ಚಿಕ್ಕೋಡಿ: ಇಲ್ಲಿನ ನಿಪ್ಪಾಣಿ ನಗರದಲ್ಲೊಂದು ನಿರ್ದಯ, ಹೃದಯ ವಿದ್ರಾವಕ ಘಟನೆ ನಡೆದಿದೆ. ಯಾರೋ ನಿರ್ದಯಿಗಳು ಕೇವಲ ಎರಡು ದಿನದ ಮಗುವನ್ನು ಕೈಚೀಲದಲ್ಲಿ (child found) ಹಾಕಿ ಮಾರ್ಗದ ಬದಿಯಲ್ಲಿ ಬಿಟ್ಟು ಹೋಗಿದ್ದಾರೆ.
ನಿಪ್ಪಾಣಿ ನಗರದ ಕೆ ಎಲ್ ಇ ಸಿ ಬಿ ಎಸ್ ಸಿ ಸ್ಕೂಲ್ ಬಳಿ ಕೈ ಚೀಲದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಯಾರೋ ಈ ಮಗುವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಗುವಿನ ಜೀವ ಉಳಿದಿದೆ. ಒಂದೊಮ್ಮೆ ಯಾರೂ ನೋಡದೆ ಇದ್ದರೆ ಮಗು ಉಸಿರುಗಟ್ಟಿ, ಇಲ್ಲವೇ ಹಸಿವಿನಿಂದ ಸಾಯುವ ಸಾಧ್ಯತೆ ಇತ್ತು. ಮಾತ್ರವಲ್ಲ, ಬೀದಿ ನಾಯಿಗಳೇನಾದರೂ ನೋಡಿದ್ದರೆ ಎಳೆದು ಕೊಂದು ಹಾಕುವ ಅಪಾಯವೂ ಇತ್ತು.
ಕೇವಲ ಎರಡು ದಿನವಷ್ಟೇ ಕಳೆದಿರುವ ಇನ್ನೂ ಹಸಿ ಹಸಿಯಾಗಿರುವ ಮಗು ಪತ್ತೆಯಾಗುತ್ತಿದ್ದಂತೆಯೇ ಸ್ಥಳಕ್ಕೆ ನಿಪ್ಪಾಣಿ ನಗರ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿದರು. ಕೂಡಲೇ ಮಗುವನ್ನು ಆಸ್ಪತ್ರಗೆ ದಾಖಲಿಸಿದ್ದಾರೆ.
ಅದೃಷ್ಟವಶಾತ್ ಮಗು ಸಂಪೂರ್ಣ ಆರೋಗ್ಯವಾಗಿದೆ. ಇದೀಗ ಪೊಲೀಸರು ಮಗುವನ್ನು ಅಲ್ಲಿ ಇಟ್ಟು ಹೋದವರಾರು? ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ | Child death| ಆಟವಾಡುತ್ತಿದ್ದಾಗ ಬಿಸಿ ಸಾಂಬಾರ್‌ಗೆ ಬಿದ್ದು ಗಾಯಗೊಂಡಿದ್ದ 18 ತಿಂಗಳ ಹಸುಳೆ ದಾರುಣ ಸಾವು