Site icon Vistara News

Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು

Uttara Kannada District Court

#image_title

ಕಾರವಾರ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ (Karwar News) ಆರೋಪಿಗಳಾದ ವಾಣಿಜ್ಯ ತೆರಿಗೆ ಅಧಿಕಾರಿ ರಾಜು ಪವಾರ ಮತ್ತು ನಿವೃತ್ತ ಅಧಿಕಾರಿ ಶಿವಾನಂದ ನಾಯ್ಕ ಎಂಬುವವರಿಗೆ ನ್ಯಾಯಾಲಯ 2 ವರ್ಷ ಶಿಕ್ಷೆ ಮತ್ತು 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕಳೆದ 2014ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ನೌಕರೆಯೊಬ್ಬರು ಈ ಇಬ್ಬರು ಆರೋಪಿತರು ಲೈಂಗಿಕ ಕಿರುಕುಳ ನೀಡಿದ ಕುರಿತು ದೂರು ದಾಖಲಿಸಿದ್ದರು‌. ಅದರಂತೆ ಸಿಜೆಎಮ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ್ದು ಈ ಸಂಬಂಧ ಆರೋಪಿತರಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಆರೋಪಿತ ವಾಣಿಜ್ಯ ತೆರಿಗೆ ಅಧಿಕಾರಿ ರಾಜು ಪವಾರ ಸದ್ಯ ಕುಮಟಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಬ್ಬ ಆರೋಪಿ ಶಿವಾನಂದ ನಾಯ್ಕ ನಿವೃತ್ತಿ ಹೊಂದಿದ್ದು, ಇಬ್ಬರ ವಿರುದ್ಧದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶರಾದ ರೇಷ್ಮಾ ರೋಡ್ರಿಗ್ರೀಸ್ ಕಲಂ 354, 354(A), 506 ಸಹಿತ 34 ಐಪಿಸಿ ಅಡಿ ಆರೋಪಿಗಳಿಗೆ ತಲಾ ಎರಡು ವರ್ಷ ಕಾರಾಗೃಹ ವಾಸ ಮತ್ತು 15 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಇದನ್ನೂ ಓದಿ | Karwar Accident: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

ಸರ್ಕಾರದ ಪರವಾಗಿ ಕಾರವಾರದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಮಂಜುನಾಥ ಹೊನ್ನಯ್ಯ ನಾಯ್ಕ ವಾದ ಮಂಡಿಸಿದ್ದರು.

Exit mobile version