Site icon Vistara News

Boys Drown: ದನ ತೊಳೆಯಲು ಹೋದ ಇಬ್ಬರು ಬಾಲಕರು ನೀರುಪಾಲು, ಮತ್ತಿಬ್ಬರು ಬಚಾವ್

Two boys drown

ಗದಗ: ದನಗಳನ್ನು ತೊಳೆಯಲು ಹೋಗಿದ್ದಾಗ ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತಿಬ್ಬರನ್ನು ರಕ್ಷಣೆ ಮಾಡಿರುವ ಘಟನೆ ನಗರದ ಹೊರವಲಯದ ರೆಹಮತ್ ನಗರದಲ್ಲಿ ಮಂಗಳವಾರ ನಡೆದಿದೆ. ಮಹಿಳೆ ಸೇರಿದಂತೆ ಮೂವರು ಬಾಲಕರು ನೀರಿನಲ್ಲಿ (Boys Drown) ಮುಳುಗಿದ್ದರು. ಈ ಪೈಕಿ ಮಹಿಳೆ ಹಾಗೂ ಒಬ್ಬ ಬಾಲಕನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ನೀರುಪಾಲಾಗಿದ್ದಾರೆ.

ಮಹಮ್ಮದ್ ಅಮನ್ ಹುಬ್ಬಳ್ಳಿ (12), ಸಂತೋಷ ಕುಂಬಾರ್ ನೀರು (14) ಮೃತರು. ಮಹಮ್ಮದ್ ಆದಿಲ್ ಹುಬ್ಬಳ್ಳಿ (14), ಮಹಿಳೆ ಶಾಹೀನ್ ಹುಬ್ಬಳ್ಳಿ (30) ಅಪಾಯದಿಂದ ಪಾರಾದವರು. ದನಗಳನ್ನು ತೊಳೆಯಲು ಹೋದಾಗ ಹೊಂಡದಲ್ಲಿ ನಾಲ್ವರು ಮುಳುಗುತ್ತಿದ್ದದ್ದನ್ನು ರಾಜ್ ಸಿಂಗ್ ಎಂಬಾತ ನೋಡಿ, ಅವರ ರಕ್ಷಣೆಗೆ ಹೋಗಿದ್ದಾರೆ. ಈ ವೇಳೆ ಮಹಿಳೆ ಹಾಗೂ ಒಬ್ಬ ಬಾಲಕನ್ನು ರಕ್ಷಣೆ ಮಾಡಿದ್ದು, ಇನ್ನಿಬ್ಬರು ಬಾಲಕರು ನೀರುಪಾಲಾಗಿದ್ದಾರೆ.

ಮೃತ ಬಾಲಕರಾದ ಸಂತೋಷ ಕುಂಬಾರ್ ಮತ್ತು ಮಹಮ್ಮದ್ ಅಮನ್ ಹುಬ್ಬಳ್ಳಿ

ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ನೀರಿನಲ್ಲಿ ಮುಳುಗಿದ ಇಬ್ಬರು ಬಾಲಕರ ಮೃತದೇಹಗಳಿಗಾಗಿ ಹುಡುಕಾಡ ನಡೆಸುತ್ತಿದ್ದಾರೆ. ಗದಗ ಶಹರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Road Accident : ಕಾರಿನ ಚಕ್ರದಡಿ ಸಿಲುಕಿದ್ದರೂ ನಿಲ್ಲಿಸದೆ 100 ಅಡಿ ದೂರ ಎಳೆದೊಯ್ದ ಕ್ರೂರಿ

ಧ್ವಜಾರೋಹಣಕ್ಕೆ ತೆರಳುತ್ತಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ಸಾವು

ಕಾರವಾರ : ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಳಕಾರ್ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ (Road Accident) ಶಿಕ್ಷಕರೊಬ್ಬರು (Govt School Teacher) ಮೃತಪಟ್ಟಿದ್ದಾರೆ. ಹೆಗಡೆ ಗ್ರಾಮದ ನಿವಾಸಿ ಗೋಪಾಲ ಪಟಗಾರ (50) ಮೃತ ದುರ್ದೈವಿ.

ಸ್ವಾತಂತ್ರ್ಯ ದಿನಾಚರಣೆ (Independence Day 2023) ಪ್ರಯುಕ್ತ ಶಾಲೆಯಲ್ಲಿ ಧ್ವಜಾರೋಹಣಕ್ಕೆ ತೆರಳುತ್ತಿದ್ದಾಗ ಶಿಕ್ಷಕನಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ. ಗೋಪಾಲ ಗುಡೇಅಂಗಡಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು. ಬೈಕ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಎದುರಿಗೆ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದಿದೆ.

ಪರಿಣಾಮ ಗಂಭೀರ ಗಾಯಗೊಂಡು ಶಿಕ್ಷಕ ಗೋಪಾಲ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕುಮಟಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version