ಮಂಡ್ಯ: ತಂದೆಯಿಂದಲೇ ಇಬ್ಬರು ಮಕ್ಕಳ ಕೊಲೆಯಾದ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ (Murder Case) ನಡೆದಿದೆ.
ಅದರ್ಶ್ (4) ಹಾಗೂ ಅಮೂಲ್ಯ (3) ಕೊಲೆಯಾಗಿರುವ ಮಕ್ಕಳು. ಪಾಪಿ ತಂದೆ ಮೋಹನ್ ಕುಮಾರ್ ಎಂಬಾತ, ಸುತ್ತಿಗೆಯಿಂದ ಹೊಡೆದು ಮಕ್ಕಳ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಪತ್ನಿಗೂ ಹಲ್ಲೆ ಮಾಡಿದ್ದಾನೆ. ಕೊಲೆಯ ನಿರ್ದಿಷ್ಟ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ.
ಮೂಲತಃ ಗುಲ್ಬರ್ಗದವರಾಗಿರುವ ಮೋಹನ್ ಕುಮಾರ್ ಕುಟುಂಬ ಮರಳಗಾಲದ ವಿರುಪಾಕ್ಷ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಾಡಿನಲ್ಲಿ ನಡೆಯುತ್ತಿದ್ದವನ ಮೇಲೆ ಕರಡಿ ದಾಳಿ, ಗಂಭೀರ ಗಾಯ
ಕಾರವಾರ: ಕಾಡಿನಲ್ಲಿ ನಡೆದುಹೋಗುತ್ತಿದ್ದವನ ಮೇಲೆ ಕರಡಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡರೂ 2 ಕಿ.ಮೀ ನಡೆದು ವ್ಯಕ್ತಿ ಮನೆ ಸೇರಿದ್ದಾನೆ. ಮಹಾರಾಷ್ಟ್ರ ಮೂಲದ ವಿಠ್ಠು ಶೆಳಕೆ (70) ಗಾಯಗೊಂಡ ವ್ಯಕ್ತಿ.
ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ತಿಂಬೋಲಿ ಗ್ರಾಮದ ಕಾಡಿನಲ್ಲಿ ಘಟನೆ ನಡೆದಿದೆ. ರಾಮನಗರದಿಂದ ತಿಂಬೋಲಿ ಗ್ರಾಮಕ್ಕೆ ಕಾಡಿನ ಹಾದಿಯಲ್ಲಿ ಹೊರಟಿದ್ದ ವಿಠ್ಠು ಶೆಳಕೆಯ ಮೇಲೆ ಏಕಾಏಕಿ ಕರಡಿ ದಾಳಿ ನಡೆಸಿದೆ. ವ್ಯಕ್ತಿಯ ತಲೆಗೆ ತೀವ್ರ ಗಾಯಗೊಳಿಸಿ ಕಣ್ಣು ಕಿತ್ತು ಹಾಕಿದೆ. ಗಂಭೀರವಾಗಿ ಗಾಯಗೊಂಡಾತನಿಗೆ ರಾಮನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕಳಿಸಲಾಗಿದೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Crime News: ಚಾಕಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ