Site icon Vistara News

Viral video | ಬರಿಗೈಯಲ್ಲಿ ಚಿರತೆ ಹಿಡಿದು ಮುತ್ತಿಟ್ಟ ಯುವಕರು! ವಿಡಿಯೋ ಎಲ್ಲಿಯದು?

leopard catch

ತುಮಕೂರು: ಇದೊಂದು ಮೈ ಜುಂ ಎನ್ನಿಸುವ ವಿಡಿಯೋ. ಮೂವರು ಯುವಕರು ಬರಿಗೈಯಲ್ಲಿ ಚಿರತೆಯೊಂದನ್ನು ಹಿಡಿಯುತ್ತಾರೆ. ಒಬ್ಬನಂತೂ ಮೂತಿಗೆ ಮುತ್ತಿಟ್ಟುಬಿಡುತ್ತಾನೆ. ಇವರು ಬರಿಗೈಯಲ್ಲಿ ಚಿರತೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ತುಮಕೂರು ಜಿಲ್ಲೆ ಶಿರಾ ಭಾಗದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಶಿರಾ ತಾಲ್ಲೂಕಿನ ರಾಗಲ್ಹಳ್ಳಿ ಯುವಕರು ಚಿರತೆ ಹಿಡಿದಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಈ ಭಾಗದ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಿಕರು ವಿಡಿಯೋ ವೈರಲ್ ಮಾಡಿದ್ದಾರೆ. ಆದರೆ ಈ ರೀತಿಯ ಘಟನೆ ನಡೆದಿಲ್ಲ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಇದು ಎಲ್ಲಿಯ ವಿಡಿಯೋ ಎಂದು ಭಾರಿ ಚರ್ಚೆ ನಡೆದಿದೆ. ಜನರಂತೂ ವಿಡಿಯೋ ನೋಡಿ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ | ಮೈಸೂರು ನಗರದ ಪಕ್ಕವೇ ಮರಿಗಳ ಜತೆ ಕಾಣಿಸಿಕೊಂಡ ತಾಯಿ ಚಿರತೆ, ಭಯದಲ್ಲಿ ಜನ, ಶಾಲೆಗಳಿಗೆ ರಜೆ

Exit mobile version