ಮಂಡ್ಯ: ವಿದ್ಯುತ್ ತಂತಿ ತಗಲಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಮರಳಿಗ ಗ್ರಾಮದ ವಿಕೇಕ್((35) ಹಾಗೂ ಗೆಜ್ಜಲಗೆರೆ ಗ್ರಾಮದ ಮಧುಸೂಧನ್ (28) ಮೃತ ದುರ್ದೈವಿ ಛಾಯಾಗ್ರಾಹಕರು.
ಇವರಿಬ್ಬರು ಬೆಸಗರಹಳ್ಳಿ ಗ್ರಾಮದಲ್ಲಿ ಸ್ಟುಡಿಯೋ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಶನಿವಾರ ತಮ್ಮ ಅಂಗಡಿಯ ಮುಂದೆ ಲಕ್ಷ್ಮೀ ಸ್ಟುಡಿಯೋ ಎಂಬ ನಾಮಫಲಕ ಅಳವಡಿಸುವಾಗ ದುರಂತ ಸಂಭವಿಸಿದೆ.
ನಾಮಫಲಕ ಅಳವಡಿಸುವ ವೇಳೆ ವಿದ್ಯುತ್ ಶಾಕ್ ತಗುಲಿ ಅವಘಡ ಸಂಭವಿಸಿದೆ. ಮೃತ ಛಾಯಾಗ್ರಾಹಕರ ಸಾವಿಗೆ ಸರ್ಕಾರದಿಂದ ಪರಿಹಾರಕ್ಕೆ ಒತ್ತಾಯ ಮಾಡಲಾಗಿದೆ. ಬೆಸಗರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸ್ ಕೇಸು ದಾಖಲಾಗಿದೆ.
ಇದನ್ನೂ ಓದಿ | Electricution | ಅಡಕೆ ಕೀಳಲು ಹೋಗಿದ್ದ ಕೃಷಿಕ ವಿದ್ಯುತ್ ತಂತಿ ತುಳಿದು ತೋಟದಲ್ಲೇ ಮೃತ್ಯು