Site icon Vistara News

ಸಚಿವ ಶಿವಾನಂದ್ ಪಾಟೀಲ್ ಮೇಲೆ ನೋಟಿನ ಸುರಿಮಳೆ! ಇದು ಕನ್ನಡಿಗರಿಂದ ಲೂಟಿ ಹೊಡೆದ ದುಡ್ಡು ಎಂದ ಬಿಜೆಪಿ!

Video of Minister Shivanand Patil Where currency rained on him goes viral

ಬೆಂಗಳೂರು: ಹೈದರಾಬಾದ್‌ನಲ್ಲಿ (Hyderabad) ನಡೆದ ವಿವಾಹದ ವೇಳೆ (Marriage Party) ಸಚಿವ ಶಿವಾನಂದ್ ಪಾಟೀಲ್ (Minister Shivanand Patil) ಅವರ ಮೇಲೆ ನೋಟುಗಳ ಸುರಿಮಳೆಯಾಗುತ್ತಿರುವುದನ್ನು ತೋರಿಸುವ ವೀಡಿಯೊವನ್ನು (Viral Video) ಕರ್ನಾಟಕ ಬಿಜೆಪಿ ಘಟಕವು (Karnataka BJP) ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಬಿಜೆಪಿ ಷೇರ್ ಮಾಡಿದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಕಲೆಕ್ಷನ್‌ ದಂಧೆಯಲ್ಲಿ ಕಾಂಗ್ರೆಸ್ ಸಚಿವರು ನಿತ್ಯವೂ ಮಿಂದೇಳುತ್ತಿದ್ದಾರೆ. ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಹೇಗೆ ಮಜಾ ಉಡಾಯಿಸುತ್ತಿದ್ದಾರೆ ಎಂಬುದನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲರು ನೈಜ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ತನ್ನ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದೆ. ಜತೆಗೆ ಖಾಸಗಿ ವಾಹಿನಿಯೊಂದರ ನ್ಯೂಸ್ ತುಣಕವೊಂದನ್ನು ಷೇರ್ ಮಾಡಿದೆ.

ಈ ಸುದ್ದಿಯನ್ನೂ ಓದಿ: Farm Bills: ಮೋದಿ ಸರ್ಕಾರದ 3 ಕೃಷಿ ಕಾಯ್ದೆ ವಾಪಸ್‌: ಇವುಗಳಿಂದ ದಲ್ಲಾಳಿಗಳಿಗೇ ಲಾಭ ಎಂದ ರಾಜ್ಯ ಸರ್ಕಾರ

ಬಿಜೆಪಿಯ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶಿವಾನಂದ್ ಪಾಟೀಲ್ ಅವರು, ಮದುವೆ ಅಟೆಂಡ್ ಮಾಡಲು ಹೈದ್ರಾಬಾದ್‌ಗೆ ಹೋಗಿದ್ದೆ. ನಾನು ಲಗ್ನಕ್ಕೆ ಹೋಗಬಾರದಾ? ಅದು ಅಲ್ಲಿಯವರ ಕಲ್ಚರ್, ಅದಕ್ಕೆ ನಾನೇನು ಮಾಡೋಕಾಗತ್ತೆ? ಹೈದ್ರಾಬಾದ್‌ನಲ್ಲಿ ಬರ ಇದೆಯ? ಅಲ್ಲಿಯ ಗೃಹ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ರು. ಇದನ್ನೂ ಈಗ ವೈರಲ್ ಮಾಡ್ತೀರಾ ನೀವು. ಯಾರೋ ಮಾಡಿದ್ದಕ್ಕೆ ನಾನು ಮದುವೆಗೆ ಹೋಗಬಾರದಾ? ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೇ. ನಾನು ಹೋಗಿ ಅವರ ಕಲ್ಚರ್ ನಿಲ್ಲಿಸೋದಕ್ಕಾಗತ್ತಾ ಎಂದು ಪ್ರಶ್ನಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಸಚಿವರಿಂದಲೇ ಮಾಹಿತಿ ಪಡೆದುಕೊಂಡ ಬಳಿಕ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ, ಘಟನೆ ಕುರಿತು ಪೂರ್ವಾಪರ ಮಾಹಿತಿ ಇಲ್ಲದೇ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ರಾಜ್ಯ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version