Site icon Vistara News

ಕಣ್ಣಿಗೆ ಖಾರದ ಪುಡಿ ಎರಚಿ 6 ಲಕ್ಷ ರೂ. ದೋಚಿದ ಕಳ್ಳರು

jewelry shop

ವಿಜಯನಗರ: ಜನನಿಬಿಡ ಪ್ರದೇಶದಲ್ಲಿ ಕಳ್ಳರು ಕೈಚಳಕ ತೋರಿದ್ದು, ಬ್ಯಾಂಕ್‌ಗೆ ಹಣ ಜಮಾ ಮಾಡಲು ಹೊರಟಿದ್ದ ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ 6 ಲಕ್ಷ ರೂಪಾಯಿ ದೋಚಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿಯ ಬಸವೇಶ್ವರ ಬಜಾರ್‌ನಲ್ಲಿ ಘಟನೆ ನಡೆದಿದೆ. ಅನ್ವೇರಿ ಜ್ಯೂವೆಲರ್ಸ್ ಅಂಗಡಿಯ ಗುಮಾಸ್ತ ಸಂತೋಷ್ ಹಣ ಕಳೆದುಕೊಂಡವರು. ಬ್ಯಾಂಕ್‌ಗೆ ಹಣ ಜಮಾ ಮಾಡಲು ಹೊರಟಿದ್ದ ಸಂತೋಷ್‌ ಅವರನ್ನು ಗಮನಿಸುತ್ತಿದ್ದ ಖದೀಮರು ಕಣ್ಣಿಗೆ ಖಾರದಪುಡಿ ಎರಚಿ ಅವರಲ್ಲಿದ್ದ 6 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ. ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಕದೀಮರಿಗೆ ಖಾಕಿ ಬಲೆ ಬೀಸಿದೆ.

ಇದನ್ನೂ ಓದಿ | ರೌಡಿಶೀಟರ್‌ನಿಂದ ವ್ಯಾಪಾರಿಗೆ ಹಫ್ತಾ ವಸೂಲಿ ಧಮಕಿ

Exit mobile version