ಬೆಂಗಳೂರು, ಕರ್ನಾಟಕ: ವಿಜಯಪುರ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಗೆಲುವ ಸಾಧಿಸಿದ್ದಾರೆ. 2018ರಲ್ಲೂ ಆಯ್ಕೆಯಾಗಿದ್ದ ಯತ್ನಾಳ್ ಅವರು ಪ್ರಸಕ್ತ ಚುನಾವಣೆಯಲ್ಲಿ 93326 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಬ್ದುಲ್ ಹಮೀದ್ ಮುರ್ಶಿಫ್ ಅವರು 85442 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದಾರೆ. 12 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ(Vijayapura City Election Results).
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ವಿಜಯುಪರ ನಗರ ಕ್ಷೇತ್ರವು 2008ರಲ್ಲಿ ಉದಯಿಸಿದ ಕ್ಷೇತ್ರ. ಇದಕ್ಕೂ ಮೊದಲು ಬಿಜಾಪುರ ಕ್ಷೇತ್ರ ಎಂದು ಕರೆಯಿಸಿಕೊಳ್ಳುತ್ತಿತ್ತು. 2018ರಲ್ಲಿ ಈ ಕ್ಷೇತ್ರವನ್ನು ಬಿಜೆಪಿಯ ಫೈರ್ ಬ್ರ್ಯಾಂಡ್ ಬಸನಗೌಡ್ ಪಾಟೀಲ್ ಯತ್ನಾಳ್ ಅವರು ಗೆದ್ದಿದ್ದಾರೆ. 2013ರಲ್ಲಿ ಮಕ್ಬುಲ್ ಎಸ್ ಬಾಗವಾನ್ ಅವರು ಗೆದ್ದಿದ್ದರು. 2004ರಲ್ಲಿ ಬಿಜೆಪಿ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. 2018ರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು 76308 ಮತಗಳನ್ನುಪಡೆದುಕೊಂಡು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಅಬ್ದುಲ್ ಹಮೀದ್ ಮುರ್ಶಿಫ್ ಅವರು 69895 ಮತಗಳನ್ನು ಪಡೆದುಕೊಂಡಿದ್ದರು. 6413 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: Indi election Results: ಇಂಡಿ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ್