Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು - Vistara News

ಉತ್ತರ ಕನ್ನಡ

Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು

Karwar News: ಕಾರವಾರದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಹಾಗೂ ನಿವೃತ್ತ ಅಧಿಕಾರಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಜೆಎಮ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

VISTARANEWS.COM


on

Uttara Kannada District Court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾರವಾರ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ (Karwar News) ಆರೋಪಿಗಳಾದ ವಾಣಿಜ್ಯ ತೆರಿಗೆ ಅಧಿಕಾರಿ ರಾಜು ಪವಾರ ಮತ್ತು ನಿವೃತ್ತ ಅಧಿಕಾರಿ ಶಿವಾನಂದ ನಾಯ್ಕ ಎಂಬುವವರಿಗೆ ನ್ಯಾಯಾಲಯ 2 ವರ್ಷ ಶಿಕ್ಷೆ ಮತ್ತು 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕಳೆದ 2014ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ನೌಕರೆಯೊಬ್ಬರು ಈ ಇಬ್ಬರು ಆರೋಪಿತರು ಲೈಂಗಿಕ ಕಿರುಕುಳ ನೀಡಿದ ಕುರಿತು ದೂರು ದಾಖಲಿಸಿದ್ದರು‌. ಅದರಂತೆ ಸಿಜೆಎಮ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ್ದು ಈ ಸಂಬಂಧ ಆರೋಪಿತರಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಆರೋಪಿತ ವಾಣಿಜ್ಯ ತೆರಿಗೆ ಅಧಿಕಾರಿ ರಾಜು ಪವಾರ ಸದ್ಯ ಕುಮಟಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಬ್ಬ ಆರೋಪಿ ಶಿವಾನಂದ ನಾಯ್ಕ ನಿವೃತ್ತಿ ಹೊಂದಿದ್ದು, ಇಬ್ಬರ ವಿರುದ್ಧದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶರಾದ ರೇಷ್ಮಾ ರೋಡ್ರಿಗ್ರೀಸ್ ಕಲಂ 354, 354(A), 506 ಸಹಿತ 34 ಐಪಿಸಿ ಅಡಿ ಆರೋಪಿಗಳಿಗೆ ತಲಾ ಎರಡು ವರ್ಷ ಕಾರಾಗೃಹ ವಾಸ ಮತ್ತು 15 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಇದನ್ನೂ ಓದಿ | Karwar Accident: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

ಸರ್ಕಾರದ ಪರವಾಗಿ ಕಾರವಾರದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಮಂಜುನಾಥ ಹೊನ್ನಯ್ಯ ನಾಯ್ಕ ವಾದ ಮಂಡಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ರಾಜ್ಯದಲ್ಲಿಂದು ಬಿಸಿಲು, ಮಳೆ, ಗಾಳಿ ಒಟ್ಟೊಟ್ಟಿಗೆ ದಾಳಿ

Rain News : ಒಳನಾಡಿನಲ್ಲಿ ಮಳೆ ಜತೆಗೆ ತಾಪಮಾನ ಏರಿಕೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Rain alert issued for Ramanagara and Kalaburagi Rising temperature in coastal areas
Koo

ಬೆಂಗಳೂರು: ರಾಜ್ಯದಲ್ಲಿಂದು ಬಿಸಿಲು, ಮಳೆ, ಗಾಳಿ ಮೂರು ಒಟ್ಟೊಟ್ಟಿಗೆ ದಾಳಿ ಮಾಡಲಿದೆ.ಮಂಗಳವಾರ ಒಳನಾಡಲ್ಲಿ ರಾಮನಗರ ಮತ್ತು ಕಲಬುರಗಿಯಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಸಾಧ್ಯತೆ ಇದೆ. ಉಳಿದಂತೆ ಮಲೆನಾಡು, ಕರಾವಳಿಯಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಮಂಡ್ಯ ಮತ್ತು ಮೈಸೂರಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಹಾವೇರಿ, ಕೊಪ್ಪಳ, ದಾವಣಗೆರೆಯಲ್ಲಿ ಗರಿಷ್ಠ ತಾಪಮಾನವು ದುಪ್ಪಟ್ಟಾಗಲಿದೆ. ಕರಾವಳಿಯ ಪಣಂಬೂರು ತಾಪಮಾನ ಏರಿಕೆ ಆಗಲಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ರಾಜಧಾನಿ ಬೆಂಗಳೂರಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಬಹುದು. ಉಳಿದಂತೆ ಬಿಸಿಲ ಧಗೆಯು ಸುಸ್ತು ಮಾಡಲಿದೆ. ರಾತ್ರಿಯಂದು ಬಿಸಿ ಗಾಳಿ ಬೀಸಲಿದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Public Exam: 5,8,9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಅಯೋಮಯ; ತೀರ್ಪು ಕಾದಿರಿಸಿದ ಹೈಕೋರ್ಟ್‌

ಬೇಸಿಗೆ ಬರುತ್ತಿದ್ದಂತೆ ನಮ್ಮ ದೇಹ ಬಯಸುವ ಆರೋಗ್ಯಕರ ಪೇಯಗಳಿವು!

ಚಳಿಗಾಲದ ಚಳಿಯಲ್ಲಿ ಬೆಚ್ಚಗೆ ಇದ್ದು, ಈಗ ಇದ್ದಕ್ಕಿದ್ದಂತೆ ಹವಾಮಾನ ಬದಲಾಗುತ್ತಾ ದೇಹ ಮನಸ್ಸು ಅದಕ್ಕೆ ಒಗ್ಗಿಸಿಕೊಳ್ಳಬೇಕಾಗುತ್ತದೆ. ಪ್ರಕೃತಿಯಲ್ಲಿ ಋತು ಬದಲಾವಣೆ ಸಾಮಾನ್ಯ. ಮುಖ್ಯವಾಗಿ ಚಳಿಯಲ್ಲಿ ಮುದುಡಿದ್ದ ದೇಹಕ್ಕೆ ಸೂರ್ಯನ ಬಿಸಿಲನ್ನು ಸರಿಯಾಗಿ ಕಾಣದೆ ಇದ್ದ ಮಂದಿಗೆ ಸ್ವಲ್ಪ ಸ್ವಲ್ಪವೇ ಸೂರ್ಯನ ಬಿಸಿಲು ಮೈ ಸೋಕಿದಾಗ ಆಗುವ ಖುಷಿ ಬೇರೆಯೇ. ಆದರೆ, ಇದ್ದಕ್ಕಿದ್ದಂತೆ ಬದಲಾಗುವ ಹವಾಮಾನದಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಮ್ಮ ದೇಹ ಒಂದು ಋತುವಿನಿಂದ ಇನ್ನೊಂದು ಋತುವಿಗೆ ಬದಲಾಗುವ ಸಂದರ್ಭ ಸಹಜವಾಗಿಯೇ ಕೊಂಚ ಹೆಚ್ಚಿನ ಕಾಳಜಿಯನ್ನು ಬಯಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಪೇಯಗಳ ಸೇವನೆ, ಆಹಾರ ಸೇವನೆ ಎಲ್ಲವೂ ಅತ್ಯಂತ ಅಗತ್ಯವಾಗಿರುತ್ತದೆ. ಬನ್ನಿ, ಬೇಸಿಗೆ ಹತ್ತಿರ ಬರುತ್ತಿದ್ದಂತೆ ಯಾವೆಲ್ಲ ಪೇಯಗಳನ್ನು ನಾವು ಸೇವಿಸುವುದು ಆರೋಗ್ಯದ ದೃಷ್ಠಿಯಿಂದ ಅತ್ಯಂತ ಒಳ್ಳೆಯದು (Healthy Drinks For Summer) ಎಂಬುದನ್ನು ನೋಡೋಣ.

Coconut water Foods For Fight Against Dengue Fever

ಎಳನೀರು

ಬೇಸಿಗೆ ಬರುತ್ತಿದ್ದಂತೆ ಎಳನೀರು ಕುಡಿಯುವುದು ಅತ್ಯಂತ ಒಳ್ಳೆಯದು. ಎಳನೀರಿನಲ್ಲಿ ಸಾಕಷ್ಟು ಖನಿಜಾಂಶಗಳೂ ಸೇರಿದಂತೆ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ, ಬೇಸಗೆಯ ಕಾವು ಹೆಚ್ಚುತ್ತಿದ್ದಂತೆ ದೇಹಕ್ಕೆ ಬೇಕಾದ ತೇವಾಂಶವನ್ನು ನೀಡಿ ದೇಹವನ್ನು ತಂಪಾಗಿರಿಸುತ್ತದೆ. ಅಷ್ಟೇ ಅಲ್ಲ, ಬೇಸಗೆಯಲ್ಲಿ ಕಾಡುವ ಎದೆಯುರಿ, ಹೊಟ್ಟೆಯುಬ್ಬರ, ಗ್ಯಾಸ್‌, ಅಸಿಡಿಟಿ ಮತ್ತಿತರ ಸಮಸ್ಯೆಗಳಿಗೂ ಎಳನೀರಿನಲ್ಲಿ ಉತ್ತರವಿದೆ. ಜೀರ್ಣಕ್ರಿಯೆಯನ್ನೂ ಇದು ಸರಾಗವಾಗಿಸುತ್ತದೆ. ಬೆಳಗ್ಗಿನ ವಾಕಿಂಗ್‌ ಅಥವಾ ವರ್ಕೌಟ್‌ನ ಮೊದಲೇ ಎಳನೀರನ್ನು ಕುಡಿದರೆ, ಇದರ ಸಂಪೂರ್ಣ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ, ಪೋಷಕಾಂಶಗಳ ತಜ್ಞರು.

ಶುಂಠಿ ಹಾಗೂ ನೆಲ್ಲಿಕಾಯಿ ಶಾಟ್‌

ನಿಮ್ಮ ಏರಿದ ಮಧುಮೇಹದ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿಮಗೆ ಬೇಸಗೆಯಲ್ಲಿ ಕುಡಿಯಬಹುದಾದ ಡ್ರಿಂಕ್‌ ಎಂದರೆ ಅದು ನೆಲ್ಲಿಕಾಯಿ ಹಾಗೂ ಶುಂಠಿಯ ಶಾಟ್‌. ಬೆಳಗ್ಗೆ ಎದ್ದ ಕೂಡಲೇ, ನೆಲ್ಲಿಕಾಯಿ ಹಾಗೂ ಸ್ವಲ್ಪ ಶುಂಠಿಯನ್ನು ತುರಿದು, ಜ್ಯೂಸ್‌ ತೆಗೆದು ಹಾಗೆಯೇ ಕುಡಿಯುವುದು ಒಳ್ಲೆಯದು. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವೂ ಹತೋಟಿಗೆ ಬರುತ್ತದೆ. ಸುಮಾರು 30 ಎಂಎಲ್‌ಗಳಾಗುವಷ್ಟು ನೆಲ್ಲಿಕಾಯಿ ಶುಂಠಿ ಶಾಟ್‌ ನಿತ್ಯವೂ ಕುಡಿಯಬಹುದು. ನೆಲ್ಲಿಕಾಯಿಗೆ ಒಂದು ಚಮಚ ಶುಂಠಿರಸ ಸೇರಿಸಿದರೆ ಸಾಕು. ಪ್ರತಿದಿನ ಹೀಗೆ ಮಾಡಿ ಕುಡಿಯುವುದರಿಂದ ನಿಮ್ಮ ಆರೋಗ್ಯದಲ್ಲಿ ಗಣನೀಯ ಸುಧಾರಣೆಯನ್ನು ನೀವು ಕಾಣಬಹುದು.

ಬೂದುಗುಂಬಳ ಜ್ಯೂಸ್‌

ಬೇಸಿಗೆ ಹತ್ತಿರ ಬರುತ್ತಿದ್ದಂತೆ ಹಾಗೂ ಬೇಸಿಗೆಯ ಧಗೆಯಲ್ಲಿ ಕುಡಿಯಬಹುದಾದ ಹಾಗೂ ಕುಡಿಯಬೇಕಾದ ಡ್ರಿಂಕ್‌ ಎಂದರೆ ಅದು ಬೂದುಗುಂಬಳ ಜ್ಯೂಸ್‌. ಇದರಲ್ಲಿ ಅತೀ ಹೆಚ್ಚು ನೀರನಂಶ ಇರುವಿದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ತೇವಾಂಶ ನೀಡುತ್ತದೆ. ಸೊಪ್ಪು ತರಕಾರಿಗಳಲ್ಲೇ ಅತ್ಯಂತ ಆರೋಗ್ಯಕರ ಸರ್ವಗುಣ ಸಂಪನ್ನ ತಾಜಾ ಜ್ಯೂಸ್‌ ಮಾತಬಹುದಾದ ತರಕಾರಿ ಎಂದರೆ ಬೂದುಕುಂಬಳಕಾಯಿ. ಇದು ದೇಹವನ್ನು ಒಳಗಿನಿಂದಲೇ ತಂಪು ಮಾಡಿ, ಇಡೀ ದಿನ ದೇಹವನ್ನು ಉಲ್ಲಾಸದಾಯಕವನ್ನಾಗಿ ಮಾಡುತ್ತದೆ. ನಿಮಗೆ ಆಗಾಗ ಮಲಬದ್ಧತೆ, ಹೊಟ್ಟೆಯುಬ್ಬರ, ಎದುಯುರಿಯಂತಹ ಸಮಸ್ಯೆಗಳಿದ್ದರೆ, ನೀವು ನಿತ್ಯವೂ ಬೂದುಗುಂಬಳ ಜ್ಯೂಸ್‌ ಮಾಡಿ ಕುಡಿಯುವ ಮೂಲಕ ನಿಮ್ಮ ದಿನವನ್ನು ಆರಂಭಿಸಿ. ಖಂಡಿತವಾಗಿಯೂ ಈ ಸಮಸ್ಯೆಗಳಿಂದ ಮುಕ್ತರಾಗುವಿರಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Uttara Kannada News: ಖರೀದಿಗೂ ಮುನ್ನ ವಸ್ತುಗಳನ್ನು ಪರಿಶೀಲಿಸಿ; ನ್ಯಾ. ಮಾಯಣ್ಣ

Uttara Kannada News: ಕಾರವಾರ ನಗರದ ನಂದನಗದ್ದಾದ ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಗ್ರಾಹಕರ ಚಟುವಟಿಕೆ ಕಾರ್ಯಕ್ರಮ ಜರುಗಿತು.

VISTARANEWS.COM


on

World Consumer Day celebration in karwar
Koo

ಕಾರವಾರ: ಗ್ರಾಹಕರು ವಸ್ತುವಿನ ಗುಣಮಟ್ಟ, ಅವಧಿ, ಉತ್ಪನ್ನದ ವಿವರಗಳನ್ನು ಜವಾಬ್ದಾರಿ ನಾಗರಿಕನಾಗಿ ಪರಿಶೀಲಿಸಿ ಖರೀದಿಸಿದಾಗ, ಮೋಸ ಹೋಗುವುದನ್ನು ತಡೆಗಟ್ಟಬಹುದು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಯಣ್ಣ ಬಿ.ಎಲ್. (Uttara Kannada News) ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಇಲಾಖೆ, ಕರ್ನಾಟಕ ಆಹಾರ ನಿಗಮ ಹಾಗೂ ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ನಂದನಗದ್ದಾ ಇವರ ಸಹಯೋಗದಲ್ಲಿ ನಂದನಗದ್ದಾದ ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಗ್ರಾಹಕರಿಗೊಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ’ಎಂಬ ಘೋಷವಾಕ್ಯದೊಂದಿಗೆ ವಿಶ್ವ ಗ್ರಾಹಕರ ದಿನಾಚರಣೆ ಹಾಗೂ ಗ್ರಾಹಕರ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ಪಾದಕರು ಮತ್ತು ವ್ಯಾಪಾರಿಗಳು ಗ್ರಾಹಕರಿಗೆ ತಮ್ಮ ವಸ್ತುಗಳನ್ನು ಶೀಘ್ರವಾಗಿ ತಲುಪಿಸುವ ಅವಸರದಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿ ಆಕರ್ಷಕ ಜಾಹೀರಾತುಗಳನ್ನು ನೀಡುವ ಮೂಲಕ ಕಡಿಮೆ ಗುಣಮಟ್ಟದ ವಸ್ತುಗಳನ್ನು ಮಾರಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಗ್ರಾಹಕರು ಈ ಜಾಹೀರಾತುಗಳಿಗೆ ಮಾರುಹೋಗದೇ ಎಚ್ಚರದಿಂದ ಇರಬೇಕು ಎಂದರು.

ಇದನ್ನೂ ಓದಿ: Shivamogga News: ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ರಥೋತ್ಸವ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಹೆಚ್ಚಾಗಿ ಇ-ಕಾಮರ್ಸ್ ಮತ್ತು ಆನ್‌ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆ ಪಡೆಯುತ್ತಿದ್ದಾರೆ. ಗ್ರಾಹಕರಿಗೆ ತಾವು ಕೊಂಡುಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ ಪರಿಶೀಲನೆ ಮಾಡಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಮುಖ್ಯವಾಗಿದೆ. ತಾವು ಖರೀದಿಸಿದ ವಸ್ತುವಿನ ಗುಣಮಟ್ಟದಲ್ಲಿ ದೋಷ ಕಂಡುಬಂದರೆ ಅಥವಾ ಸೇವೆಯಲ್ಲಿ ನ್ಯೂನತೆ ಕಂಡು ಬಂದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ಗ್ರಾಹಕರು ತಮ್ಮ ಖರೀದಿಗೂ ಮುನ್ನ ಎಚ್ಚರ ವಹಿಸುವುದು ಅವಶ್ಯ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುತ್ತಾರೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು ಎಂದರು.

ಇದನ್ನೂ ಓದಿ: Karnataka Weather : ಬೇಸಿಗೆ ಬಿಸಿ ನಡುವೆಯು ಇಲ್ಲೆಲ್ಲ ಮಳೆಯ ಸಿಂಚನ

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ ರಾಯ್ಕರ್ ಮಾತನಾಡಿ, ಪ್ರತಿಯೊಬ್ಬ ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಎಲ್ಲವನ್ನು ಪರಿಶೀಲಿಸಿ ಖರಿದೀಸುವುದು ಉತ್ತಮ ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಾ. ಮಂಜುನಾಥ ಎಮ್ ಬಮ್ಮನಕಟ್ಟಿ ಮಾತನಾಡಿದರು.

ನ್ಯಾಯವಾದಿ ವಿ.ಎಂ.ಕುವಾಳೇಕರ್ ಮತ್ತು ಅಧ್ಯಾಪಕ ವಿಷ್ಣು ಕೆ ಪಟಗಾರ ಗ್ರಾಹಕರಿಗೊಸ್ಕರ ಗುಣಮಟ್ಟದ ಹಾಗೂ ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಸಂಬಂಧ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಇದನ್ನೂ ಓದಿ: Money Guide: ಪಾಸ್‌ಪೋರ್ಟ್‌ ನವೀಕರಣ ಈಗ ಸುಲಭ; ಆನ್‌ಲೈನ್‌ನಲ್ಲಿ ರಿನೀವಲ್‌ ಮಾಡುವ ವಿಧಾನ ಇಲ್ಲಿದೆ

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ನೈನಾ ಅಶೋಕ ಕಾಮಟೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ಡಿ ರೇವಣಕರ, ಜಿಲ್ಲಾ ಅಂಕಿತ ಅಧಿಕಾರಿ ಡಾ. ರಾಜಶೇಖರ ಪಾಳೆದವರ, ತೂಕ ಮತ್ತು ಅಳತೆ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ ಡಿ.ಎನ್, ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋವಿಂದಪ್ಪ ಆರ್. ಹಾಗೂ ಇತರರು ಇದ್ದರು.

Continue Reading

ಉತ್ತರ ಕನ್ನಡ

Uttara Kannada News: ಲೋಕಸಭಾ ಚುನಾವಣೆಗೆ ಯಲ್ಲಾಪುರ ಕ್ಷೇತ್ರದಲ್ಲಿ ಸಕಲ ಸಿದ್ಧತೆ: ಅಜ್ಜಪ್ಪ ಸೊಗಲದ

Uttara Kannada News: ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಚುನಾವಣೆಯನ್ನು ಯಾವುದೇ ಲೋಪದೋಷವಿಲ್ಲದೆ ನಡೆಸಲಾಗುವುದು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ತಿಳಿಸಿದ್ದಾರೆ.

VISTARANEWS.COM


on

Lok Sabha Election All preparations in Yallapur Assembly Constituency says Ajjappa Sogalada
Koo

ಯಲ್ಲಾಪುರ: ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಗಾಗಿ (Lok Sabha Election) ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ (Yallapura Assembly Constituency) ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಚುನಾವಣೆಯನ್ನು ಯಾವುದೇ ಲೋಪದೋಷವಿಲ್ಲದೆ ನಡೆಸಲಾಗುವುದು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ (Uttara Kannada News) ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಕಳೆದ 6 ತಿಂಗಳುಗಳಿಂದ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಗೆ ಧಕ್ಕೆ ಬರದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಅನಧಿಕೃತ ಚಟುವಟಿಕೆಗಳು ಕಂಡುಬಂದಲ್ಲಿ ಅಂತವರ ಮೇಲೆ ಕಾನೂನಿನ ಪ್ರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: Shivamogga News: ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿದ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ರಥೋತ್ಸವ

ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ 93,058 ಪುರುಷ ಹಾಗೂ 91,542 ಮಹಿಳಾ ಮತದಾರರು ಸೇರಿದಂತೆ ಒಟ್ಟೂ 1,84.600 ಮತದಾರರಿದ್ದಾರೆ. ಈ ಬಾರಿ ನಾಮಪತ್ರ ಸಲ್ಲಿಕೆಯ ಹಿಂದಿನ ದಿನದವರೆಗೂ ಮತದಾರರ ನೋಂದಣಿಗೆ ಅವಕಾಶವಿದ್ದು, ಏ.12 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಾರಿ ಮನೆಯಿಂದ ಮತ ಚಲಾವಣೆಗೆ 85 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದ್ದು, 85 ವರ್ಷ ಮೇಲ್ಪಟ್ಟವರ ಮನೆಗೆ ತೆರಳಿ ಮತ ಪಡೆಯಲಾಗುವುದು.

ಇದನ್ನೂ ಓದಿ: Ballari News: ನೀತಿ ಸಂಹಿತೆ ಉಲ್ಲಂಘನೆ; 430.96 ಲೀ. ಮದ್ಯ, 5 ವಾಹನ ವಶ

ಯಲ್ಲಾಪುರ- 96, ಮುಂಡಗೋಡ-90, ಶಿರಸಿ-47 ಒಟ್ಟು 233 ಮತಗಟ್ಟೆಗಳಿದ್ದು, 21 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕ್ಷೇತ್ರದಲ್ಲಿ 6 ಕಡೆ ಚೆಕ್‌ಪೋಸ್ಟ್‌ಗಳಿದ್ದು, ಕಿರವತ್ತಿ, ಅಗಡಿ, ಸನವಳ್ಳಿ, ಬಾಚಣಕಿ, ದಾಸನಕೊಪ್ಪ ಹಾಗೂ ತಿಗಡಿಯಲ್ಲಿ ಈಗಾಗಲೇ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಹೆಚ್ಚಿನ ನಗದು ಹಾಗೂ ಸಾಮಾಗ್ರಿ ಸಾಗಾಟ ಮಾಡುವವರು ಅವಶ್ಯಕ ದಾಖಲೆ ಹೊಂದಬೇಕಿದೆ. ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಕಾರ್ಯಗಳ ಮೇಲೆ ನಿಗಾ ವಹಿಸಲು 6 ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

Continue Reading

ಮಳೆ

Karnataka Weather : ಬೇಸಿಗೆ ಬಿಸಿ ನಡುವೆಯು ಇಲ್ಲೆಲ್ಲ ಮಳೆಯ ಸಿಂಚನ

Karnataka Weather Forecast : ರಾಜ್ಯಾದ್ಯಂತ ಬಿಸಿಲ ಧಗೆ ನಡೆವೆಯೂ ಮಳೆಯ ಸಿಂಚನವಾಗುತ್ತಿದೆ. ಇನ್ನೆರಡು ದಿನಗಳು ಒಳನಾಡಲ್ಲಿ ಮಳೆ (Rain News) ಸೂಚನೆ ಇದ್ದರೆ, ಕರಾವಳಿಯಲ್ಲಿ ಶುಷ್ಕ ವಾತಾವರಣವೇ (Dry Weather) ಇರಲಿದೆ.

VISTARANEWS.COM


on

By

rain likely to occur at isolated places over Interior Karnataka and Dry weather prevail over Coastal Karnataka
ಸಾಂದರ್ಭಿಕ ಚಿತ್ರ
Koo

ಬೆಂಗಳೂರು/ಕೊಡಗು: ಕಾದ ಕಾವಲಿಯಾಗಿದ್ದ ಕಾವೇರಿ ತವರು ಕೊಡಗಿನಲ್ಲಿ ಸೋಮವಾರ ಸಂಜೆ ಮಳೆ ತಂಪೆರೆದಿದೆ. ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಮಳೆಯ ಸಿಂಚನವಾಗಿದೆ. ಇತ್ತ ಮಡಿಕೇರಿ ತಾಲೂಕಿನ ನಾಪೋಕ್ಲು ಭಾಗದಲ್ಲೂ ವರ್ಷಾಧಾರೆಗೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಮಳೆಯಿಲ್ಲದೆ ಕಾಫಿ ಗಿಡಗಳು ಹಾಗೂ ಕಾಳುಮೆಣಸು ಬಳ್ಳಿ ಒಣಗುತ್ತಿದ್ದವು. ಸದ್ಯ ಮಳೆಯಿಂದಾಗಿ ಬೆಳಗಾರರಲ್ಲಿ ಸಂತಸ ಮೂಡಿದೆ.

ಮುಂದಿನ 24 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Rain News) ಬಹಳಷ್ಟು ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ದಕ್ಷಿಣ ಒಳನಾಡಿನ ರಾಮನಗರ ಮತ್ತು ಉತ್ತರ ಒಳನಾಡಿನ ಕಲಬುರಗಿಯಲ್ಲಿ ಮಳೆಯಾಗಬಹುದು.

ತಾಪಮಾನದ ಬಿಸಿ

ಕರಾವಳಿಯ ಪಣಂಬೂರು ಹಾಗೂ ಒಳನಾಡಿನ ಬಾಗಲಕೋಟೆ, ಹಾವೇರಿ, ಕೊಪ್ಪಳ, ದಾವಣಗೆರೆ ಹಾಗೂ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಉಳಿದಂತೆ ಬಿಸಿಲ ಧಗೆಯು ಸುಸ್ತು ಮಾಡಲಿದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Road Accident : ರಸ್ತೆ ತಿರುವಿನಲ್ಲಿತ್ತು ಆಪತ್ತು; ಬೈಕ್‌ ಸವಾರನ ಜೀವ ತೆಗೆದ ಟಿಪ್ಪರ್‌ ಲಾರಿ

ಬೀದರ್‌ನಲ್ಲಿ 4 ಸೆಂ.ಮೀ ಮಳೆ

ರಾಜ್ಯದಲ್ಲಿ ಭಾನುವಾರಂದು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಬೀದರ್ 4 ಸೆಂ.ಮೀನಷ್ಟು ಮಳೆಯಾಗಿರುವ ವರದಿ ಆಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇತ್ತು.

ಗರಿಷ್ಠ ಉಷ್ಣಾಂಶ 38.7 ಡಿ.ಸೆ ತುಮಕೂರಿನ ಚಿಕ್ಕನಹಳ್ಳಿಯಲ್ಲಿ ಎ ಡಬ್ಲ್ಯೂ ಎಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶ 17.3 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 17.9 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ರಾಮನಗರ ಮತ್ತು ಕೋಲಾರ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ನಿಂದ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾವೇರಿ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಹೋಳಿಯಲ್ಲಿ ಮಿಂದೇಳುವಾಗ ಕೂದಲು ಕಾಪಾಡಿಕೊಳ್ಳುವುದು ಹೇಗೆ?

ಹೋಳಿ (Holi 2024) ಹಬ್ಬದಂದು ಬಣ್ಣಗಳಲ್ಲಿ ಮಿಂದೇಳುವ ಬಯಕೆಯನ್ನು ಹತ್ತಿಕ್ಕುವುದು ಕಷ್ಟ. ವರ್ಷಕ್ಕೊಮ್ಮೆ ಬರುವ ರಂಗಿನಾಟ ನೀಡುವ ಖುಷಿಯೇ ಅಂಥದ್ದು. ಹಾಗೆಂದು ಬಣ್ಣಗಳಲ್ಲಿ ತೋಯ್ದ ಮೇಲೆ, ಆ ಬಣ್ಣಗಳಿಂದ ತ್ವಚೆ, ಕೂದಲುಗಳಿಗೆ ಆಗುವ ಹಾನಿಯನ್ನು ಸರಿ ಮಾಡಿಕೊಳ್ಳುವುದು ಇನ್ನೂ ಕಷ್ಟ. ಕೂದಲುಗಳಿಂದ ಬಣ್ಣ ತೆಗೆಯುವುದು, ತಲೆಯ ಚರ್ಮ ಒಣಗಿದಂತಾಗುವುದು, ಹೊಟ್ಟಾಗುವುದು, ತುರಿಕೆಯಂಥ ಕಿರಿಕಿರಿಗಳೇ ಮುಗಿಯುವುದಿಲ್ಲ.
ಇವುಗಳನ್ನೆಲ್ಲ ನಿವಾರಿಸುವುದಾಗಿ ಭರವಸೆ ನೀಡುವಂಥ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯಬಹುದು. ಆದರೆ ಇಂಥ ಎಷ್ಟೋ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಕೂದಲಿಗೆ ಆರೈಕೆ ಮಾಡುವ ಬದಲು ಹಾನಿ ಮಾಡುವ ಸಂದರ್ಭಗಳೇ ಹೆಚ್ಚು. ಹಾಗಾದರೆ ರಂಗಿನಾಟ ಬೇಡ ಎನ್ನುವುದೇ? ಅಗತ್ಯವಿಲ್ಲ! ಹಬ್ಬಕ್ಕೆ ಪೂರ್ವದಲ್ಲೇ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಬಣ್ಣದಾಟದ ನಂತರ ಇನ್ನಷ್ಟು ಆರೈಕೆ ಮಾಡಿದರೆ, ಕೂದಲಿಗೆ ಹಾನಿಯಾಗಿ ಉದುರದಂತೆ ಕಾಪಾಡಿಕೊಳ್ಳಬಹುದು. ಹೋಳಿಯಲ್ಲಿ ರಂಗಿನಾಟ ಆಡಿದಾಗ ಕೂದಲಿಗೆ ಹಾನಿಯಾಗದಂತೆ (Hair care tips for Holi) ಏನು ಮಾಡಬೇಕು?

Curry Leaves and Coconut Oil Hair Pack Discover the Best Herbal Hair Pack for Hair Growth

ಪೂರ್ವ ತಯಾರಿ

ಹಬ್ಬಕ್ಕೆ ಒಂದು ವಾರ ಮೊದಲಿನಿಂದಲೇ ಕೂದಲಿಗೆ ಆರೈಕೆ ಬೇಕು. ಮೊದಲಿನಿಂದಲೂ ಹೋಳಿ ಆಡುವಾಗ ದೇಹಕ್ಕೆಲ್ಲಾ ಚೆನ್ನಾಗಿ ಎಣ್ಣೆ ಲೇಪಿಸಿದ್ದರೆ ಬಣ್ಣ ಅಷ್ಟಾಗಿ ಅಂಟುವುದಿಲ್ಲ; ಒಂದೊಮ್ಮೆ ಅಂಟಿದರೂ ತೊಳೆಯುವುದು ಸುಲಭ ಎಂಬ ಮಾತಿದೆ. ಇದು ನಿಜಕ್ಕೂ ಹೌದು. ಕೂದಲಿಗೆ ಪ್ರತಿ ದಿನ ತಪ್ಪದಂತೆ ಕೊಬ್ಬರಿ ಎಣ್ಣೆ ಲೇಪಿಸಿ. ಸಾಧ್ಯವಾದರೆ ಬುಡಕ್ಕೆಲ್ಲ ಭೃಂಗರಾಜದ ತೈಲ ಲೇಪಿಸಿದರೆ ಇನ್ನೂ ಒಳ್ಳೆಯದು. ಒರಟಾಗಿ ನೆತ್ತಿಯನ್ನಷ್ಟೇ ಉಜ್ಜದೆ, ನವಿರಾಗಿ ತಲೆಯಿಡೀ ಮಸಾಜ್‌ ಮಾಡಿ. ಇಡೀ ತಲೆಯೂ ಭೃಂಗರಾಜದ ಸದ್ಗುಣಗಳಲ್ಲಿ ನೆನೆಯಲಿ. ಇದರಿಂದ ಬಣ್ಣ ಮತ್ತು ತಲೆಯ ಚರ್ಮದ ನಡುವೆ ರಕ್ಷಾ ಕವಚವೊಂದು ರೂಪುಗೊಳ್ಳುತ್ತದೆ. ಈ ರೀತಿಯಲ್ಲಿ ತಲೆಯ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ಕೂದಲಿನ ಬುಡವನ್ನೂ ಬಲಗೊಳಿಸಬಹುದು.

Happy People Crowd Partying under Colorful Powder Cloud at Holi

ರಂಗಿನಾಟದ ನಂತರ

ಬಣ್ಣವನ್ನು ದೀರ್ಘ ಕಾಲ ಕೂದಲಿನಲ್ಲಿ ಒಣಗಲು ಬಿಡಬೇಡಿ. ಇದರಿಂದ ರಂಗು ತೊಳೆಯುವಾಗ ಉಜ್ಜಬೇಕಾಗಬಹುದು. ಕೂದಲಿಗೆ ಹಾನಿ ಇಲ್ಲಿಂದಲೂ ಆಗಬಹುದು. ತಲೆ ಸ್ನಾನ ಮಾಡುವಾಗ ಆದಷ್ಟೂ ರಾಸಾಯನಿಕಗಳಿಲ್ಲದ ಮೃದುವಾಗ ಶಾಂಪೂದಿಂದ ರಂಗು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲ ಬುಡದಲ್ಲಿರುವ ನೈಸರ್ಗಿಕವಾದ ತೈಲದಂಶ ಹೊರಟುಹೋಗದಂತೆ ಕಾಪಾಡಿಕೊಳ್ಳಬಹುದು. ಸ್ನಾನದ ನಂತರ ಕೂದಲನ್ನು ಟವೆಲ್‌ನಿಂದ ಒರಟಾಗಿ ಉಜ್ಜಬೇಡಿ. ಕೆಲವು ನಿಮಿಷಗಳ ಕಾಲ ಬಿಸಿಲಲ್ಲಿ ಒಣಗಿಸಬಹುದು ಅಥವಾ ಗಾಳಿಯಲ್ಲೂ ಆರಿಸಿಕೊಳ್ಳಬಹುದು.

Lady Sitting on the Couch Gives Herself a Scalp Massage Gooseberry Benefits

ಹೇರ್‌ ಮಾಸ್ಕ್‌

ಕೂದಲಿಗೆ ಒಳ್ಳೆಯ ಹೇರ್‌ಮಾಸ್ಕ್‌ ಹಾಕುವುದು ಹೆಚ್ಚಿನ ಪೋಷಣೆಯನ್ನು ನೀಡಿ, ರಂಗಿನಾಟದಿಂದ ಹಾನಿ ಆಗಿದ್ದರೆ, ಅದನ್ನು ಸರಿಪಡಿಸುತ್ತದೆ. ಮೊಸರು, ಮೆಂತೆಯ ಪೇಸ್ಟ್‌ ಸೇರಿಸಿದ ಹೇರ್‌ ಮಾಸ್ಕ್‌ ಬಳಸಬಹುದು. ಅದಿಲ್ಲದಿದ್ದರೆ, ತೆಂಗಿನಹಾಲಿಗೆ ನಾಲ್ಕಾರು ಚಮಚದಷ್ಟು ಭೃಂಗರಾಜದ ರಸ ಸೇರಿಸಿ ಕೂದಲಿಗೆ ಹಚ್ಚಬಹುದು. ಒಂದೊಮ್ಮೆ ತಾಜಾ ಭೃಂಗರಾಜ ದೊರೆಯದಿದ್ದರೆ ಒಂದು ಚಮಚದಷ್ಟು ಭೃಂಗದ ಎಣ್ಣೆಯನ್ನೇ ಉಪಯೋಗಿಸಬಹುದು. 20-30 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿದರೆ ಸಾಕಾಗುತ್ತದೆ.
ತಲೆಸ್ನಾನಕ್ಕೆ ಕಠೋರವಾದ ಶಾಂಪೂ ಅಥವಾ ಕ್ಲೆನ್ಸರ್‌ಗಳ ಬಳಕೆ ಯೋಗ್ಯವಲ್ಲ. ಮೃದುವಾದ, ರಾಸಾಯನಿಕಗಳಿಲ್ಲದ ಶಾಂಪೂ ಒಳ್ಳೆಯದು. ಅಂಟುವಾಳಕಾಯಿ ಅಥವಾ ಸೀಗೆಕಾಯಿ ದೊರೆಯುವಂತಿದ್ದರೆ, ಅದನ್ನು ಹಿಂದಿನ ರಾತ್ರಿ ನೀರಿಗೆ ಹಾಕಿದ್ದರೆ ಸಾಕು. ಮಾರನೇದಿನ ಅದೇ ನೀರನ್ನು ಶಾಂಪೂ ಆಗಿ ಬಳಸಬಹುದು. ಜೊತೆಗೆ ದಾಸವಾಳ ಸೊಪ್ಪಿನ ಲೋಳೆಯಂಥ ರಸವನ್ನೂ ಸೇರಿಸಿಕೊಂಡರೆ, ನೈಸರ್ಗಿಕ ಕಂಡೀಶನರ್‌ ಸಹ ಕೂದಲಿಗೆ ದೊರೆಯುತ್ತದೆ.

Massage Hair Care Habits

ನಿಯಮಿತ ಮಸಾಜ್‌

ತಲೆಗೂದಲಿಗೆ ನಿಯಮಿತವಾಗಿ ಆರೈಕೆ ಅಗತ್ಯವಿದೆ. ಇಲ್ಲದಿದ್ದರೆ ಕೂದಲು ಉದುರುವುದು, ತುಂಡಾಗುವುದು, ಬೇಗನೇ ಬಿಳಿಯಾಗುವುದು- ಇಂಥವನ್ನು ತಡೆಯಲು ಸಾಧ್ಯವಿಲ್ಲ. ಕಹಿಬೇವು, ಲೋಳೆಸರದ ರಸಗಳನ್ನು ವಾರಕ್ಕೊಮ್ಮೆ ಕೂದಲ ಬುಡಕ್ಕೆ ಮಸಾಜ್‌ ಮಾಡಿ, ಕೆಲ ಸಮಯದ ನಂತರ ತೊಳೆಯಬಹುದು. ಭೃಂಗರಾಜ ಮತ್ತು ಮದರಂಗಿ ಪುಡಿಗಳನ್ನು ಮೊಸರಿನಲ್ಲಿ ಸೇರಿಸಿ ಹೇರ್‌ಮಾಸ್ಕ್‌ ಮಾಡಬಹುದು. ಇಂಥ ಕ್ರಮಗಳಿಂದ ಕೂದಲ ಬುಡ ಭದ್ರವಾಗುತ್ತದೆ. ಹೋಳಿಯಲ್ಲಿ ರಂಗಿನಾಟ ಆಡುವಾಗ ಕೂದಲ ಗತಿಯೇನು ಎಂಬ ಚಿಂತೆಯೂ ದೂರವಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
cp radhakrishnan
ಪ್ರಮುಖ ಸುದ್ದಿ2 mins ago

Governor: ಸಿ.ಪಿ ರಾಧಾಕೃಷ್ಣನ್‌ಗೆ ತೆಲಂಗಾಣ ರಾಜ್ಯಪಾಲ ಹುದ್ದೆ ಉಸ್ತುವಾರಿ

Self Harming fire
ಚಿತ್ರದುರ್ಗ41 mins ago

Self Harming : ಇಬ್ಬರು ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಆಹುತಿಯಾದ ತಾಯಿ

BY Vijayendra meets HD Kumaraswamy
Lok Sabha Election 20241 hour ago

Lok Sabha Election 2024: ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರ; ಮೋದಿ ಪ್ರವಾಸದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು?

Acid Attack Anekal coupleAcid Attack Anekal couple
ಬೆಂಗಳೂರು1 hour ago

Acid Attack : ಕೌಟುಂಬಿಕ ಕಲಹ; ಹೆಂಡತಿ ಮೇಲೆ ಆಸಿಡ್‌ ದಾಳಿ ನಡೆಸಿದ ಧೂರ್ತ ಗಂಡ

nitin gadkari ashiwini vaishnav
ಪ್ರಮುಖ ಸುದ್ದಿ1 hour ago

Lok Sabha Election 2024: ಮೋದಿ ಮತ್ತೆ ಪ್ರಧಾನಿ, ಎನ್‌ಡಿಗೆ 400: ನಿತಿನ್‌ ಗಡ್ಕರಿ; 2026ರಲ್ಲಿ ಬುಲೆಟ್‌ ಟ್ರೇನ್:‌ ಅಶ್ವಿನಿ ವೈಷ್ಣವ್

Tom Curran
ಕ್ರೀಡೆ1 hour ago

IPL 2024: ಎಲ್ಲ ಅನುಮಾನಗಳಿಗೂ ತೆರೆ; ಆರ್​ಸಿಬಿ ಸೇರಿದ ಇಂಗ್ಲೆಂಡ್​ ಆಲ್​ರೌಂಡರ್​

MP Tejaswi surya participate at Nagarthapet protest
ಬೆಂಗಳೂರು1 hour ago

Hanuman Chalisa: ನಗರ್ತಪೇಟೆಯಲ್ಲಿ ಗುಡುಗಿದ ‘ಕೇಸರಿ’; ಕಠಿಣ ಕ್ರಮದ ಭರವಸೆ, ಪ್ರತಿಭಟನೆಗೆ ವಿರಾಮ

SS Rajamouli soft launches Mahesh Babu
ಟಾಲಿವುಡ್1 hour ago

SS Rajamouli: ಮಹೇಶ್‌ ಬಾಬು ಸಿನಿಮಾ ಬಗ್ಗೆ ಜಪಾನ್‌ನಲ್ಲಿ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಜಮೌಳಿ!

Student Death Deeksha
ತುಮಕೂರು2 hours ago

Student death: ದೇವರಿಗೆ ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು; ಶಿಕ್ಷಕರ ಸಸ್ಪೆಂಡ್

Thalapathy Vijay
ಕಾಲಿವುಡ್2 hours ago

Thalapathy Vijay: 14 ವರ್ಷಗಳ ಬಳಿಕ ದಳಪತಿ ವಿಜಯ್‌ ಕೇರಳಕ್ಕೆ; ಕಾರಿನ ಗ್ಲಾಸ್ ಪೀಸ್ ಪೀಸ್!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Nagarthpet protest by BJP
ಬೆಂಗಳೂರು2 hours ago

Hanuman Chalisa: ನಗರ್ತಪೇಟೆ ಉದ್ವಿಗ್ನ; ಜೈಶ್ರೀರಾಮ್‌ ಕೂಗಿದ ಹಿಂದು ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಪೊಲೀಸ್‌ ವಶಕ್ಕೆ

dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ಎಚ್ಚರ ವಹಿಸಿ; ಅಮೂಲ್ಯವಾದ ವಸ್ತುವೊಂದು ಕೈ ತಪ್ಪಬಹುದು

Tejaswi Surya About Hanuman Chalisa Issue
ಬೆಂಗಳೂರು21 hours ago

ಹನುಮಾನ್‌ ಚಾಲೀಸಾ ಕೇಸ್‌; ಆರೋಪಿಗಳು ಅರೆಸ್ಟ್ ಆಗದಿದ್ದರೆ ಪ್ರತಿಭಟನೆ- ತೇಜಸ್ವಿ ಸೂರ್ಯ ಎಚ್ಚರಿಕೆ

read your daily horoscope predictions for march 18 2024
ಭವಿಷ್ಯ1 day ago

Dina Bhavishya : ಈ ದಿನ ನೀವೂ ಮೋಸ ಹೋಗುವುದು ಗ್ಯಾರಂಟಿ; ಬೆನ್ನ ಹಿಂದೆಯೇ ನಡೆಯುತ್ತೆ ಪಿತೂರಿ

Lok Sabha Election 2024 Congress finalises list of 13 seats
Lok Sabha Election 20242 days ago

Lok Sabha Election 2024: ಕಾಂಗ್ರೆಸ್‌ನಲ್ಲಿ 13 ಕ್ಷೇತ್ರಗಳ ಪಟ್ಟಿ ಫೈನಲ್!‌ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್‌ ಇಲ್ಲಿದೆ

dina Bhvishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಅತ್ತೆ ಮನೆಯಿಂದ ಸಿಗಲಿದೆ ಭರಪೂರ ಉಡುಗೊರೆ

Dina Bhavishya
ಭವಿಷ್ಯ3 days ago

Dina Bhavishya : ಇವತ್ತು ಈ ರಾಶಿಯವರು ಮೌನದಿಂದ ಇರುವುದು ಒಳಿತು

Lok Sabha Election 2024 Is Operation JDS Worker Behind DK Brothers Breakfast Meeting
Lok Sabha Election 20244 days ago

Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

read your daily horoscope predictions for march 15 2024
ಭವಿಷ್ಯ4 days ago

Dina Bhavishya : ಕೆಲವು ರಹಸ್ಯ ವಿಷಯಗಳು ಈ ರಾಶಿಯವರಿಗೆ ಅಚ್ಚರಿ ತರಲಿದೆ

Lok Sabha Election 2024 Yaduveer talks about entering politics and Yaduveer Krishnadatta Chamaraja Wadiyar meets BY Vijayendra
ಕರ್ನಾಟಕ5 days ago

‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ಟ್ರೆಂಡಿಂಗ್‌