Site icon Vistara News

ಮೋದಿ ಮತ್ತೆ ಪಿಎಂ ಆಗಲೆಂದು 13 ಸಾವಿರ ಅಡಿಯಿಂದ ಸ್ಕೈ ಡೈವ್‌ ಮಾಡಿದ ವಿಜಯಪುರ ಫ್ಯಾನ್ಸ್!

Sky Diving For Modi

Vijaypur Youths Sky Dive For Narendra Modi To Become Prime Minister Again

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಗೆದ್ದು, ನರೇಂದ್ರ ಮೋದಿ (Narendra Modi) ಅವರೇ ಮತ್ತೆ ದೇಶದ ಪ್ರಧಾನಿಯಾಗಲಿ ಎಂದು ಬಿಜೆಪಿ ಕಾರ್ಯಕರ್ತರ ಜತೆಗೆ ಮೋದಿ ಅಭಿಮಾನಿಗಳು ಕೂಡ ದೇಶಾದ್ಯಂತ ಪ್ರಚಾರ, ಸೋಷಿಯಲ್‌ ಮೀಡಿಯಾ ಮೂಲಕ ಅಭಿಯಾನ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ವಿಜಯಪುರದ (Vijayapura) ಅಭಿಮಾನಿಗಳು ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಬೇಕು ಎಂದು ವಿದೇಶದಲ್ಲಿ 13 ಸಾವಿರ ಅಡಿಯಿಂದ ಸ್ಕೈ ಡೈವ್‌ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಹೌದು, ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಅವರ ನೇತ್ರತ್ವದಲ್ಲಿ ಬ್ಯಾಂಕಾಕ್‌ನ ಖೋಯಾಯ್‌ ಎಂಬ ಪ್ರದೇಶದಲ್ಲಿ ಯುವಕರು 13 ಸಾವಿರ ಅಡಿಯಿಂದ ಸ್ಕೈ ಡೈವ್‌ ಮಾಡಿದ್ದಾರೆ. ಔರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ ಎಂದು ಘೋಷಣೆ ಕೂಗುತ್ತ, ಯುವಕರು ಸ್ಕೈ ಡೈವ್‌ ಮಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ನಮೋ ಸ್ಕೈ ಡೈವರ್ಸ್‌ ಎಂಬ ನಾಲ್ಕು ಯುವಕರ ತಂಡವು ವಿಭಿನ್ನ ಪ್ರಯತ್ನ ಮಾಡಿದೆ. ಅಲ್ಲದೆ, ನಮೋ ಎಂದು ಬರೆದ ಬ್ಯಾನರ್‌ಗಳನ್ನೂ ಅವರು ಆಗಸದಲ್ಲೇ ಪ್ರದರ್ಶಿಸಿದ್ದಾರೆ.

ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ್ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾಂಶು ಸಾಬಳೆ ಅವರ ತಂಡದಿಂದ ಸ್ಕೈ ಡೈವ್‌ ಮಾಡಲಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ದೇಶಾದ್ಯಂತ ಯುವಕರು ಮದುವೆ ಆಮಂತ್ರಣ ಪತ್ರಿಕೆ ಮೇಲೆ ಮೋದಿಗೆ ಮತ ನೀಡಿ ಎಂದು ಬರೆಸಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಹಲವು ರೀತಿಯ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ವಿಜಯಪುರ ಉದ್ಯಮಿಯ ನೇತೃತ್ವದಲ್ಲಿ ಸ್ಕೈ ಡೈವ್‌ ಮೂಲಕ ವಿಭಿನ್ನವಾಗಿ ಮೋದಿ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದ್ದಾರೆ.

ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಮೋದಿ ಪರ ಪ್ರಚಾರ

ಕೆಲ ದಿನಗಳ ಹಿಂದಷ್ಟೇ ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ವಿಶಿಷ್ಟವಾಗಿ ಮೋದಿ ಪರ ಪ್ರಚಾರ ಮಾಡಿದ್ದರು. ತಮ್ಮ ಮಗನ ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಮೋದಿಗೆ ಮತ ನೀಡಿ ಎಂಬುದಾಗಿ ಅವರು ಮನವಿ ಮಾಡಿರುವುದು ವಿಶೇಷವಾಗಿತ್ತು. ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಇಂತಹದ್ದೊಂದು ಮನವಿ ಮೂಲಕ ಗಮನ ಸೆಳೆದಿದ್ದರು. “ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಮತ ನೀಡಿದರೆ, ಅದೇ ನೀವು ನಮಗೆ ನೀಡುವ ದೊಡ್ಡ ಉಡುಗೊರೆ” ಎಂಬುದಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ನಂದಿಕಾಂತಿ ನರಸಿಂಹುಲು ಹಾಗೂ ನಂದಿಕಾಂತಿ ನಿರ್ಮಲಾ ಎಂಬ ದಂಪತಿಯು ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಅವರು ಮೋದಿಗೆ ಮತ ನೀಡಿ ಎಂಬುದಾಗಿ ಮನವಿ ಮಾಡಿದ್ದರು.

ಇದನ್ನೂ ಓದಿ: ಅಂದು ಮೋದಿ ಜತೆ ವೇದಿಕೆ ಏರಲು ನಿರಾಕರಿಸಿದ್ದ ನಿತೀಶ್ ಕುಮಾರ್ ಈಗ ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದರು!

Exit mobile version