Site icon Vistara News

Veerabhadreswara Fair: ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

Two killed after being hit by the wheel of a chariot while performing at Veerabhadreswara fair

ಗದಗ: ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ (Veerabhadreswara Fair) ರಥದ ಚಕ್ರದಡಿ‌ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರಥ ಎಳೆಯುವ ವೇಳೆ ಈ ಅವಘಡ ನಡೆದಿದೆ.

ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಬ್ಬ ಭಕ್ತನ ತಲೆ‌ ಮೇಲೆ ರಥದ ಚಕ್ರ ಹತ್ತಿಳಿದಿದ್ದರಿಂದ ತಲೆಬುರುಡೆ ಅಪ್ಪಚ್ಚಿಯಾಗಿದೆ. ಮತ್ತೊಬ್ಬನ ಬೆನ್ನಿನ ಮೇಲೆ ಹಾದು ಹೋಗಿದೆ. ಹೀಗಾಗಿ ಆತನೂ ಅಲ್ಲಿಯೇ ಉಸಿರು ಚೆಲ್ಲಿದ್ದಾನೆ. ರಥೋತ್ಸವಕ್ಕೆ‌ ಎಸೆಯುವ ಉತ್ತುತ್ತೆಯನ್ನು ಆರಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಲ್ಲಪ್ಪ ಲಿಂಗನಗೌಡರ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ರೋಣ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪತ್ನಿಯ ಶೀಲ ಶಂಕಿಸಿ, ಆಕೆಯ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕಿದ ದುಷ್ಟ; ಏನು ಮಾಡಬೇಕು ಇಂಥವರಿಗೆ?

ಮುಂಬೈ: ಗಂಡ-ಹೆಂಡತಿ, ಪ್ರಿಯತಮ-ಪ್ರಿಯತಮೆ ಸೇರಿ ಯಾವುದೇ ಸಂಬಂಧದಲ್ಲಿ ಅನುಮಾನ ಎಂಬ ಪೀಡೆ ಹೊಕ್ಕರೆ ಅಲ್ಲಿಗೆ ಮುಗಿಯಿತು ಕತೆ. ಒಂದೋ ಆ ಸಂಬಂಧದಲ್ಲಿ ಬಿರುಕು ಮೂಡುತ್ತದೆ, ಇಲ್ಲವೇ ಪರಸ್ಪರ ಹಿಂಸೆಗೆ ದಾರಿ ಮಾಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ವ್ಯಕ್ತಿಯೊಬ್ಬ ತನ್ನ ಪತಿಯ ಶೀಲ ಶಂಕಿಸಿ, ಆಕೆ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾನೆ.

ಪುಣೆಯ ವಾಕಡ್‌ ಪ್ರದೇಶದಲ್ಲಿ ಮೇ 11ರಂದು ಪತಿಯು ಮೃಗದಂತೆ ವರ್ತಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ದುಷ್ಟನನ್ನು ಬಂಧಿಸಿದ್ದಾರೆ. ಗುಪ್ತಾಂಗಕ್ಕೆ ಮೊಳೆ ಹೊಡೆದು, ಬೀಗ ಜಡಿದ ಪರಿಣಾಮ ಮಹಿಳೆಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾರಣಾಂತಿಕವಾಗಿ ಹಲ್ಲೆ ನಡೆಸಿದವನನ್ನು ನೇಪಾಳದ ಮೂಲದ, ಸದ್ಯ ಪಿಂಪ್ರಿ-ಚಿಂಚ್ವಾಡ್‌ನ ವಾಕಡ್‌ನಲ್ಲಿ ನೆಲೆಸಿದ ಉಪೇಂದ್ರ ಹುಡಕೆ (30) ಎಂಬುದಾಗಿ ಗುರುತಿಸಲಾಗಿದೆ.

Physical Abuse

ಪ್ರಕರಣದ ಕುರಿತು ತನಿಖಾಧಿಕಾರಿ ಬಾಲಾಜಿ ಮೆತೆ ಅವರು ಮಾಹಿತಿ ನೀಡಿದ್ದಾರೆ. “ಗಂಡ ಹಾಗೂ ಹೆಂಡತಿ ನೇಪಾಳದವರು. ಉದ್ಯೋಗ ಅರಸಿ ಅವರು ಮೇ ತಿಂಗಳ ಮೊದಲ ವಾರದಲ್ಲಿ ವಾಕಡ್‌ಗೆ ಬಂದು ನೆಲೆಸಿದ್ದರು. ಮೇ 11ರಂದು ಪಾನಮತ್ತನಾಗಿ ಬಂದ ವ್ಯಕ್ತಿಯು ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಶೀಲ ಶಂಕಿಸಿದ ಆತನು ಒದ್ದು, ಆಕೆಯ ಕೈಕಾಲು ಕಟ್ಟಿ, ಗುಪ್ತಾಂಗಕ್ಕೆ ಮೊಳೆ ಜಡಿದು, ಚಾಕುವಿನಿಂದ ಹಲ್ಲೆ ನಡೆಸಿ, ಬೀಗ ಹಾಕಿದ್ದಾನೆ. ಮಹಿಳೆಯು ಅಂಗಲಾಚಿದರೂ ಆತನು ಬಿಟ್ಟಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Murder Case : ಶೀಲ ಶಂಕಿಸಿ ಪತ್ನಿಯ ಕುತ್ತಿಗೆ ಹಿಸುಕಿ ಕೊಂದ ಸಂಶಯ ಪಿಶಾಚಿ ಗಂಡ

ಮಹಿಳೆ ಅರಚುವ ಧ್ವನಿ ಕೇಳಿ ಪಕ್ಕದ ಮನೆಯ ಲಲಿತ್‌ ಪರಿಹಾರ್‌ ಎಂಬುವರು ಮನೆಗೆ ತೆರಳಿ ನೋಡಿದಾಗ, ಮಹಿಳೆಯು ರಕ್ತದ ಮಧ್ಯೆ ಬಿದ್ದಿರುವುದು ಕಂಡಿದೆ. ಕೂಡಲೇ ಅವರು ಸುತ್ತಮುತ್ತಲಿವರನ್ನು ಕರೆದ ಅವರು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Exit mobile version