1. Karnataka Congress: ಆರು ಶಾಸಕರನ್ನು ಬಿಟ್ಟು ಉಳಿದವರಿಗೆ ಟಿಕೆಟ್: ಕಾಂಗ್ರೆಸ್ ಸಭೆಯಲ್ಲಿ 125 ಹೆಸರು ಫೈನಲ್
ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿಯ ಮಹತ್ವದ ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ 125 ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ (Karnataka Congress) ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಇನ್ನಿತರೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. NHM Workers Protest: 48 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿ; ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಗೆ ಸರ್ಕಾರ ಎಚ್ಚರಿಕೆ
ಮುಷ್ಕರ ನಿರತ ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು (NHM) 48 ಗಂಟೆಯೊಳಗೆ ಕೆಲಸಕ್ಕೆ ಹಾಜರಾಗಿ ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಎಂದು ನೋಟೀಸ್ ಜಾರಿ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Election: ಉರಿಗೌಡ-ನಂಜೇಗೌಡ ವಿವಾದವನ್ನು BJPಗೇ ತಿರುಗು ಬಾಣವಾಗಿಸಲು JDS ತಂತ್ರ
ಟಿಪ್ಪು ಸುಲ್ತಾನನನ್ನು ಕೊಂದವರು ಎಂದು ಬಿಜೆಪಿ ಹೇಳುತ್ತಿರುವ ಉರಿಗೌಡ ಹಾಗೂ ನಂಜೇಗೌಡ ವಿಚಾರವನ್ನು ಬಿಜೆಪಿಗೇ ತಿರುಗು ಬಾಣವಾಗಿಸಲು ಜೆಡಿಎಸ್ ಮುಂದಾಗಿದೆ. ಟಿಪ್ಪು ಸುಲ್ತಾನನನ್ನು ಕೊಂದ ವೀರರು ಎಂದು ಬಿಜೆಪಿ ಹೇಳಿದರೆ, ಟಿಪ್ಪುವನ್ನು ಕೊಂದವರು ಎಂಬ ಕಳಂಕವನ್ನು ಒಕ್ಕಲಿಗರಿಗೆ ಕಟ್ಟಲು ಬಿಜೆಪಿ ಮುಂದಾಗಿದೆ ಎಂದು ಜೆಡಿಎಸ್ ಹೊಸ ಪ್ರಚಾರ ಆರಂಭಿಸಿದೆ. ಇದೆಲ್ಲದರ ನಡುವೆ ಉರಿಗೌಡ ನಂಜೇಗೌಡ ವಿಚಾರದಲ್ಲಿ ಕಾಂಗ್ರೆಸ್ ಯಾವುದೇ ಆಕ್ರಮಣಶಿಲತೆ ತೋರದೆ ಸೈಲೆಂಟ್ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Halal Dangal : ಮತ್ತೆ ಶುರುವಾಯಿತು ಹಲಾಲ್ ಕಟ್ ವಿರೋಧಿ ಆಂದೋಲನ, ಹಲಾಲ್ ಮುಕ್ತ ಯುಗಾದಿಗೆ ಕರೆ
ರಾಜ್ಯದಲ್ಲಿ ಮತ್ತೆ ಹಲಾಲ್ ದಂಗಲ್ (Halal Dangal) ಶುರುವಾಗುವ ಲಕ್ಷಣ ಕಾಣಿಸಿದೆ. ಈ ಬಾರಿಯ ಯುಗಾದಿಯನ್ನು ಹಲಾಲ್ ಮುಕ್ತವಾಗಿ ಆಚರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಕರೆ ನೀಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Water scarcity in karnataka: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಜಲ ಕ್ಷಾಮದ ಭೀತಿ; ಎಚ್ಚೆತ್ತುಕೊಳ್ಳದೇ ಇದ್ದರೆ ನೀರಿಗೆ ಹಾಹಾಕಾರ
ಬೇಸಿಗೆ ಕಾಲ ಈಗಷ್ಟೇ ಶುರುವಾಗಿದೆ. ಜನಸಾಮಾನ್ಯರಿಗೆ ರಣ ಬಿಸಿಲ ಬೇಗೆ ಈಗಾಗಲೇ ತಟ್ಟಿದೆ. ಇದರ ಬೆನ್ನಲ್ಲೇ ರಾಜ್ಯದ 17 ಜಿಲ್ಲೆಗಳಿಗೆ ತೀವ್ರ ಜಲ ಕ್ಷಾಮ (Water scarcity in karnataka) ಉಂಟಾಗಲಿದೆ ಎಂದು ಪರಿಸರ ನಿರ್ವಹಣಾ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಅಧ್ಯಯನ ಎಚ್ಚರಿಕೆ ನೀಡಿದೆ. ಮುಂಜಾಗ್ರತೆ ವಹಿಸದೆ ಇದ್ದರೆ ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Lokayukta Raid: ಮಾಡಾಳ್ ಅರೆಸ್ಟ್ ಯಾಕೆ ಮಾಡ್ಬೇಕು? ಸಿನಿಮಾ ಸ್ಟೈಲಲ್ಲಿ ಟಾರ್ಚರ್ ಕೊಟ್ಟು ಬಾಯಿ ಬಿಡಿಸ್ತೀರಾ ಎಂದು ಕೇಳಿದ ಕೋರ್ಟ್
ಕೆಎಸ್‌ಡಿಎಲ್ ಲಂಚ ಪ್ರಕರಣದಲ್ಲಿ ಎಫ್‌ಐಆರ್ ರದ್ದು ಮತ್ತು ಜಾಮೀನು ಕೋರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ (Lokayukta Raid) ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು. ಸುದೀರ್ಘ ಎರಡು ಗಂಟೆಗಳ ಕಾಲ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿ ವಿಚಾರಣೆಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮುಂದೂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಕ್ಷಮೆ ಕೇಳದಿದ್ದರೆ ರಾಹುಲ್ ಗಾಂಧಿಯನ್ನು ಲೋಕಸಭೆಯಿಂದಲೇ ಹೊರ ಹಾಕಲು ಬಿಜೆಪಿ ಪ್ಲ್ಯಾನ್!
ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಒಂದೊಮ್ಮೆ ಅವರು ಕ್ಷಮೆ ಕೇಳದಿದ್ದರೆ, ಅವರನ್ನು ಲೋಕಸಭೆಯಿಂದಲೇ ಅಮಾನತುಗೊಳಿಸುವ ಪ್ರಯತ್ನಕ್ಕೆ ಭಾರತೀಯ ಜನತಾ ಪಾರ್ಟಿ(BJP) ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Puneeth Rajkumar: ಅಪ್ಪು ಸಮಾಧಿ ದರ್ಶನಕ್ಕೆ ಬಂದ 80ರ ವೃದ್ಧ, 19 ದಿನಗಳ ನವಜಾತ ಶಿಶು ಜತೆ ಬಂದ ತಾಯಿ!
ಮಾ.17ರಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 49ನೇ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ‘ಅಪ್ಪು ಉತ್ಸವ’ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಪ್ಪು ಸಮಾಧಿಗೆ ಲಕ್ಷಾಂತರ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ದರ್ಶನಕ್ಕೆ ಬಿಟಿಎಂ ನಿವಾಸಿ 80ರ ವೃದ್ಧ ಕೂಡ ಬಂದಿದ್ದು, ಜತೆಗೆ ಬಳ್ಳಾರಿಯಿಂದ 19ದಿನಗಳ ನವಜಾತ ಶಿಶು ಜತೆ ತಾಯಿ ಬಂದಿದ್ದಾರೆ. ಪುನೀತ್ ರಾಜಕುಮಾರ್ ಜನ್ಮದಿನದ ಎಲ್ಲ ಸುದ್ದಿಗಳನ್ನೂ ಓದಲು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. INDvsAUS : ಭಾರತದ ಮಾರಕ ಬೌಲಿಂಗ್ಗೆ ಕುಸಿದ ಆಸ್ಟ್ರೇಲಿಯಾ, 188 ರನ್ಗಳಿಗೆ ಆಲ್ಔಟ್
ಭಾರತ ತಂಡದ ಬೌಲರ್ಗಳಾದ ಮೊಹಮ್ಮದ್ ಶಮಿ (17 ರನ್ಗಳಿಗೆ 3 ವಿಕೆಟ್), ಮೊಹಮ್ಮದ್ ಸಿರಾಜ್ (29 ರನ್ಗಳಿಗೆ 3 ವಿಕೆಟ್) ಹಾಗೂ ರವೀಂದ್ರ ಜಡೇಜಾ (46 ರನ್ಗಳಿಗೆ2 ವಿಕೆಟ್) ಅವರ ಮಾರಕ ದಾಳಿಗೆ ಬೆಚ್ಚಿ ಬಿದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ 188 ರನ್ಗಳಿಗೆ ಆಲ್ಔಟ್ ಆಗಿದೆ. ಇದರೊಂದಿಗೆ ಆತಿಥೇಯ ಭಾರತದ ಗೆಲುವಿಗೆ 189 ರನ್ಗಳ ಸವಾಲು ಎದುರಾಗಿದೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ (81) ಅರ್ಧ ಶತಕ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಉಳಿದವರ ನೆರವು ಆಸ್ಟ್ರೇಲಿಯಾ ತಂಡಕ್ಕೆ ಲಭಿಸಲಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Viral Post: ಹೆಂಡತಿಯೇ ತಂಗಿ! ಮದುವೆಯಾಗಿ ಆರು ವರ್ಷಗಳ ಬಳಿಕ ಸತ್ಯ ಬಯಲಾದದ್ದು ಹೇಗೆ?
ಮದುವೆಯಾಗಿ ಆರು ವರ್ಷಗಳಾಗಿವೆ. ಮಕ್ಕಳೂ ಇದ್ದಾರೆ. ಈಗ ಬಯಲಾಗಿರುವ ಆಘಾತಕರ ಸತ್ಯವೆಂದರೆ ಅವರಿಬ್ಬರೂ ಸೋದರ- ಸೋದರಿ. ಅದು ಗೊತ್ತಾಗಿದ್ದಾದರೂ ಹೇಗೆ? ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Congress- SDPI link : 2018ರಲ್ಲಿ ಕಾಂಗ್ರೆಸ್, ಎಸ್‌ಡಿಪಿಐ ಒಳ ಒಪ್ಪಂದ: SDPI ನಾಯಕನ ಸ್ಫೋಟಕ ಹೇಳಿಕೆ
- Ram Mandir: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಹೇಗಿದೆ? ಇಲ್ಲಿವೆ ನೂತನ ಫೋಟೊಗಳು
- PM Kisan Samman Nidhi Yojana : ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತು ಯಾವಾಗ? ವಿವರ ತಿಳಿಯುವುದು ಹೇಗೆ?
- Pocso case : 7 ವರ್ಷದ ಬಾಲಕಿ ಮೇಲೆ ಆಟೋ ಚಾಲಕನ ದೌರ್ಜನ್ಯ; ಶಾಲೆಗೆ ಕರೆದೊಯ್ಯುತ್ತಿದ್ದವನಿಂದಲೇ ದುಷ್ಕೃತ್ಯ
- ಪ್ರಧಾನಿ ಕಾರ್ಯಾಲಯದ ಅಧಿಕಾರಿಯೆಂದು ಕಾಶ್ಮೀರದಲ್ಲಿ ಝಡ್ ಪ್ಲಸ್ ಭದ್ರತೆ ಪಡೆದಿದ್ದವ ಅರೆಸ್ಟ್; ಇವನೆಂಥಾ ಸ್ಮಾರ್ಟ್ ವಂಚಕ!
- Kabzaa Movie: ವಿಶ್ವಾದ್ಯಂತ ಕಬ್ಜ ರಿಲೀಸ್: ಸಿನಿಮಾ ನೋಡಿ ಇನ್ನೊಂದು ಕೆಜಿಎಫ್ ಅಂದ್ರು ನೆಟ್ಟಿಗರು, ಇಲ್ಲಿದೆ ಟ್ವೀಟ್ ವಿಮರ್ಶೆ!
- Lorry strike : ಮಧ್ಯಮ, ಲಘು ವಾಹನ ನಗರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್, ಇಂದಿನಿಂದ ಆರಂಭವಾಗಬೇಕಿದ್ದ ಲಾರಿ ಮುಷ್ಕರ ವಾಪಸ್
- ಮೊಗಸಾಲೆ ಅಂಕಣ: ಆಯಾರಾಂ ಗಯಾರಾಂ ಮರಕೋತಿ ಆಟ