Site icon Vistara News

VISTARA TOP 10 NEWS: ಸಿದ್ದರಾಮಯ್ಯ ಸರ್ಕಾರಕ್ಕೆ ನೂರರ ಸಂಭ್ರಮ, ಮತ್ತೆ ಮುಂಗಾರು ಚುರುಕು ಮತ್ತಿತರ ಪ್ರಮುಖ ಸುದ್ದಿಗಳಿವು…

Vistara Top 10 News

Vistara Top 10 News: 100 Days for siddaramaiah government and other news

1. ಕಾಂಗ್ರೆಸ್‌ ಸರ್ಕಾರಕ್ಕಿಂದು 100 ದಿನ; ಗ್ಯಾರಂಟಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಇಂದಿಗೆ ನೂರು ದಿನ. ಗ್ಯಾರಂಟಿ ಯೋಜನೆಗಳ (Congress Guarantee Scheme) ಮೂಲಕ ಜನಮನ ಗೆದ್ದಿರುವ ಈ ಸರ್ಕಾರದ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸಂತಸ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಗ್ಯಾರಂಟಿಯ ಜತೆ ಜತೆಗೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೂ ತಾವು ಬದ್ಧ ಎಂದು ಹೇಳಿದ್ದಾರೆ. ಅಲ್ಲದೆ, ಜನತೆಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

2. ಮನ್‌ ಕಿ ಬಾತ್‌: ಚಂದ್ರಯಾನ ಹೊಸ ಭಾರತದ ಸಂಕೇತ! ಜಿ 20 ಭರದ ಸಿದ್ಧತೆ ಜತೆಗೆ ರಕ್ಷಾ ಬಂಧನ ಶುಭಾಶಯ ತಿಳಿಸಿದ ಮೋದಿ
ಚಂದ್ರಯಾನವನ್ನು ಹೊಸ ಭಾರತದ ಸಂಕೇತ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ”ಸೆಪ್ಟೆಂಬರ್ 8ರಿಂದ 10ರವರೆಗೆ ನಡೆಯಲಿರುವ ಜಿ20 ಶೃಂಗಸಭೆಗೆ (G20 Summit 2023) ಭಾರತವು ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಭಾನುವಾರ ಬೆಳಗ್ಗೆ ಪ್ರಸಾರವಾದ ತಮ್ಮ 104ನೇ ಮನ್ ಕಿ ಬಾತ್ (Mann Ki Baat) ಆವೃತ್ತಿಯಲ್ಲಿ ಹೇಳಿದರು. ಈ ವೇಳೆ, ಚಂದ್ರಯಾನ ಮಿಷನ್‌ನ ಭಾಗವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಹಿಳಾ ವಿಜ್ಞಾನಿಗಳನ್ನು ಶ್ಲಾಘಿಸಿದರು ಮತ್ತು ರಕ್ಷಾ ಬಂಧನ (Raksha Bandhan) ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

3. ಚಂದ್ರಯಾನ 2 ವಿಫಲವಲ್ಲ; 3ರ ಸಕ್ಸೆಸ್‌ ಹಿಂದೆ ಅದರದ್ದೇ ದೊಡ್ಡ ಪಾತ್ರ: ಡಾ. ಬಿ ಆರ್‌ ಗುರುಪ್ರಸಾದ್‌
ಎಲ್ಲರೂ ಚಂದ್ರಯಾನ 2 (Chandrayaan 2) ವಿಫಲವಾಗಿದೆ ಎಂದೇ ಹೇಳುತ್ತಿದ್ದಾರೆ. ಆದರೆ, ನಿಜವಾಗಿಯೂ ಇದು ವಿಫಲ ಆಗಿಲ್ಲ. ಚಂದ್ರಯಾನ 3ರ (Chandrayaan 3) ಸಾಧನೆಗೆ ಇದುವೇ ಮೆಟ್ಟಿಲಾಗಿದೆ. ಅದು ಕಳುಹಿಸಿಕೊಟ್ಟ ಅನೇಕ ಚಿತ್ರಸಹಿತ ಮಾಹಿತಿಗಳನ್ನು ಮಿಷನ್‌ ಮೂರರಲ್ಲಿ ಅಳವಡಿಸಿಕೊಳ್ಳಲು ಸಹಾಯವಾಯಿತು ಎಂದು ಇಸ್ರೋ ಮಾಜಿ ಹಿರಿಯ ವಿಜ್ಞಾನಿ, ವಿಜ್ಞಾನ ಲೇಖಕ ಡಾ. ಬಿ.ಆರ್.‌ ಗುರುಪ್ರಸಾದ್ ಹೇಳಿದರು. ಅವರು ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ನಡೆಸಿಕೊಡುವ ವಿಶೇಷ ಸಂದರ್ಶನದಲ್ಲಿ  ಈ ಕುರಿತು ಪ್ರಸ್ತಾಪಿಸಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

ಈ ಸುದ್ದಿಯನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದ ಮೇಲೆಯೇ ಯಾಕೆ ಎಲ್ಲರ ಕಣ್ಣು? ಅಂಥದ್ದೇನಿದೆ ವಿಶೇಷ?

4. ಅಕ್ಟೋಬರ್‌ 4ರಂದು ವಿಶ್ವಕಪ್‌ ಉದ್ಘಾಟನಾ ಸಮಾರಂಭ; ಎಲ್ಲಿ ಮತ್ತು ಏನು ವಿಶೇಷ?
2023ರ ವಿಶ್ವಕಪ್​​ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 5 ರಂದು ನಡೆಯಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಆರಂಭಿಕ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಸ್ಟೇಡಿಯಂ ಅಕ್ಟೋಬರ್ 4 ರಂದು ವಿಶ್ವಕಪ್ ಉದ್ಘಾಟನಾ ಸಮಾರಂಭಕ್ಕೆ ಆತಿಥ್ಯ ವಹಿಸಲಿದೆ. ಇದು ಐಸಿಸಿ ನಾಯಕರ ದಿನವೂ ಆಗಿರುತ್ತದೆ. ಅಕ್ಟೋಬರ್ 3ರಂದು ವಿಶ್ವಕಪ್ ಅಭ್ಯಾಸ ಪಂದ್ಯಗಳು ಕೊನೆಗೊಳ್ಳಲಿದ್ದು, ಎಲ್ಲಾ ನಾಯಕರು ಅಹಮದಾಬಾದ್​​ನಲ್ಲಿ ಒಟ್ಟುಗೂಡಲಿದ್ದಾರೆ. ಇದು ಮೆಗಾ ಈವೆಂಟ್ ನ ಆರಂಭವನ್ನು ಸೂಚಿಸುತ್ತದೆ. ಈ ಘಟನೆಯ ನಂತರ, ವಿಶ್ವಕಪ್ 2023 ಉದ್ಘಾಟನಾ ಸಮಾರಂಭವು ಸಂಜೆ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

5. ಮತ್ತೆ ಮುಂಗಾರು ಚುರುಕು; ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಳೆ
ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗುವ (Weather report) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 48 ಗಂಟೆಯೊಳಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಹೀಗಾಗಿ ಮರದಡಿ ನಿಲ್ಲದಂತೆ ಸೂಚಿಸಲಾಗಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ಇಲ್ಲ. ಮುಂದಿನ 24ಗಂಟೆಯಲ್ಲಿ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

6. ಎಸ್‌ ಟಿ ಸೋಮಶೇಖರ್‌ ಬಿಜೆಪಿಗೆ ʼಕೈʼ ಕೊಡೋದು ಪಕ್ಕಾ? ಡಿಸಿಎಂ ಜತೆ ಸಭೆಯಲ್ಲಿ ಭಾಗಿ!
ಮಾಜಿ ಶಾಸಕ, ಯಶವಂತಪುರ ಬಿಜೆಪಿ (BJP MLA) ಶಾಸಕ ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ (Congress Party) ಸೇರುತ್ತಾರೆ ಎಂಬ ವದಂತಿಗಳು ದಟ್ಟವಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಜತೆಗಿನ ಅವರ ಒಡನಾಟವು ಹೆಚ್ಚಾಗುತ್ತಿರುವುದೇ ಈ ಗುಮಾನಿಗೆ ಕಾರಣವಾಗಿದೆ. ಭಾರತೀಯ ಜನತಾ ಪಾರ್ಟಿಯನ್ನು ತೊರೆಯುವುದಿಲ್ಲ ಎನ್ನುತ್ತಲೇ ಎಸ್ ಟಿ ಸೋಮಶೇಖರ್ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DCM DK Shivakumar)ಅವರ ಜತೆ ಬಹಿರಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

7. ಕೆ 46 ಸಿನೆಮಾ ಕ್ಲೈಮ್ಯಾಕ್ಸ್‌ಗೆ ಜಬರ್ದಸ್ತ್‌ ಬಾಡಿ ಬೆಳೆಸಿದ ಸುದೀಪ್‌; ಕಿಚ್ಚನ ಲುಕ್‌ಗೆ ಫ್ಯಾನ್ಸ್‌ ಫಿದಾ
ಜಿಮ್‌, ವರ್ಕೌಟ್‌ ಎಂದರೆ ದೂರವೇ ಇರುತ್ತಿದ್ದ ಕಿಚ್ಚ ಸುದೀಪ್‌, ಪೈಲ್ವಾನ್‌ ಸಿನಿಮಾಗಾಗಿ ದೇಹವನ್ನು ಕಟುಮಸ್ತಾಗಿ ಬೆಳೆಸಿಕೊಂಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಸುದೀಪ್‌ (Kichcha Sudeep) ಅಚ್ಚರಿ ನೀಡಿದ್ದರು. ಈಗ ಕೆ 46 (K46 Movie) ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿಯೂ ಕಿಚ್ಚ ಸುದೀಪ್‌ ಅವರು ಅವಿರತವಾಗಿ ವರ್ಕೌಟ್‌ ಮಾಡುವ ಮೂಲಕ ಭರ್ಜರಿಯಾಗಿಯೇ ದೇಹವನ್ನು ಅಣಿಗೊಳಿಸಿದ್ದಾರೆ. ಸುದೀಪ್‌ ಅವರು ತಮ್ಮ ಕಟ್ಟುಮಸ್ತು ದೇಹದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

8.‌ ಹಿಂಡಲಗಾ ಜೈಲಿನಲ್ಲಿ ಕೈದಿಗಳಿಗೆ ವಿಲಾಸಿ ಜೀವನ; ದುಡ್ಡಿದ್ದರೆ ಇಲ್ಲಿ ಮೊಬೈಲ್‌, ಟಿವಿ ಕೂಡ ಸಿಗುತ್ತೆ!
ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿಯ ಹಿಂಡಲಗಾ ಸೆಂಟ್ರಲ್‌ ಜೈಲಿನಲ್ಲಿ ಪದೇ ಪದೆ ಭದ್ರತಾ ಲೋಪದ ಪ್ರಕರಣಗಳು ದಾಖಲಾಗುತ್ತಿವೆ. ಜೈಲಿನೊಳಗೆ ಕೈದಿಗಳಿಗೆ ಗಾಂಜಾ, ಅಫೀಮು ಮೊದಲಾದ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ ಎಂಬ ಆರೋಪಗಳು ಪದೇಪದೆ ಕೇಳಿಬರುತ್ತಿವೆ. ಈಗ ಜೈಲಿನಲ್ಲಿ (Hindalga Central Jail) ಕೈದಿಗಳು ರಾಜಾರೋಷವಾಗಿ ಮೊಬೈಲ್, ಟಿವಿ ಬಳಸುವುದು ಕಂಡುಬಂದಿದೆ. ದುಡ್ಡಿದ್ದರೆ ಇಲ್ಲಿ ಕೈದಿಗಳಿಗೆ ವಿಲಾಸಿ ಜೀವನ ಸಿಗುತ್ತಿದ್ದು, ಇಲ್ಲವೆಂದರೆ ನರಕಯಾತನೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

9. ಜೈಲು ಗೋಡೆ ಹಾರಿ ಎಸ್ಕೇಪ್‌ ಆದ ಅತ್ಯಾಚಾರ ಆರೋಪಿ
ಅತ್ಯಾಚಾರ ಪ್ರಕರಣದ ಆರೋಪಿ ಜೈಲಿನಿಂದ ಪರಾರಿಯಾದ ಘಟನೆ ದಾವಣಗೆರೆ ನಗರದ ಉಪಕಾರಾಗೃಹದಲ್ಲಿ ಶನಿವಾರ ನಡೆದಿದೆ. ಪರಾರಿಯಾದ ಆರೋಪಿಯನ್ನು 23 ವರ್ಷದ ವಸಂತ್ ಎಂದು ಗುರುತಿಸಲಾಗಿದೆ. ಈತ ಕಾರಾಗೃಹದ ಗೋಡೆಯನ್ನು ಹಾರಿ ಎಸ್ಕೇಪ್ ಆಗಿದ್ದಾನೆ. ಪರಾರಿಯಾಗಿರುವ ವಸಂತ್ ದಾವಣಗೆರೆ ನಗರದ ಹೊರವಲಯದ ಕೂರರ್ ಪ್ರದೇಶದ ನಿವಾಸಿಯಾಗಿದ್ದಾನೆ. ಈ ಆಟೋ ಚಾಲಕನಾಗಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಈತನ ವಿರುದ್ಧ ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

10. ಫೋಟೋಗೆ ಕಿಲಕಿಲನೇ ನಕ್ಕಳು; ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದಳು!
ತಾಳಿ ಕಟ್ಟುವ ಶುಭ ವೇಳೆಯಲ್ಲಿ ಕೈನಲ್ಲಿ ಹೂವಿನ ಮಾಲೆ ಹಿಡಿದು ವಧು-ವರ ನಿಂತಿದ್ದರು. ಇನ್ನೇನು ಗಟ್ಟಿಮೇಳ ಬಾರಿಸಲು ವಾದ್ಯದವರು ರೆಡಿ ಇದ್ದರೂ, ವರ ತಾಳಿಕಟ್ಟಬೇಕು ಎನ್ನುಷ್ಟರಲ್ಲಿ ಮದುವೆಯೇ ಮುರಿದು ಬಿದ್ದಿದೆ. ಪ್ರೀತಿಸಿದ ಹುಡುಗನನ್ನು (Love case) ಬಿಟ್ಟಲಾರೇ ಎಂದು ಯುವತಿಯೊಬ್ಬಳು ಮದುವೆಯನ್ನು (Marriage Cancel) ಮುರಿದಿದ್ದಾಳೆ. ಅದು ಕೂಡ ವರ ತಾಳಿ ಕಟ್ಟಲು ಹತ್ತಿರ ಬರುತ್ತಿದ್ದಂತೆ ಹಸೆ‌ಮಣೆಯಿಂದ ಎದ್ದು ಹೋಗಿದ್ದಾಳೆ. ತುಮಕೂರು ಜಿಲ್ಲೆ‌ಯ ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದ ಕೆ.ಸಿ.ಎನ್.ಕನ್ವೆನ್ಷನ್ ಹಾಲ್‌ನಲ್ಲಿ ಈ ಘಟನೆ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version