ಕಾರವಾರ: ವಿವಿಧ ಉಗ್ರ ಸಂಘಟನೆಗಳೊಂದಿಗೆ ಸೇರಿ ರಾಜ್ಯದಲ್ಲಿ ಸ್ಲೀಪರ್‌ಸೆಲ್ ರೂಪಿಸಿಕೊಂಡಿರುವ ಆರೋಪಕ್ಕೆ ಪೂರಕವಾಗಿ ಭಟ್ಕಳದಲ್ಲಿ ಒಬ್ಬ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ಅಬ್ದುಲ್ ಮುಕ್ತಧೀರ್(30) ಬಂಧಿತ ಆರೋಪಿ ಎನ್ನಲಾಗಿದೆ.
ಈತ ಐಸಿಸ್ ಜತೆ ನಂಟು ಹೊಂದಿದ್ದ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿದ್ದುಕೊಂಡು ಐಸಿಸ್ ಬರವಣಿಗೆಗಳನ್ನು ಭಾಷಾಂತರ ಮಾಡುವ ಕೆಲಸದಲ್ಲಿ ತೊಡಗಿದ್ದ. ಭಟ್ಕಳದ ಚಿನ್ನದಪಳ್ಳಿ ಪ್ರದೇಶದಲ್ಲಿರುವ ಪತ್ನಿಯ ಮನೆಯಲ್ಲಿದ್ದ ಅಬ್ದುಲ್ ಮುಕ್ತಧೀರ್‌ನನ್ನು ಭಾನುವಾರ ಬೆಳಗಿನ ಜಾವ ಎನ್‌ಐಎ ತಂಡ ವಶಕ್ಕೆ ಪಡೆದಿದೆ.
ದೆಹಲಿ ಮತ್ತು ಬೆಂಗಳೂರಿನ ಎನ್‌ಐಎ ತಂಡದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಈತನನ್ನು ಗುಪ್ತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ನಂತರ ಮತ್ತಷ್ಟು ಮಾಹಿತಿಗಳು ಲಭಿಸಬೇಕಿದೆ ಎಂದು ಉನ್ನತ ಮೂಲಗಳು ʻವಿಸ್ತಾರ ನ್ಯೂಸ್ʼಗೆ ಮಾಹಿತಿ ನೀಡಿವೆ.
ಇದನ್ನೂ ಓದಿ | ಉದಯಪುರದ ಹಿಂದೂ ಟೈಲರ್ ಶಿರಚ್ಛೇದ ಮಾಡಿದ ಹಂತಕರಿಗೆ ಐಸಿಸ್ ಲಿಂಕ್!