Murder Case : ಶೀಲ ಶಂಕಿಸಿ ಪತ್ನಿಯ ಕುತ್ತಿಗೆ ಹಿಸುಕಿ ಕೊಂದ ಸಂಶಯ ಪಿಶಾಚಿ ಗಂಡ - Vistara News

ಕ್ರೈಂ

Murder Case : ಶೀಲ ಶಂಕಿಸಿ ಪತ್ನಿಯ ಕುತ್ತಿಗೆ ಹಿಸುಕಿ ಕೊಂದ ಸಂಶಯ ಪಿಶಾಚಿ ಗಂಡ

Murder Case : ಯಾದಗಿರಿಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಆತನಿಗೆ ಮಕ್ಕಳಿದ್ದಾರೆ. ಆದರೆ, ಅವನಿಗೆ ಹೆಂಡತಿ ಮೇಲೆ ಸಂಶಯ. ಹೀಗಾಗಿ ಕೊಲೆಯನ್ನೇ ಮಾಡಿದ್ದಾನೆ.

VISTARANEWS.COM


on

Murder Case yadagiri
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾದಗಿರಿ: ಸಂಶಯ ಪಿಶಾಚಿ ಗಂಡನೊಬ್ಬ (Suspicious Husband) ತನ್ನ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ (Murder Case). ಯಾದಗಿರಿ ಜಿಲ್ಲೆಯ (Yadagiri News) ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪತಿರಾಯ ಹಣಮಂತನೇ ಪತ್ನಿ ಶ್ರೀದೇವಿ (26) ಅವರನ್ನು ಕೊಲೆ ಮಾಡಿದ ದುಷ್ಟ. ಬುಧವಾರ ರಾತ್ರಿ ಈಗ ಪತ್ನಿಯ ಕುತ್ತಿಗೆಯನ್ನು ಬಟ್ಟೆಯಿಂದ ಹಿಸುಕಿ ಕೊಲೆ ಮಾಡಿದ್ದಾನೆ. ಆತ ಪತ್ನಿಯ ಶೀಲದ ಮೇಲೆ ಅಪಾರವಾದ ಸಂಶಯ ಹೊಂದಿ ಈ ಕೃತ್ಯ ನಡೆಸಿದ್ದಾನೆ.

ಹಣಮಂತ ಒಬ್ಬನೇ ಈ ಕೊಲೆಯನ್ನು ಮಾಡಿಲ್ಲ. ತನ್ನ ತಂದೆ, ತಾಯಿ ಜತೆ ಸೇರಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಎದುರಾಗಿದೆ. ರಾತ್ರಿ ಹೊತ್ತು ಮಕ್ಕಳು ನಿದ್ದೆಗೆ ಜಾರಿದಾಗ ಆತ ಹೆಂಡತಿಯ ಕುತ್ತಿಗೆಗೆ ಬಟ್ಟೆಯನ್ನು ಕಟ್ಟಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಸುರಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ಆರೋಪಿ ಹಣಮಂತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Murder Case : ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ; ಪಾಳು ಬಿದ್ದ ಕಟ್ಟಡದಲ್ಲಿ ಶವ ಪತ್ತೆ

ಕುಡೀಬೇಡ ಎಂದು ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

ರಾಯಚೂರು: ಕುಡಿಬೇಡ ಎಂದೂ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ. ಮಾಡಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಆದರ್ಶ(24) ಎಂಬ ಯುವಕ ‌ ಪ್ರಾಣ ಕಳೆದುಕೊಂಡಿದ್ದಾರೆ.

ಆದರ್ಶ ಪ್ರತಿ ದಿನವೂ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಮನೆಯವರು ಆದರ್ಶನಿಗೆ ಬುದ್ಧಿವಾದ ಹೇಳಿದ್ದರು. ಆದರೆ, ಆದರ್ಶ ಮಾತ್ರ ಬುದ್ಧಿವಾದವನ್ನೇ ಅವಮಾನ ಎಂದು ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯ ಬಾತ್ ರೂಮ್‌ನಲ್ಲಿರುವ ಪೈಪ್ ಗೆ ಹಗ್ಗ ಹಾಕಿ ಆತ್ಮಹತ್ಯೆ ಮಾಡಿದ್ದಾನೆ.

ಆದರ್ಶ ಮಾನ್ವಿ ಪಟ್ಟಣದಲ್ಲಿ ಹೇರ್ ಕಟಿಂಗ್ ಶಾಪ್ ಹೊಂದಿದ್ದ. ಇದೀಗ ಬುದ್ಧಿ ಮಾತಿಗೇ ಪ್ರಾಣ ಕಳೆದುಕೊಂಡ ಮಗನನ್ನು ನೆನಪು ಮಾಡಿಕೊಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಕುಡಿದೋ ಇನ್ನೊಂದೋ ಹೇಗಾದರೂ ಬದುಕಿಕೊಂಡಿರುತ್ತಿದ್ದ. ಈಗ ಬುದ್ಧಿ ಹೇಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರುವುದು ಅವರಿಗೆ ಬೇಸರ ತಂದಿದೆ.
ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಳಗಾವಿ

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

Baby Death : ಮೂರು ವರ್ಷದ ಮಗುವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಮಗುವು ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಗಿದೆ ಎಂದು ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸುತ್ತಿದ್ದಾರೆ.

VISTARANEWS.COM


on

By

murder case in Belgavi
ರಾಯಣ್ಣ ಮತ್ತು ಆತನ ಎರಡನೇ ಪತ್ನಿ ಸಪ್ನಾ. ಮೊದಲ ಪತ್ನಿ ಮಗು ಸಮೃದ್ದಿ ಮೃತ ದುರ್ದೈವಿ
Koo

ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ (Baby Death) ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಲತಾಯಿಯೇ 3 ವರ್ಷದ ಮಗುವನ್ನು ಕೊಂದಿದ್ದಾಳೆ (Murder case) ಎನ್ನಲಾಗಿದೆ. ಸಮೃದ್ಧಿ(3) ಮೃತ ದುರ್ದೈವಿ. ಮಲತಾಯಿ ಸಪ್ನಾ ರಾಯಣ್ಣ ನಾವಿ ಎಂಬಾಕೆ ಕೊಲೆ ಆರೋಪ ಎದುರಿಸುತ್ತಿರುವ ಮಲತಾಯಿ ಆಗಿದ್ದಾಳೆ. ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಗ್ರಾಮದಲ್ಲಿ ಘಟನೆ ನಡೆದಿದೆ.

ಮಗುವಿನ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ್ದಾಗಿ ಸಮೃದ್ಧಿಯ ಅಜ್ಜಿ ಹಾಗೂ ಚಿಕ್ಕಪ್ಪ ಆರೋಪಿಸಿದ್ದಾರೆ. ಸಮೃದ್ಧಿ ತಂದೆ ರಾಯಣ್ಣ ಸಿಆರ್‌ಪಿಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೊದಲ ಪತ್ನಿ ನಿಧನದ ನಂತರ ಎರಡನೇ ಮದುವೆಯಾಗಿದ್ದರು. ಇದೀಗ ರಾಯಣ್ಣನ 2ನೇ ಪತ್ನಿ ಸಪ್ನಾ ಎಂಬಾಕೆ ಸಮೃದ್ದಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Murder case in Belgavi
ರಾಯಣ್ಣ ಹಾಗೂ ಮೊದಲ ಪತ್ನಿ ಭಾರತಿ ನಾವಿ, ಆಕೆಯ ಮಗಳು ಸಮೃದ್ದಿ

ಮೊದಲ ಪತ್ನಿ ಕೊಲೆ ಆರೋಪ ಎದುರಿಸುತ್ತಿರುವ ಕುಟುಂಬ

ಈಗಾಗಲೇ ಮೊದಲ ಪತ್ನಿ ಭಾರತಿ ನಾವಿ ಕೊಲೆ ಆರೋಪವನ್ನು ರಾಯಣ್ಣ ಹಾಗೂ ಆತನ ಕುಟುಂಬಸ್ಥರು ಎದುರಿಸುತ್ತಿದ್ದಾರೆ. ಪತಿ ರಾಯಣ್ಣ ಹಾಗೂ ತಾಯಿ ಶೋಭಾ ಹಾಗೂ ತಂಗಿ ರೂಪಾ ವಿರುದ್ಧ 2021ರಲ್ಲಿ ಮೃತ ಭಾರತಿ ನಾವಿ ಕುಟುಂಬಸ್ಥರು ನಾಗಪುರದ ಕಾರದಾ ಠಾಣೆಯಲ್ಲಿ ದಾಖಲಿಸಿದ್ದಾರೆ. ಆ ಪ್ರಕರಣದಲ್ಲೂ ರಾಯಣ್ಣ ನಾವಿ ಕುಟುಂಬ ಆರೋಪಿಯಾಗಿದ್ದರು. ಅಂದು ತಾಯಿ ಕೊಂದರು, ಇಂದು ಆಕೆಯ ಮಗಳು ಸಮೃದ್ಧಿಯನ್ನೂ ಕೊಂದಿದ್ದಾರೆ ಎಂದು ಮೊದಲ ಪತ್ನಿ ಕುಟುಂಬಸ್ಥರು ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Drowned In water : ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು

ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

ಕೊಯಂಬತ್ತೂರ್‌: ಕಳೆದ ತಿಂಗಳು ಅಪಾರ್ಟ್‌ಮೆಂಟ್‌(Apartment)ನ ಕಿಟಕಿಯಿಂದ ವಿಂಡೋ ಪೋರ್ಚ್‌(Window Porch) ಮೇಲೆ ಬಿದ್ದು, ಪವಾಡ ಸದೃಶ್ಯವಾಗಿ ಬದುಕಿ ಬಂದ ಏಳು ತಿಂಗಳ ಮಗುವಿನ(Toddler) ತಾಯಿ ಇದೀಗ ಆತಹತ್ಯೆಗೆ ಶರಣಾಗಿದ್ದಾಳೆ(Viral News). ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ಮಗು ಅದೃಷ್ಟವಶಾತ್‌ ಅಲ್ಲೇ ನೇತಾಡಿಕೊಂಡು ಸ್ಥಳೀಯರ ಸಹಾಯದಿಂದ ಬದುಕುಳಿದಿತ್ತು.

ಈ ಘಟನೆ ಬಳಿಕ ಮಗುವಿನ ತಾಯಿ ರಮ್ಯಾ ತೀರ ಖಿನ್ನತೆಗೊಳಗಾಗಿದ್ದರು. ತನ್ನ ಅಜಾಗುರೂಕತೆಯಿಂದ ದುರಂತ ಸಂಭವಿಸಿದೆ ಎಂಬುದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಇನ್ನು ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ಎಲ್ಲರೂ ರಮ್ಯಾಳ ಅಜಾಗುರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ರಮ್ಯಾ ಖಿನ್ನತೆಗೊಳಗಾಗಿದ್ದರು. ಇದನ್ನು ಗಮನಿಸಿದ ಆಕೆಯ ಪತಿ ವೆಂಕಟೇಶ್‌ ಕೊಯಂಬತ್ತೂರ್‌ನಲ್ಲಿರುವ ಆಕೆಯ ತವರು ಮನೆಗೆ ಕರೆದುಕೊಂಡು ಬಂದಿದ್ದರು.

ಭಾನುವಾರ ರಮ್ಯಾಳನ್ನು ಒಬ್ಬಳೇ ಮನೆಯಲ್ಲಿ ಬಿಟ್ಟು ಎಲ್ಲರೂ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ವಾಪಸ್‌ ಮನೆಗೆ ಬಂದಾಗ ರಮ್ಯಾ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ಇನ್ನು ಆಕೆಯ ಸಾವಿಗೆ ಕಾರಣ ಏನೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಆಕೆ ಏನಾದರೂ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಏ.28ರಂದು ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಮಗುವಿನ ರಕ್ಷಣೆಗೆ ಧಾವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಂಡೋ ಪೋರ್ಚ್‌ ಮೇಲೆ ಬಿದ್ದಿ ಮಗುವಿನ ರಕ್ಷಣೆಗೆ ದೌಡಾಯಿಸಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತೊಂದು ಕಿಟಕಿಯಿಂದ ಹೊರಬಂದು ಮಗುವನ್ನು ರಕ್ಷಿಸಿಲು ಹರಸಾಹನ ಪಟ್ಟರು. ನಾಲ್ಕೈದು ಜನ ಕಿಟಕಿಯ ಹೊರ ಭಾಗದಲ್ಲಿರುವ ಸಣ್ಣ ಜಾಗದಲ್ಲಿ ನಿಂತು ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಕ್ಷಿಸಿದ್ದಾರೆ. ಇನ್ನು ಕೆಳಗೆ ಅನೇಕ ಜನ ದೊಡ್ಡ ಬಟ್ಟೆಯೊಂದು ಹಿಡಿದು ಮಗುವಿನ ರಕ್ಷಣೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು, ಅಚಾನಕ್ಕಾಗಿ ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದಿದ್ದ 7 ತಿಂಗಳಿನ ಮಗುವನ್ನು ಬಹಳ ಜಾಣ್ಮೆಯಿಂದ ರಕ್ಷಿಸಿದ್ದಾರೆ. ಅವರ ಕಾರ್ಯಕ್ಕೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

‌Rave Party: ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದಾರೆ. ಡ್ರಗ್ಸ್‌ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಸದ್ಯ ಫಾರ್ಮ್ ಹೌಸಿನ ಇಂಚಿಂಚನ್ನೂ ಬಿಡದೆ ಜಾಲಾಡುತ್ತಿದ್ದಾರೆ.

VISTARANEWS.COM


on

rave party telugu actress hema
Koo

ಬೆಂಗಳೂರು: ನಿನ್ನೆ ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದ ರೇವ್‌ ಪಾರ್ಟಿಯಲ್ಲಿ (Rave party) ತೆಲುಗು ನಟಿ ಹೇಮಾ (telugu actress Hema) ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಲ್ಲಿ ತಾನಿರಲಿಲ್ಲ ಎಂದು ಹೇಮಾ ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ.

ಮೂಲಗಳ ಪ್ರಕಾರ, ಮುಜುಗರ ತಪ್ಪಿಸಲು ಅದೇ ಫಾರಂ ಹೌಸ್‌ನಲ್ಲೇ ವಿಡಿಯೋ ಚಿತ್ರೀಕರಿಸಿ ಅವರು ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್‌ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ನಟಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಕಮೋಡ್‌ನಲ್ಲಿ ಫ್ಲಶ್‌ ಮಾಡಿದರು!

ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದಾರೆ. ಡ್ರಗ್ಸ್‌ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಸದ್ಯ ಫಾರ್ಮ್ ಹೌಸಿನ ಇಂಚಿಂಚನ್ನೂ ಬಿಡದೆ ಜಾಲಾಡುತ್ತಿದ್ದಾರೆ.

3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಪೊಲೀಸರು ರೇವ್‌ ಪಾರ್ಟಿಯಲ್ಲಿದ್ದ 101 ಮಂದಿಯನ್ನೂ ಕೂರಿಸಿಕೊಂಡು, ಯಾರ್ಯಾರು ಡ್ರಗ್ಸ್‌ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಿದ್ದಾರೆ. ಮೆಡಿಕಲ್‌ ಟೀಮನ್ನು ಫಾರಂ ಹೌಸ್‌ಗೆ ಕರೆಸಲಾಗಿದ್ದು, ಮೆಡಿಕಲ್‌ ಮುಗಿಯುವವರೆಗೆ ಎಲ್ಲ ಅತಿಥಿಗಳನ್ನೂ ಫಾರಂ ಹೌಸ್‌ ತೊರೆಯದಂತೆ ನಿರ್ಬಂಧಿಸಲಾಗಿದೆ. ಸದ್ಯ 30 ಜನ ಹುಡುಗಿಯರು, 71 ಜನ ಪುರುಷರು ಹೀಗೆ ಒಟ್ಟು 101 ಜನರ ವಿಚಾರಣೆ ನಡೆಯುತ್ತಿದೆ.

ಪಾರ್ಟಿ ಆಯೋಜಕ, ಆರೋಪಿ ವಾಸು ಇದೀಗ ಪೊಲೀಸರಿಂದ ಬಚಾವಾಗಲು ʼನಾನು ಪಾರ್ಟಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದಿದ್ದೇನೆಂದುʼ ಸುಳ್ಳು ಹೇಳಿಕೆ ನೀಡಿದ್ದಾನೆ. ಆದರೆ ಫಾರ್ಮ್ ಹೌಸ್ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಪಾರ್ಟಿಗೆ ಬಂದವರು ಫಾರ್ಮ್ ಹೌಸ್ ಒಳಗೆ ಹೋಗಬೇಕಾದರೆ ಸೆಕ್ಯೂರಿಟಿಗೆ ಪಾಸ್ ವರ್ಡ್ ಹೇಳಬೇಕಿತ್ತು. ವಾಸು ನೀಡಿದ ಪಾಸ್‌ವರ್ಡ್ ಹೇಳಿದರೆ ಮಾತ್ರ ಒಳಗೆ ಎಂಟ್ರಿಯಾಗಬಹುದಿತ್ತು. ಡ್ರಗ್ ಪಾರ್ಟಿ ಹಿನ್ನೆಲೆಯಲ್ಲಿ ಬೇರೆ ಯಾರಾದರು ಬರದಿರಲಿ ಎಂಬ ಕಾರಣಕ್ಕೆ ವಾಸು ಪಾಸ್‌ವರ್ಡ್ ನೀಡಿದ್ದ.

ಫಾರಂ ಹೌಸ್‌ನಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಎಂಡಿಎಂಎ, ಕ್ಯಾಪ್ಸೂಲ್, ಕೊಕೇನ್ ಇತ್ಯಾದಿ ಮಾದಕ ವಸ್ತುಗಳು ದೊರೆತಿವೆ. 45 ಗ್ರಾಂನಷ್ಟು ಡ್ರಗ್ ವಶಕ್ಕೆ ಪಡೆಯಲಾಗಿದೆ. 1 ಗ್ರಾಂ ಕೊಕೇನ್‌ಗೆ 8ರಿಂದ 9 ಸಾವಿರ ರೂ. ದರವಿದೆ. ಇಂತಹ ಕೊಕೇನ್ ಭಾರಿ ಪ್ರಮಾಣದಲ್ಲಿ ಪಾರ್ಟಿಯಲ್ಲಿ ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಡ್ರಗ್ಸ್‌ನ ಮೌಲ್ಯ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ.

ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಳೆದಂಡಿ ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದ ವಾಸು ಈ ಹಿಂದೆ ಕೂಡ ಇದೇ ರೀತಿಯ ರೇವ್ ಪಾರ್ಟಿ ಮಾಡಿರುವ ಶಂಕೆ ಇದೆ. ಇನ್ನಷ್ಟು ಡ್ರಗ್ ಪೆಡ್ಲರ್‌ಗಳ ಪತ್ತೆಗೆ ಸಿಸಿಬಿ ಮುಂದಾಗಿದೆ.

ಕಳೆದ ಶುಕ್ರವಾರದಿಂದಲೇ ಪಾರ್ಟಿಗೆ ಸಿದ್ಧತೆ ನಡೆದಿತ್ತು. ಪಾರ್ಟಿಯಲ್ಲಿ ಭಾಗಿಯಾಗಿರುವ ಬಹುತೇಕರು ಆಂಧ್ರ ಮೂಲದ ಉದ್ಯಮಿಗಳು. ಖ್ಯಾತ ಹೋಟೆಲ್‌ಗಳ ಮಾಲೀಕರ ಮಕ್ಕಳು, ತೆಲುಗು ಸಿನಿರಂಗದ ಕಲಾವಿದರು, ಮಾಡೆಲ್‌ಗಳು, ದಕ್ಷಿಣಭಾರತದ ಖ್ಯಾತ ಡಿಜೆಗಳು ಭಾಗಿಯಾಗಿದ್ದಾರೆ. ಆಂಧ್ರ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಬಿಝಿನೆಸ್ ಹೊಂದಿರುವ ಬಹುತೇಕರು ಇದ್ದರು. ಫಾರಂ ಹೌಸ್‌ನ ಹೊರಗೆ ನಿಂತಿರುವ ವಿಲಾಸಿ ವಾಹನಗಳಲ್ಲಿ ಆಂಧ್ರ ಮೂಲದ ವಾಹನಗಳೇ ಹೆಚ್ಚಿವೆ.

ನಿನ್ನೆ ಸಂಜೆ ಐದು ಗಂಟೆಯಿಂದಲೇ ಪಾರ್ಟಿ ಶುರುವಾಗಿದ್ದು, ಸ್ಥಳೀಯ ಪೊಲೀಸರ ಕರ್ತವ್ಯ ಲೋಪ ಗಮನಿಸಲಾಗಿದೆ. ಡ್ರಗ್ಸ್ ಪಾರ್ಟಿ ನಡೀತಿದ್ರೂ ಪೊಲೀಸರ ಗಮನಕ್ಕೆ ಬಂದಿಲ್ಲ. ಶುಕ್ರವಾರದಿಂದಲೇ ಪಾರ್ಟಿ ಸಿದ್ಧತೆ ನಡೆದಿದೆ. ಭಾರಿ ಪ್ರಮಾಣದಲ್ಲಿ ಡ್ರಗ್ ಸರಬರಾಜು ಆಗಿದೆ. ಡ್ರಗ್ ಪೆಡ್ಲರ್‌ಗಳ ಬಗ್ಗೆ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಮಾಹಿತಿ ಕಲೆ ಹಾಕುತ್ತಿದೆ.

ತನಿಖೆ ನಡೆಯುತ್ತಿದೆ

“ಬೆಂಗಳೂರು ಹೊರ ವಲಯದಲ್ಲಿ ನೂರು ಜನರನ್ನೊಳಗೊಂಡ ರೇವ್ ಪಾರ್ಟಿ ನಡೆದಿದೆ. ತಪಾಸಣೆ ವೇಳೆ ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳು ಪತ್ತೆಯಾಗಿವೆ. ಮಾದಕ ಸೇವನೆ ಬಗ್ಗೆ ತನಿಖೆ ನಡೆಯಲಾಗುತ್ತಿದೆ. ಎಫ್ಎಸ್ಎಲ್ ಹಾಗೂ ಸೋಕೋ ‌ಟೀಂನಿಂದ ತಪಾಸಣೆ ನಡೆಯಲಾಗುತ್ತಿದೆ. ಆಯೋಜಕ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿ. ಆರ್. ಪಾರ್ಮ್‌ಹೌಸ್‌ನ ಮಾಲೀಕರ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆʼʼ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.‌ಚಂದ್ರಗುಪ್ತಾ ಹೇಳಿಕೆ ಕೊಟ್ಟಿದ್ದಾರೆ.

Continue Reading

ದೇಶ

Murder Case: ತಾಜ್‌ ಮಹಲ್‌ ಸಮೀಪದಲ್ಲೇ ಘೋರ ಕೃತ್ಯ; ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

Murder Case: ತಾಜ್‌ ಮಹಲ್‌ ಸಮೀಪದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಅರೆನಗ್ನಾವಸ್ಥೆಯಲ್ಲಿ 22ವರ್ಷದ ಯುವತಿ ಮೃತದೇಹ ಪತ್ತೆಯಾಗಿದೆ. ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಗೆ ಬಂದವರು ಮೃತದೇಹ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆಗೆ ಕೈಗೆತ್ತಿಕೊಂಡಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

VISTARANEWS.COM


on

Murder case
Koo

ಉತ್ತರಪ್ರದೇಶ :ವಿಶ್ವ ವಿಖ್ಯಾತ ತಾಜ್‌ಮಹಲ್‌(Taj Mahal) ಸಮೀಪದಲ್ಲೇ ಇರುವ ಮಸೀದಿಯಲ್ಲಿ ಯುವತಿಯ ಮೃತದೇಹ(dead body) ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಇಲ್ಲಿನ ನಾಗ್ಲಾ ಪೈಮಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಇದು ಕೊಲೆ(Murder Case) ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಂತಕನಿಗಾಗಿ ಬಲೆ ಬೀಸಿದ್ದಾರೆ.

ತಾಜ್‌ ಮಹಲ್‌ ಸಮೀಪದಲ್ಲಿರುವ ಮಸೀದಿಯಲ್ಲಿ ಈ ಘಟನೆ ನಡೆದಿದ್ದು, ಅರೆನಗ್ನಾವಸ್ಥೆಯಲ್ಲಿ 22ವರ್ಷದ ಯುವತಿ ಮೃತದೇಹ ಪತ್ತೆಯಾಗಿದೆ. ಪ್ರಾರ್ಥನೆ ಸಲ್ಲಿಸಲೆಂದು ಮಸೀದಿಗೆ ಬಂದವರು ಮೃತದೇಹ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆಗೆ ಕೈಗೆತ್ತಿಕೊಂಡಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಮಹಿಳೆ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯನ್ನು ಕೊಲೆಗೈದು ಮಸೀದಿಯಲ್ಲಿ ತಂದು ಬಿಸಾಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇನು ಹಂತಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇನ್ನು ಆ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮೃತದೇಹದ ಗುರುತು ಪತ್ತೆಗೆ ಯತ್ನಿಸುತ್ತಿದ್ದಾರೆ.

ಮುಖವನ್ನು ಸಂಪೂರ್ಣವಾಗಿ ಜಜ್ಜಿದ್ದ ಹಂತಕ

ಇನ್ನು ಹಂತಕ ಮೃತ ದುರ್ದೈವಿಯ ಮುಖವನ್ನು ಸಂಪೂರ್ಣವಾಗಿ ಕಲ್ಲಿನಿಂದ ಜಜ್ಜಿ ಕ್ರೌರ್ಯ ಮೆರೆದಿದ್ದಾನೆ. ಇನ್ನು ಮೃತದೇಹದಲ್ಲಿ ಸೊಂಟದ ಕೆಲಭಾಗ ಧರಿಸುವ ಬಟ್ಟೆ ಕಣ್ಮರೆಯಾಗಿದೆ. ಬಹುಷಃ ಮೃತ ಯುವತಿಗೂ ಹಂತಕನಿಗೂ ಮೊದಲೇ ಪರಿಚಯ ಇದ್ದಿರಬೇಕು. ಇದರ ಲಾಭ ಪಡೆದು ಕಿರಾತಕ ಆಕೆಯನ್ನು ಇಲ್ಲಿಗೆ ಕರೆತಂದು ಈ ದುಷ್ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ:Viral News: ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

Continue Reading

Lok Sabha Election 2024

Lok Sabha Election 2024: ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ; ಬಂಧಿತರಾಗಿದ್ದ 46 ಮಂದಿಗೆ ಜಾಮೀನು

Lok Sabha Election 2024: ಲೋಕಸಭೆ ಚುನಾವಣೆ ಸಮಯದಂದು ಚಾಮರಾಜನಗರದ ಇಂಡಿಗನತ್ತದಲ್ಲಿ ಮತ ಯಂತ್ರ ಪೀಸ್‌ ಪೀಸ್‌ ಮಾಡಿ ಮತಗಟ್ಟೆ ಧ್ವಂಸ ಮಾಡಿ ಬಂಧಿತರಾಗಿದ್ದ 46 ಮಂದಿಗೆ ಜಾಮೀನು ಸಿಕ್ಕಿದೆ.

VISTARANEWS.COM


on

By

Lok Sabha Election 2024
Koo

ಚಾಮರಾಜನಗರ: ಲೋಕಸಭೆ ಚುನಾವಣೆಯ (Lok Sabha Election 2024) ಮತದಾನದ ಸಮಯದಲ್ಲಿ ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದರು. ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 46 ಬಂಧಿತ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ವೆಂಕಟೇಶ್ ಬಂಧಿತರಿಗೆ ಜಾಮೀನು ನೀಡಿದ್ದಾರೆ. ಮತಗಟ್ಟೆ ಧ್ವಂಸ ಪ್ರಕರಣದಲ್ಲಿ 26 ಪುರುಷರು, 20 ಮಹಿಳೆಯರು ಬಂಧಿತರಾಗಿದ್ದರು. ಇದೀಗ ಎಲ್ಲರು ಜಾಮೀನು ಪಡೆದು ಹೊರಬಂದಿದ್ದಾರೆ. ಇದೇ ವೇಳೆ ತಮಗೆ ಮೂಲ ಸೌಕರ್ಯ ಕಲ್ಪಿಸಿ ಕೊಡಿ ಎಂದು ಇಂಡಿಗನತ್ತ ಗ್ರಾಮದ ಮಹಿಳೆಯರು ಕಣ್ಣೀರಿಟ್ಟರು.

Lok Sabha Election 2024 Villagers vandalise polling booth in Chamarajanagar

ಏನಿದು ಪ್ರಕರಣ?

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಳೆದ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ (First phase of polling) ನಡೆದಿತ್ತು. ಆ ದಿನ ಚಾಮರಾಜನಗರ ಲೋಕಸಭಾ ಕ್ಷೇತ್ರದ (Chamarajanagar Lok Sabha constituency) ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕರಿಸಲಾಗಿತ್ತು. ಇದೇ ವೇಳೆ ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆಯನ್ನೇ ಧ್ವಂಸ ಮಾಡಲಾಗಿತ್ತು.

ಎಷ್ಟು ಬಾರಿ ಮನವಿ ಮಾಡಿದರೂ ಈ ಗ್ರಾಮಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಲಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಈ ರಾಜಕಾರಣಿಗಳಿಗೆ ನಮ್ಮ ನೆನಪಾಗುತ್ತದೆ. ಅದಾದ ಬಳಿಕ ನಮ್ಮನ್ನು ಕೇಳುವವರೇ ಇಲ್ಲ ಎಂದು ಆರೋಪಿಸಿ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದರು.

ಮತಯಂತ್ರ ಧ್ವಂಸ ಮಾಡಿದ್ದ ಗ್ರಾಮಸ್ಥರು

ಇನ್ನು ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದರು. ಮತದಾನದಿಂದ ದೂರ ಉಳಿದ ಗ್ರಾಮಸ್ಥರಿಂದ ಈ ಕೃತ್ಯ ನಡೆದಿತ್ತು. ಈ ವೇಳೆ ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದರು.

Lok Sabha Election 2024 Villagers vandalise polling booth in Chamarajanagar

ಲಾಠಿ ಚಾರ್ಚ್‌; ಹಲವರಿಗೆ ಗಾಯ

ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿತ್ತು. ಪುರುಷರು, ಮಹಿಳೆಯರು ಎನ್ನದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದರು.

ಇದನ್ನೂ ಓದಿ: Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?

85 ಮಂದಿಯಲ್ಲಿ ಮತ ಚಲಾಯಿಸಿದ್ದು ಇಬ್ಬರೇ!

ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸಿಕೆರೆ ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗಿತ್ತು. ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದರು. ಉಳಿದಂತೆ ಮತಗಟ್ಟೆಗಳತ್ತ ಯಾರೊಬ್ಬರೂ ಸುಳಿದಿರಲಿಲ್ಲ.

ನೀರು, ರಸ್ತೆ, ವಿದ್ಯುತ್‌ ಏನೂ ಇಲ್ಲ!

ಕನಿಷ್ಠ ಮೂಲಭೂತ ಸೌಕರ್ಯವನ್ನೂ ನೀಡಲಾಗಿಲ್ಲ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಎಲ್ಲವೂ ಇಲ್ಲಿ ಮರೀಚಿಕೆಯಾಗಿದೆ. ಕೆಲವು ದಿನಗಳ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೂ, ಯಾವೊಂದು ಭರವಸೆ ಸಿಗದೇ ಇರುವ ಹಿನ್ನೆಲೆಯಲ್ಲಿ ಮತದಾನವನ್ನು ಬಹಿಷ್ಕಾರ ಮಾಡುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Prajwal should appear before SIT and face probe says Nikhil Kumaraswamy
ಕರ್ನಾಟಕ6 mins ago

Nikhil Kumaraswamy: ಪ್ರಜ್ವಲ್‌ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುವುದೇ ಸೂಕ್ತ: ನಿಖಿಲ್‌ ಕುಮಾರಸ್ವಾಮಿ

Karnataka Rain
ಮಳೆ9 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Survival Story
ವಿದೇಶ20 mins ago

Survival Story: ಆ 17 ದಿನಗಳು…ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ

Lok Sabha Election 2024
ದೇಶ21 mins ago

Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಲಕ್ಕೂರು ಆನಂದ lakkuru Anand
ಶ್ರದ್ಧಾಂಜಲಿ43 mins ago

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

Prajwal Revanna Case Shivarame Gowdas Deve Gowda suicide statement says Nikhil Kumaraswamy
ರಾಜಕೀಯ47 mins ago

Prajwal Revanna Case: ಶಿವರಾಮೇಗೌಡರ ದೇವೇಗೌಡ ಆತ್ಮಹತ್ಯೆ ಹೇಳಿಕೆ; ನಿಖಿಲ್‌ ಕುಮಾರಸ್ವಾಮಿ ಕೆಂಡ

murder case in Belgavi
ಬೆಳಗಾವಿ59 mins ago

Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

rave party telugu actress hema
ಕ್ರೈಂ1 hour ago

‌Rave Party: ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ ತೆಲುಗು ನಟಿ; ಐವರ ಬಂಧನ

Payal Rajput Accuses Rakshana Producers Of Not Clearing Her Dues
ಟಾಲಿವುಡ್1 hour ago

Payal Rajput: ನಿರ್ಮಾಪಕನ ವಿರುದ್ಧ ‘ಹೆಡ್‌ಬುಷ್’ ನಟಿಯ ಗಂಭೀರ ಆರೋಪ!

Salman Khan Ultimate Sex Symbol Says Malaika Arora
ಬಾಲಿವುಡ್1 hour ago

Salman Khan: ʻಅಲ್ಟಿಮೇಟ್ ಸೆಕ್ಸ್ ಸಿಂಬಲ್ʼ ನನ್ನ ಗಂಡ ಅಲ್ಲ, ಅದು ಸಲ್ಮಾನ್‌ ಖಾನ್‌ ಎಂದಳು ಖ್ಯಾತ ನಟಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ9 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ22 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ23 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ24 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌