ಬೆಂಗಳೂರು: ಸೋಮವಾರದಿಂದ ಹತ್ತು ದಿನಗಳು ಕರ್ನಾಟಕ ವಿಧಾನಮಂಡಲದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಈಗಾಗಲೇ ರಾಜ್ಯದಲ್ಲಿ ಕಾವೇರಿರುವ ರಾಜಕೀಯ ವಾತಾವರಣ ಮತ್ತಷ್ಟು ಆಕ್ರಮಣಕಾರಿಯಾಗಲಿದೆ. ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶೀಖರಕ್ಕೆ ಪೇಜಾವರ ಶ್ರೀಗಳು ಪ್ರಸ್ತಾವನೆ ಮುಂದಿಟ್ಟಿದ್ದಾರೆ, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿ ಮೊದಲ ಸ್ಥಾನ ಗಳಿಸಿದ್ದಾರೆ, ಸ್ವಾಮಿ ಸ್ವರೂಪಾನಂದರು ದೈವಾಧೀನರಾಗಿದ್ದಾರೆ ಎನ್ನುವುದರಿಂದ ಸ್ವಾಮಿ ವಿವೇಕಾನಂದ ಷಿಕಾಗೊ ಭಾಷಣದ ಸ್ಮರಣೆಯವರೆಗಿನ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಸೋಮವಾರದಿಂದ 10 ದಿನ ಮಳೆಗಾಲದ ಅಧಿವೇಶನ: ಆರೋಪ-ಪ್ರತ್ಯಾರೋಪ ಮಳೆಗೆ ವೇದಿಕೆ ಸಿದ್ಧ
ಕರ್ನಾಟಕ ವಿಧಾನಮಂಡಲದ ಮಳೆಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಈಗಾಗಲೆ ತಾರಕಕ್ಕೇರಿರುವ ರಾಜಕೀಯ ಆರೋಪ ಪ್ರತ್ಯಾರೋಪಗಳ ಸುರಿಮಳೆಯನ್ನು ರಾಜ್ಯದ ಜನರು ನಿರೀಕ್ಷಿಸಬಹುದು. ಅನೇಕ ಸಮಸ್ಯೆಗಳ ನಡುವೆಯೇ ಸರ್ಕಾರ ಅಧಿವೇಶನ ಕರೆದಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್, ಜೆಡಿಎಸ್ ತಂತ್ರ ರೂಪಿಸಿವೆ. ಒಂದಿಷ್ಟು ದಾಖಲೆಗಳ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ದತೆ ಮಾಡಿಕೊಂಡಿವೆ. ಆದರೆ ಹಿಂದಿನ ಸರ್ಕಾರದ ಅವಧಿಯ ಹಗರಣಗಳನ್ನು ಹೊರಗೆಳೆಯುವುದಾಗಿ ಸರ್ಕಾರವೂ ತಿಳಿಸಿರುವುದರಿಂದ ಸಮಬಲದ ಹೋರಾಟವನ್ನು ನಿರೀಕ್ಷಿಸಬಹುದು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಜನಸ್ಪಂದನದ ನಂತರ ಜೋರಾದ ರಾಜಕೀಯ ಜಟಾಪಟಿ
ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದ ನಂತರ ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವಿನ ಜಟಾಪಟಿ ಜೋರಾಗಿದೆ. ಸೋಮವಾರ ಬೆಳಗ್ಗೆಯೇ ಸರಣಿ ಟ್ವೀಟ್ ಮಾಡುವುದರ ಮೂಲಕ ಸಿಎಂ ಬೊಮ್ಮಾಯಿ ಅವರ ಮೇಲೆ ದಾಳಿ ನಡೆಸಿದ್ದ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತ್ಯುತ್ತರ ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಜನಸ್ಪಂದನಕ್ಕೆ ಜನರೇ ಬಂದಿರಲಿಲ್ಲ ಎಂದಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4B ಕೊಟ್ಟರೂ ಜನ ಸೇರಿಸಲು ಆಗಿಲ್ಲ: BJP ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಭ್ರಷ್ಟಾಚಾರಕ್ಕೆ ಬೂಸ್ಟ್ ನೀಡಿದ್ದೇ ಸಿದ್ದರಾಮಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನೂ ಹುಚ್ಚ: ಬಿ.ಸಿ. ಪಾಟೀಲ
3. Ayodhya | ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣಶಿಖರ ಅರ್ಪಣೆಯಾಗಲಿ ಎಂದು ಟ್ರಸ್ಟ್ ಸಭೆಯಲ್ಲಿ ಪೇಜಾವರ ಶ್ರೀ ಪ್ರಸ್ತಾಪ!
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆ ನಡೆದಿದ್ದು, ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಿಸಬೇಕು ಎಂಬ ರಾಜ್ಯದ ಜನರ ಇಂಗಿತವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಭೆಯಲ್ಲಿ ಪ್ರಸ್ತಾಪಿಸಿದರು. ರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕು ಎಂಬುದು ಕರ್ನಾಟಕದ ಜನರ ಇಂಗಿತವಾಗಿದೆ ಎಂದರು. ಶ್ರೀರಾಮನ ವಿಗ್ರಹ ನಿರ್ಮಾಣ ಕುರಿತೂ ಮಹತ್ವದ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Swami Swaroopanand | ರಾಮಮಂದಿರ ಹೋರಾಟದಲ್ಲಿ ಸಕ್ರಿಯರಾಗಿದ್ದ ಸ್ವಾಮಿ ಸ್ವರೂಪಾನಂದ ಸರಸ್ವತಿ ದೈವಾಧೀನ
ಹಿಂದು ಧರ್ಮದ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಚಳವಳಿಗೆ ಮಹತ್ವದ ಕೊಡುಗೆ ನೀಡಿದ್ದ ಮಧ್ಯಪ್ರದೇಶದ ದ್ವಾರಕಾಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (೯೯) ಅವರು ಭಾನುವಾರ ದೈವಾಧೀನರಾಗಿದ್ದಾರೆ. ಮಧ್ಯಪ್ರದೇಶದ ನರಸಿಂಗಪುರದಲ್ಲಿರುವ ಶ್ರೀಧಾಮ ಜ್ಯೋತೇಶ್ವರ ಆಶ್ರಮದಲ್ಲಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸ್ವಾತಂತ್ರ್ಯ ಹೋರಾಟದ ವೇಳೆ ಜೈಲು ಶಿಕ್ಷೆ ಅನುಭವಿಸಿದ್ದ ಕ್ರಾಂತಿಕಾರಿ ಸಂತ ಸ್ವಾಮಿ ಸ್ವರೂಪಾನಂದ
5. ರಾಷ್ಟ್ರಮಟ್ಟದಲ್ಲಿ ಪರ್ಯಾಯ ಶಕ್ತಿಗೆ JDS ಬೆಂಬಲ: HDKಗೆ ಜತೆಗೆ ತೆಲಂಗಾಣ ಸಿಎಂ ಮಹತ್ವದ ಮಾತುಕತೆ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರ ನಡುವೆ ಸುಮಾರು ಮೂರು ಗಂಟೆ ಹೈದರಾಬಾದ್‌ನಲ್ಲಿ ಭೇಟಿ ನೆಡದಿದ್ದು, ದಸರಾ-ವಿಜಯದಶಮಿ ವೇಳೆಗೆ ರಾಷ್ಟ್ರಮಟ್ಟದಲ್ಲಿ ರಾವ್ ಘೋಷಿಸುವ ಪರ್ಯಾಯ ಶಕ್ತಿಗೆ ಕೈಜೋಡಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ವಹಿಸಬೇಕಾದ ಗುರುತರ ಪಾತ್ರದ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮಲಿರುವ ಪರ್ಯಾಯ ರಾಜಕೀಯ ಕೂಟದ ಬಗ್ಗೆಯೂ ಕುಮಾರಸ್ವಾಮಿ ಅವರಿಗೆ ಮಾಹಿತಿಯನ್ನು ಕೆಸಿಆರ್ ನೀಡಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
KCR Strategy | ಪ್ರಧಾನಿ ಹುದ್ದೆ ಮೇಲೆ ಕೆಸಿಆರ್ ಕಣ್ಣು, ಕರ್ನಾಟಕಕ್ಕೂ ಕಾಲಿಡಲಿದೆ ತೆಲಂಗಾಣದ ಟಿಆರ್‌ಎಸ್!
2023ಕ್ಕೆ ಜೆಡಿಎಸ್ ಪಾಲಿನ ಕೊನೆಯ ಚುನಾವಣೆ: ನಿಖಿಲ್ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ
6. AAP In Trouble | ಸಾವಿರ ಬಸ್ ಖರೀದಿ ಕೇಸ್ ಸಿಬಿಐಗೆ, ಅರವಿಂದ ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ
ನೂತನ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಸರ್ಕಾರಿ ಶಾಲೆಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಹಗರಣವು ದೆಹಲಿ ಸರ್ಕಾರಕ್ಕೆ ಇಕ್ಕಟ್ಟು ತಂದೊಡ್ಡಿರುವ ಬೆನ್ನಲ್ಲೇ ಮತ್ತೊಂದು ಸಂಕಷ್ಟ (AAP In Trouble) ಎದುರಾಗಿದೆ. ದೆಹಲಿ ಟಾನ್ಸ್‌ಪೋರ್ಟ್ ಕಾರ್ಪೊರೇಷನ್ (DTC)ನಿಂದ ಸಾವಿರ ಬಸ್ ಖರೀದಿಯ ವೇಳೆ ಅಕ್ರಮ ನಡೆದಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಅನುಮತಿ ನೀಡಿದ್ದಾರೆ. ಇದರಿಂದ ಮತ್ತೊಂದು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯಲಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. JEE Advanced Result 2022 | ಓದಿನ ಸಮಯಕ್ಕಿಂತ ಗ್ರಹಿಕೆ ಮುಖ್ಯ ಎಂದ AIR ಟಾಪರ್ ಬೆಂಗಳೂರಿನ ಶಿಶಿರ್
“ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಯಶಸ್ಸಿಗೆ ಎಷ್ಟು ಸಮಯ ಓದುತ್ತೇವೆ ಎಂಬುದು ಮುಖ್ಯವಲ್ಲ, ಹೇಗೆ ಓದುತ್ತೇವೆ ಎಂಬುದು ಮುಖ್ಯʼʼ ಹೀಗೆಂದ ವಿದ್ಯಾರ್ಥಿ ಬೆಂಗಳೂರಿನ ಆರ್.ಕೆ. ಶಿಶಿರ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ ಟೆಕ್ನಾಲಜಿ (ಐಐಟಿ) ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಸಿದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ (JEE Advanced Result 2022) ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಶಿಶಿರ್ ಅವರ ಅಧ್ಯಯನದ ಅನುಭವವನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.
8. ಮತ್ತೆ ಅಮೆರಿಕದ ಡಬಲ್ ಗೇಮ್! ಪಾಕ್ ಯುದ್ಧ ವಿಮಾನ ನವೀಕರಣಕ್ಕೆ ನೆರವು, ಭಾರತದಿಂದ ತೀವ್ರ ವಿರೋಧ
ಪಾಕಿಸ್ತಾನದ ಮಿಲಿಟರಿ ಕ್ಷೇತ್ರ ಅಭಿವೃದ್ಧಿಗೆ, ಅದರಲ್ಲೂ ಹಳತಾದ F-16 ಫೈಟರ್ ಜೆಟ್ (F-16 Fighter Jet)ಗಳನ್ನು ನವೀಕರಿಸಲು ಯುಎಸ್ 450 ಮಿಲಿಯನ್ ಡಾಲರ್ಗಳಷ್ಟು ಆರ್ಥಿಕ ನೆರವು ನೀಡಲು ಮುಂದಾಗಿದೆ. ಸದಾ ಉಗ್ರರನ್ನು ಪೋಷಿಸುವ ರಾಷ್ಟ್ರ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನಕ್ಕೆ ಅಮೆರಿಕ ಇಷ್ಟು ದೊಡ್ಡ ಮೊತ್ತದ ಸುಸ್ಥಿರ ಪ್ಯಾಕೇಜ್ ನೀಡಲು ನಿರ್ಧಾರ ಮಾಡಿದ್ದನ್ನು ಭಾರತ ತೀವ್ರವಾಗಿ ವಿರೋಧಿಸಿದೆ. ಯುಎಸ್ ನಿರ್ಧಾರವನ್ನು ಭಾರತ ಸರ್ಕಾರ ಖಂಡಿಸುತ್ತಿರುವುದಾಗಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಯುಎಸ್ ಕಾರ್ಯದರ್ಶಿ ಡೊನಾಲ್ಡ್ ಲು ಅವರಿಗೆ ತಿಳಿಸಿದೆ. ಪಾಕ್ನ ಯುದ್ಧ ವಿಮಾನ ನವೀಕರಣಕ್ಕ ಸಹಾಯ ಮಾಡಲು ಯುಎಸ್ ತೆಗೆದುಕೊಂಡಿರುವ ನಿರ್ಣಯ ತಪ್ಪು ಎಂದು ಪ್ರತಿಪಾದಿಸಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ವಿಸ್ತಾರ Money Guide | ಬ್ಯಾಂಕ್ ಎಫ್‌ಡಿಗಿಂತ ಪಿಪಿಎಫ್, ಎನ್‌ಎಸ್‌ಸಿ, ಸುಕನ್ಯಾ ಸಮೃದ್ಧಿ ಹೆಚ್ಚು ಲಾಭದಾಯಕವೇ?
ಹಲವಾರು ಬ್ಯಾಂಕ್‌ಗಳು ಇತ್ತೀಚೆಗೆ ತಮ್ಮ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇತ್ತೀಚೆಗೆ ಏರಿಸಿವೆ. ಈ ಬೆಳವಣಿಗೆಯ ನಂತರ ಎಫ್‌ಡಿಗಳು ಈಗ ಸ್ವಲ್ಪ ಹೆಚ್ಚು ಆದಾಯ ನೀಡುತ್ತವೆ. ಹೀಗಿದ್ದರೂ, ಸಣ್ಣ ಉಳಿತಾಯ ಖಾತೆಗಳು ಈಗಲೂ ಬಹುತೇಕ ಎಫ್‌ಡಿಗಿಂತಲೂ ಹೆಚ್ಚಿನ ಆದಾಯವನ್ನು ಕೊಡುತ್ತವೆ. ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಈಗ 7.6% ತನಕ ಬಡ್ಡಿ ಆದಾಯವನ್ನು ನೀಡುತ್ತವೆ. (ವಿಸ್ತಾರ Money Guide) ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಸುಮಾರು 6% ಬಡ್ಡಿ ಒದಗಿಸುತ್ತವೆ. ಸಣ್ಣ ಉಳಿತಾಯ ಯೋಜನೆಗಳ ಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
10. Swami Vivekananda | ಜಗತ್ತಿನ ಕಣ್ಣು ತೆರೆಸಿದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ
ಸ್ವಾಮಿ ವಿವೇಕಾನಂದರು (Swami Vivekananda) ಚಿಕಾಗೋದಲ್ಲಿ ಭಾಷಣ ಮಾಡಿದ ದಿನವಿಂದು. ಈ ಭಾಷಣ ಜಗತ್ತಿನ ಅತ್ಯಂತ ಪ್ರಭಾವೀ ಭಾಷಣಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ಈ ಕುರಿತ ಸ್ವಾಮಿ ವೀರೇಶಾನಂದ ಸರಸ್ವತಿ ಅವರ ವಿಶೇಷ ಲೇಖನ ಇಲ್ಲಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.