Site icon Vistara News

Bike Accident: ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು

Bike Accident

ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).

ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!

ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಯುವಕರಿಂದ ಥಳಿತ

Gadaga sexual assault

ಯಾದಗಿರಿ: ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಕಬಡ್ಡಿ ಪಂದ್ಯದ ವೇಳೆ ದೈಹಿಕ ಶಿಕ್ಷಕ ಔಟ್ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ, ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ. ಹೀಗಾಗಿ ಆತನ ಮೇಲೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಗಲಾಟೆ ಬಿಡಿಸಲು ಅಧಿಕಾರಿಗಳು, ಸಿಬ್ಬಂದಿ ಹರಸಾಹಸಪಟ್ಟರು.

10 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ; ಕಾಮುಕ ಹೆಡ್‌ ಮಾಸ್ಟರ್‌ ಅರೆಸ್ಟ್‌

Gadaga sexual assault

ಗದಗ: ಮಕ್ಕಳಿಗೆ ಸದ್ಬುದ್ಧಿಯನ್ನು ಹೇಳಿಕೊಡಬೇಕಾದ ಶಿಕ್ಷಕನೊಬ್ಬ ಮಗಳಂಥ ವಿದ್ಯಾರ್ಥಿನಿ ಮೇಲೆ ತನ್ನ ಕಾಮುಕತನವನ್ನು (Harassment Case) ಪ್ರದರ್ಶನ ಮಾಡಿದ ಹೇಯ ಘಟನೆ ಗದಗ ಜಿಲ್ಲಾ (Gadaga News) ನರಗುಂದ ತಾಲೂಕಿನಲ್ಲಿ ನಡೆಸಿದೆ. ನರಗುಂದ ಪಟ್ಟಣದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ (Head Master of Urdu school) 10 ವರ್ಷದ ಬಾಲಕಿಗೆ ಲೈಂಗಿಕ ಹಿಂಸೆ (Sexual harassment on 10 year old girl ನೀಡಿದ್ದಾನೆ.

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಪ್ರಭಾರ ಮುಖ್ಯ ಶಿಕ್ಷಕನಾಗಿರುವ ಅಲ್ಲಾದಿನ್ ಚವಡಿಯೇ ಈ ರೀತಿ ನಡೆದುಕೊಂಡವನು. ಅವನು ತನ್ನದೇ ಶಾಲೆಯ 10 ವರ್ಷದ ವಿದ್ಯಾರ್ಥಿನಿಗೆ ಹಿಂಸೆ ನೀಡಿದ್ದಾನೆ.

ಆರೋಪಿ ಚವಡಿ ಬಾಲಕಿಯನ್ನು ತನ್ನ ಕಚೇರಿಯ ಒಳಗೆ ಕರೆಸಿಕೊಂಡು ಆಕೆಯ ದೇಹದ ಮೇಲೆಲ್ಲ ಕೈ ಆಡಿಸುತ್ತಿದ್ದನೆಂದು ಹೇಳಲಾಗಿದೆ. ಈ ವಿಷಯವನ್ನು ಯಾರಿಗೂ ಹೇಳಬಾರದು. ಹೇಳಿದರೆ ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಬೆದರಿಸಿದ್ದ ಎನ್ನಲಾಗಿದೆ.

ಶಾಲೆಯಲ್ಲಿ ಆದ ಘಟನೆಯ ಬಗ್ಗೆ ಹುಡುಗಿಯ ತಾಯಿಯ ಬಳಿ ಹೇಳಿದ್ದಳು. ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ದೂರು ನೀಡಿದರೆ ಮಗಳ ಭವಿಷ್ಯಕ್ಕೆ ತೊಂದರೆಯಾದೀತು, ಮದುವೆ ಮಾಡುವುದು ಕಷ್ಟವಾದೀತು ಎಂದು ಭಾವಿಸಿದ ಮನೆಯವರು ಕೆಲವು ದಿನ ಸುಮ್ಮನಿದ್ದರು.

ಇದನ್ನೂ ಓದಿ | Road Accident : ಆಕ್ಸೆಲ್ ಕಟ್‌ ಆಗಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್‌; 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ

ಬಳಿಕ ಮುಂದೆಯೂ ಈ ರೀತಿಯ ಘಟನೆ ಮುಂದುವರಿಯಬಾರದು ಎಂಬ ಕಾರಣಕ್ಕಾಗಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈಗ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಅನ್ವಯ ಎಫ್ ಐ ಆರ್ ದಾಖಲಾಗಿದೆ.

ಪೊಲೀಸರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಅಲ್ಲಾದಿನ್‌ನನ್ನು ಪೋಕ್ಸೋ ಕಾಯ್ದೆ‌ ಅಡಿ ಬಂಧಿಸಿದ್ದಾರೆ.

Exit mobile version