Site icon Vistara News

Multi specialty hospital | ಸಿಎಂಗೆ ವಾರದ ಗಡುವು, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವೆಂದ ಉತ್ತರ ಕನ್ನಡಿಗರು

Multi specialty hospital

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಮ್ಸ್ ಮಾದರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ (Multi specialty hospital) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾನಿರತ ಉತ್ತರ ಕನ್ನಡ ಜಿಲ್ಲೆಯ ಹೋರಾಟಗಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ವಾರದ ಗಡುವು ನೀಡುವ ಮೂಲಕ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ (ಜುಲೈ ೩೦) ಬೆಳಗ್ಗೆ 10 ಗಂಟೆಯಿಂದ ಉ.ಕ.ಜಿಲ್ಲೆಯ ೫೦೦ಕ್ಕೂ ಹೆಚ್ಚು ಮಂದಿ ಪ್ರತಿಭಟಿಸುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದರು. ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಕಿಡಿಕಾರಿದ್ದರು.

ಇದನ್ನೂ ಓದಿ | Multi specialty hospital | ಬೆಂಗಳೂರಲ್ಲಿ ಉತ್ತರ ಕನ್ನಡಿಗರ ಕಿಡಿ, ಬಂದಾಗ ಸಿಹಿ ಸುದ್ದಿ ಕೊಡುವರೇ ಸಿಎಂ?

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉತ್ತರ ಕನ್ನಡದ ಹೋರಾಟಗಾರರು ಸಿಎಂಗೆ ಮನವಿ ಪತ್ರ ನೀಡಿದ್ದರು. ಇದೀಗ ಒಂದು ವಾರದ ಗಡುವು ನೀಡಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ವಾರದೊಳಗೆ ಆಸ್ಪತ್ರೆಯ ವಿಚಾರವನ್ನು ಸಿಎಂ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಮತ್ತೆ ಹೋರಾಟ ಮಾಡುವುದಾಗಿ ಉತ್ತರ ಕನ್ನಡ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ, ಸಿಎಂ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದೆ.

ಪ್ರತಿಭಟನೆಯಲ್ಲಿ ಸಾಹಿತಿಗಳು ಭಾಗಿಯಾಗಿದ್ದರು. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮುಖಾಂತರ ಅಭಿಯಾನ ಆರಂಭಗೊಂಡಿದೆ.

ಇದನ್ನೂ ಓದಿ | Multi specialty hospital | ಉತ್ತರ ಕನ್ನಡ ಆಸ್ಪತ್ರೆ ಹೋರಾಟ: ಬೆಂಗಳೂರಿನಲ್ಲಿ ಇಂದು ಬೃಹತ್​ ಪ್ರತಿಭಟನೆ

Exit mobile version