ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರಪಾಲಾಗಿದ್ದ ವಿದ್ಯಾರ್ಥಿ ಶವವಾಗಿ (Dead body Found) ಪತ್ತೆಯಾಗಿದ್ದಾನೆ. ಎರಡು ದಿನಗಳ ಬಳಿಕ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲತೀರಕ್ಕೆ ಶವ ತೇಲಿ (Accident Case) ಬಂದಿದೆ. ಕೋಲಾರದ ಶ್ರೀನಿವಾಸಪುರ ಮೂಲದ ವಿನಯ.ಎಸ್.ವಿ(22) ಮೃತ ವಿದ್ಯಾರ್ಥಿ.
ಬೆಂಗಳೂರಿನಿಂದ ಹಿಲ್‌ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಬಂದಿತ್ತು. ಬಾವಿಕೊಡ್ಲ ಕಡಲತೀರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕು ಅಸ್ವಸ್ಥಗೊಂಡಿದ್ದ ಐವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿತ್ತು. ಈ ವೇಳೆ ನೀರಲ್ಲಿ ವಿನಯ್ ಕೊಚ್ಚಿಹೋಗಿದ್ದ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಗೋಕರ್ಣ ಪ್ರಾಥಮಿಕ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೀರು ಹಾಯಿಸಲು ಹೋಗಿದ್ದ ರೈತ ಕರೆಂಟ್ ಶಾಕ್‌ನಿಂದ ಸಾವು
ದಾವಣಗೆರೆ: ಭತ್ತದ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ರೈತ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣೆಬೆಳಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಲಿಂಗಪ್ಪ (32) ಮೃತಪಟ್ಟ ದುರ್ದೈವಿ. ಶಿವಲಿಂಗಪ್ಪನವರು ಸಂಜೆ ಜಮೀನಿಗೆ ನೀರು ಹಾಯಿಸಲು ಹೋದ ವೇಳೆ ಅವಘಡ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊಂಡದಲ್ಲಿ ಮುಳುಗಿ ಯುವಕ ಸಾವು
ಹೊಲಕ್ಕೆ ನೀರುಣಿಸಲು ಹೋದಾಗ ಹೊಂಡದಲ್ಲಿ ಮುಳುಗಿ ಯುವಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ.
ಹೊಂಡದಲ್ಲಿ ಮೋಟರ್ ಪೈಪ್ ಅಳವಡಿಸಲು ಹೋದಾಗ ಕಾಲು ಜಾರಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಗಲಕೋಟೆಯ ಸುಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ. ಮಲ್ಲಪ್ಪ ಕಿತ್ತಲಿ(25) ಮೃತ ದುರ್ದೈವಿ. ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ. ಶವ ಹೊರ ತೆಗೆಯಲು ಸ್ಥಳೀಯರಿಂದ ಶೋಧ ಕಾರ್ಯ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ