ಮಂಡ್ಯ: ಈಗ ರಾಜ್ಯಾದ್ಯಂತ ಮೀಸಲಾತಿ ಹೋರಾಟ ಪ್ರಾರಂಭವಾಗುತ್ತಿದೆ. ಹಲವು ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆ ಇಡುತ್ತಾ ಬಂದಿವೆ. ಈ ಸಂಬಂಧ ಪ್ರತಿಭಟನೆಗಳು, ಪಾದಯಾತೆಗಳೂ ಆರಂಭವಾಗಿದ್ದು, ವಿಶ್ವಕರ್ಮ ಸಮುದಾಯವೂ (Vishwakarma Community) ಈ ನಿಮಿತ್ತ ಮುಂದಡಿ ಇಟ್ಟಿದೆ. ಬೀದರ್‌ನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ಮುಂದಾಗಲಾಗಿದೆ.
ಮೀಸಲಾತಿಗೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಹೇಳಿಕೆ ನೀಡಿದ ವಿಶ್ವಕರ್ಮ ಮುಖಂಡ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ, ವಿಶ್ವಕರ್ಮ ಸಮಾಜಕ್ಕೆ ಮೀಸಲಾತಿ ಬೇಕು. ಈ ನಿಟ್ಟಿನಲ್ಲಿ ನಾನು ಹೋದ ಕಡೆಯಲ್ಲೆಲ್ಲ ಜಾಗೃತಿ ಮೂಡಿಸುತ್ತೇನೆ. ಈ ಸಂಬಂಧ ಸಮಾಜದ ಸುಮಾರು ೫೦ ಸಾವಿರ ಜನರನ್ನು ಸೇರಿಸುತ್ತೇನೆ. ಬೀದರ್‌ನಿಂದ ಬೆಂಗಳೂರಿನವರೆಗೂ ನಡೆಯುತ್ತೇವೆ ಎಂದು ತಿಳಿಸಿದರು.
ಮೀಸಲಾತಿ ನೀಡುವಂತೆ ಒತ್ತಾಯಿಸಿ ಬರುವ ಜನವರಿ ಅಥವಾ ಫೆಬ್ರವರಿಯಲ್ಲಿ ಪಾದಯಾತ್ರೆಯನ್ನು ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿಸುವ ಸಂಬಂಧ ಹೋದಲ್ಲೆಲ್ಲ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ಬೃಹತ್ ಮಟ್ಟದಲ್ಲಿ ಪಾದಯಾತ್ರೆಯನ್ನು ನಡೆಸಲಾಗುವುದು ಎಂದು ನಂಜುಂಡಿ ತಿಳಿಸಿದರು.
ಬಿಜೆಪಿಯು ನನ್ನನ್ನು ಕಡೆಗಣಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಪಕ್ಷ ನನ್ನನ್ನು ಎಂಎಲ್‌ಸಿ ಮಾಡಿದೆ. ನಾನು ಪಕ್ಷದ ಕೆಲಸವನ್ನು ಮಾಡುತ್ತಿದ್ದೇನೆ. ಯಡ್ಡಿಯೂರಪ್ಪ ಅವರ ಜತೆ ಪರಿವರ್ತನಾ ಯಾತ್ರೆಯಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | Vishwakarma Jayanti | ಬ್ರಾಹ್ಮಣರಿಗಿಂತಲೂ ವಿಶ್ವಕರ್ಮ ಸಮಾಜದವರು ಮೇಲು: ಕೆ.ಪಿ. ನಂಜುಂಡಿ