Site icon Vistara News

Viral News: ದುಬೈನಿಂದ ಬೆಂಗಳೂರಿಗೆ ಟೊಮ್ಯಾಟೊ ತಂದು ತಾಯಿಗೆ ಗಿಫ್ಟ್‌ ಕೊಟ್ಟ ಮಗಳು; ತಾಯಿ ಫುಲ್‌ ಖುಷ್‌

Tomato Price Hike

Tomato Price: Punjab Governor Takes Tomatoes Off Raj Bhawan Menu Amid Soaring Prices

ಬೆಂಗಳೂರು: ರಾಜ್ಯ ರಾಜಧಾನಿ ಸೇರಿ ಬೆಂಗಳೂರು ಸೇರಿ ಟೊಮ್ಯಾಟೊ ಬೆಲೆ 100 ರೂ. ದಾಟಿದ್ದು, ಸೇಬು ಹಣ್ಣು ಹಾಗೂ ಟೊಮ್ಯಾಟೊ (Tomato) ಬೆಲೆ ಒಂದು ಕೆ.ಜಿಗೆ ಸಮನಾಗಿದೆ. ಇನ್ನು ಟೊಮ್ಯಾಟೊ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಮಾರಾಟಗಾರರು ಟೊಮ್ಯಾಟೊ ರಕ್ಷಣೆಗೆ ಬೌನ್ಸರ್‌ಗಳನ್ನು ನೇಮಿಸಿದ್ದು, ಸಿಸಿಟಿವಿ ಅಳವಡಿಸಿದ್ದು ಸೇರಿ ಹಲವು ವಿಚಿತ್ರ ಪ್ರಹಸನಗಳು ನಡೆದಿವೆ. ಈಗ ಚಿನ್ನಕ್ಕಿಂತ ಟೊಮ್ಯಾಟೊಗೇ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ ನಿದರ್ಶನ ಎಂಬಂತೆ, ದುಬೈನಿಂದ ಬೆಂಗಳೂರಿಗೆ ಬಂದ ಮಹಿಳೆಯು, ತಾಯಿಗೆ 10 ಕೆ.ಜಿ ಟೊಮ್ಯಾಟೊ ಗಿಫ್ಟ್‌ (Viral News) ನೀಡುವ ಮೂಲಕ ತಾಯಿಯನ್ನು ಖುಷಿಪಡಿಸಿದ್ದಾರೆ.

ಹೌದು, Revs ಎಂಬ ಟ್ವಿಟರ್‌ ಖಾತೆಯಿಂದ ಈ ಕುರಿತು ಟ್ವೀಟ್‌ ಮಾಡಲಾಗಿದೆ. “ನನ್ನ ಸಹೋದರಿಯು ಮಕ್ಕಳಿಗೆ ರಜೆ ಇರುವ ಕಾರಣ ದುಬೈನಿಂದ ಬೆಂಗಳೂರಿಗೆ ಬಂದಿದ್ದಾಳೆ. ದುಬೈನಿಂದ ಹೊರಡುವ ಮುನ್ನ ನನ್ನ ತಾಯಿಗೆ ಕರೆ ಮಾಡಿ, ನಿನಗೆ ದುಬೈನಿಂದ ಏನು ತರಲಿ ಎಂದು ಕೇಳಿದ್ದಾಳೆ. ಅದಕ್ಕೆ, ನನ್ನ ತಾಯಿಯು ಏನೂ ಬೇಡ, 10 ಕೆ.ಜಿ ಟೊಮ್ಯಾಟೊ ತೆಗೆದುಕೊಂಡು ಬಾ ಎಂದಿದ್ದಾಳೆ. ಅದರಂತೆ, ನನ್ನ ಸಹೋದರಿಯು ಸೂಟ್‌ಕೇಸ್‌ನಲ್ಲಿ 10 ಕೆ.ಜಿ ಟೊಮ್ಯಾಟೊ ತಂದು ಕೊಟ್ಟಿದ್ದಾಳೆ” ಎಂಬುದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ದುಬೈ ಸೇರಿ ಯಾವುದೇ ದೇಶದಿಂದ ಬರುವಾಗ ಸಾಮಾನ್ಯವಾಗಿ ತಾಯಿಗೆ ಇಷ್ಟವಾದ ತಿನಿಸೋ, ಒಳ್ಳೆಯ ಸೀರೆಯೋ ತಂದು ಆಕೆಯನ್ನು ಖುಷಿಪಡಿಸುವುದು ಸಾಮಾನ್ಯ. ಆದರೆ, ತಾಯಿಯೇ ಮಗಳಿಗೆ ನನಗೆ 10 ಕೆ.ಜಿ ಟೊಮ್ಯಾಟೊ ಗಿಫ್ಟ್‌ ಬೇಕು ಎಂದು ಹೇಳಿ, ದುಬೈನಿಂದ ಟೊಮ್ಯಾಟೊ ತರಿಸಿಕೊಳ್ಳುವಷ್ಟರಮಟ್ಟಿಗೆ ಟೊಮ್ಯಾಟೊ ಬೆಲೆ ದೇಶದಲ್ಲಿ ಗಗನಕ್ಕೇರಿದೆ. ಕೆಲ ಜಮೀನುಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ ಕಳ್ಳತನವೂ ನಡೆದಿದೆ.

Revs ಎಂಬ ಟ್ವಿಟರ್‌ ಖಾತೆಯಲ್ಲಿ ಟೊಮ್ಯಾಟೊ ಗಿಫ್ಟ್‌ ಕುರಿತು ಪೋಸ್ಟ್‌ ಹಂಚಿಕೊಳ್ಳುತ್ತಲೇ ಜನ ಹಲವು ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. “ಹಣದುಬ್ಬರದ ಕಾಲದಲ್ಲಿ ತಾಯಿಗೆ ಇಂತಹ ಅಮೂಲ್ಯ ಉಡುಗೊರೆ ತಂದು ಕೊಟ್ಟವರಿಗೆ ಅತ್ಯುತ್ತಮ ಮಗಳು ಎಂಬ ಪ್ರಶಸ್ತಿ ನೀಡಬೇಕು” ಎಂದು ಒಬ್ಬರು ಹೇಳಿದ್ದಾರೆ. “ಎಂಥ ಅದ್ಭುತ ಉಡುಗೊರೆ” ಎಂಬುದಾಗಿ ಮತ್ತೊಬ್ಬರು ಕೊಂಡಾಡಿದ್ದಾರೆ. ಹೀಗೆ ಹತ್ತಾರು ಜನ ಟೊಮ್ಯಾಟೊ ತಂದು ಕೊಟ್ಟ ಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version