Site icon Vistara News

ಬಾವಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರ ಸಾವು; ಮುಗಿಲುಮುಟ್ಟಿದ ಪಾಲಕರ ಆಕ್ರಂದನ

ಬಾಲಕರ ಸಾವು

ಕಲಬುರಗಿ: ಆಳಂದ ಪಟ್ಟಣ ಹೊರವಲಯದಲ್ಲಿ ಬಾವಿಯೊಂದರಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಳೆಯುತ್ತಿರುವ ಕಂದಮ್ಮಗಳು ಇಹಲೋಕ ತ್ಯಜಿಸಿರುವುದರಿಂದ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಶ್ರೀಶೈಲ್ ಹೀರಾಪುರೆ (13), ಲಕ್ಷ್ಮಣ್ ಮಡಿವಾಳ (12) ಮೃತ ಬಾಲಕರಾಗಿದ್ದಾರೆ. ಇವರು ಆಳಂದ ಪಟ್ಟಣದ ಹೊರವಲಯದ ಬಾವಿಯಲ್ಲಿ ಈಜಾಡಲು ತೆರಳಿದ್ದರು. ಇವರಿಗೆ ಈಜು ಬಾರದೇ ಇರುವುದೇ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಯಾರಿಗೂ ಹೇಳದೇ ಹೋಗಿದ್ದರೇ ಎಂಬುದು ತಿಳಿದು ಬಂದಿಲ್ಲ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಆಂಧ್ರದ ಚಿತ್ತೂರಿನಲ್ಲಿ ಭೀಕರ ರಸ್ತೆ ಅಪಘಾತ : ಸಾಧನೆಯ ಮನೆಯಲ್ಲಿ ಸಾವಿನ ಸೂತಕ

Exit mobile version