Site icon Vistara News

ವಿಸ್ತಾರ TOP 10 NEWS | ಮತ್ತೆ 40% ಕಮಿಷನ್‌ ಸದ್ದು, ಸಾವರ್ಕರ್‌ ವಾರ್ ಮತ್ತಿತರ ಪ್ರಮುಖ ಸುದ್ದಿಗಳಿವು

ಬೆಂಗಳೂರು: ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ 40% ಕಮಿಷನ್‌ ಆರೋಪದ ಎರಡನೇ ಅಧ್ಯಾಯ ಆರಂಭವಾಗುವ ಲಕ್ಷಣವಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಇನ್ನೊಂದು ಪತ್ರ ಬರೆಯುವುದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಕೆಂಪಣ್ಣ ಮಾತಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದಾರೆ. ನಾಗರಿಕರಿಗೆ ಹಣಕಾಸು ಜಾಗೃತಿ ಮೂಡಿಸುವ ʻವಿಸ್ತಾರ ಮನಿ ಪ್ಲಸ್‌ʼ ಸಫಲತೆ ನಂತರ ಇದೀಗ ಆರೋಗ್ಯ ಜಾಗೃತಿಗಾಗಿ ʻವಿಸ್ತಾರ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ ಬುಧವಾರ ಲೋಕಾರ್ಪಣೆಗೊಂಡಿದೆ. ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವಂತೆ ಅಶೋಕ್‌ ಗೆಹ್ಲೋಟ್‌ಗೆ ತಿಳಿಸಿ ಸೋನಿಯಾ ಹಾಗೂ ಪರಿವಾರ ವಿದೇಶಕ್ಕೆ ತೆರಳಲು ಸಜ್ಜಾಗಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. 15 ದಿನದಲ್ಲಿ ಪ್ರಧಾನಿಗೆ ಮತ್ತೊಂದು ಪತ್ರ ಎಂದ ಕೆಂಪಣ್ಣ: ಎರಡನೇ ಸುತ್ತಿಗೆ 40% ವಿವಾದ
ರಾಜ್ಯದ ವಿವಿಧ ಯೋಜನೆಗಳಿಗೆ ಗುತ್ತಿಗೆ ನೀಡುವಾಗ 40% ಕಮಿಷನ್‌ ಪಡೆಯಲಾಗುತ್ತಿದೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಿವಿಧ ಇಲಾಖೆಗಳಿಗೆ ಪತ್ರ ಬರೆದಿದ್ದ ರಾಜ್ಯ ಗುತ್ತಿಗೆದಾರರ ಸಂಘ ಇದೀಗ ಎರಡನೇ ಹಂತದ ಪತ್ರ ಚಳವಳಿಗೆ ಮುಂದಾಗಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಸದಸ್ಯರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ತಮ್ಮ ಮನವಿಗೆ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ಕುರಿತು ಚರ್ಚೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಂತರ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರದ 40% ಕಮಿಷನ್‌ ಬಗ್ಗೆ ಸದನದಲ್ಲಿ ಚರ್ಚೆ ಮಾಡಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇನೆ. ಒಂದು ವೇಳೆ ಸರ್ಕಾರ ತನಿಖೆ ಮಾಡದಿದ್ದರೆ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗುತ್ತದೆ. ಆಗ ನಾವು ಜನರ ಬಳಿಗೆ ಹೋಗುತ್ತೇವೆ, ಯಾರು ಭ್ರಷ್ಟರು ಎಂಬುವುದನ್ನು ಅವರೇ ತೀರ್ಮಾನಿಸುತ್ತಾರೆ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. 40 ಪರ್ಸೆಂಟ್ ಕಮಿಷನ್‌ ಸಾಕ್ಷ್ಯವಿದ್ದರೆ ಬಹಿರಂಗಪಡಿಸಲಿ: ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರ ಕಿಡಿ
ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿರುವ ಕೆಂಪಣ್ಣ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಗುತ್ತಿಗೆದಾರರ ಕೆಲವರು ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ್ದಾರೆ ಅಷ್ಟೇ. ಅವರ ಆರೋಪದಲ್ಲಿ ಹುರುಳಿಲ್ಲ. ಸಿದ್ದರಾಮಯ್ಯನವರ ಭೇಟಿ ಬಳಿಕ ಆರೋಪ ಮಾಡಿದ್ದಾರೆ. ಹಿಂದೆ ಆರೋಪ ಮಾಡಿದ ಎಲ್ಲದಕ್ಕೂ ಸರ್ಕಾರ ಕ್ರಮ ಜರುಗಿಸಿದೆ. ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಸ್ಕ್ರೂಟಿನಿ ಮಾಡಿದ್ದೇವೆ. ಈ ರೀತಿ ಕ್ರಮವನ್ನು ಬೇರೆ ಯಾವ ರಾಜ್ಯದಲ್ಲೂ ಮಾಡಿಲ್ಲ. ಏನೇ ದೂರಿದ್ದರು ಲೋಕಾಯುಕ್ತಕ್ಕೆ ನೀಡಿದರೆ ಕ್ರಮ ತೆಗೆದಯಕೊಳ್ಳುತ್ತಾರೆ. ಆಧಾರರಹಿತ ಆರೋಪಕ್ಕೆ ಹುರುಳಿಲ್ಲ ಎಂದಿದ್ದಾರೆ. ಸಚಿವ ಸಿ.ಸಿ. ಪಾಟೀಲ್‌ ಪ್ರತಿಕ್ರಿಯಿಸಿ, ಬಾಕಿ ಬಿಲ್‌ ಕುರಿತ ದಾಖಲೆಗಳು ನನ್ನ ಬಳಿ ಇವೆ, ಕಾಲ ಬಂದಾಗ ಬಿಚ್ಚಿಡುವೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬಗ್ಗೆ ಗೌರವ ದಿನೇ ದಿನೆ ಕಡಿಮೆಯಾಗುತ್ತಿದೆ. ಯಾರಾದರೂ ಶಾಸಕರು ಲಂಚ ತಗೊಂಡಿದ್ದರೆ ಅದನ್ನು ಸಾಬೀತು ಮಾಡಲಿ ಎಂದಿದ್ದಾರೆ.

3. Vistara Health | ‘ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್’ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ
ʻನಮ್ಮ ಪರಿಸರದಲ್ಲೇ ವೈದ್ಯರಿದ್ದಾರೆ, ಸೂರ್ಯನ ಬೆಳಕು, ಹಿತಮಿತ ಆಹಾರ, ವ್ಯಾಯಾಮ, ಆತ್ಮವಿಶ್ವಾಸ, ನಗು. ಈಗ ಈ ಸಾಲಿಗೆ ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಕೂಡ ಸೇರಿಸಬಹುದು,”- ಹೀಗೆಂದರು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್.‌ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೊಸ ಯೂಟ್ಯೂಬ್‌ ಚಾನೆಲ್ ವಿಸ್ತಾರ ಹೆಲ್ತ್ (Vistara Health)‌ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ವಿಸ್ತಾರ ನ್ಯೂಸ್‌ ಮೀಡಿಯಾದ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿ, ಆರೋಗ್ಯವಂತ ಪ್ರಜೆಗಳಿಂದ ಆರೋಗ್ಯವಂತ ಸಮಾಜ, ಅದರಿಂದ ಆರೋಗ್ಯಯುತ ದೇಶ ನಿರ್ಮಾಣವಾಗುತ್ತದೆ. ಈ ಕುರಿತು ಸಮಾಜದಲ್ಲಿ ವಿಶ್ವಾಸಾರ್ಹ ಜಾಗೃತಿ ಮೂಡಿಸಲು ʼವಿಸ್ತಾರ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ ಶ್ರಮಿಸಲಿದೆ ಎಂದು ಹೇಳಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. Floor Test | ಸಿಬಿಐ ದಾಳಿ, ಅಡೆತಡೆಯ ಮಧ್ಯೆ ವಿಶ್ವಾಸಮತ ಗೆದ್ದ ನಿತೀಶ್‌ ಕುಮಾರ್‌!
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕರಿಗೆ ಸಂಬಂಧಿಸಿದ ನಿವಾಸಗಳ ಮೇಲೆ ಸಿಬಿಐ ದಾಳಿಯ ಮಧ್ಯೆಯೂ ಆರ್‌ಜೆಡಿ ಜತೆಗೂಡಿ ಮತ್ತೆ ಮಹಾಘಟಬಂಧನ್‌ ರಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ (Floor Test) ಯಶಸ್ವಿಯಾಗಿದ್ದಾರೆ. ಆ ಮೂಲಕ ಬಿಹಾರ ರಾಜಕೀಯದಲ್ಲಿ ತಮ್ಮ ಎದುರು ಬಿಜೆಪಿಯ ಪ್ರಾಬಲ್ಯ, ತಂತ್ರ, ಪಟ್ಟುಗಳು ನಡೆಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ವೀರ ಸಾವರ್ಕರ್‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದೇಕೆ?
ರಾಜ್ಯದಲ್ಲೀಗ ವೀರ ಸಾವರ್ಕರ್‌ ಹೆಸರು ಭಾರಿ ಸುದ್ದಿಯಲ್ಲಿದೆ. ಸಾವರ್ಕರ್‌ ಸ್ವಾತಂತ್ರ್ಯ ವೀರ ಎಂದು ಬಿಜೆಪಿಯವರು ಅಭಿಯಾನ ನಡೆಸುತ್ತಿದ್ದರೆ, ಕಾಂಗ್ರೆಸ್‌ ಮುಖಂಡರು ಸಾವರ್ಕರ್‌ ಹೇಡಿ ಎಂದು ಟೀಕಿಸುತ್ತಿದ್ದಾರೆ. ಈ ನಡುವೆ ಚಕ್ರವರ್ತಿ ಸೂಲಿಬೆಲೆ ಅವರು ಸಾವರ್ಕರ್‌ ಕುರಿತ ಕಿರು ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿನ ಸಂಗತಿಗಳ ಭಾರಿ ಕುತೂಹಲ ಮೂಡಿದೆ. ಇಷ್ಟಕ್ಕೂ ಈ ಪುಸ್ತಕದಲ್ಲ ಏನಿದೆ? ಈ ಕೃತಿಯು ಸಂಪೂರ್ಣ ಪಠ್ಯ ಇಲ್ಲಿದೆ. ಓದಲು ಇಲ್ಲಿ ಕ್ಲಿಕ್‌ ಮಾಡಿ.

6. One Time Registration | UPSC ಜಾಬ್‌ಗಳಿಗೆ ಇನ್ನು ಒಂದೇ ಬಾರಿ ನೋಂದಣಿ, ಇಲ್ಲಿದೆ ಸಂಪೂರ್ಣ ಮಾಹಿತಿ
ಕೇಂದ್ರ ಲೋಕಸೇವಾ ಆಯೋಗದ (UPSC) ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದಾಗಲೆಲ್ಲ ಅಭ್ಯರ್ಥಿಗಳಿಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ತಾಪತ್ರಯ ಇರುತ್ತದೆ. ಆದರೆ, ಈ ಸಂಕಷ್ಟ ಇನ್ನು ಮುಂದೆ ಇರುವುದಿಲ್ಲ. ಅಭ್ಯರ್ಥಿಗಳ ಕಷ್ಟ ತಪ್ಪಿಸಲು ಯುಪಿಎಸ್‌ಸಿಯು ಒಂದು ಬಾರಿ ನೋಂದಣಿ (one-time registration -OTR) ವ್ಯವಸ್ಥೆ ಜಾರಿ ಮಾಡಿದೆ. ಕೇಂದ್ರ ಲೋಕಸೇವಾ ಆಯೋಗದ ನೂತನ ವ್ಯವಸ್ಥೆಯಿಂದಾಗಿ ಅಭ್ಯರ್ಥಿಗಳು ಯುಪಿಎಸ್‌ಸಿಯ ಪ್ರತಿ ನೇಮಕಾತಿ ವೇಳೆ ತಮ್ಮ ಮೂಲ ಮಾಹಿತಿ ನೀಡಿ, ನೋಂದಣಿ ಮಾಡಿಕೊಳ್ಳುವುದು ತಪ್ಪುತ್ತದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Leopard Attack | ಚಿಕ್ಕೋಡಿಯಲ್ಲಿ ಚಿರತೆ ಆತಂಕ ಇನ್ನೂ ಹೆಚ್ಚು, ರಾತೋರಾತ್ರಿ ಎಮ್ಮೆ ಮೇಲೆ ದಾಳಿ
ಇಂಗಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, 2 ವರ್ಷದ ಎಮ್ಮೆ ಕರುವಿನ ಮೇಲೆ ದಾಳಿ (Leopard Attack) ನಡೆಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಹಿಂಡಲಗಾದಲ್ಲಿ ಚಿರತೆ ಶೋಧ ಕಾರ್ಯವು 21ನೇ ದಿನಕ್ಕೆ ಕಾಲಿಟ್ಟಿದೆ.‌ ಬುಧವಾರ ಚಿರತೆ ಶೋಧಕ್ಕೆ ಆನೆ ಬಲ ಸಿಕ್ಕಿದ್ದು, ಜತೆಗೆ 8ಕ್ಕೂ ಅಧಿಕ ಪರಿಣಿತರೂ ಬೆಳಗಾವಿಗೆ ದೌಡಾಯಿಸಿದ್ದಾರೆ. ಚಿರತೆ ಸೆರೆ ಹಿಡಿಯಲು ನಾನಾ ಕಾರ್ಯತಂತ್ರದ ಪ್ರಯೋಗ ನಡೆಯುತ್ತಿರುವ ಹೊತ್ತಿನಲ್ಲಿಯೇ ಹಂದಿ ಬಲೆ ಬೀಸಲು ಸಿಬ್ಬಂದಿ ಸಜ್ಜಾಗುತ್ತಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. Lead Congress | ನೀವೇ ಪಕ್ಷ ಮುನ್ನಡೆಸಿ, ವಿದೇಶಕ್ಕೆ ತೆರಳುವ ಮುನ್ನ ಸೋನಿಯಾ ಹೀಗೆ ಹೇಳಿದ್ದು ಯಾರಿಗೆ?
ಸಾಲು ಸಾಲು ಚುನಾವಣೆಗಳಿಗೆ ಕಾಂಗ್ರೆಸ್‌ ಸಿದ್ಧವಾಗುತ್ತಿದೆ. ಸೆ.೪ರಂದು ಬೆಲೆಯೇರಿಕೆ ವಿರುದ್ಧ “ಮೆಹಂಗಾಯಿ ಪರ್‌ ಹಲ್ಲಾ ಬೋಲ್‌” (ಬೆಲೆಯೇರಿಕೆ ವಿರುದ್ಧ ಧ್ವನಿಯೆತ್ತಿ) ಹಾಗೂ ಸೆ.೨೭ರಿಂದ “ಭಾರತ್‌ ಜೋಡೊ” ಅಭಿಯಾನ ಕೈಗೊಳ್ಳುತ್ತಿದೆ. ಇನ್ನು ಸೆ.೨೧ರಂದು ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಘೋಷಣೆ ಮಾಡಲಾಗುತ್ತದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರು ಮೆಡಿಕಲ್‌ ಚೆಕಪ್‌ಗಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದು, “ನನ್ನ ಅನುಪಸ್ಥಿತಿಯಲ್ಲಿ ನೀವೇ ಪಕ್ಷವನ್ನು ಮುನ್ನಡೆಸಿ” (Lead Congress) ಎಂಬುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
Sonia Gandhi | ಮಗ, ಮಗಳ ಜತೆ ಸೋನಿಯಾ ಗಾಂಧಿ ಇಂದು ವಿದೇಶಕ್ಕೆ ಹೋಗುತ್ತಿರುವುದೇಕೆ?

9. ಕನ್ನಡ ಸಂಸ್ಕೃತಿ ಇಲಾಖೆ ಟ್ರಸ್ಟ್‌ಗಳಿಗೆ ನೇಮಕ: ತಿರಸ್ಕರಿಸಿದ ಚಕ್ರವರ್ತಿ ಸೂಲಿಬೆಲೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ರಚನೆಯಾಗಿರುವ ವಿವಿಧ ಟ್ರಸ್ಟ್‌ಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ತಮ್ಮನ್ನು ಗಳಗನಾಥ ಮತ್ತು ರಾಜ ಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.‌ ಒಟ್ಟು 21 ಟ್ರಸ್ಟ್‌ಗಳಿಗೆ ಟ್ರಸ್ಟ್‌ಗಳಿಗೆ ಡಾ. ಎಚ್‌.ಎಸ್‌. ವೆಂಕಟೇಶಮೂರ್ತಿ, ಎಸ್‌. ದಿವಾಕರ್‌, ಡಾ. ಭೀಮಸೇನ್‌ ಸೇರಿ ಅನೇಕರನ್ನು ಅಧ್ಯಕ್ಷರಾಗಿ ಹಾಗೂ ಒಟ್ಟು 147 ಸದಸ್ಯರು, ತಲಾ ಒಬ್ಬರು ಸದಸ್ಯ ಕಾರ್ಯದರ್ಶಿಯನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. ದಾದಾಪೀರ್‌ ಜೈಮನ್‌, ತಮ್ಮಣ್ಣ ಬೀಗಾರಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಯುವ ಸಾಹಿತ್ಯ ಪ್ರಶಸ್ತಿಗೆ ದಾದಾಪೀರ್‌ ಜೈಮನ್‌ ಹಾಗೂ ಬಾಲ ಸಾಹಿತ್ಯ ಪ್ರಶಸ್ತಿಗೆ ತಮ್ಮಣ್ಣ ಬೀಗಾರ ಅವರು ಪಾತ್ರರಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಯುವ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಅವರ ‘ನೀಲಕುರಿಂಜಿ’ ಕಥಾ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ. ಇವರ ʼಪರ್ದಾ ಮತ್ತು ಪಾಲಿಗಮಿʼ ಅನುವಾದ ಕೃತಿಯೂ ಜನಪ್ರಿಯವಾಗಿದೆ. ಶಿರ್ಶಿ ಸಿದ್ದಾಪುರದ ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯ ಪ್ರಶಸ್ತಿ ಸಂದಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ದಿನದ ಇನ್ನಷ್ಟು ಪ್ರಮುಖ ಸುದ್ದಿಗಳು
೧. Infosys | ಬೆಂಗಳೂರಿನಲ್ಲಿ ಇನ್ಫೋಸಿಸ್‌ ಭಾರಿ ವಿಸ್ತರಣೆ, 5 ಲಕ್ಷ ಚದರ ಅಡಿ ಕಚೇರಿ ಸ್ಥಳ ಲೀಸ್‌ಗೆ
2. iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!

Exit mobile version