Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು! Vistara News

ಕರ್ನಾಟಕ

Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!

Assault Case : ರಸ್ತೆ ವಿಚಾರಕ್ಕೆ (Road Dispute) ಶುರುವಾದ ಗಲಾಟೆಯು ತಾರಕಕ್ಕೇರಿದ್ದು, ಗ್ರಾಮಸ್ಥರು ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರು ಇರುವಾಗಲೇ ಗ್ರಾಮಸ್ಥರು ಹಲ್ಲೆ ನಡೆಸಿದ್ದು, ಸ್ಥಳೀಯರ ಫೋನ್‌ನಲ್ಲಿ ಗಲಾಟೆ ಸೆರೆಯಾಗಿದೆ.

VISTARANEWS.COM


on

Assault case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಬಳ್ಳಾಪುರ: ಇಲ್ಲಿನ ಚಿಂತಾಮಣಿ ತಾಲೂಕಿನ ಗಂಡ್ರಗಾನಹಳ್ಳಿ ಗ್ರಾಮದಲ್ಲಿ ರಸ್ತೆ ವಿಚಾರಕ್ಕೆ ಗಲಾಟೆ (Assault Case) ನಡೆದಿದೆ. ರೊಚ್ಚಿಗೆದ್ದ ಗ್ರಾಮಸ್ಥರು ವಕೀಲನನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ.

ವಕೀಲ ಭಾಸ್ಕರ್ ರೆಡ್ಡಿ ಹಲ್ಲೆಗೊಳಗಾದವರು. ಶ್ರೀರಾಮರೆಡ್ಡಿ, ಸತೀಶ್ ರೆಡ್ಡಿ, ಲಕ್ಷ್ಮಣರೆಡ್ಡಿ ಎಂಬುವವರು ಹಲ್ಲೆ ನಡೆಸಿದ್ದಾರೆ. ರಸ್ತೆ ವಿಚಾರಕ್ಕೆ ಹಲವು ದಿನಗಳಿಂದ ವಕೀಲ ಭಾಸ್ಕರ್‌ ರೆಡ್ಡಿಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆಯುತ್ತಿತ್ತು. ಮಂಗಳವಾರ ಗಲಾಟೆ ತಾರಕಕ್ಕೇರಿ ಕೈ ಕೈ ಮಿಲಾಯಿಸಿದ್ದಾರೆ.

Villagers attack lawyer over road issue

ಎರಡು ಗುಂಪುಗಳ ನಡುವೆ ಮಾರಾಮಾರಿ ವಿಡಿಯೊ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಪೊಲೀಸರು ಇದ್ದಾಗಲೇ ವಕೀಲನಿಗೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಗಲಾಟೆ ಬಿಡಿಸಲು ಹೋದರೂ ಬಿಡದೆ ಥಳಿಸಿದ್ದಾರೆ. ಗಲಾಟೆಯಲ್ಲಿ ವಕೀಲ ಭಾಸ್ಕರ್ ರೆಡ್ಡಿ ಗಾಯಗೊಂಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

Villagers attack lawyer over road issue

ಈ ಸಂಬಂಧ ವಕೀಲ ಭಾಸ್ಕರ್‌ ರೆಡ್ಡಿ ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣವು ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Fraud Case : ಚಂದದ ಹುಡುಗಿ ಅಂತ ಆಸೆಪಟ್ಟು ರೂಮಿಗೆ ಹೋದರೆ ಅಲ್ಲಿ ಕಂಡಿದ್ದೇ ಬೇರೆ!

Fraud Case : ಸೂರತ್‌ ನಿಂದ ಬೆಂಗಳೂರಿಗೆ ಬಂದಿದ್ದ ನಿವೃತ್ತ ಅಧಿಕಾರಿಯೊಬ್ಬರ ಕಥೆ ಇದು. ಇಲ್ಲಿ ಯಾವುದೂ ನಿಜವಲ್ಲ ಎನ್ನುವುದು ಅವರು ಮೋಸ ಹೋದ ಕಥೆಯ ಸಾರಾಂಶ.

VISTARANEWS.COM


on

lusty old man and a woman
Koo

ಬೆಂಗಳೂರು: ಅವರು ಸೂರತ್‌ ಮೂಲದ ಒಬ್ಬ ನಿವೃತ್ತ ಅಧಿಕಾರಿ (Retired officer). ಗಜೆಟೆಡ್‌ ಹುದ್ದೆಯಲ್ಲಿದ್ದವರು. ಬೆಂಗಳೂರಿಗೆ ಯಾವುದೋ ಟ್ರಿಪ್‌ ಮೇಲೆ (Officer came on trip to Bangalore) ಬಂದಿದ್ದರು. ಊರು ಬಿಟ್ಟು ಬೆಂಗಳೂರಿಗೆ ಬಂದ ಅವರು ಸ್ವಲ್ಪ ಮೈ ಚಳಿ ಬಿಟ್ಟು ಸುತ್ತಾಡಿದ್ದರು. ಆಗ ಅವರಿಗೆ ಚರ್ಚ್‌ ಸ್ಟ್ರೀಟ್‌ನಲ್ಲಿ (Church Street) ಒಬ್ಳು ಸುಂದರವಾದ ಹುಡುಗಿ ಸಿಗ್ತಾಳೆ (A Beautiful Girl). ಅದೂ ಇದೂ ಮಾತಾಡೋ ಹೊತ್ತಿಗೆ 61ರ ವಯಸ್ಸಿನಲ್ಲಿ 16ರ ಕಾಮನೆ ಕೆರಳಿಬಿಡುತ್ತದೆ ಈ ರಿಟೈರ್ಡ್‌ ಆಫೀಸರ್‌ಗೆ. ಚಂದದ ಹುಡುಗಿ, ಬೆಂಗಳೂರಿನ ಹಿತವಾದ ವಾತಾವರಣ, ಚರ್ಚ್‌ ಸ್ಟ್ರೀಟ್‌ನ ಹಿತವಾದ ಜಾಗ.. ಇದಕ್ಕಿಂತ ಬೇರೆ ಬೇಕಾ ಎಂದು ಮಾತನಾಡುತ್ತಲೇ ಹುಡುಗಿಯನ್ನು ಸೆಟ್‌ ಮಾಡಿಕೊಂಡರು. ಆಕೆಯೋ ಮೊದಲೇ ಪಳಗಿದ ಹುಡುಗಿ. ಇವರು ನಾನ್‌ ರೆಡಿ ಎಂದ ಕೂಡಲೇ ಆಟೋ ಅಂತ ಕೂಗಿ ಕರೆದಳು. ಅವರಿಬ್ಬರು ಹೋಗಿದ್ದು ಒಂದು ಮನೆಗೆ!

ಅದುಮಿಟ್ಟಿದ್ದ ಆಕಾಂಕ್ಷೆಗಳನ್ನು ಬೆಂಗಳೂರಿನಲ್ಲಿ ಪೂರ್ಣವಾಗಿ ತೆರೆದಿಡುವ ಉತ್ಸಾಹದಲ್ಲಿ ಹೋಗಿದ್ದ ನಿವೃತ್ತ ಅಧಿಕಾರಿಗೆ ಅಲ್ಲಿ ಒಬ್ಬಳಲ್ಲ, ಇಬ್ಬರು ಸುಂದರಿಯರು ಸಿಕ್ಕರು. ಒಂದಕ್ಕೆ ಒಂದು ಫ್ರೀ ಎಂದು ಖುಷಿಯಲ್ಲಿದ್ದ ಅವರ ಉತ್ಸಾಹ ಕೆಲವೇ ಕ್ಷಣಗಳಲ್ಲಿ ಇಳಿದುಹೋಯಿತು. ಹಾಗಿದ್ದರೆ ಅಲ್ಲಿ ನಡೆದಿದ್ದೇನು? (Fraud Case)

ಇದು ಯಾರೋ ಹೇಳಿದ ಕಥೆಯಲ್ಲ, ಸ್ವತಃ ಆ ವ್ಯಕ್ತಿಯೇ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ ಗೆ ಬಂದು ವಿವರಿಸಿದ ರೋಚಕ ಕಹಾನಿ. ಅವರ ಕಥೇನ ಅವರದೇ ಬಾಯಿಯಲ್ಲಿ ಕೇಳಿ..

ನಾನು ಹಿಮವತ್‌ (ಹೆಸರು ಬದಲಿಸಿದೆ) ಅಂತ. ಸೂರತ್‌ ನನ್ನ ಊರು. ನಿವೃತ್ತ ಅಧಿಕಾರಿ. ಬೆಂಗಳೂರಿಗೆ ಒಂದು ಕೆಲಸದಲ್ಲಿ ಬಂದಿದ್ದೆ. ಇಲ್ಲೇ ಒಂದು ಹೋಟೆಲ್‌ನಲ್ಲಿ ರೂಮ್‌ ಮಾಡಿದ್ದೆ. ನನಗೆ ಒಂದು ಬ್ಯಾಗ್‌ ಬೇಕಿತ್ತು. ಹಾಗಾಗಿ ನಾನು ನವೆಂಬರ್‌ 29ರಂದು ಸಂಜೆ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಅಲ್ಲಿ ಮಲ್ಟಿನ್ಯಾಷನಲ್‌ ಕಾಫಿ ಚೈನ್‌ನ ಒಂದು ಔಟ್‌ ಲೆಟ್‌ ಎದುರು ನಿಂತಿದ್ದಾಗ ಒಬ್ಬ ಹುಡುಗಿ ಪರಿಚಯ ಆದ್ಳು. ನಾವಿಬ್ಬರೂ ಮಾತನಾಡಿಕೊಂಡೆವು.

ನಾನೂ ಸೂರತ್‌ ನಿಂದ ಬಂದಿದ್ದೆ. ಬೆಂಗಳೂರಿನ ಹುಡುಗಿಯರು ಹೇಗೆ ಅಂತ ನೋಡುವ ಆಸೆ ಆಯಿತು. ಇಬ್ಬರೂ ಒಪ್ಪಿಕೊಂಡು ಒಂದು ಸುತ್ತಿನ ಸುಖ ಪಡೆಯುವುದು ಎಂದು ತೀರ್ಮಾನ ಮಾಡಿದೆವು. ಇದು ಸೆಕ್ಸ್‌ ಫಾರ್‌ ಮನಿ ಡೀಲ್‌.

ಅಷ್ಟೆಲ್ಲ ಆಗುವಾಗ ರಾತ್ರಿ 9.35 ಆಗಿತ್ತು. ಆಕೆ ಒಂದು ಆಟೊವನ್ನು ಕರೆದು ನನ್ನನ್ನು ಇಂದಿರಾನಗರದ ಒಂದು ಕೋಣೆಗೆ ಕರೆದುಕೊಂಡು ಹೋದಳು. ಅಲ್ಲಿ ಹೋಗಿ ನೋಡಿದರೆ ಅಲ್ಲಿ ಇನ್ನೊಬ್ಬಳಿದ್ದಳು. ನಾವು ಇಬ್ಬರೂ ಸೇವೆಗೆ ಸಿದ್ಧ ಎಂದು ಅವರು ಹೇಳಿದರು. ನಂಗೂ ಖುಷಿಯಾಯಿತು.

ಕೆಲವು ನಿಮಿಷ ಮಾತನಾಡಿ ನಾನು ನನ್ನ ಖುಷಿಯ ಕ್ಷಣಗಳನ್ನು ಪಡೆಯುವ ಉದ್ದೇಶದಿಂದ ಸಿದ್ಧನಾಗುತ್ತಿದ್ದರೆ ಅವರಿಬ್ಬರೂ ರೆಡಿ ಆದರು. ಆದರೆ, ನಾನು ಅವರಿಬ್ಬರನ್ನೂ ನೋಡಿ ಬೆಚ್ಚಿ ಬಿದ್ದೆ. ಯಾಕೆಂದರೆ, ಅವರಿಬ್ಬರು ಹುಡುಗಿಯರಾಗಿರಲೇ ಇಲ್ಲ. ಇಬ್ಬರೂ ತೃತೀಯ ಲಿಂಗಿಗಳಾಗಿದ್ದರು.

ಯಾಕೆ ಹೀಗೆ ಮೋಸ ಮಾಡಿದೆ ಎಂದು ನಾನು ಜಗಳ ಮಾಡಿದೆ. ಆಗ ನನ್ನನ್ನು ಕರೆದುಕೊಂಡು ಬಂದವಳು, ನಿನಗೆ ವಯಸ್ಸಾಗಿದೆ, ಇದರಲ್ಲೇ ಅಜಸ್ಟ್‌ ಮಾಡಿಕೋ ಎಂದು ಹೇಳಿದಳು. ನಾನು ಆಕೆ ಮೋಸ ಮಾಡಿದ್ದಕ್ಕೆ ಬೈದೆ. ಆಗ ಅವರಿಬ್ಬರೂ ಸೇರಿ ನನ್ನ ಮೇಲೆ ಮುಗಿಬಿದ್ದರು.

ನನ್ನ ಕೈಯಲ್ಲಿದ್ದ 1000೦ ರೂ. ಭಾರತೀಯ ಕರೆನ್ಸಿ ಮತ್ತು 9500 ರೂ. ಮೌಲ್ಯದ 4000 ಥಾಯ್‌ ಬಹ್ತ್‌ ಕಿತ್ತುಕೊಂಡರು. ನನಗೆ ಬೆದರಿಕೆ ಹಾಕಿ ನನ್ನ ಮೊಬೈಲನ್ನು ಕಿತ್ತುಕೊಂಡರು. ನನ್ನ ಡಿಜಿಟಲ್‌ ಪೇಮೆಂಟ್‌ ಆಪ್‌ನ ಪಾಸ್‌ ವರ್ಡ್‌ ಕೂಡಾ ಬೆದರಿಸಿ ಪಡೆದುಕೊಂಡರು. ಅದರಿಂದ 30000 ರೂ.ವನ್ನು ತಮ್ಮ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡರು.

ಯಾರಿಗಾದರೂ ಈ ವಿಷಯ ಹೇಳಿದರೆ ಹುಷಾರ್‌ ಎಂದು ಹೆದರಿಸಿ ನನ್ನನ್ನು ಮನೆಯಿಂದ ಹೊರಗೆ ಹಾಕಿದರು. ನಾನು ಸಿಕ್ಕಿದ ರಿಕ್ಷಾ ಹಿಡಿದುಕೊಂಡು ನನ್ನ ರೂಮಿಗೆ ಬಂದೆ. ಮಾರನೇ ದಿನ ಮತ್ತೆ ಅದೇ ಚರ್ಚ್‌ ಸ್ಟ್ರೀಟ್‌ಗೆ ಹೋದೆ. ಆಕೆ ಅಲ್ಲೇ ಬರಬಹುದಾ ಎನ್ನುವುದು ನನ್ನ ನಿರೀಕ್ಷೆಯಾಗಿತ್ತು. ಆಕೆ ಬಂದಿರಲಿಲ್ಲ.

ನಂತ್ರ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸ್ಟೇಷನ್‌ ಗೆ ಹೋಗಿ ದೂರು ನೀಡಿದೆ. ಬೆಂಗಳೂರಿನಲ್ಲಿ ಪುರುಷರನ್ನು ಈ ರೀತಿಯಲ್ಲಿಯೂ ಯಾಮಾರಿಸುತ್ತಾರೆ ಎಂದು ಹೇಳಿದೆ.

—-

ಇದಿಷ್ಟು ಹಿಮವತ್‌ ಅಲ್ಲಿ ನಡೆದುದನ್ನು ಹೇಳಿದ್ದು. ಈಗ ದೂರು ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಪೊಲೀಸರು ಏನು ಹೇಳುತ್ತಾರೆ ಕೇಳಿ..

ಆ ನಿವೃತ್ತ ಅಧಿಕಾರಿ ಆ ಕೋಣೆಗೆ ಹೋಗಿದ್ದು ನಿಜ ಇರಬಹುದು. ಆದರೆ, ಅವರು ಹೆಣ್ಣು ಎಂದುಕೊಂಡೇ ಹೋಗಿದ್ದರಾ ಅಥವಾ ತೃತೀಯ ಲಿಂಗಿ ಎಂದು ಗೊತ್ತಿದ್ದೇ ಹೋಗಿದ್ದಾರಾ ಎನ್ನುವುದು ಗೊತ್ತಾಗುತ್ತಿಲ್ಲ. ನಾವು ಅವರು ನೀಡಿದ ಗುರುತಿನ ಆಧಾರದಲ್ಲಿ ಪತ್ತೆ ಹಚ್ಚಿ ವಿಚಾರಣೆ ನಡೆಸುತ್ತೇವೆ. ಬಳಿಕ ವಿಷಯ ಸ್ಪಷ್ಟವಾಗಲಿದೆ.

ಇಷ್ಟು ಹೇಳಿದ ಮೇಲೆ ಒಂದು ವಿಷಯ ಹೇಳಲೇಬೇಕು: ನೀವು ಅಪರಿಚಿತ ಹೆಣ್ಮಕ್ಕಳ ಜತೆ ವ್ಯವಹರಿಸುವಾಗ ಎಚ್ಚರವಾಗಿರಿ. ಮೋಸ ಹೋಗಬೇಡಿ. ಇದು ಪೊಲೀಸರ ಸಲಹೆಯೂ ಹೌದು.

Continue Reading

ಕರ್ನಾಟಕ

Excise Revenue: ಸರ್ಕಾರಕ್ಕೆ ಗ್ಯಾರಂಟಿ ಕಿಕ್‌ ಕೊಟ್ಟ ಬಿಯರ್; 22,500 ಕೋಟಿ ಆದಾಯ

Excise Revenue: ಅಬಕಾರಿ ಇಲಾಖೆಗೆ ಕಳೆದ 7 ತಿಂಗಳಲ್ಲಿ ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿರುವುದರಿಂದ ಆದಾಯದಲ್ಲೂ ಏರಿಕೆ ಕಂಡುಬಂದಿದೆ.

VISTARANEWS.COM


on

beer shop
Koo

ಬೆಂಗಳೂರು: ಚಳಿಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಯರ್ ಸೇರಿ ಎಲ್ಲ ಮಾದರಿಯ ಮದ್ಯ ಮಾರಾಟ ಹೆಚ್ಚಾಗಿದೆ. ಇದರಿಂದ ಅಬಕಾರಿ ಇಲಾಖೆಯ ಆದಾಯದಲ್ಲಿ (Excise Revenue) ಭಾರಿ ಏರಿಕೆ ಕಂಡುಬಂದಿದೆ. ಕಳೆದ 7 ತಿಂಗಳಲ್ಲಿ ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದ್ದು, ವಿಶೇಷವಾಗಿ ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.

ಚಳಿಗಾಲ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಬಿಯರ್‌ಗೆ ಭಾರಿ ಬೇಡಿಕೆ ಬಂದಿದೆ. ಕಳೆದ ಮೂರು ತಿಂಗಳ ಹಿಂದೆ ಮದ್ಯದ ದರವನ್ನು ಹೆಚ್ಚಳ ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮಧ್ಯಪ್ರಿಯರು, ನಂತರ ಮದ್ಯ ಸೇವನೆ ಕಡಿಮೆ ಮಾಡಿದ್ದರು. ಆದರೆ, ಈಗ ಚಳಿಗಾಲ ಆರಂಭವಾಗುತ್ತಿದ್ದಂತೆ ದರ ಏರಿಕೆ ವಿಷಯ ಮರೆತು ಮದ್ಯ ಸೇವನೆಗೆ ಮುಂದಾಗಿದ್ದಾರೆ. ಅದರಲ್ಲಿಯೂ ಬಿಯರ್ ಸೇವನೆ ಮಾಡುವವರ ಸಂಖ್ಯೆ ಅತ್ಯಧಿಕವಾಗಿ ಏರಿಕೆ ಆಗುತ್ತಿದೆ.

ಕಳೆದ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿದಲ್ಲಿ ಈ ವರ್ಷದ ನವೆಂಬ‌ನರ್‌ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಬಾಕ್ಸ್‌ಗಳು ಹೆಚ್ಚಾಗಿ ಮಾರಾಟವಾಗಿವೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಅಬಕಾರಿ ಇಲಾಖೆಗೆ ಆದಾಯ ಹೆಚ್ಚಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟ ಆಗುತ್ತಿದೆ ಆದರೆ,. ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17 ಮಾರಾಟ ಹೆಚ್ಚಳವಾಗಿದೆ.

ಇದನ್ನೂ ಓದಿ | CM Siddaramaiah : ಸಿದ್ದರಾಮಯ್ಯರಿಂದ ಮುಸ್ಲಿಂ ಓಲೈಕೆ ಎಂದ ಬಿಜೆಪಿ; ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಿಎಂ!

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಮಾರಾಟ ಆಗಿತ್ತು. ಆದರೆ, ಈ ವರ್ಷ ನವೆಂಬರ್‌ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. ಈ ಮೂಲಕ ಕಳೆದ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿದಲ್ಲಿ 6 ಲಕ್ಷ ಬಿಯರ್ ಬಾಕ್ಸ್ ಮಾರಾಟ ಹೆಚ್ಚಳವಾಗಿದೆ.

ದರ ಏರಿಕೆಯ ನಡುವೆಯೂ ಮದ್ಯ ಮಾರಾಟ ಬಲು ಜೋರಾಗಿದೆ. ಬಿಯರ್ ಜೊತೆಗೆ ಇತರೆ ಲಿಕ್ಕರ್ ಮಾರಾಟದಲ್ಲೂ ಹೆಚ್ಚಳವಾಗಿದೆ. ಇನ್ನು ಚಳಿಗಾಲ ಆರಂಭವಾಗಿದ್ದರಿಂದ ನವೆಂಬರ್‌ನಲ್ಲಿ ಬಿಯರ್ ಸೇರಿ ಎಲ್ಲ ಮಾದರಿಯ ಮದ್ಯ ಮಾರಾಟ ಹೆಚ್ಚಾಗಿದ್ದು, ಒಟ್ಟಾರೆ ಲಿಕ್ಕರ್ ಮಾರಾಟ ಪ್ರಮಾಣ 0.43 ಶೇ. ಹೆಚ್ಚಳವಾಗಿದೆ. ಇನ್ನು ರಾಜ್ಯ ಸರ್ಕಾರದಿಂದ 2023-24ರಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂ. ಆದಾಯ ಸಂಗ್ರಹಣೆಗೆ ಟಾರ್ಗೆಟ್ ನೀಡಲಾಗಿದೆ. ಈಗ ಕಳೆದ ಎಂಟು ತಿಂಗಳಿನಲ್ಲಿ (ಏಪ್ರಿಲ್‌ನಿಂದ ನವೆಂಬರ್ ವರೆಗೆ) ಬರೋಬ್ಬರಿ 22,500 ಕೋಟಿ ಆದಾಯ ಸಂಗ್ರಹವಾಗಿದೆ.

ಇದನ್ನೂ ಓದಿ | Belagavi Winter Session: ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ವಿನಾಯಿತಿ; ತಿದ್ದುಪಡಿ ವಿಧೇಯಕ ಮಂಡನೆ

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಹೀಗಾಗಿ ಖಜಾನೆ ಭರ್ತಿ ಮಾಡಲು ಸರ್ಕಾರ ಪ್ರಮುಖ ಆದಾಯದ ಮೂಲವಾದ ಮದ್ಯದ ದರ ಹೆಚ್ಚಳ ಮಾಡಿ ಮಾರಾಟ ಹೆಚ್ಚಳಕ್ಕೆ ಟಾರ್ಗೆಟ್‌ ನೀಡಿತ್ತು. ಆರಂಭದಲ್ಲಿ ದರ ಹೆಚ್ಚಳದಿಂದ ಬಾರ್‌ಗಳಿಂದ ದೂರ ಉಳಿದಿದ್ದ ಮದ್ಯಪ್ರಿಯರು ಚಳಿಗಾಲ ಆರಂಭವಾಗುತ್ತಿದ್ದಂತೆ ಹೆಚ್ಚಿನ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಹೀಗಾಗಿ ನವೆಂಬರ್‌ನಲ್ಲಿ ಬಿಯ‌ರ್ ಮಾರಾಟ ಪ್ರಮಾಣ ಹೆಚ್ಚಾಗಿದೆ.

Continue Reading

ಉತ್ತರ ಕನ್ನಡ

Uttara Kannada News: ವಜ್ರಳ್ಳಿಯಲ್ಲಿ ಸ್ವಚ್ಛತಾ ಆಂದೋಲನ

Uttara Kannada News: ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಮಂಗಳವಾರ ಯಲ್ಲಾಪುರದ ಆಶಿಯಾ ಸಮಾಜ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.

VISTARANEWS.COM


on

Uttara Kannada News Cleanliness movement programme in Vajralli
ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಟಿ.ಸಿ.ಗಾಂವ್ಕಾರ ಮಾತನಾಡಿದರು.
Koo

ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಮಂಗಳವಾರ ಯಲ್ಲಾಪುರದ ಆಶಿಯಾ ಸಮಾಜ ಸೇವಾ ಸಂಸ್ಥೆಯಿಂದ ಸ್ವಚ್ಛತಾ ಆಂದೋಲನ (Cleanliness Movement) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಟಿ.ಸಿ.ಗಾಂವ್ಕಾರ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತವಾದ ಪರಿಸರ ಎಲ್ಲರ ಸಂಕಲ್ಪವಾಗಬೇಕು. ನಿತ್ಯ ನಾವು ಬಳಸುವ ವಸ್ತುಗಳು ತ್ಯಾಜ್ಯಗಳಾಗಿ ನಮ್ಮ ಜೀವನಕ್ಕೆ ಆತಂಕ ತಂದೊಡ್ಡಿದೆ ಎಂದರು.

ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ ಮಾತನಾಡಿ, ಸ್ವಚ್ಛತೆಯ ಕುರಿತಾದ ಜಾಗೃತಿ ನಮ್ಮ ಮನಸ್ಸಿನಲ್ಲಿ ಮೊದಲು ಮೂಡಬೇಕು. ನಾವು ಬದಲಾಗದೇ ನಮ್ಮ ಜೀವನ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬದುಕಿನ ಜತೆಗೆ ಎಲ್ಲರ ಆರೋಗ್ಯ ಪೂರ್ಣವಾದ ಬದುಕನ್ನು ಯೋಚಿಸಿ ಸ್ವಚ್ಛತೆಯ ಕಾಳಜಿ ವಹಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: karnataka Weather :‌ ಮುಂದಿನ 24 ಗಂಟೆಯಲ್ಲಿ 18 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ನಮ್ಮ ಸಮಾಜದಲ್ಲಿ ಸ್ವಚ್ಛತೆ ಕಾಪಾಡಿದರೆ ನಾವು ದೇಶಸೇವೆ ಮಾಡಿದ ಹಾಗೆಯೇ. ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಭಟ್ಟ ಕೀಚನಾಳ, ಆಶಿಯಾ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಿಜಯ ನಾಯ್ಕ, ಅಧ್ಯಕ್ಷ ಅನಿಲ್ ಮರಾಠೆ, ಸಂಸ್ಥೆಯ ಸದಸ್ಯರಾದ ಫರಜಾನಾ, ಆಯೇಷಾ, ಬಾನು ಬಿ., ಮುಶೃತ್, ಬಾಲಚಂದ್ರ ಹಾಗೂ ಮುಖ್ಯಾಧ್ಯಾಪಕ ಎಂ. ಕೆ. ಭಟ್ಟ, ಗ್ರಾಮ ಪಂಚಾಯಿತಿಯ ದತ್ತಾತ್ರೇಯ ಆಚಾರಿ, ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ನೇಮಕ; ಒಟ್ಟು ಎಷ್ಟು ಹುದ್ದೆ ನಿರೀಕ್ಷೆ?

ಶಿಕ್ಷಕ ಎಸ್. ಟಿ. ಬೇವಿನಕಟ್ಟಿ ನಿರ್ವಹಿಸಿ, ವಂದಿಸಿದರು. ನಂತರ ವಜ್ರಳ್ಳಿಯ ಬೀಗಾರ ಬಸ್ ನಿಲ್ದಾಣದಿಂದ ಹೊನ್ನಗದ್ದೆ ಕ್ರಾಸ್ ವರೆಗೆ ಆಶಿಯಾ ಸಮಾಜ ಸೇವಾ ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಸ್ವಚ್ಛತಾ ಕಾರ್ಯ ನಡೆಸಿದರು.

Continue Reading

ಚಿತ್ರದುರ್ಗ

Chitradurga News: ಗುಂಡೇರಿ ಗ್ರಾಮದಲ್ಲಿ ಅಷ್ಟಲಕ್ಷ್ಮಿ ಪೂಜೆ

Chitradurga News: ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದ ಈಶ್ವರ ಕಲ್ಯಾಣ ಮಂಟಪ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ವತಿಯಿಂದ ಅಷ್ಟಲಕ್ಷ್ಮಿ ಪೂಜಾ ಕಾರ್ಯಕ್ರಮ ಮತ್ತು ಒಕ್ಕೂಟಗಳ ಪದಗ್ರಹಣ ಸಮಾರಂಭ ಜರುಗಿತು.

VISTARANEWS.COM


on

Ashta Lakshmi Puja programme inauguration at Gunderi village
ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದ ಈಶ್ವರ ಕಲ್ಯಾಣ ಮಂಟಪ ಸಭಾಭವನದಲ್ಲಿ ಅಷ್ಟ ಲಕ್ಷ್ಮೀ ಪೂಜಾ ಕಾರ್ಯಕ್ರಮ ಮತ್ತು ಒಕ್ಕೂಟಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
Koo

ಹೊಳಲ್ಕೆರೆ: ಭಾರತದ ಭವ್ಯ ಪರಂಪರೆಯಲ್ಲಿ ಧರ್ಮಕ್ಕೆ ಮತ್ತು ಸಂಸ್ಕೃತಿ ಸಂಸ್ಕಾರಗಳಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ನಾವು ಅದನ್ನು ಮುಂದಿನ ಪೀಳಿಗೆಗೆ ಕಲಿಸಿಕೊಡುವ ಜವಾಬ್ದಾರಿ (Responsibility) ನಮ್ಮದಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ಜಿಲ್ಲೆಯ ನಿರ್ದೇಶಕ ದಿನೇಶ್ ಪೂಜಾರಿ ತಿಳಿಸಿದರು.

ತಾಲೂಕಿನ ಗುಂಡೇರಿ ಗ್ರಾಮದ ಈಶ್ವರ ಕಲ್ಯಾಣ ಮಂಟಪ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ವತಿಯಿಂದ ಈಚೆಗೆ ಅಷ್ಟಲಕ್ಷ್ಮೀ ಪೂಜಾ ಕಾರ್ಯಕ್ರಮ ಮತ್ತು ಒಕ್ಕೂಟಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Teachers Recruitment: ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ನೇಮಕ; ಒಟ್ಟು ಎಷ್ಟು ಹುದ್ದೆ ನಿರೀಕ್ಷೆ?

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದೆ ಎಂದರೆ ಅದಕ್ಕೆ ಪಾಲುದಾರ ಕುಟುಂಬವೇ ಕಾರಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಗಿರೀಶ್ ನಾಡಿಗ್ ಮಾತನಾಡಿದರು.

ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ದಾಖಲಾತಿ ಹಸ್ತಾಂತರ ಮಾಡಲಾಯಿತು.

ಇದನ್ನೂ ಓದಿ: karnataka Weather :‌ ಮುಂದಿನ 24 ಗಂಟೆಯಲ್ಲಿ 18 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಗಂಗೂ ಬಾಯಿ, ಮೇಲ್ವಿಚಾರಕ ಉಮಾಪತಿ, ಸೇವಾ ಪ್ರತಿನಿಧಿಗಳು, ಗ್ರಾಮದ ಮುಖಂಡರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Advertisement
lusty old man and a woman
ಕರ್ನಾಟಕ30 seconds ago

Fraud Case : ಚಂದದ ಹುಡುಗಿ ಅಂತ ಆಸೆಪಟ್ಟು ರೂಮಿಗೆ ಹೋದರೆ ಅಲ್ಲಿ ಕಂಡಿದ್ದೇ ಬೇರೆ!

beer shop
ಕರ್ನಾಟಕ6 mins ago

Excise Revenue: ಸರ್ಕಾರಕ್ಕೆ ಗ್ಯಾರಂಟಿ ಕಿಕ್‌ ಕೊಟ್ಟ ಬಿಯರ್; 22,500 ಕೋಟಿ ಆದಾಯ

Byjus
ಕ್ರಿಕೆಟ್12 mins ago

BCCI : ಬಿಸಿಸಿಐಗೆ ದೊಡ್ಡ ಮೊತ್ತ ಬಾಕಿ, ಬೈಜೂಸ್​ಗೆ ಮತ್ತೊಂದು ಸಂಕಷ್ಟ

Political Journey of to be chief minister telangana, Revanth Reddy
ದೇಶ33 mins ago

ರೇವಂತ್ ರೆಡ್ಡಿ ಅಂದು ಎಬಿವಿಪಿ ನಾಯಕ; ಇಂದು ಕಾಂಗ್ರೆಸ್‌ನಿಂದ ತೆಲಂಗಾಣ ಸಿಎಂ!

iit
ಉದ್ಯೋಗ39 mins ago

Job news: ಖರಗ್ಪುರ ಐಐಟಿ ಕ್ಯಾಂಪಸ್‌ನಲ್ಲಿ 6 ವಿದ್ಯಾರ್ಥಿಗಳಿಗೆ ಸಿಕ್ತು ಕೋಟಿ ರೂ. ಸಂಬಳದ ಆಫರ್‌!

Uttara Kannada News Cleanliness movement programme in Vajralli
ಉತ್ತರ ಕನ್ನಡ44 mins ago

Uttara Kannada News: ವಜ್ರಳ್ಳಿಯಲ್ಲಿ ಸ್ವಚ್ಛತಾ ಆಂದೋಲನ

Ashta Lakshmi Puja programme inauguration at Gunderi village
ಚಿತ್ರದುರ್ಗ45 mins ago

Chitradurga News: ಗುಂಡೇರಿ ಗ್ರಾಮದಲ್ಲಿ ಅಷ್ಟಲಕ್ಷ್ಮಿ ಪೂಜೆ

TPCC president Revanth Reddy To be Next CM Of Telangana, Says congress
ದೇಶ1 hour ago

Revanth Reddy: ರೇವಂತ್ ರೆಡ್ಡಿ ತೆಲಂಗಾಣ ನೂತನ ಮುಖ್ಯಮಂತ್ರಿ; ಕಾಂಗ್ರೆಸ್ ಘೋಷಣೆ

Siddaramaiah
ಕರ್ನಾಟಕ1 hour ago

Captain Pranjal: ಯಾರವರು ಯೋಧ ಎಂದರಾ ಸಿಎಂ; ಸಿದ್ದರಾಮಯ್ಯ ಸ್ಪಷ್ಟೀಕರಣ ಏನು?

BJP can only win gau mutra states Says DMK MP
ದೇಶ1 hour ago

ಬಿಜೆಪಿ ‘ಗೋ ಮೂತ್ರ’ ರಾಜ್ಯಗಳಲ್ಲಷ್ಟೇ ಗೆಲ್ಲೋದು! ಡಿಎಂಕೆ ಸಂಸದನ ಹೇಳಿಕೆಗೆ ಬಿಜೆಪಿ ವ್ಯಘ್ರ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ2 days ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ3 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌