ರಾಮನಗರ: ಸಾಲದ ಹೊರೆಗೆ ನೊಂದು ಒಂದೇ ಕುಟುಂಬದ 7 ಜನ ವಿಷ ಕುಡಿದು ಆತ್ಮಹತ್ಯೆಗೆ (Suicide Case) ಯತ್ನಿಸಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿರುವುದು ತಾಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮಂಗಳಮ್ಮ (28) ಮೃತ ಮಹಿಳೆ. ಇನ್ನುಳಿದ 6 ಜನರ ಸ್ಥಿತಿ ಗಂಭೀರವಾಗಿದೆ. ಸಾಲದಿಂದ ಮನನೊಂದು ಆತ್ಮಹತ್ಯೆ ರಾಜು ಎಂಬುವವರ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಏಳು ಜನರ ಪೈಕಿ ರಾಜ ಅವರ ಪತ್ನಿ ಮಂಗಳಮ್ಮ ಮೃತಪಟ್ಟಿದ್ದಾರೆ. ಇನ್ನುಳಿದ ಮೃತಳ ಪತಿ ರಾಜು, ತಾಯಿ ಸೊಲ್ಲಾಪುರದಮ್ಮ, ಸಹೋದರಿ ಸವಿತಾ, ಮಕ್ಕಳಾದ ಆಕಾಶ್, ಕೃಷ್ಣ, ದರ್ಶಿನಿ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಂಡ್ಯದ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Murder Case: ಕ್ಷುಲ್ಲಕ ಕಾರಣಕ್ಕೆ ನಡೆದ ಅಣ್ಣ ತಮ್ಮನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ