Site icon Vistara News

Viral Video | ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡ್ಯಾಗರ್ ಹಿಡಿದು ಕುಣಿದು ಕುಪ್ಪಳಿಸಿದ ಪುಂಡರು

ಬೆಂಗಳೂರು: ಇಲ್ಲಿನ ಪುಟ್ಟೇನಹಳ್ಳಿ ಸಾರಕ್ಕಿ ಲೇಕ್ ಬಳಿ ಗಣೇಶ ವಿಸರ್ಜನೆ ವೇಳೆ ಕೆಲ ಪುಂಡ ಯುವಕರ ಗುಂಪೊಂದು ಮಾರಕಾಸ್ತ್ರ ಹಿಡಿದು, ಮದ್ಯಬಾಟಲಿ ಜತೆಗೆ ಕುಣಿದು ಕುಪ್ಪಳಿಸಿದ್ದಾರೆ. ಮುಖ್ಯರಸ್ತೆಯಲ್ಲೇ ಡ್ಯಾಗರ್, ಚಾಕು ಹಿಡಿದು ಯುವಕರು ಡಾನ್ಸ್‌ ಮಾಡಿದ್ದಾರೆ. ಜತೆಗೆ ಮದ್ಯ ಬಾಟಲಿಯನ್ನು ತೆರೆದು ಮೈ ಮೇಲೆ ಚೆಲ್ಲಿಕೊಳ್ಳುತ್ತಾ, ಕುಡಿಯುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video) ಆಗಿತ್ತು.

ಸೆಪ್ಟೆಂಬರ್ 14ರಂದು ನಡೆದ ಈ ಘಟನೆ ಸಂಬಂಧ ನಗರದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದರು. ಇಪ್ಪತ್ತು- ಇಪ್ಪತ್ತೈದು ವರ್ಷದ ಆಸುಪಾಸಿನ ಯುವಕರ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ಆರು ಯುವಕರು ಪೊಲೀಸ್‌ ವಶಕ್ಕೆ

ಗಣಪತಿ ವಿಸರ್ಜನೆ ವೇಳೆ ಮಾರಕಾಸ್ತ್ರ ಹಿಡಿದು ಯುವಕರ ಪುಂಡಾಟ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪುಟ್ಟೇನಹಳ್ಳಿ ಪೊಲೀಸರು ಆರು ಯುವಕರನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Status War | ಸ್ಟೇಟಸ್ ವಿಚಾರಕ್ಕೆ ಕಿರಿಕ್‌: ಮಗನನ್ನು ಮುಗಿಸಲು ಮನೆ ನುಗ್ಗಿದ ಪುಂಡರಿಗೆ ಮಚ್ಚಿನೇಟು ನೀಡಿದ ತಂದೆ!

Exit mobile version