Site icon Vistara News

Road Accident: ಬೈಕ್‌ಗೆ ಡಿಕ್ಕಿ ಹೊಡೆದು ವಕೀಲನನ್ನು ಎರಡೂವರೆ ಕಿಲೋಮೀಟರ್‌ ದರದರನೆ ಎಳೆದೊಯ್ದ ಇನ್ನೋವಾ; ನಡೀತಾ ಕೊಲೆ?

vijayapura road accident

ವಿಜಯಪುರ: ನಗರದಲ್ಲಿ ನಡೆದ ದಾರುಣ ರಸ್ತೆ ಅಪಘಾತವೊಂದು (Vijayapura Road Accident) ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಬೈಕ್‌ ಸವಾರನಿಗೆ (Bike rider) ಡಿಕ್ಕಿ ಹೊಡೆದ ಇನ್ನೋವಾ ಚಾಲಕ, ಕಾರಿನ ಕೆಳಗೆ ಸಿಕ್ಕಿಕೊಂಡ ಸವಾರನನ್ನು ಎರಡೂವರೆ ಕಿಲೋಮೀಟರ್‌ ದೂರ ಎಳೆದೊಯ್ದಿದ್ದಾನೆ. ಬೈಕ್‌ ಸವಾರ ವಕೀಲ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಘಟನೆ ನಡೆದ ರೀತಿಯನ್ನು ನೋಡಿದವರು, ಇದು ಯೋಜಿತ ಕೊಲೆ (Planned murder Case) ಇರಬಹುದು ಎಂದು ಕೆಲವರು ಆರೋಪಿಸಿದ್ದಾರೆ.

ವಿಜಯಪುರ ನಗರದ ಬಸವನ ನಗರದ ಬಳಿ ಘಟನೆ ನಡೆದಿದೆ. ವಕೀಲ ರವಿ ಮೇಲಿನಮನಿ (37) ಮೃತ ಬೈಕ್ ಸವಾರ. ಇವರು ಪ್ರಯಾಣಿಸುತ್ತಿದ್ದ ಆ್ಯಕ್ಟಿವಾ ವಾಹನಕ್ಕೆ ಇನ್ನೋವಾ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ನಿಲ್ಲಿಸದ ಇನ್ನೋವಾ ಚಾಲಕ, ವಾಹನದ ಅಡಿಯಲ್ಲೇ ಸಿಲುಕಿದ ಬೈಕ್ ಸವಾರನನ್ನು ಸುಮಾರು ಎರಡೂವರೆ ಕಿಲೋ‌ಮೀಟರ್ ಎಳೆದೊಯ್ದಿದ್ದಾನೆ. ಬಸವ ನಗರದಿಂದ ಜಿಲ್ಲಾ‌ಪಂಚಾಯತಿ ಪ್ರವೇಶ ದ್ವಾರದವರೆಗೂ ಎಳೆದೊಯ್ದಿದ್ದಾನೆ. ರವಿ ಶವ ಬೇರ್ಪಟ್ಟ ಬಳಿಕ ವಾಹನ ಸಹಿತ ಸ್ಥಳದಿಂದ‌ ಪರಾರಿಯಾಗಿದ್ದಾನೆ. ನತದೃಷ್ಟ ವಕೀಲರ ಶವ ಚಿಂದಿಚಿಂದಿಯಾಗಿದೆ.

ಸ್ಥಳದಲ್ಲೇ ಬೈಕ್ ಸವಾರ ರವಿ ಮೃತಪಟ್ಟಿದ್ದಾರೆ. ರವಿ ಅವರು ಭೀಮಾತೀರದ ಹಂತಕ ಎಂದು ಕುಖ್ಯಾತನಾಗಿರುವ ಬಾಗಪ್ಪ‌ ಹರಿಜನ ಸಂಬಂಧಿಕ. ನ್ಯಾಯವಾದಿಯಾಗಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ರವಿಯನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು, ಗೆಳೆಯರು ಆರೋಪಿಸಿದ್ದಾರೆ.

ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಬಳಿಕ ಘಟನೆ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್ಪಿ ಋಷಿಕೇಶ ಸೋನೆವಣೆ ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇತ್ತೀಚೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿರುವ ಮಹಿಳೆ ಮೇಲೆ ಹಲ್ಲೆ, ವಾಕಿಂಗ್‌ ಮಾಡುತ್ತಿದ್ದ ಮಹಿಳೆಗೆ ಲೈಂಗಿ ಕಿರುಕುಳ, ದರೋಡೆ, ಕಳ್ಳತನ, ಕೊಲೆ ಸೇರಿ ಅಪರಾಧ ಕೃತ್ಯಗಳು (Crime Cases) ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಕೊಡಿಗೇಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸಹಕಾರ ನಗರದಲ್ಲಿ (Sahakar Nagar) ದುಷ್ಟನೊಬ್ಬ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿದ ಜನ ದುಷ್ಟನಿಗೆ ಧರ್ಮದೇಟು ಕೊಟ್ಟಿದ್ದಾರೆ.

ಸಹಕಾರ ನಗರದಲ್ಲಿ ಸುನಿತಾ (38) ಎಂಬ ಮಹಿಳೆಯು ಗುರುವಾರ (ಆಗಸ್ಟ್‌ 8) ಸಂಜೆ ನಡೆದುಕೊಂಡು ಹೋಗುವಾಗ ವ್ಯಕ್ತಿಯು ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಕಲ್ಲು ಎತ್ತಿ ಹಾಕಿದ್ದಲ್ಲದೆ, ಕಲ್ಲಿನಿಂದ ಅವರ ತಲೆಯನ್ನು ಜಜ್ಜಿದ್ದಾನೆ. ಇದರಿಂದಾಗಿ ಮಹಿಳೆಯು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು, ದುಷ್ಟನನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸರು ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Murder Case: ಒಂದೇ ಹುಡುಗಿಯನ್ನು ಪ್ರೀತಿಸಿದ ಸಹೋದರರು; ಈ ತ್ರಿಕೋನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ!

Exit mobile version