Site icon Vistara News

ಅಮೆರಿಕದ ಫೀನಿಕ್ಸ್‌ನಲ್ಲಿ ಪುತ್ತಿಗೆ ಮಠದಿಂದ ಶತ ಚಂಡಿಕಾಯಾಗ

ಪುತ್ತಿಗೆ ಮಠ

ಫೀನಿಕ್ಸ್‌ (ಅಮೆರಿಕ) ಲೋಕ ಕಲ್ಯಾಣಾರ್ಥವಾಗಿ ಅಮೆರಿಕಾದ ಫೀನಿಕ್ಸ್ ನಗರದಲ್ಲಿರುವ ಪುತ್ತಿಗೆ ಮಠದಲ್ಲಿ ಎಪ್ರಿಲ್ 11ರಂದು ಆರಂಭಗೊಂಡ ಶತ ಚಂಡಿಕಾಯಾಗ ಪೂರ್ಣಾಹುತಿ ಮೂಲಕ ಸಂಪನ್ನಗೊಂಡಿದೆ.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಂಕಲ್ಪದಂತೆ ಜರಗಿದ ಈ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮವನ್ನು ಸಾವಿರಾರು ಭಕ್ತರು ಸಾಕ್ಷೀಕರಿಸಿ ಧನ್ಯರಾದರು. 10 ಋತ್ವಿಜರಿಂದ ಶತ ಪಾರಾಯಣ, ಒಂದು ಲಕ್ಷ ನವಾಕ್ಷರಿ ಮಂತ್ರ ಜಪ, ಹತ್ತು ಸಾವಿರ ಆಜ್ಯ ಹೋಮ ಮೂಲಕ ಶತಚಂಡಿಕಾಯಾಗ ನೆರವೇರಿತು.

ಶತ ಚಂಡಿಕಾ ಯಾಗಕ್ಕೆ 70 ಕೆಜಿ ಪರಮಾನ್ನ ಬಳಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀನಿವಾಸ ದೇವರಿಗೆ ಹಾಗೂ ಶ್ರೀ ದುರ್ಗೆಗೆ ಕುಂಭಾಭಿಷೇಕ ಜರಗಿತು. ಈ ಸಂದರ್ಭದಲ್ಲಿ ವಿಷ್ಣು ಚಕ್ರಾಬ್ಜ್ಯ ಪೂಜೆಯೊಂದಿಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಪ್ರಧಾನ ಅರ್ಚಕರಾದ ಕಿದಿಯೂರು ರಾಮದಾಸ್ ಭಟ್, ಶ್ರೀಕಾಂತ್ ಸಾಮಗ, ರಾಘವೇಂದ್ರ ಕೊಡಂಚ, ಅಮೆರಿಕದ 9 ಮಠಗಳ ಪ್ರಧಾನ ಅರ್ಚಕರು, ಟೆಂಪೆ ನಗರದ ಮೇಯರ್ ಪ್ರತಿನಿಧಿ ಪ್ಯಾರಿಷ್ ಸ್ಪಿಟ್ಜ್, ಫಿನಿಕ್ಸ್ ಪುತ್ತಿಗೆ ಮಠದ ಶ್ರೀ ವೆಂಕಟೇಶ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ ರಾವ್, ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಮೆರಿಕೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಉಡುಪಿ ಶೈಲಿಯಲ್ಲಿ ಬಾಳೆಎಲೆಯಲ್ಲಿ ಮಾಹಾ ಪ್ರಸಾದ ಸ್ವೀಕರಿಸಿದರು.

ಇದನ್ನೂ ಓದಿ: ಸಾಹಿತ್ಯ ಸಮ್ಮೇಳನಕ್ಕೂ ಮುನ್ನ ನಾಡಗೀತೆಗೆ ಮುಕ್ತಿ ನೀಡಿ: ಧಾಟಿ ನಿಗದಿಗೆ ಸರ್ಕಾರವನ್ನು ಒತ್ತಾಯಿಸಿದ ಕಸಾಪ

Exit mobile version