Site icon Vistara News

Double tragedy : ವಿದ್ಯುತ್‌ ಆಘಾತಕ್ಕೆ ಬಾಲಕ ಬಲಿ, ಟಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದು ಯುವಕ ದುರ್ಮರಣ

Double tragedy in tumkur and Mandya

ತುಮಕೂರು/ಮಂಡ್ಯ: ಎರಡು ಅವಘಡಗಳು (Double tragedy) ಒಬ್ಬ ಬಾಲಕ ಮತ್ತು ಇನ್ನೊಬ್ಬ ಚಿಗುರು ಮೀಸೆಯ ಯುವಕನನ್ನು ಬಲಿ (Boy and young man died in accident) ಪಡೆದಿದೆ. ತುಮಕೂರು (Tumkur News) ಮತ್ತು ಮಂಡ್ಯದಲ್ಲಿ (Mandya News) ನಡೆದ ಘಟನೆಯಲ್ಲಿ 10 ವರ್ಷದ ಬಾಲಕ ಮತ್ತು 19 ವರ್ಷದ ಯುವಕ ಮೃತಪಟ್ಟಿದ್ದಾರೆ.

ಕುಣಿಗಲ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಬಾಲಕ ಸಾವು

ತುಮಕೂರು: ತುಮಕೂರು ಜಿಲ್ಲೆ, ಕುಣಿಗಲ್ ಪಟ್ಟಣದಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯುತ್‌ ತಂತಿ ಮೆಟ್ಟಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಋತ್ವಿಕ್‌ ಎಂಬ ಹತ್ತು ವರ್ಷದ ಬಾಲಕನೇ ಮೃತಪಟ್ಟವನು. ಮನೆ ಸಮೀಪ ನಿವೇಶನ ಒಂದರಲ್ಲಿ ಆಟ ಆಡುತ್ತಿದ್ದ ಋತ್ವಿಕ್ಈ ವೇಳೆ ಸಮೀಪದಲ್ಲಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿದ್ದ. ಆಗ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯುತ್‌ ಹರಿಯುವ ತಂತಿಗಳನ್ನು ಮಕ್ಕಳು ಆಡುವ ಜಾಗದಲ್ಲಿ ಬಿಟ್ಟಿದ್ದೇ ದುರಂತಕ್ಕೆ ಕಾರಣವಾಗಿದೆ. ಹತ್ತು ವರ್ಷದ ಬಾಲಕನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಮಂಡ್ಯ ಬಳಿ ಟಿಲ್ಲರ್ ಗೆ ಕಾರು ಡಿಕ್ಕಿ ಯುವಕ ಸಾವು

ಮಂಡ್ಯ: ನಗರದ ಮಂಡ್ಯ ಹೊರ ವಲಯದ ಚಿಕ್ಕ ಮಂಡ್ಯ ಬಳಿಯ ಸರ್ವಿಸ್ ರಸ್ತೆಯಲ್ಲಿ ಘಟನೆ ಟಿಲ್ಲರ್‌ಗೆ ಕಾರು ಬಡಿದು ಒಬ್ಬ ಯುವಕ ಮೃತಪಟ್ಟಿದ್ದಾನೆ. ಚಿಕ್ಕಮಂಡ್ಯದ ಸುದರ್ಶನ್ (19)ಮೃತ ಯುವಕ.

ಸುದರ್ಶನ್‌ ಬೆಳಗ್ಗೆ ಬೇಗನೆ ಹೊಲಕ್ಕೆ ಹೋಗಿ ಭತ್ತದ ನಾಟಿ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆ ದುರ್ಘಟನೆ ನಡೆದಿದೆ.

ಟಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಮ್ಮೆಗೇ ಜರ್ಕ್‌ ಹಾಕಿದಂತಾಗಿ ಯುವಕನ ಎದೆಗೆ ಹ್ಯಾಂಡಲ್ ಚುಚ್ಚಿದ ಪರಿಣಾಮ ಸ್ಥಳದಲ್ಲೇ ಸಾವು ಸಂಭವಿಸಿದೆ. ಡಿಕ್ಕಿ ಹೊಡೆದ ಬಳಿಕ ಕಾರು ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case : ಮನೆಯಲ್ಲಿರಲ್ಲ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿ, ಅತ್ತೆಯನ್ನೇ ಹೊಡೆದು ಕೊಂದ ಧೂರ್ತ

ಹಳೆ ವೈಷಮ್ಯದ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಕೊಲೆ

ಬೆಳಗಾವಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

Murder at Belagavi

ವಿಜಯ್ ರಾಮಚಂದ್ರಪ್ಪ ಆರೇರ್ (34) ಮೃತ ದುರ್ದೈವಿ. ಕಲ್ಲಪ್ಪ ಕ್ಯಾತಣ್ಣವರ್ ಮತ್ತು ವಿಜಯ್ ಮಧ್ಯೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿ ಒಬ್ಬರ ಮೇಲೊಬ್ಬರು ಹಲ್ಲೆ ಮಾಡಿಕೊಂಡಿದ್ದರು. ಈ ವೇಳೆ ತೀವ್ರ ಗಾಯಗೊಂಡ ವಿಜಯ್ ನನ್ನು ಕುಟುಂಬಿಕರು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಬಿಮ್ಸ್ ಆಸ್ಪತ್ರೆಯಲ್ಲಿ ವಿಜಯ್ ಮೃತಪಟ್ಟಿದ್ದಾರೆ.

ಅತ್ತ ಕಲ್ಲಪ್ಪ ಕ್ಯಾತಣ್ಣವರ್‌ಗೂ ಗಾಯಗಳಾಗಿದ್ದು, ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು ಪ್ರಕರಣ ದಾಖಲಾಗಿದೆ.

Exit mobile version