Site icon Vistara News

ಶಿವಮೊಗ್ಗದಲ್ಲಿ ಎರಡು ದಿನದಲ್ಲಿ ಇಬ್ಬರು ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ

kantharaju shivamogga

ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ಶಿವಮೊಗ್ಗದಲ್ಲಿ ಉಂಟಾದ ಉದ್ವಿಗ್ನ ವಾತಾವರಣ ಕಡಿಮೆಯಾಗುವ ಮುನ್ನವೇ ಎರಡು ದಿನದಲ್ಲಿ ಇಬ್ಬರು ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ.

ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಮಥುರಾ ಪ್ಯಾರಡೈಸ್ ಹೋಟೆಲ್ ಬಳಿ ಸೋಮವಾರ ಹರ್ಷ (18) ಎಂಬ ಯುವಕನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು. ಅನ್ಯಕೋಮಿನ ಯುವಕರು ಹಿಂದು ಯುವತಿಯನ್ನು ಚುಡಾಯಿಸಿದ್ದರು. ಇದನ್ನು ಪ್ರಶ್ನಿಸಲು ಹೋದ ಹರ್ಷನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ಹರ್ಷ

ಗಾಯಗೊಂಡ ಯುವಕ ಹರ್ಷ ಐಟಿಐ ವ್ಯಾಸಂಗ ಮಾಡುತ್ತಿದ್ದು, ಹಿಂದು ಜಾಗರಣ ವೇದಿಕೆ ಕಾರ್ಯಕರ್ತ. ಗಾಯಗೊಂಡ ಯುವಕನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹರ್ಷ ಮೇಲಿನ ಹಲ್ಲೆ ಪ್ರಕರಣ ಕಳೆದ 24 ಗಂಟೆ ಕಳೆಯುವ ಮೊದಲೇ ಸೋಮವಾರ ರಾತ್ರಿ ಮತ್ತೊಬ್ಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ | ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ

ಮೂತ್ರ ವಿಸರ್ಜನೆಗೆಂದು ತೆರಳಿದ್ದ ಕಾಂತರಾಜು(27) ಎಂಬ ಯುವಕನ ಮೇಲೆ ರಾಜೀವ್ ಗಾಂಧಿ ಬಡಾವಣೆಯ ಮೊದಲನೇ ತಿರುವಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ನಾಲ್ಕೈದು ಜನರು ದಾಳಿ ಮಾಡಿದ್ದಾರೆ. ಈ ವೇಳೆ ಮಾರಕಾಸ್ತ್ರವನ್ನು ಕಸಿದುಕೊಂಡ ಯುವಕ ಮನೆಯವರನ್ನು ಕೂಗಿಕೊಂಡಿದ್ದಾನೆ. ಮನೆಯವರು ಹೊರಬಂದ ಕೂಡಲೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಮಾರಕಾಸ್ತ್ರವನ್ನು ಕಸಿದುಕೊಳ್ಳುವಾಗ ಕಾಂತರಾಜು ಕೈಗೆ ಗಾಯಗಳಾಗಿವೆ.

ಕಾಂತರಾಜು ಮೇಲೆ ಹಲ್ಲೆ ಮಾಡಲಾಗಿರುವ ಮಾರಕಾಸ್ತ್ರಗಳು

ಹಲ್ಲೆಗೊಳಗಾಗಿರುವ ಕಾಂತರಾಜು ಹಾಗೂ ಈ ಹಿಂದೆ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಸ್ನೇಹಿತರು. ಹರ್ಷನ ಹತ್ಯೆ ನಂತರ ಶವ ಸಂಸ್ಕಾರದ ವೇಳೆ ರಾಜೀವ್ ಗಾಂಧಿ ಬಡಾವಣೆಯಲ್ಲಿ ಎರಡೂ ಕೋಮಿನ ನಡುವೆ ಕಲ್ಲುತೂರಾಟ ನಡೆದಿತ್ತು. ಈ ಸಂದರ್ಭದ ಧ್ವೇಷವನ್ನು ಮುಂದಿಟ್ಟುಕೊಂಡು ಕಾಂತರಾಜುವಿನ ಮೇಲೆ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಕಾಂತರಾಜು, ನಾಲ್ಕೈದು ಜನರು ದಾಳಿ ಮಾಡಿದರು. ಅಲ್ಲಿಂದ ಓಡಿದ ನಂತರವೂ ಮನೆಗೂ ಬಂದರು. ಅಷ್ಟರ ವೇಳೆಗೆ ಅಲ್ಲಿಂದ ಓಡಿ ಹೋದರು. ನಾನು ಬಜರಂಗದಳ ಕಾರ್ಯಕರ್ತನಾಗಿದ್ದೆ, ಬಿಜೆಪಿಯಲ್ಲಿ ಬೂತ್‌ ಅಧ್ಯಕ್ಷನಾಗಿದ್ದೆ. ಹರ್ಷ ಅಂತಿಮ ಸಂಸ್ಕಾರದ ಮೆರವಣಿಗೆಯಲ್ಲಿ ಭಾಗಿಯಾಗಿದ್ದೆ. ಹಿಂದು ಮುಸ್ಲಿಂ ಧ್ವೇಷವೇ ಈ ದಾಳಿಗೆ ಕಾರಣ. ಕೃಷ್ಣ ಹಾಗೂ ಗೋಪಿ ಎಂಬ ಇನ್ನಿಬ್ಬರ ಮೇಲೆಯೂ ದಾಳಿ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಸುಯೇಬ್, ಜುನೈದ್ ಹಾಗೂ ಇತರೆ ಮೂವರಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ | ಹರ್ಷ ಹತ್ಯೆ ಪ್ರಕರಣ | ಹಿಂದು ಯುವಕರಿಗೆ ಬೆಲೆಯೇ ಇಲ್ಲವೆ?: ಸಾಹಿತಿಗಳಿಂದ ಸರ್ಕಾರಕ್ಕೆ ಪತ್ರ

Exit mobile version