ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು (Murder Case ) ಹರಿದಿದೆ. ಪತಿಯೇ ತನ್ನ ಪತ್ನಿಯನ್ನು ಕಡಿದು ಕೊಲೆ ಮಾಡಿರುವ ಶಂಕೆ ಇದೆ. ಜಯಶ್ರೀ (28) ಕೊಲೆಯಾದವಳು. ಕಿರಣ್ ಉಪಾಧ್ಯ(30) ಕೊಲೆ ಆರೋಪಿಯಾಗಿದ್ದಾನೆ.
ಉಡುಪಿಯಲ್ಲಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಬಳಿ ಘಟನೆ ನಡೆದಿದೆ. ಈ ಜೋಡಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಮುಂಜಾನೆ ಪತ್ನಿಯನ್ನು ಕಿರಣ್ ಉಪಾಧ್ಯ ಕೊಲೆ ಮಾಡಿದ್ದ ಎನ್ನುವ ಮಾಹಿತಿ ಇದೆ.
ಶಂಕೆ ಮೇರೆಗೆ ಪತಿ ಕಿರಣ್ ಉಪಾಧ್ಯ ಗುಂಡ್ಮಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು,ಈ ಕುರಿತು ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಟ್ಯಾರೆಸ್‌ನಿಂದ ಬಿದ್ದು ಗಾಯಗೊಂಡಿದ್ದಳು ಜಯಶ್ರೀ!
ಜಯಶ್ರೀ (31) ಬೀದರ್ ದೊಣಗಪುರ ಮೂಲದವರು. ಕಿರಣ್ ಗುರು ನರಸಿಂಹ ದೇವಸ್ಥಾನದಲ್ಲಿ ಎರಡು ವರ್ಷದಿಂದ ಅಡುಗೆ ಕೆಲಸ ಮಾಡುತ್ತಿದ್ದ. ಮನೆಯ ಟ್ಯಾರೆಸ್‌ನಿಂದ ಬಿದ್ದು ಜಯಶ್ರೀ ಗಾಯಗೊಂಡಿರುವುದಾಗಿ ಕಿರಣ್ ಹೇಳಿದ್ದಾನೆ. ಗಾಯಾಳು ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದ ಎನ್ನಲಾಗಿದೆ. ಸದ್ಯ ಉಡುಪಿಯ ಅಜ್ಜರ ಕಾಡು ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇದ್ದು, ಜಯಶ್ರೀ ಕುಟುಂಬಸ್ಥರ ಆಗಮನಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.
ಇದನ್ನೂ ಓದಿ: Assault Case : ಹುಡುಗಿ ವಿಷ್ಯಕ್ಕೆ ನಡುರಸ್ತೆಯಲ್ಲಿ ಲಾಂಗ್ ಝಳಪಿಸಿದ ಯುವಕರು
ಮಂಡ್ಯದಲ್ಲಿ ದಾಯಾದಿಗಳ ಕಲಹ
ದೇವಸ್ಥಾನದ ವಿಚಾರವಾಗಿ ದಾಯಾದಿಗಳ ನಡುವೆ ಕಲಹ ಉಂಟಾಗಿದೆ. ಸ್ನೇಹಿತರೊಂದಿಗೆ ಬಂದ ಯುವಕನೊಬ್ಬ ಬುಕ್ ಸ್ಟೋರ್‌ಗೆ ನುಗ್ಗಿ ದೊಡ್ಡಪ್ಪನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ಪರಶಿವಮೂರ್ತಿ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಪರಶಿವಮೂರ್ತಿ ಅವರ ಸೋದರನ ಮಗ ಲಿಖಿತ್ ಕುಮಾರ್ ಎಂಬಾತನಿಂದ ಹಲ್ಲೆ ನಡೆದಿದೆ. ಗಾಯಾಳು ಪರಶಿವಮೂರ್ತಿ ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಾರ್ಟಿ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರಿಗೆ ಅವಾಜ್
ಬೆಂಗಳೂರಿನ ಲೇಕ್ ವ್ಯೂ ಅಪಾರ್ಟ್ಮೆಂಟ್ ಎದುರು ಯುವಕ-ಯುವತಿಯರು ಪಾರ್ಟಿ ಮಾಡುತ್ತಿದ್ದರು. ಕಂಟ್ರೋಲ್ ರೂಂಗೆ ಕರೆ ಬಂದ ಹಿನ್ನೆಲೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಮಹಿಳಾ ಜಾಗೃತಿ ಸಂಬಂಧಿಸಿದಂತೆ ಪಾರ್ಟಿ ಮಾಡುವಂತಿಲ್ಲ ಮನೆಗೆ ಹೋಗಿ ಎಂದು ಮೈಕ್ ಮೂಲಕ ಅನೌನ್ಸ್ ಮಾಡಿದ್ದರು.
ಈ ವೇಳೆ ಪೊಲೀಸರೊಂದಿಗೆ ಜಗಳಕ್ಕೆ ಇಳಿದಿದ್ದ ಯುವಕನೊಬ್ಬ ನಮಗೆ ಡಿಸಿಪಿ ಹಾಗೂ ಇನ್‌ಸ್ಪೆಕ್ಟರ್ ಪರಿಚಯ ಎಂದು ಅವಾಜ್ ಹಾಕದ್ದಾನೆ. ಪೊಲೀಸರ ಮೇಲೆ ಅಟ್ರಾಸಿಟಿ ಹಾಗು ಲೈಂಗಿಕ ದೌರ್ಜನ್ಯ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಮಾತ್ರವಲ್ಲದೇ ಪೊಲೀಸರನ್ನು ತಳ್ಳಿ ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಡಿಸಿಪಿ ಸಾರಾಫಾತೀಮಾ, ಇನ್‌ಸ್ಪೆಕ್ಟರ್ ಮಹೇಶ್ ಅವರ ಹೆಸರು ಹೇಳಿ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಸುನೀಲ್ ಹಾಗು ಇನ್ನಿತರ ಯುವಕರಿಂದ ಕೃತ್ಯ ನಡೆದಿದೆ. ಅಮೀನ ಸಾ ಬಿರಾದರ್ , ವೆಂಕಟೇಶ್ , ಹಸಿಂ ಪಟೇಲ್ ದೀಪು ಆರ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಪೊಲೀಸರಿಂದಲೇ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ