ಉತ್ತರ ಕನ್ನಡ : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ (Murder Case) ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಸರ್ಕಾರಿ ಆಸ್ಪತ್ರೆ ಕ್ವಾರ್ಟರ್ಸ್ ಬಳಿ ಘಟನೆ ನಡೆದಿದೆ. ಹುಬ್ಬಳ್ಳಿ ಮೂಲದ ಇಮ್ತಿಯಾಝ್(25) ಕೊಲೆಯಾದವನು.
ಗಾರೆ ಕೆಲಸಕ್ಕಾಗಿ ಇಮ್ತಿಯಾಝ್ ಕಳೆದೊಂದು ತಿಂಗಳಿನಿಂದ ಕುಮಟಾ ಸರಕಾರಿ ಆಸ್ಪತ್ರೆಯ ಕ್ವಾರ್ಟರ್ಸ್‌ನಲ್ಲಿ ತಂಗಿದ್ದ. ಈತನ ಜತೆ ಹುಬ್ಬಳ್ಳಿ ಮೂಲದ ಮೊಯುದ್ದೀನ್, ಮೌನೇಶ್ ಹಾಗೂ ಸಾದಿಕ್ ಎಂಬುವವರು ಕ್ವಾರ್ಟರ್ಸ್‌ನಲ್ಲಿ ತಂಗಿದ್ದರು. ಗಾರೆ ಕೆಲಸಕ್ಕಾಗಿಯೇ ಕುಮಟಾಕ್ಕೆ ಬಂದು, ನಾಲ್ವರು ಒಂದೇ ರೂಮಿನಲ್ಲಿ ತಂಗಿದ್ದ. ಇಮ್ತಿಯಾಝ್ ಕೊಲೆಯ ಬಳಿಕ ಜತೆಗಿದ್ದ ಮೂವರು ಪರಾರಿ ಆಗಿದ್ದಾರೆ.
ಇನ್ಸ್‌ಪೆಕ್ಟರ್ ಯೋಗೀಶ್ ನೇತೃತ್ವದಲ್ಲಿ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.