎಂ ಕೇಜ್ರಿವಾಲ್; ಕಂಡೀಷನ್ಸ್‌ ಅಪ್ಲೈ!

ವಿಧಾನಸಭೆಯಲ್ಲಿ ಮತ ಅಥವಾ ಭಾಷಣಕ್ಕೆ ಸಂಬಂಧಿಸಿದಂತೆ ಲಂಚದ ಆರೋಪದ ಮೇಲೆ ಸಂಸದರು, ಶಾಸಕರು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಏಳು ನ್ಯಾಯಾಧೀಶರ ನ್ಯಾಯಪೀಠ ತೀರ್ಪು ನೀಡಿತು. ಜನಪ್ರತಿನಿಧಿಗಳ ಭ್ರಷ್ಟಾಚಾರ ಅಥವಾ ಲಂಚವು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯನ್ನು ಹಾಳುಮಾಡುತ್ತದೆ. ಲಂಚ ಸ್ವೀಕರಿಸುವುದು ಅಪರಾಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Continue Reading

ಕೋರ್ಟ್

Family Problem : ಮಕ್ಕಳನ್ನು ನೋಡ್ಕೊಳ್ಳೋದು ಒಂದು ಕೆಲಸಾನಾ ಎಂದು ಕೇಳಿದ ಗಂಡನಿಗೆ ಕೋರ್ಟ್‌ ತಪರಾಕಿ

Family problem : ಮಕ್ಕಳನ್ನು ನೋಡಿಕೊಳ್ಳೋದು ಕೂಡಾ ಒಂದು ಕೆಲಸಾನಾ? ಅವಳಿಗೆ ಕೆಲಸಕ್ಕೆ ಹೋಗಲು ಆಗಲ್ವಾ ಎಂದು ಕೇಳಿದ ಬ್ಯಾಂಕ್‌ ಮ್ಯಾನೇಜರ್‌ ಗಂಡನಿಗೆ ಕೋರ್ಟ್‌ ಚೆನ್ನಾಗಿ ತಪರಾಕಿ ನೀಡಿದೆ. ಏನಿದು ಪ್ರಕರಣ?

VISTARANEWS.COM


on

Falimy problem court
ಪ್ರಾತಿನಿಧಿಕ ಚಿತ್ರ
Koo

ಬೆಂಗಳೂರು: ಅವಳಿಗೆ ಉದ್ಯೋಗ ಮಾಡುವಷ್ಟು ವಿದ್ಯಾಭ್ಯಾಸ ಇದೆ. ಮಕ್ಕಳನ್ನು ನೋಡ್ಕೊಳ್ಳೋದೇ ಒಂದು ಕೆಲಸಾನಾ ಎಂದು ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ (Family problem) ಬ್ಯಾಂಕ್‌ ಮ್ಯಾನೇಜರ್‌ಗೆ (Bank Manager) ಕೋರ್ಟ್‌ ಚೆನ್ನಾಗಿ ಪಾಠ ಕಲಿಸಿದೆ. ತಾಯಿಗೆ ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ ಎಂದಿರುವ ಕರ್ನಾಟಕ ಹೈಕೋರ್ಟ್‌ (Karnataka High court), ಪತ್ನಿ ಅರ್ಹತೆ ಹೊಂದಿದ್ದರೂ ದುಡಿದು ಬದುಕುತ್ತಿಲ್ಲ. ಬದಲಾಗಿ ಜೀವನಾಂಶದ ಹಣದಲ್ಲಿ ಜೀವನ ಸಾಗಿಸಲು ಬಯಸುತ್ತಿದ್ದಾರೆ ಎಂಬ ಪತಿಯ ವಾದವನ್ನು ತಳ್ಳಿಹಾಕಿದೆ.

ಇದೊಂದು ವೈವಾಹಿಕ ವಿಚ್ಛೇದನ ಪ್ರಕರಣವಾಗಿದ್ದು, (Marriage Divorce Case) ಪತ್ನಿಯು ತನಗೆ ಗಂಡ ನೀಡುವ ಜೀವನಾಂಶ‌ ಹೆಚ್ಚಿಸಲು ಕೋರಿ ಕೋರ್ಟ್‌ ಮೊರೆ ಹೊಕ್ಕಿದರು. ಆಗ ಗಂಡ ಆಡಿದ ಮಾತು ನ್ಯಾಯಾಲಯವನ್ನು ಕೆರಳಿಸಿದೆ.

Family Problem : ಏನಿದು ಘಟನೆಯ ಪೂರ್ಣ ವಿವರ?

ಅವರಿಬ್ಬ ಮದುವೆ ಆಗಿದ್ದು 2012ರಲ್ಲಿ. 11 ವರ್ಷ ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದಾರೆ. ಆಕೆ ಉಪನ್ಯಾಸಕಿಯಾಗಿ (Lecturer in College) ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಮೊದಲ ಮಗುವಾದ ನಂತರ ಕೆಲಸ ಬಿಟ್ಟಿದ್ದರು. ಆ ನಂತರ ಮತ್ತೊಂದು ಮಗುವಾಯಿತು. ಹೀಗಾಗಿ ಅವರು ಕೆಲಸಕ್ಕೆ ಹೋಗುತ್ತಿರಲಿಲ್ಲ.

ಮದುವೆಯಾಗಿ ಎರಡು ಮಕ್ಕಳಾದ ನಂತರ ಅವರಿಬ್ಬರ ನಡುವೆ ಮನಸು ಮುರಿದು, ಬಳಿಕ ವಿಚ್ಛೇದನಕ್ಕೆ ಮುಂದಾಗಿದ್ದರು. ಆ ಅರ್ಜಿ ಬಾಕಿ ಇರುವಾಗಲೇ ಪತ್ನಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರಡಿ ಪ್ರತಿ ತಿಂಗಳು 36 ಸಾವಿರ ರೂ. ಮಧ್ಯಂತರ ಜೀವನಾಂಶ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು 18 ಸಾವಿರ ರೂ. ಜೀವನಾಂಶ ನಿಗದಿ ಪಡಿಸಿ ಆ ಮೊತ್ತವನ್ನು ಪಾವತಿಸುವಂತೆ ಆದೇಶ ನೀಡಿತ್ತು. ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು.

ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ 18 ಸಾವಿರ ರೂ. ಜೀವನಾಂಶವನ್ನು 36 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

Karnataka high court teachers appointment

ಜೀವನಾಂಶ ಹೆಚ್ಚಿಸಲು ಹೈಕೋರ್ಟ್‌ ಕೊಟ್ಟ ಕಾರಣಗಳು

  1. ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ. ಪತಿ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದು, ಪತ್ನಿಗೆ ಮಾಸಿಕ ₹36 ಸಾವಿರ ಜೀವನಾಂಶ ಪಾವತಿಸಬೇಕು.
  2. ಪತಿಯಾದವರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದು ಖಾಸಗಿ ಉದ್ಯೋಗದಂತೆ ಯಾವಾಗ ಬೇಕಾದರೂ ತೆಗೆದು ಹಾಕುವಂಥ ಉದ್ಯೋಗವಲ್ಲ.
  3. ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗ. ಪತಿಯು ಸದ್ಯ ಸುಮಾರು ₹90 ಸಾವಿರ ವೇತನ ಪಡೆಯುತ್ತಿದ್ದಾರೆ. ಹೀಗಾಗಿ, ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ ₹36 ಸಾವಿರ ಜೀವನಾಂಶ ನೀಡಬೇಕು.

ಇದನ್ನೂ ಓದಿ : Karnataka High Court : ವೃದ್ಧೆಗೆ ಮಗ, ಮೊಮ್ಮಗಳಿಂದಲೇ ಮೋಸ; ಹೈಕೋರ್ಟ್‌ ತಪರಾಕಿ

ಅವಳು ದುಡಿದು ಬದುಕಲಿ ಎಂಬ ವಾದಕ್ಕೆ ಆಕ್ಷೇಪ

ಪತ್ನಿ ಜೀವನಾಂಶ ಕೇಳಿದ್ದಕ್ಕೆ ಪ್ರತಿಯಾಗಿ ಪತಿಯಾದವರು, ಪತ್ನಿ ಉದ್ಯೋಗ ಮಾಡಲು ಎಲ್ಲಾ ಅರ್ಹತೆ ಹೊಂದಿದ್ದಾರೆ. ದುಡಿದು ಜೀವನ ಮಾಡಬಹುದು. ಅದರ ಬದಲು ಪತಿಯ ಜೀವನಾಂಶದಲ್ಲೇ ಜೀವನ ನಡೆಸಲು ಬಯಸುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸವಲ್ಲ ಎಂದು ಹೇಳಿದ್ದಾರೆ. ಆ ವಾದವನ್ನು ಒಪ್ಪಲಾಗದು, ಅಂತಹ ಹೇಳಿಕೆಗಳ ಮೂಲಕ ನ್ಯಾಯಾಲಯದ ಹಾದಿ ತಪ್ಪಿಸಬಾರದು ಹೈಕೋರ್ಟ್‌ ಹೇಳಿದೆ.

ಪ್ರತಿವಾದಿಯಾಗಿರುವ ಪತಿಯು ಮಕ್ಕಳನ್ನು ನೋಡಿಕೊಳ್ಳಲು ಪತ್ನಿ ದುಡಿಯಬಹುದು. ಆದರೆ ಸುಮ್ಮನೆ ಸೋಮಾರಿಯಂತೆ ಓಡಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಒಪ್ಪಲಾಗದು, ಕಾನೂನಿನ ಪ್ರಕಾರ ಅವರು ಜೀವನಾಂಶ ನೀಡಲೇಬೇಕು. ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು ಎನ್ನುವುದು ಕೋರ್ಟ್‌ ಆದೇಶ.

Continue Reading
Advertisement
BJP MLA Shivaram Hebbar welcomes CM, Deputy CM by putting up flexes
ಕರ್ನಾಟಕ22 mins ago

Banavasi Kadambotsava: ಫ್ಲೆಕ್ಸ್‌ ಹಾಕಿ ಸಿಎಂ, ಡಿಸಿಎಂಗೆ ಭರ್ಜರಿ ಸ್ವಾಗತ ಕೋರಿದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌!

Shivaram Hebbar and ST Somashekar welcome if they agree with party ideology CM Siddaramaiah
ಉತ್ತರ ಕನ್ನಡ31 mins ago

CM Siddaramaiah: ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ: ಸಿದ್ದರಾಮಯ್ಯ

Abhishek Sharma
ಕ್ರಿಕೆಟ್36 mins ago

Abhishek Sharma: ಮಾಡೆಲ್ ಆತ್ಮಹತ್ಯೆ; ಪೊಲೀಸ್‌ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಅಭಿಷೇಕ್ ಶರ್ಮಾ

vande bharat train
ಕರ್ನಾಟಕ39 mins ago

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

Text book Revision Karnataka
ಬೆಂಗಳೂರು40 mins ago

Text Book Revision : ಸದ್ದಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಸರ್ಕಾರ, ಏನೇನು ಬದಲಾವಣೆ?

Shubman Gill
ಕ್ರೀಡೆ1 hour ago

Shubman Gill: 5ನೇ ಟೆಸ್ಟ್​ಗೂ ಮುನ್ನ ಬೌದ್ಧ ಸನ್ಯಾಸಿಗಳ ಆಶೀರ್ವಾದ ಪಡೆದ ಗಿಲ್

Mohammed Shafi Nashipudi (1)
ಕರ್ನಾಟಕ1 hour ago

Sedition Case: ಬಂಧಿತ ಮೊಹಮ್ಮದ್‌ ಶಫಿ ನಾಶಿಪುಡಿ ಕೋಟ್ಯಂತರ ರೂ. ಆಸ್ತಿ ಒಡೆಯ; ಈತನ ಹಿನ್ನೆಲೆ ಏನು?

692 farmers commit suicide is Siddaramaiah achievement says HD DeveGowda
ಕರ್ನಾಟಕ1 hour ago

HD Devegowda: 692 ರೈತರು ಆತ್ಮಹತ್ಯೆಯೇ ಸಿದ್ದರಾಮಯ್ಯ ಸಾಧನೆಯ ಕಿರುನೋಟ: ಎಚ್‌.ಡಿ. ದೇವೇಗೌಡ ವ್ಯಂಗ್ಯ

HD DeveGowda reveals the reality of Karnataka drought
ರಾಜಕೀಯ2 hours ago

Water Crisis: ಬೆಂಗಳೂರಲ್ಲಿ ಹಾಲಿನ ಟ್ಯಾಂಕರ್ ಮೂಲಕ ನೀರು ಪೂರೈಕೆ; ಬರದ ವಾಸ್ತವ ಬಿಚ್ಚಿಟ್ಟ ಎಚ್.ಡಿ. ದೇವೇಗೌಡ!

ED Raid Bangalore
ಬೆಂಗಳೂರು2 hours ago

ED Raid : ಬೆಂಗಳೂರಿನ 8 ಕಡೆ ಇ.ಡಿ ದಾಳಿ, 11.5 ಕೋಟಿ ನಗದು, 120 ಕೋಟಿಯ ದಾಖಲೆ ವಶ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌