Site icon Vistara News

Murder Attempt: ರೇವಣ್ಣ ಆಪ್ತನ ಕೊಲೆ ಯತ್ನ ಪ್ರಕರಣ; ಆರೋಪಿ ಇನ್ಸ್‌ಪೆಕ್ಟರ್‌ಗೆ ಅಂಡರ್ ವರ್ಲ್ಡ್ ಲಿಂಕ್?

inspector AShok

ಬೆಂಗಳೂರು: ಕೆಲ ಪೊಲೀಸರು ಕ್ರಿಮಿನಲ್‌ಗಳ ಜತೆ ಲಿಂಕ್ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಆಪ್ತ ಅಶ್ವತ್ಥ ಕೊಲೆ ಯತ್ನ ಪ್ರಕರಣದಲ್ಲಿ (Murder Attempt) ಬಂಧನವಾಗಿರುವ ಆರೋಪಿ, ಕೋಲಾರ ಐಎಸ್‌ಡಿ ವಿಭಾಗದ ಇನ್ಸ್‌ಪೆಕ್ಟರ್‌ ಅಶೋಕ್‌ಗೆ ಭೂಗತ ಲೋಕದ ನಂಟು ಇದೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಬಂಧನವಾಗಿರುವ ಇನ್ಸ್‌ಪೆಕ್ಟರ್ ಅಶೋಕ್‌, ಭೂಗತ ಪಾತಕಿ ಬಾಂಬೆ ರವಿಗೆ ಬಾಸ್‌ ಆಗಿದ್ದ ಎನ್ನಲಾಗಿದೆ. ನಿರ್ಮಾಪಕ ಉಮಾಪತಿ ಗೌಡ, ಉದ್ಯಮಿ ದೀಪಕ್ ಗೌಡ ಹತ್ಯೆಗೆ ಸ್ಕೆಚ್ ಪ್ರಕರಣದಲ್ಲೂ ಇನ್ಸ್‌ಪೆಕ್ಟರ್ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಉಮಾಪತಿ ಹತ್ಯೆಗೆ ಸ್ಕೆಚ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ರೌಡಿಗಳಾದ ಕರಿಯ ರಾಜೇಶ್ ಹಾಗೂ ಸಂತು ಗಿತ್ತು ಇನ್ಸ್‌ಪೆಕ್ಟರ್ ಜತೆ ಲಿಂಕ್ ಇತ್ತು. ಅವರು ಇನ್ಸ್‌ಪೆಕ್ಟರ್‌ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೂಡ ಕೋರಿದ್ದರು.

ಬಾಂಬೆ ರವಿ ಹಾಗೂ ಸಹಚರರ ಮೂಲಕ ಈ ಇನ್ಸ್‌ಪೆಕ್ಟರ್ ಹಫ್ತಾ, ಬೆದರಿಕೆ, ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎಂಬ ಆರೋಪವೂ ಇದೆ. ಎಚ್‌.ಡಿ. ರೇವಣ್ಣನ ಆಪ್ತನ ಹತ್ಯೆಗೆ ಸ್ಕೆಚ್‌ನಲ್ಲೂ ಲೊಕೇಷನ್ ಸೇರಿ ಪ್ರತಿ ಚಲನವಲನದ ಬಗ್ಗೆ ನೀಡಿದ್ದರು.

ಇದನ್ನೂ ಓದಿ | Karnataka Politics : ಕುಣಿಯಲಾರದವರು ನೆಲ ಡೊಂಕು ಅಂದರಂತೆ; ಕುಮಾರಸ್ವಾಮಿಯನ್ನು ಕುಟುಕಿದ ಸಿಎಂ ಸಿದ್ದರಾಮಯ್ಯ

ಈ ಹಿಂದೆ ಬೆಂಗಳೂರು ಸಿಸಿಬಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್ ಆಗಿದ್ದಾಗ ರೌಡಿಗಳ ಲಿಂಕ್ ಬೆಳೆಸಿಕೊಂಡು ಸಮಾಜಘಾತುಕ ಚಟುವಟಿಕೆಗಳಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಭಾಗಿಯಾಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ಸ್‌ಪೆಕ್ಟರ್ ವಿರುದ್ಧ ಹಲವು ಸಾಕ್ಷ್ಯಗಳು ಲಭ್ಯವಾಗಿದೆ‌.

ಪ್ರಕರಣದಲ್ಲಿ ಆರು ಆರೋಪಿಗಳ ಬಂಧನ

ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್​.ಡಿ.ರೇವಣ್ಣ ಆಪ್ತ ಅಶ್ವತ್ಥ್ ಹತ್ಯಾಯತ್ನ ಪ್ರಕರಣದಲ್ಲಿ ಈಗಾಗಲೇ ಆರು ಆರೋಪಿಗಳನ್ನು ಹೊಳೆನರಸೀಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಐಎಸ್‌ಡಿ ವಿಭಾಗದ ಇನ್ಸ್​​ಪೆಕ್ಟರ್​ ಅಶೋಕ್, ಸತೀಶ್, ತೇಜಸ್ವಿ, ಮುರುಗನ್, ಮಧುಸೂದನ್, ಅಶೋಕ್, ಅರವಿಂದ್ ಬಂಧಿತರು. ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಲ್ಲಿ ಕೋಲಾರ ಐಎಸ್‌ಡಿ ಇನ್ಸ್​ಪೆಕ್ಟರ್ ಅಶೋಕ್​ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ | Varthur Santhosh Arrest : ಕೃತಕ ಸೆರೆಮನೆಯಿಂದ ಒರಿಜಿನಲ್‌ ಜೈಲಿಗೆ ಹಳ್ಳಿಕಾರ್‌ ಒಡೆಯ!

ಮಾಜಿ ಸಚಿವ ಎಚ್‌.ಡಿ. ರೇವಣ್ಣ ಆಪ್ತ ಹಾಗೂ ಗುತ್ತಿಗೆದಾರ ಅಶ್ವತ್ಥ್‌ ಮೇಲೆ ಅ.10 ರಂದು ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಬಳಿ ಮಾರಕಾಸ್ತ್ರಗಳಿಂದ ದಾಳಿ ನಡೆದದಿತ್ತು. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ‌ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಚನ್ನರಾಯಪಟ್ಟಣ ಠಾಣೆಗೆ ಗುತ್ತಿಗೆದಾರ ಅಶ್ವತ್ಥ್‌ ದೂರು ನೀಡಿದ್ದರು.

Exit mobile version