Site icon Vistara News

Vims Bellary | ಸಚಿವ ಸುಧಾಕರ್‌ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ; ಸೋಮಶೇಖರ ರೆಡ್ಡಿ ವಾಗ್ದಾಳಿ

somashekara reddy and Karnataka Election

ಬಳ್ಳಾರಿ: ಸಚಿವ ಸುಧಾಕರ್ ಅವರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ಅವರದೇಯಾದ ಸ್ಟೈಲ್ನಲ್ಲಿ ಇರುತ್ತಾರೆ ಎಂದು ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು (Vims Bellary) ವಿಮ್ಸ್ ನಿರ್ದೇಶಕ ಗಂಗಾಧರ್ಗೌಡ ನೇಮಕ ವಿಚಾರದಲ್ಲಿ ವೈದ್ಯಕೀಯ ಸಚಿವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕರು, ಈಗಿರುವ ವಿಮ್ಸ್ ನಿರ್ದೇಶಕರನ್ನು ನೇಮಕಮಾಡುವುದು ಬೇಡವೆಂದು ಖಚಿತವಾಗಿ ಹೇಳಿತ್ತು. ಆದರೆ ಸಚಿವರು ಪಾರದರ್ಶಕವಾಗಿ ಕೆಲಸ ಮಾಡುತ್ತಾರೆಂದು ಇವರನ್ನು ನೇಮಕ ಮಾಡಿದ್ದಾರೆ. ಇವರಿಗಿಂತ ಒಳ್ಳೆಯ ವೈದ್ಯರು, 27 ವರ್ಷದ ಅನುಭವ ಇರುವ ವೈದ್ಯರು ಇದ್ದಾರೆಂದು ಹೇಳುವ ಮೂಲಕ ತಾವು ಸೂಚಿಸುವ ವೈದ್ಯರನ್ನು ನಿರ್ದೇಶಕರಾಗಿ ಮಾಡಿಲ್ಲ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರ ಹಾಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಎಲ್ಲ ವಿಚಾರಗಳಿಗೆ ಸ್ಪಂದಿಸುತ್ತಾರೆ, ಎಂಎಲ್ಎಗಳನ್ನು ಕೂರಿಸಿಕೊಂಡು ಮಾತನಾಡುವ ಮೂಲಕ ನಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆ. ಈಗಿನ ನಿರ್ದೇಶಕರ ಬದಲಾವಣೆ ಮಾಡಬೇಕೆಂದು ಸಿಎಂಗೆ ಮನವಿ ಮಾಡುತ್ತೇವೆ. ಅವರನ್ನು ಬದಲಾವಣೆ ಮಾಡಿದರೆ ಒಳ್ಳೆಯದು. ಒಳ್ಳೆಯ ಆಡಳಿತಗಾರರ ಅಗತ್ಯವಿದೆ. ಆದರೂ ಸಚಿವರು ಇವರನ್ನೇ ನೇಮಕ ಮಾಡಿದ್ದಾರೆ. ನಿರ್ದೇಶಕರು ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ. ಆದರೆ, ಅಲ್ಲಿನ ರೋಗಿಗಳು ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದರು.‌

ಸರ್ಕಾರಿ ಪ್ರಾಯೋಜಿತ ಸಾವೆನ್ನುವುದು ಸರಿಯಲ್ಲ
ಸಚಿವ ಶ್ರೀರಾಮುಲು ಮತ್ತು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪರಿಹಾರಕ್ಕೆ ಮನವಿ ಮಾಡಿದ್ದರಿಂದ ಮೃತರಿಗೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಇದನ್ನು ಸರ್ಕಾರಿ ಪ್ರಾಯೋಜಿತ ಸಾವುಗಳು ಎಂದು ಹೇಳುವುದು ಸರಿಯಲ್ಲ, ನಿತ್ಯವೂ ಹಲವು ಜನರು ತೀರಿಕೊಂಡು ಹೋಗುತ್ತಾರೆ, ಅದಕ್ಕೆ ಸರ್ಕಾರವೇ ಕಾರಣವೆಂದು ಹೇಳುವುದು ಸರಿಯಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Vims Bellary | ವಿಮ್ಸ್ ದುರಂತ; ಸುಧಾಕರ್‌ ಮೇಲೆ ರೆಡ್ಡಿ ಕಿಡಿ, ಕಾಂಗ್ರೆಸ್‌ ಸಿಡಿಮಿಡಿ, ಡೈರೆಕ್ಟರ್‌ ದೂರು ಕೊಡಲು ರೆಡಿ

Exit mobile version