Site icon Vistara News

Viral video: ನೂರಾರು ಕಾರುಗಳೊಂದಿಗೆ ಕೆಜಿಎಫ್ ಸ್ಟೈಲ್‌ನಲ್ಲಿ ಎಂಟ್ರಿ; ಕಾರ್ಕಳ ಕಾಂಗ್ರೆಸ್‌ ಅಭ್ಯರ್ಥಿ ವಿಡಿಯೋ ವೈರಲ್‌

muniyalu

ಉಡುಪಿ: ಕಾರ್ಕಳದಲ್ಲಿ ಕಾಂಗ್ರೆಸ್ ಟಿಕೆಟ್‌ ದಕ್ಕಿಸಿಕೊಂಡಿರುವ ಅಭ್ಯರ್ಥಿ ನೂರಾರು ಕಾರುಗಳೊಂದಿಗೆ ʼಪುರಪ್ರವೇಶʼ ಮಾಡುತ್ತಿರುವ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ಟಿಕೆಟ್‌ ದೊರೆತಿದೆ. ಕಳೆದ ಬಾರಿಯೂ ಇವರು ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಪಟ್ಟಿದ್ದರು. ಆದರೆ ಮಾಜಿ ಸಿಎಂ ವೀರಪ್ಪ ಮೊಯಿಲಿ ವಿರೋಧದ ನಡುವೆ ಟಿಕೆಟ್ ಕೈ ತಪ್ಪಿತ್ತು.

ಈ ಬಾರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುನಿಯಾಲು ಅವರ ಹೆಸರಿತ್ತು. ಆದರೆ ಮುನಿಯಾಲು ಅರ್ಜಿ ಹಾಕಿರಲಿಲ್ಲ. ಮುನಿಯಾಲು ಅವರಿಗೆ ಈ ಬಾರಿಯೂ ಟಿಕೆಟ್ ನೀಡದಂತೆ ಮೊಯಿಲಿ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಆದರೆ ಮುನಿಯಾಲು ದೆಹಲಿಗೆ ತೆರಳಿ ಹೈಕಮಾಂಡ್ ಮೂಲಕ ಟಿಕೆಟ್ ಪಡೆದಿದ್ದಾರೆ. ಕಾರ್ಕಳಕ್ಕೆ ಮರಳುವಾಗ ಬರೋಬ್ಬರಿ 100 ಕಾರುಗಳೊಂದಿಗೆ ಮರಳಿದ್ದಾರೆ. ಇದೀಗ ಮುನಿಯಾಲು ಅವರ ಕೆಜಿಎಫ್ ಸಿನಿಮಾದ ನಾಯಕನ ಮಾದರಿ ಎಂಟ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಾರ್ಕಳದಲ್ಲಿ ಬಿಜೆಪಿಯಿಂದ ಶಾಸಕ ಸುನಿಲ್‌ ಕುಮಾರ್‌ ಸ್ಪರ್ಧಿಸುತ್ತಿದ್ದಾರೆ. ಹಿಂದೂ ಸಂಘಟನೆ ನಾಯಕ ಪ್ರಮೋದ್‌ ಮುತಾಲಿಕ್‌ ಪಕ್ಷೇತರರಾಗಿ ಸ್ಪರ್ಧಿಸಿ ಸುನೀಲ್‌ ಕುಮಾರ್‌ಗೆ ಎದುರಾಗಿ ತೊಡೆ ತಟ್ಟಿದ್ದಾರೆ.

ಇದನ್ನೂ ಓದಿ: ಮಣ್ಣಲ್ಲಿ ಹೂತು ಹಾಕುತ್ತೇನೆ; ಅತೀಕ್‌ ಅಹ್ಮದ್‌ ಪುತ್ರನ ಎನ್‌ಕೌಂಟರ್‌ ಬೆನ್ನಲ್ಲೇ ಯೋಗಿ ಆವಾಜ್‌ ವೈರಲ್

Exit mobile version