ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಶೆಡ್ ಬಳಿ ನೀರು ತುಂಬಿದ್ದ ಕ್ವಾರಿಗೆ ಬಿದ್ದು ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಲೀನಾಮತಿ (19), ಮೀನಾ (17) ಮೃತರು.
ಬಟ್ಟೆ ತೊಳೆಯಲೆಂದು ನೀರು ತುಂಬಿದ್ದ ಕ್ವಾರಿಗೆ ನಾಲ್ವರು ಹೋಗಿದ್ದರು. ಈ ವೇಳೆ ಕಾಲುಜಾರಿ ಕ್ವಾರಿಗೆ ಬಿದ್ದ ಆರು ವರ್ಷದ ಮಗುವನ್ನು ರಕ್ಷಸಲು ಹೋಗಿ ಇಬ್ಬರು ಯುವತಿಯರೂ ಮೃತಪಟ್ಟಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Fraud Case: ಎಲೆಕ್ಷನ್ ಟೈಂ ಅನ್ನೇ ಗೋಲ್ಡನ್ ಟೈಂ ಎಂದುಕೊಂಡ ವಂಚಕ; ನಕಲಿ ಚಿನ್ನ ಕೊಟ್ಟವನು ಅರೆಸ್ಟ್
ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಮಾರಾಮಾರಿ; ನಡು ರಸ್ತೆಯಲ್ಲಿ ಝಳಪಿಸಿದ ಮಚ್ಚು, ಲಾಂಗು!
ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ (Anekal News) ಪಟ್ಟಣದ ಭಜನೆ ಮನೆ ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಖಾಜಾ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ರವಾನೆ ಮಾಡಲಾಗಿದೆ.
ಹಲ್ಲೆಗೊಳಗಾದ ಖಾಜಾ ಹಾಗೂ ಹಲ್ಲೆ ಮಾಡಿದ ಯೋಗೇಶ್ ಗ್ಯಾಂಗ್ ನಡುವೆ ಗಲಾಟೆ ನಡೆದಿದೆ. ನಡುರಸ್ತೆಯಲ್ಲಿ ಯುವಕರ ಬಿಗ್ ಫೈಟ್ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಮೊದಲಿಗೆ ಮಟನ್ ಮಾರ್ಕೆಟ್ ರಸ್ತೆಯಲ್ಲಿ ಗಲಾಟೆ ನಡೆದಿತ್ತು. ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದ ಯೋಗೇಶ್ ಗ್ಯಾಂಗ್ ಅನ್ನು ಅಲ್ಲಿದ್ದ ಸ್ಥಳೀಯರು ಸಮಾಧಾನ ಪಡಿಸಿ ಕಳುಹಿಸಿದ್ದರು.
ತದನಂತರ ಭಜನೆ ಮನೆ ರಸ್ತೆಯಲ್ಲಿ ಖಾಜಾ ಮತ್ತು ಆತನ ಗ್ಯಾಂಗ್ ಕುಳಿತಿದ್ದಾಗ ಅಲ್ಲಿಗೆ ಬಂದಿದ್ದ ಯೋಗೇಶ್, ಮಹೇಂದ್ರ ಗ್ಯಾಂಗ್ ಏಕಾಏಕಿ ಅಟ್ಯಾಕ್ ಮಾಡಿದೆ. ಈ ವೇಳೆ ನಡು ರಸ್ತೆಯಲ್ಲಿಯೇ ಎರಡು ಗುಂಪಿನ ಯುವಕರು ಬಡಿದಾಡಿಕೊಂಡಿದ್ದಾರೆ. ಇದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೊಲೀಸರು ಯುವಕರ ಗುಂಪನ್ನು ಚದುರಿಸಿದ್ದಾರೆ. ಗಲಾಟೆ ವೇಳೆ ಖಾಜಾಗೆ ಗಂಭೀರ ಗಾಯವಾಗಿದ್ದು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚೂರಿ ಇರಿತದಿಂದ ಗಂಭೀರ ಗಾಯ
ಗದಗ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ (knife attack) ಇರಿಯಲಾಗಿದ್ದು, ಗಾಯಾಳು ಸ್ಥಿತಿ ಗಂಭೀರವಾಗಿದೆ.
ಗದಗಿನ ಎಸ್‌ಬಿಎಸ್ ಗಾರ್ಡನ್ ಬಳಿಯ 76ನೇ ಫ್ಲಾಟ್‌ನಲ್ಲಿ ಘಟನೆ ನಡೆದಿದೆ. ಕೆಂಚಪ್ಪ ಲಕ್ಕುಂಡಿ (32) ಎಂಬಾತ, ಇಮಾಮಸಾಬ್ ಖಾಗದಗಾರ್ (48) ಎಂಬುವವರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ದೇಹದ 6 ಕಡೆ ಚಾಕುವಿನಿಂದ ಇರಿಯಲಾಗಿದೆ.
ಇದನ್ನೂ ಓದಿ: The Kerala Story Review : ಲವ್ ಜಿಹಾದ್, ಭಯೋತ್ಪಾದನೆಯ ಕ್ರೂರ ಮುಖದ ಮನಮುಟ್ಟುವ ಚಿತ್ರಣ
ಹೊಟ್ಟೆಗೆ ಚಾಕು ಇರಿತದಿಂದ ಕರುಳು ಹೊರಗೆ ಬಂದಿದೆ. ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಕೆಂಚಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.