ತುಮಕೂರು: ಕಳ್ಳನನ್ನ ಹಿಡಿಯಲು (Theft Case) ಹೋದ ಪೊಲೀಸರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಕಳ್ಳನನ್ನ ಟ್ರೇಸ್ ಮಾಡುವಾಗ ಪೊಲೀಸರ ಕಾರು (Road Accident) ಅಪಘಾತಕ್ಕೀಡಾಗಿದೆ. ತುಮಕೂರಿನ ಮಧುಗಿರಿ ಠಾಣೆಯ ಮೂವರು ಪೊಲೀಸರಿಗೆ ಗಂಭೀರ ಗಾಯವಾಗಿದೆ. ಮಧುಗಿರಿ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್‌ಗೆ ಗಂಭೀರ ಗಾಯವಾಗಿದೆ. ಆಂಧ್ರಪ್ರದೇಶದ ಮಣೂರು ಬಳಿ ಘಟನೆ ನಡೆದಿದೆ.
ನಿನ್ನೆ ಶನಿವಾರ ಮಧುಗಿರಿ ಪಟ್ಟಣದಲ್ಲಿ ಮಹಿಳೆ ಬಳಿ 70 ಗ್ರಾಂ ಚಿನ್ನದ ಸರ ಕದ್ದು ಖದೀಮನೊಬ್ಬ ಎಸ್ಕೇಪ್ ಆಗಿದ್ದ. ಪ್ರಕರಣ ಸಂಬಂಧ ಮಧುಗಿರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ಕಳ್ಳನ ಜಾಡು ಹಿಡಿದು ಹೊರಟಿದ್ದ ಮಧುಗಿರಿ ಪೊಲೀಸರು ಕಳ್ಳನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರಿನಲ್ಲಿ ತೆರಳುತ್ತಿದ್ದಾಗ, ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದಿದೆ.
ಪರಿಣಾಮ ಪೊಲೀಸ್ ಸಿಬ್ಬಂದಿಯ ಕಣ್ಣು, ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶದ ಧರ್ಮವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿ
ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವಡ್ಡರಹಟ್ಟಿ ಬಳಿ ಘಟನೆ ನಡೆದಿದೆ. ಬ್ಯಾಡನೂರು ಗ್ರಾಮದಿಂದ ಹಾಲು ತುಂಬಿಕೊಂಡು ಪಾವಗಡದ ಕಡೆ ಬರುವಾಗ ಬ್ಯಾಡನೂರು ಗುಂಡಾರ್ಲಹಳ್ಳಿ ನಡುವಿನ ರಸ್ತೆಯ ವಡ್ಡರಹಟ್ಟಿ ಬಳಿ ಟ್ಯಾಂಕರ್ ಪಲ್ಟಿ ಹೊಡೆದಿದೆ. ವಡ್ಡರಹಟ್ಟಿ ಸಮೀಪ ಬರುತ್ತಿದ್ದಂತೆ ರಸ್ತೆಯ ಬದಿ ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಭಾಗಶಃ ಹಾಲು ನೆಲದ ಪಾಲಾಗಿದೆ. ಕ್ರೇನ್ ಸಹಾಯದಿಂದ ಟ್ಯಾಂಕರ್ ಅನ್ನು ಮೇಲೆತ್ತಿದ್ದಾರೆ. ಪೋಲಾಗುತ್ತಿದ್ದ ಹಾಲನ್ನು ಬಿಂದಿಗೆ, ಕ್ಯಾನುಗಳಲ್ಲಿ ಸ್ಥಳೀಯರು ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.
ಬೆಂಗಳೂರಿನಲ್ಲಿ ಕಾರು ಅಪಘಾತ
ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ನಸುಕಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಅಪಘಾತಕ್ಕೀಡಾಗಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಿದ್ಯುತ್ ಕಂಬಗಳಿಗೆ ಕಾರು ಗುದ್ದಿದೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನ ಮುಂಭಾಗದ ಸೀಟ್‌ನ ಏರ್ ಬ್ಯಾಗ್‌ಗಳು ಓಪನ್ ಆಗಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದ ಎನ್ನಲಾಗಿದೆ. ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ವಿದ್ಯುತ್ ಕಂಬಗಳು, ಕಾರಿನ ಬಿಡಿಭಾಗಗಳು ಬಿದ್ದಿವೆ. ಮದ್ಯಪಾನ ಮಾಡಿ ಅಪಘಾತ ಮಾಡಿರುವ ಶಂಕೆ ಇದೆ. ಚಾಲಕನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ