ಮಂಡ್ಯ: ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಹೊರವಲಯದಲ್ಲಿರುವ ವಿಶ್ವೇಶ್ವರಯ್ಯ ಉಪನಾಲೆ ಕುಸಿದು ಬಿದ್ದಿದೆ. ಪಾಂಡವಪುರ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ, ಶ್ರೀರಂಗಪಟ್ಟಣ, ಕೊಡಿಯಾಲ, ಗಣಂಗೂರು ಮಾರ್ಗವಾಗಿ ಮದ್ದೂರು ಹಾಗೂ ಮಳವಳ್ಳಿ ತಾಲೂಕಿಗೆ ಉಪ ನಾಲೆ ಮೂಲಕ ಕಾವೇರಿ ನೀರು ಸರಬರಾಜು ಆಗುತ್ತಿದೆ.
ಏರಿಯಂತಿದ್ದ ಹೊಂದಿಕೊಂಡಿದ್ದ ಸುಮಾರು ನೂರು ಅಡಿ ಎತ್ತರದ ಗುಡ್ಡ ಕುಸಿದು ಬಿದ್ದಿದೆ. ಇದರಿಂದ ರೈತರು ಹಾಗೂ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಈ ಉಪ ನಾಲೆಯ ಕುಸಿದಿರುವುದರಿಂದ ಮುಂದಿನ ಮಾರ್ಗಕ್ಕೆ ನಾಲೆ ನೀರು ಸುಗಮವಾಗಿ ಹರಿಯಲು ತೊಂದರೆ ಉಂಟಾಗಿದೆ.
ಇದನ್ನೂ ಓದಿ: ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಮಕ್ಕಳು ನಾಪತ್ತೆ