ವಿಜಯಪುರ: ಕಳೆದ ಮಾರ್ಚ್ 18ರಂದು ವಿಜಯಪುರದ (Vijayapura News) ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಒಬ್ಬ ಪುರುಷ ಮತ್ತು ಮಹಿಳೆಯೊಬ್ಬಳ ಬರ್ಬರ (Murder Case) ಕೊಲೆಯಾಗಿತ್ತು. ಅಕ್ರಮ ಸಂಬಂಧದ (Illicit Relationship) ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆ (Couple murder) ಆಗಿರಬಹುದೆಂದು ಪೊಲೀಸರು ಶಂಕಿಸಿದ್ದರು. ಆದರೆ ಕೊಲೆಗಾರರು ಯಾರು ಎಂಬ ಪ್ರಶ್ನೆ ಮೂಡಿತ್ತು. ಇದೀಗ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಮತ್ತು ಪಾರ್ವತಿ ತಳವಾರ (38) ಎಂಬುವವರ ಹತ್ಯೆ ಆಗಿತ್ತು. ಪಾರ್ವತಿ ಅವರ ಮಗ ಲಕ್ಷ್ಮಣ ತಳವಾರನೇ ಸಂಚು ರೂಪಿಸಿ ತಾಯಿಯನ್ನು ಹಾಗೂ ಆಕೆಯ ಜತೆಗಿದ್ದ ಸೋಮನನ್ನು ಹತ್ಯೆ ಮಾಡಿದ್ದ. ಲಕ್ಷ್ಮಣನಿಗೆ ಗೆಳೆಯರಾದ ಶಶಿಕುಮಾರ ಮಣಗೂರ, ಬಸವರಾಜ ಹಡಪದ ಸಾಥ್ ಕೊಟ್ಟಿದ್ದರು.
ಆಕಳವಾಡಿ ಹಾಗೂ ಮಾರಡಗಿ ರಸ್ತೆಯಲ್ಲಿ ಪಾರ್ವತಿ ಹಾಗೂ ಸೋಮ ಜತೆಯಾಗಿ ಗಣಿ ಗ್ರಾಮಕ್ಕೆ ಬರುವ ದಾರಿಯಲ್ಲಿ ಇವರಿಬ್ಬರನ್ನು ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದರು. ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾದ ಸಮೀಪ ಸೋಮವಾರ (ಮಾ.18) ರಾತ್ರಿ ಕೊಲೆ ನಡೆದಿತ್ತು. ಮರುದಿನ ಬೆಳಗ್ಗೆ ಸ್ಥಳೀಯರು ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಸ್ಥಳಕ್ಕೆ ಬಂದ ನಿಡಗುಂದಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮೃತರ ಹಿನ್ನೆಲೆ ಹುಡುಕುತ್ತಾ ಹೋದಾಗ ಇವರಿಬ್ಬರು ಅಕ್ರಮ ಸಂಬಂಧದಿಂದಲೇ ಕೊಲೆಯಾದರು ಎಂದು ತಿಳಿದು ಬಂದಿತ್ತು.
ಇದನ್ನೂ ಓದಿ:Murder Case: ಮೂವರ ಸುಟ್ಟು ಕೊಲ್ಲಲು ಕಾರಣವಾಯ್ತು ‘ಬಂಗಾರದ ಹಂಡೆ’! ಬಯಲಾಯ್ತು ಭೀಕರ ಹತ್ಯೆಯ ಕರಾಳ ಮುಖ
ಹಣಕ್ಕಾಗಿ ಸ್ನೇಹಿತನಿಗೆ ಚಾಕು ಹಾಕಿದ ದುಷ್ಮನ್‌ಗಳು
ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದಲ್ಲಿ ನಡೆದಿದೆ. ಪ್ರಕಾಶ್ ಮಾನೆ (24) ಕೊಲೆಯಾದವನು.
ಪ್ರಕಾಶ್‌ನ ಸ್ನೇಹಿತರಾದ ಕಿರಣ ಬಡಿಗೇರ ಹಾಗೂ ಸಂಗಮೇಶ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರಿಬ್ಬರ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ