ಬೆಂಗಳೂರು: ಇಂದು ನಾಡಿನೆಲ್ಲೆಡೆ ಚಾಂದ್ರಮಾನ ಯುಗಾದಿ ಹಬ್ಬದ ಸಂಭ್ರಮ ಮೂಡಿದ್ದು, ಹೊಸ ವರ್ಷದ ಆಗಮನವನ್ನು ಸಡಗರದಿಂದ ಆಚರಿಸಲು ಸಿಟಿಜನರು ಸಜ್ಜಾಗಿದ್ದಾರೆ. ಹೆಚ್ಚಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
ನಗರದ ವಿವಿಧ ಮಾರುಕಟ್ಟೆಗಳಲ್ಲಿ ಯುಗಾದಿ ಹಿಂದಿನ ರಾತ್ರಿ ಹಾಗೂ ಯುಗಾದಿಯ ಮುಂಜಾನೆ ವ್ಯಾಪಾರ ಜೋರಾಗಿ ನಡೆದಿದೆ. ಬೆಳ್ಳಂಬೆಳಗ್ಗೆ ಕೆ.ಆರ್. ಮಾರುಕಟ್ಟೆಯಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಬೀದಿ ವ್ಯಾಪಾರಿಗಳು ಮಾತ್ರವಲ್ಲದೆ ಇತರ ಜನತೆ ಕೂಡ ತಾಜಾ ಹೂವು, ಹಣ್ಣು, ತರಕಾರಿ, ತಳಿರು ತೋರಣಗಳಿಗೆ ಮುಗಿಬಿದ್ದಿದ್ದಾರೆ.
ಹಬ್ಬದ ಹಿನ್ನಲೆ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದರೂ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಜನ ಮುಂದಾಗಿದ್ದಾರೆ. ಹೂಗಳ ಬೆಲೆ ಗಗನಕ್ಕೇರಿದೆ. ಕೆಲವು ಬೆಲೆಗಳು ಇಲ್ಲಿವೆ:
ಮಾವಿನ ಸೊಪ್ಪು (1 ಕುಚ್ಚು)- 20 ರೂ.
ಬೇವಿನ ಸೊಪ್ಪು (1 ಕುಚ್ಚು)- 30 ರೂ.
ತುಳಸಿ (1 ಕುಚ್ಚು) 100 ರೂ.
ಕನಕಾಂಬರ ಹೂ (1 ಕುಚ್ಚು)- 100 ರೂ.
ಮಲ್ಲಿಗೆ ಹೂ (1 ಕುಚ್ಚು)- 50 ರೂ.
ಮಲ್ಲಿಗೆ ಹಾರ (ಒಂದಕ್ಕೆ) – 200 ರೂ.
ಸೇವಂತಿಗೆ ಹಾರ (ಒಂದಕ್ಕೆ)- 150 ರೂ.
ಇದನ್ನೂ ಓದಿ: Ugadi 2023 : ಕಾಲದ ಸಂದೇಶ ಸಾರುವ ಯುಗಾದಿ