ಅರ್ಜುನ್ ರಂಗ ಅವರ ಕಿರು ಪರಿಚಯ ಇಲ್ಲಿದೆ;
ಮೈಸೂರಿನ ಎನ್ ಆರ್ ಗ್ರೂಪ್ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಿ, ಹೊಸ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದವರು ಯುವ ಉದ್ಯಮಿ ಅರ್ಜುನ್ ರಂಗ.
ಉತ್ಕೃಷ್ಟ ಅಗರಬತ್ತಿಗಳನ್ನು ತಯಾರಿಸುತ್ತಿರುವ ಎನ್ ಆರ್ ಗ್ರೂಪ್, ಅವುಗಳನ್ನು 65ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. ಸಾಂಪ್ರದಾಯಿಕ ಸೈಕಲ್ ಪ್ಯೂರ್ ಅಗರಬತ್ತಿ ತಯಾರಿಕೆಗೆ ವೈಜ್ಞಾನಿಕ ರೂಪ ನೀಡಿದ್ದರಿಂದಾಗಿ ವಿಶ್ವದ ಮೊದಲ ʻಝೀರೋ ಕಾರ್ಬನ್ ಮ್ಯಾನ್ಯುಫ್ಯಾಕ್ಚರರ್ʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೈಸೂರಿನಲ್ಲಿ ಎಂಜಿನಿಯರಿಂಗ್ ಮುಗಿಸಿ ಅಮೆರಿಕದಲ್ಲಿ ಎಂಬಿಎ ಮಾಡಿ, ಅಮೆರಿಕದ ಹೂಸ್ಟನ್‌ನಲ್ಲಿ ಬಿಸಿನೆಸ್ ಅನಲಿಸ್ಟ್ ಆಗಿ ವೃತ್ತಿ ಜೀವನ ಆರಂಭಿಸಿದ ಅರ್ಜುನ್ ರಂಗ ಎನ್‌ಆರ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಐಐ ಕರ್ನಾಟಕದ ಅಧ್ಯಕ್ಷರಾಗಿ ರಾಜ್ಯದಲ್ಲಿನ ಉದ್ಯಮಗಳ ಬೆಳವಣಿಗೆಗೆ ಶ್ರಮಿಸುತ್ತಿರುವ ಇವರು, ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಉದ್ಯಮದ ಹಿತ ಕಾಪಾಡುತ್ತಿದ್ದಾರೆ. ಉದ್ಯಮ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿ ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಶ್ರೀ ಅರ್ಜುನ್ ರಂಗ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | Vistara News Launch | ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೈದ ನೆಕ್ಕಂಟಿ ಸೂರಿಬಾಬುಗೆ ವಿಸ್ತಾರ ಕಾಯಕ ಯೋಗಿ ಗರಿ!