Site icon Vistara News

Vistara Interview: ಡಿಜೆ ಹಳ್ಳಿ-ಕೆಜಿ ಹಳ್ಳಿ ಆರೋಪಿಗಳ ಬಿಡುಗಡೆ ಮಾಡಲೇಬಾರದು; ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌‌

Madan gopal interview

ರಮೇಶ ದೊಡ್ಡಪುರ, ವಿಸ್ತಾರ ನ್ಯೂಸ್‌, ಬೆಂಗಳೂರು

2020ರ ಆಗಸ್ಟ್‌ 11ರಂದು ಬೆಂಗಳೂರಿನ ಡಿಜೆ ಹಳ್ಳಿ(ದೇವರ ಜೀವನ ಹಳ್ಳಿ) ಹಾಗೂ ಕೆಜಿ ಹಳ್ಳಿಯಲ್ಲಿ (ಕಾಡುಗೊಂಡನಹಳ್ಳಿ) ನಡೆದ ಗಲಭೆಗಳು (DJ Halli and KG halli riots) ದೇಶವನ್ನೇ ಬೆಚ್ಚಿಬೀಳಿಸಿದ್ದವು. ಈ ಘಟನೆಯನ್ನು ಯಾವುದೇ ಧರ್ಮದ ದೃಷ್ಟಿಕೋನದಲ್ಲಿ ನೋಡಬಾರದು. ಇದು ರಾಜ್ಯ ಹಾಗೂ ದೇಶದ ಮೇಲೆ ನಡೆದ ಆಕ್ರಮಣ. ಸರ್ಕಾರ ಯಾವುದೇ ಕಾರಣಕ್ಕೆ ಆರೋಪಿಗಳ ಮೇಲಿನ ಪ್ರಕರಣವನ್ನು ಹಿಂಪಡೆಯಬಾರದು ಎಂದು ನಿವೃತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮದನ್‌ ಗೋಪಾಲ್‌‌ (Retired Additional Chief Secretary Madan Gopal) ಹೇಳಿದ್ದಾರೆ. ಆ ದಿನ ಪುಲಿಕೇಶಿ ನಗರ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ (Akhanda Srinivas Murthy) ಅವರ ಮನೆಗೆ ಬೆಂಕಿ ಹಚ್ಚಿದ್ದರ ಜತೆಗೆ ಪೊಲೀಸ್ ಠಾಣೆಗೂ ಕಲ್ಲು ತೂರಲಾಗಿತ್ತು. ಈ ಕುರಿತು ಬೆಂಗಳೂರಿನ ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ (Citizens for Democracy) ವತಿಯಿಂದ ಸತ್ಯಶೋಧನ ಸಮಿತಿ (Fact Finding Committee) ರಚಿಸಲಾಗಿತ್ತು. ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ನ್ಯಾಯಧೀಶ ಶ್ರೀಕಾಂತ್‌ ಬಬಲಾದಿ (Retired Judge Srikant Babaladi) ಅವರಿದ್ದರೆ ಸದಸ್ಯರಾಗಿ ಅನೇಕ ನಿವೃತ್ತ ಐಎಎಸ್‌, ಐಪಿಎಸ್‌ ಅಧಿಕಾರಿಗಳಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿದ್ಧಪಡಿಸಿದ ವರದಿಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗಿತ್ತು. ಸಮಿತಿಯ ಸದಸ್ಯರಾದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್‌ ಗೋಪಾಲ್‌ ಅವರ ಸಂದರ್ಶನ (Vistara Interview) ಇಲ್ಲಿದೆ.

ಸತ್ಯಶೋಧನಾ ವರದಿ ಸಂಸ್ಥೆಯ ಸದಸ್ಯ ಹೇಳಿದ ಭಯಾನಕ ಸತ್ಯ! | Madan Gopal Talks about DJ Halli and KG Halli Case

-12 ಜನರ ಸಮಿತಿಯು ಘಟನಾ ಸ್ಥಳಕ್ಕೆ ಮೊದಲು ತೆರಳಿದಾಗ ಯಾವ ಸ್ಥಿತಿಯಿತ್ತು?

ಈ ಸಮಿತಿಯಲ್ಲಿ ಖ್ಯಾತ ವ್ಯಕ್ತಿಗಳಿದ್ದರು. ನಿವೃತ್ತಿ ನ್ಯಾಯಾಧೀಶರು, ಪೊಲೀಸ್‌ ಅಧಿಕಾರಿಗಳು ಸೇರಿ ಅನೇಕರಿದ್ದೆವು. ಯಾವುದೇ ಪಕ್ಷಪಾತ ತೋರದ ವ್ಯಕ್ತಿಗಳಿದ್ದೆವು. ಮೂರು ಬಾರಿ ಪ್ರದೇಶಕ್ಕೆ ಭೇಟಿ ಮಾಡಿದ್ದೇವೆ, 45-50 ಮನೆಗಳಿಗೆ ಭೇಟಿ ನಿಡಿದ್ದೇವೆ. ಅಂದಿನ ಶಾಸಕರಾದ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದೆವು. ಎಲ್ಲ ಧರ್ಮದ ಜನರ ಮನೆಗೂ ಭೇಟಿ ನೀಡಿದ್ದೇವೆ. ಈ ವಿಚಾರವನ್ನು ಧರ್ಮದ ಆಧಾರದಲ್ಲಿ ನೋಡಬಾರದು. ಇದು ತಕ್ಷಣಕ್ಕೆ ಆದ ಘಟನೆ, ರಾಜಕೀಯ ಪ್ರಚೋದನೆ ಎಂದು ಹೇಳುವುದು ತಪ್ಪು. ಇದು ಯೋಜಿತವಾಗಿ ನಡೆದ ಗಲಭೆ. ಶಾಂತಿ ಸೌಹಾರ್ದತೆಯಿಂದ ಇರುವ ಕರ್ನಾಟಕ, ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ಕೇಳಿದಾಗಲೇ ಶಾಕ್‌ ಆಯಿತು. ಇದೆಲ್ಲವನ್ನೂ ಕಂಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು.

ಸತ್ಯಶೋಧನಾ ವರದಿ ಸಂಸ್ಥೆಯ ಸದಸ್ಯ ಹೇಳಿದ ಭಯಾನಕ ಸತ್ಯ! | Madan Gopal Talks about DJ Halli and KG Halli Case

-ಯಾವುದೇ ಗಲಭೆಗಳಲ್ಲಿ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬಾರದು ಎಂದು ಸರ್ಕಾರಕ್ಕೆ ವರದಿಯಲ್ಲಿ ತಿಳಿಸಿದ್ದೀರಿ..

ಈ ವಿಚಾರವನ್ನು ರಾಷ್ಟ್ರ ಹಾಗೂ ರಾಜ್ಯದ ಭದ್ರತೆಗೆ ಸಂಬಂಧಿಸಿದ ವಿಚಾರ ಎಂದು ನೋಡಬೇಕು. ಈ ಕೋಮುಗಲಭೆಯ ಹಿಂದೆ ಪಿತೂರಿ ಇದೆ ಎನ್ನುವುದು ಸ್ಪಷ್ಟವಾಗಿದೆ. ಸಮಾಜದಲ್ಲಿ ಗಲಭೆ ಉಂಟುಮಾಡಿ ಅದರಿಂದ ಲಾಭ ಪಡೆಯುವ ಹುನ್ನಾರ ಇದೆ. ಈಗಾಗಲೇ ಎನ್‌‌ಐಎ ವಿಚಾರಣೆ ನಡೆಸುತ್ತಿದೆ. ಆರೋಪಿಗಳು ನಿರ್ದೋಶಿಗಳಾಗಿದ್ದರೆ ಎನ್‌‌ಐಎ ಬಿಡುಗಡೆ ಮಾಡುತ್ತದೆ. ಎನ್‌ಐಎ ನಿರ್ದೋಷಿ ಎಂದು ಘೋಷಿಸಿದ ನಂತರ ಸನ್ಮಾನ ಮಾಡಿ, ಯಾರು ಬೇಡ ಎನ್ನುತ್ತಾರೆ? ಈಗಾಗಲೆ ದಾಖಲೆ ಕಲೆ ಹಾಕಿ ವಿಚಾರಣೆ ನಡೆಯುತ್ತಿರುವಾಗ ಮಧ್ಯ ಪ್ರವೇಶ ಮಾಡುವುದು ಸರಿಯಲ್ಲ.

-ಇದೊಂದು ಕೋಮು ಗಲಭೆ ಎನ್ನಲು ನಿಮ್ಮಲ್ಲಿ ಯಾವ ಸಾಕ್ಷ್ಯಗಳಿವೆ?

ಗಲಭೆಯಲ್ಲಿ ದಾಳಿ ಮಾಡುವಾಗ ನಿರ್ದಿಷ್ಟ ಕೋಮನ್ನು ಗುರಿಯಾಗಿಸಿಕೊಳ್ಳಲಾಗಿದೆ ಎನ್ನುವುದು ಕಾಣುತ್ತದೆ. ಅವರ ಮನೆಗಳಿಗೆ ಮಾತ್ರ ದಾಳಿ ಮಾಡಲಾಗಿದೆ. ಇನ್ನೊಂದು ಕೋಮಿನ ಪಕ್ಕದ ಮನೆಯನ್ನು ಏನೂ ಮಾಡಿಲ್ಲ. ಎಲ್ಲರೂ ಅಕ್ಕಪಕ್ಕದಲ್ಲೇ ಇದ್ದು ವಾಸಿಸುತ್ತಿದ್ದವರು. ಈ ರೀತಿ ಬಿಂದುಗಳನ್ನು ಜೋಡಿಸುತ್ತ ಹೋದಾಗ ಕೋಮುಗಲಭೆ ಎನ್ನುವುದು ಸ್ಪಷ್ಟವಾಗುತ್ತದೆ. ಗಲಭೆಗಳನ್ನು ಉಪಯೋಗಿಸಿಕೊಂಡು ಪಿಎಫ್‌ಐ ಆಗಿರಬಹುದು ಬೇರೆ ಸಂಘಟನೆಗಳು ಲಾಭ ಮಾಡಿಕೊಳ್ಳಲು ನಡೆಸಿದ ಕೃತ್ಯ.

ಸತ್ಯಶೋಧನಾ ವರದಿ ಸಂಸ್ಥೆಯ ಸದಸ್ಯ ಹೇಳಿದ ಭಯಾನಕ ಸತ್ಯ! | Madan Gopal Talks about DJ Halli and KG Halli Case

ಮೂರು ವರ್ಷದ ನಂತರ ಅವರು ಅಮಾಯಕರು ಎಂದು ಹೇಳುವುದು ಸರಿಯಲ್ಲ. ಇಲ್ಲಿ ಇರುವವರೆಲ್ಲರೂ ಗಲಭೆಕೋರರು. ಗಲಭೆಕೋರರಿಗೆ ಯಾವುದೇ ಧರ್ಮ ಇಲ್ಲ. ಅವರು ಗಲಭೆಕೋರರು ಅಷ್ಟೆ. ಈ ಘಟನೆಯ ತನಿಖೆಯನ್ನು ಸರ್ಕಾರವೇ ಎನ್‌ಐಎಗೆ ವಹಿಸಿದೆ. ಈ ಸಮಯದಲ್ಲಿ ಸರ್ಕಾರ ಆರೋಪಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಎನ್‌‌ಐಎಯಿಂದಲೇ ಪ್ರಕರಣವನ್ನು ಹಿಂಪಡೆಯಬೇಕು. ಆದರೆ ಆ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಅಂತಹ ಕೆಲಸ ಮಾಡಿದರೆ ಅದು ತಪ್ಪಾಗುತ್ತದೆ. ತನಿಖೆಗೆ ಬೇಕಾದ ಎಲ್ಲ ಸೌಭ್ಯಗಳನ್ನೂ ಸರ್ಕಾರ ನೀಡಬೇಕು.

ಇದನ್ನೂ ಓದಿ: DJ Halli case : ಮತ್ತೆ ಬೆಂಕಿ ಕಾರಿದ ಕೆಜಿ-ಡಿಜೆ ಹಳ್ಳಿ ಕೇಸ್!‌ ಪ್ರಕರಣ ವಾಪಸ್‌ಗೆ ಮುಂದಾಯಿತೇ ಸರ್ಕಾರ?

ಸತ್ಯಶೋಧನಾ ವರದಿ ಸಂಸ್ಥೆಯ ಸದಸ್ಯ ಹೇಳಿದ ಭಯಾನಕ ಸತ್ಯ! | Madan Gopal Talks about DJ Halli and KG Halli Case

-ಸಮಿತಿಯಿಂದ ಈಗ ಯಾವ ಹೆಜ್ಜೆ ಇಡುತ್ತೀರ?

ಸಮಿತಿಯವರೆಲ್ಲರೂ ಈಗಾಗಲೇ ಚರ್ಚೆ ನಡೆಸಿದ್ದೇವೆ. ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಪಕ್ಷಪಾತವಿಲ್ಲದೆ ಸಿದ್ಧಪಡಿಸಿದ್ದೇವೆ. ಈಗ ಸರ್ಕಾರಕ್ಕೆ ಎಲ್ಲರೂ ಸೇರಿ ಪತ್ರವನ್ನು ಬರೆಯಬೇಕು ಎಂದು ನಿರ್ಧರಿಸಿದ್ದೇವೆ. ತನಿಖೆಯನ್ನು ಎನ್‌ಐಎ ನಡೆಸುತ್ತಿರುವಾಗ ಹಸ್ತಕ್ಷೇಪ ಮಾಡುವುದು ಸರಿಯಲ್ಲ, ತನಿಖೆಗೆ ಸಹಕಾರ ನೀಡಿ ಎಂದು ಮುಖ್ಯಮಂತ್ರಿಯವರಿಗೆ ಹಾಗೂ ಗೃಹಸಚಿವರಿಗೆ ನಾವು ಪತ್ರ ಬರೆದು ಆಗ್ರಹಿಸಲಿದ್ದೇವೆ.

Exit mobile version