Site icon Vistara News

Shivamogga Clash: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ, ಕಲ್ಲು ತೂರಾಟ; ಮೂವರಿಗೆ ಗಾಯ

Shivamogga Clash

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆಯಾಗಿ ಕಲ್ಲು ತೂರಾಟ ನಡೆದಿದ್ದರಿಂದ ಮೂವರು ಗಾಯಗೊಂಡಿರುವ ಘಟನೆ ನಗರದ (Shivamogga Clash) ರಾಗಿಗುಡ್ಡದ ಬಳಿಯ ಶಾಂತಿನಗರದಲ್ಲಿ ಭಾನುವಾರ ನಡೆದಿದೆ. ಮೆರವಣಿಗೆ ವೇಳೆ ಕೆಲವರು ಕಲ್ಲು ಬಿದ್ದಿರುವುದಾಗಿ ಹೇಳಿದ್ದರಿಂದ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಮತ್ತೊಂದು ಕೋಮಿನ ಪ್ರದೇಶಗಳಿಗೆ ನುಗ್ಗಿದ್ದರಿಂದ ಗಲಭೆ ಉಂಟಾಗಿದೆ.

ಕಲ್ಲು ತೂರಾಟದಿಂದ ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೆರವಣಿಗೆ ವೇಳೆ ಆಕ್ರೋಶಿತರಿಂದ ವೆಂಕಟೇಶ ಎಂಬುವವರು ಸೇರಿ ಮೂವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಲ್ಲಿ ಹಾನಿಗೊಳಗಾದ ಮನೆಗಳನ್ನು ಎಎಸ್‌ಪಿ ಅನಿಲ್‌ ಬೂಮರೆಡ್ಡಿ ಅವರು ವೀಕ್ಷಿಸಿದರು. ಘಟನೆಯಲ್ಲಿ ವ್ಯಾನ್‌, ಆಟೋ ಕೂಡ ಜಖಂ ಆಗಿರುವುದು ಕಂಡುಬಂದಿದೆ. ಹೀಗಾಗಿ ಈ ಪ್ರದೇಶದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ.

ಇದನ್ನೂ ಓದಿ | Electric Shock: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ರೈತ ದಂಪತಿ ಸಾವು

ಗಲಾಟೆ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. ಇದರಿಂದ ಈದ್ ಮಿಲಾದ್‌ ಮೆರವಣಿಗೆ ಅರ್ಧಕ್ಕೆ ಮೊಟಕುಗೊಳಿಂಡಿತು. ಸ್ಥಳಕ್ಕೆ ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ಹೆಚ್ಚಿನ ಭದ್ರತೆ ಏರ್ಪಡಿಸಲು ಸೂಚನೆ ನೀಡಿದ್ದಾರೆ.

ಕೋಮು ಗಲಭೆ ಸೃಷ್ಟಿಸಲು ಸರ್ಕಾರ ಕುಮ್ಮಕ್ಕು

ಶಿವಮೊಗ್ಗ ಗಲಾಟೆ ಬಗ್ಗೆ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಟ್ವೀಟ್‌ ಮಾಡಿ, ಕಾವೇರಿ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡದ ಕಾಂಗ್ರೆಸ್ ಸರ್ಕಾರ ಕೋಮು ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡುತ್ತಿರುವುದು ಖಂಡನೀಯ. ಶಿವಮೊಗ್ಗದಲ್ಲಿ ಮತಾಂಧ ಟಿಪ್ಪುವಿನ ಕಟೌಟ್, ತಲ್ವಾರ್ ಕಮಾನುಗಳನ್ನು ಅಳವಡಿಸಲು ಅವಕಾಶ ಕೊಟ್ಟು, ಸರ್ವ ಜನಾಂಗದ ಶಾಂತಿಯ ತೋಟವನ್ನು ಸಮಾಜಘಾತುಕರ ತಾಣವಾಗಿ ಪರಿವರ್ತನೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

Exit mobile version